Veeam CEO Anand Eswaran: ಮತ್ತೊಬ್ಬ ಭಾರತೀಯನಿಗೆ ಜಾಗತಿಕ ಟೆಕ್‌ ಕಂಪನಿ ಸಿಇಓ ಹುದ್ದೆ!

By Suvarna NewsFirst Published Dec 18, 2021, 8:40 AM IST
Highlights

*ಮತ್ತೊಬ್ಬ ಭಾರತೀಯ ಜಾಗತಿಕ ಟೆಕ್‌ ಕಂಪನಿ ಸಿಇಓ
*ಐಟಿ ಕಂಪೆನಿಯಾದ ‘ವೀಎಂ’ನ ಸಿಇಒ ಆಗಿ ಈಶ್ವರನ್‌ ನೇಮಕ
*ಮುಂಬೈನಲ್ಲಿ Computer Science Engineering ಪದವಿ!

ನವದೆಹಲಿ (ಡಿ. 18): ವಿದೇಶಿ ಕಂಪನಿಗಳಲ್ಲಿ ಭಾರತೀಯರು ಉನ್ನತ ಹುದ್ದೆಗೇರುವ ಪರಂಪರೆ ಮುಂದುವರಿಯುತ್ತಿದ್ದು, ಈ ಸಾಲಿಗೆ ಆನಂದ್‌ ಈಶ್ವರನ್‌ (Anand Eswaran) ಹೊಸ ಸೇರ್ಪಡೆ. ಹೌದು ಜಾಗತಿಕ ಮಟ್ಟದ ಐಟಿ ಕಂಪೆನಿಯಾದ ‘ವೀಎಂ’ನ ಸಿಇಒ (Veeam CEO) ಆಗಿ ಈಶ್ವರನ್‌ ನೇಮಕವಾಗುವ ಜೊತೆಗೆ ಕಂಪನಿಯ ನಿರ್ದೇಶಕರ ಮಂಡಳಿಯ ಸದಸ್ಯರೂ ಆಗಿದ್ದಾರೆ. ಮುಂಬೈನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ (Computer Science) ಪದವಿ ಹಾಗೂ ಮಿಸ್ಸೋರಿ ಕೋಲಂಬಿಯಾದಿಂದ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. 

ವೀಮ್‌ನ ಸಿಇಒ ಆಗುವ ಮೊದಲು ಹಲವು ಸಂಸ್ಥೆಗಳಲ್ಲಿ ಕೆಲಸ!

ವೀಮ್‌ನ ಸಿಇಒ ಆಗುವ ಮೊದಲು, ಈಶ್ವರನ್ RingCentralನ ಅಧ್ಯಕ್ಷ ಮತ್ತು COO ಆಗಿದ್ದರು. ಅದಕ್ಕೂ ಮೊದಲು, ಅವರು ಮೈಕ್ರೋಸಾಫ್ಟ್‌ನೊಂದಿಗೆ (Microsoft) ಜಾಗತಿಕವಾಗಿ ಎಂಟರ್‌ಪ್ರೈಸ್ ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಅವರು ಮೈಕ್ರೋಸಾಫ್ಟ್ ಸೇವೆಗಳು, ಉದ್ಯಮ ಮತ್ತು ಡಿಜಿಟಲ್, ಕಸ್ಟಮರ್‌ ಸರ್ವೀಸ್ ಮತ್ತು ಕಸ್ಟಮರ್‌ ಸಕ್ಸಸ್ ತಂಡಗಳನ್ನು ಸಹ ಮುನ್ನಡೆಸಿದ್ದಾರೆ.

ಮೈಕ್ರೋಸಾಫ್ಟ್‌ಗಿಂತ ಮೊದಲು, ಈಶ್ವರನ್ ಅವರು SAP ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದರು. ಅವರ ಇತರ ನಾಯಕತ್ವದ ಪಾತ್ರಗಳಲ್ಲಿ HP ನಲ್ಲಿ ಗ್ಲೋಬಲ್ ಸಾಫ್ಟ್‌ವೇರ್ ಸೇವೆಗಳ ಉಪಾಧ್ಯಕ್ಷರು, ವಿಗ್ನೆಟ್‌ನಲ್ಲಿ‌ (Vignette) ಜಾಗತಿಕ ವೃತ್ತಿಪರ ಸೇವೆಗಳ ಉಪಾಧ್ಯಕ್ಷರು (ಈಗ  OpenText ), ಮತ್ತು ಬ್ರಾನ್ ಕನ್ಸಲ್ಟಿಂಗ್‌ನಲ್ಲಿ (Braun Consulting ) ಹಿರಿಯ ವ್ಯವಸ್ಥಾಪಕರಾಗಿ(ಈಗ Fair Isaac) ಕಾರ್ಯ ನಿರ್ವಹಿಸಿದ್ದಾರೆ.

