ಪ್ರೀತಿ ನಿರಾಕರಿಸಿದ ಯುವತಿ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ!

Dec 1, 2018, 12:24 PM IST

ಪ್ರೀತಿ ನಿರಾಕರಿಸಿದ್ದಕ್ಕೆ  ಯುವತಿ ಎದುರೇ ಪ್ರಿಯಕರ ಐದನೇ ಮಹಡಿಯಿಂದ ಮೂರನೇ ಮಹಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವಕನ ಆತ್ಮಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆಚ್‌ಎಸ್‌ಆರ್‌ ಲೇಔಟ್‌ನ  ಐಟಿ  ಕಂಪನಿಯಲ್ಲಿ ಟೆಕ್ಕಿಯಾಗಿದ್ದ, ಹೈದ್ರಾಬಾದ್ ಮೂಲದ ರೋಷನ್(23) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ರೋಷನ್ ತನ್ನದೇ ಕಂಪನಿಯ ಅನ್ಯಧರ್ಮೀಯ ಯುವತಿಯನ್ನು ಪ್ರೀತಿಸುತ್ತಿದ್ದ ಅಲ್ಲದೇ ಪದೆ ಪದೇ ಪ್ರೀತಿಸು ಎಂದು ಪೀಡಿಸುತಿದ್ದ. ಆದರೆ ಯುವತಿ ಬೇರೆ ಧರ್ಮದವರೊಂದಿಗೆ ನಾನು ಮದುವೆಯಾಗುವುದಿಲ್ಲ ಎಂದು ಪ್ರೀತಿ ನಿರಾಕರಿಸಿದ್ದಳು. ಆದರೆ ದಿನಗಳೆದಂತೆ ಯುವಕನ ಕಾಟ ಹೆಚ್ಚಾಗಿದ್ದು, ಇದರಿಂದ ಬೇಸತ್ತ ಆಕೆ ಆ ಕಂಪೆನಿ ಕೆಲಸ ತೊರೆದು, ಅದೇ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಬೇರೆ ಕಂಪೆನಿಯಲ್ಲಿ ಕೆಲಸ ಮುಂದುವರೆಸಿದ್ದಳೆನ್ನಲಾಗಿದೆ.

ಈ ಘಟನೆಯು ಸಪ್ಟೆಂಬರ್ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಹೆಚ್‌ಎಸ್್ಆರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.