ಸಿಇಒ ಹುದ್ದೆಯಿಂದ ಕೆಳಗಿಳಿದ ವಿಲಿಯಂ ಎಚ್. ಲಾರ್ಜೆಂಟ್!

ವಿಲಿಯಂ ಎಚ್. ಲಾರ್ಜೆಂಟ್ (Bill Largent) ಅವರು ವೀಮ್‌ನ ಸಿಇಒ ಹುದ್ದೆಯಿಂದ ಕೆಳಗಿಳಿಯಳಿದ್ದಾರೆ ಮತ್ತು ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. "ವೀಮ್ ಈ ವರ್ಷ ARR (Accounting Rate of Return) ನಲ್ಲಿ $1 ಬಿಲಿಯನ್ ದಾಟಿದೆ ಮತ್ತು 400,000 ಗ್ರಾಹಕರನ್ನು ಹೊಂದಿದೆ, ಹಾಗೂ ಡೇಟಾ ದ್ಯಮದಲ್ಲಿ ಅತ್ಯುನ್ನತ ಪ್ರಗತಿ ಸಾಧಿಸಿದೆ"ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವೇಗವಾಗಿ ಬೆಳಯುತ್ತಿರುವ ಡೇಟಾ ಉದ್ಯಮ!

“ವೀಮ್ ಒಂದು ವಿಶಿಷ್ಟ ಕಂಪನಿಯಾಗಿದ್ದು ಅದು ಮಾರುಕಟ್ಟೆಗಿಂತ ಗಮನಾರ್ಹವಾಗಿ ವೇಗವಾಗಿ ಬೆಳೆಯುತ್ತಿದೆ. ಅಂತಹ ಪ್ರತಿಭಾವಂತ ತಂಡದ ಪ್ರಯಾಣದಲ್ಲಿ ಸೇರಲು ನಾನು ಸಂತೋಷಪಡುತ್ತೇನೆ. ಡೇಟಾ ಉದ್ಯಮ ಬೆಳೆಯುತ್ತಿದೆ ಮತ್ತು ಎಲ್ಲಾ ಸಂಸ್ಥೆಗಳಿಗೆ ಪ್ರಮುಖ ಸ್ವತ್ತುಗಳಲ್ಲಿ ಒಂದಾಗಿದೆ. ಅಂತೆಯೇ, ಡೇಟಾ ನಿರ್ವಹಣೆ, ಭದ್ರತೆ ಮತ್ತು ರಕ್ಷಣೆ ಇಂದು ಸಂಸ್ಥೆಗಳು ಕಾರ್ಯನಿರ್ವಹಿಸುವ ವಿಧಾನಕ್ಕೆ ಪ್ರಮುಖವಾಗಿದೆ" ಎಂದು  ಎಂದು Veeam ನ CEO ಆನಂದ್ ಈಶ್ವರನ್ ಹೇಳಿದ್ದಾರೆ

"ಡೆಟಾ ಕ್ಷೇತ್ರದಲ್ಲಿ ವಿಫಲಾವಾದರೆ  ಕಂಪನಿಗಳ ಕಾರ್ಯನಿರ್ವಹಣೆಯಲ್ಲಿ ಅಪಾಯ ಉಂಟಾಗಬಹುದು. ನಾವು ಡೇಟಾ ಪರಿಸರ ವ್ಯವಸ್ಥೆಯಲ್ಲಿರುವಾ  ವೀಮ್ ಒಂದು ಅನನ್ಯ ಅವಕಾಶವನ್ನು ನೀಡುತ್ತಿದೆ. ಅತ್ಯಂತ ದೃಢವಾದ ransomware ರಕ್ಷಣೆ ಮತ್ತು ಡೇಟಾವನ್ನು ಅದು ಎಲ್ಲಿ ಸ್ಟೋರ್‌ ಆಗಿದ್ದರು ಅದನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ, ” ಎಂದು ಆನಂದ ಹೇಳಿದ್ದಾರೆ.

ಇದನ್ನೂ ಓದಿ:

1) ಮತ್ತೊಂದು ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ನಾರಿ, ಕಷ್ಟಪಟ್ಟು MBA ಮಾಡಿದ್ದು ಸಾರ್ಥಕ!

2) Brain Drain : ಪ್ರತಿಭಾ ಪಲಾಯನದ ಬಗ್ಗೆ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ್ದೇನು?

3) Vishal Garg: ಝೂಮ್ ಕಾಲ್ ಮೂಲಕ 900 ಸಿಬ್ಬಂದಿ ವಜಾಗೊಳಿಸಿದ್ದ ಸಿಇಓಗೆ ಗೇಟ್‌ ಪಾಸ್?

click me!