ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್‌ಪಿಜಿ ಸಬ್ಸಿಡಿಯನ್ನು ಸ್ಬಯಂಪ್ರೇರಿತರಾಗಿ ತ್ಯಜಿಸಿ ಎಂದು ಜನತೆಗೆ ಕರೆ ನೀಡಿದ್ದರು. ಇದಕ್ಕೆ ಸ್ಪಂದನೆ ಕೂಡ ಲಭಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿಗಳು ಅನರ್ಹರ ಪಾಲಾಗುವುದನ್ನು ತಡೆಯಲು ಹಲವು ಸುಧಾರಣಾ ಕ್ರಮಕ್ಕೆ ಮುಂದಾಗಿದೆ. ಉಳ್ಳವರು ಸ್ವಯಂ ಪ್ರೇರಿತವಾಗಿ ‘ಗೃಹಲಕ್ಷ್ಮಿ’ ಹಾಗೂ ‘ಗೃಹಜ್ಯೋತಿ’ ಲಾಭ ತ್ಯಜಿಸಲು ಅನುವು ಮಾಡಿಕೊಡಲು ಚಿಂತನೆ ನಡೆಸಿದೆ.
ಅಲ್ಲದೆ, ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನಿಸಿದ್ದು, ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ತೆರಿಗೆ ಪಾವತಿದಾರರಿಗೆ ಶಕ್ತಿ ಯೋಜನೆಯ ಲಾಭ ನೀಡಬೇಕೇ ಅಥವಾ ಅವರು ಸಹ ಯೋಜನೆ ಬಿಟ್ಟುಕೊಡುವಂತೆ ಕೋರುವುದೇ ಎಂಬ ಬಗ್ಗೆ ಚಿಂತಿಸಿ ವರದಿ ನೀಡಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರಿಗೆ ಇಲಾಖೆ ಮುಖ್ಯಸ್ಥರಿಗೆ ಗ್ಯಾರಂಟಿಗಳ ಸುಧಾರಣೆಗೆ ಸೂಕ್ತ ವರದಿ ನೀಡುವಂತೆ ಸರ್ಕಾರ ಕೋರಿದೆ. ಯಾವುದೇ ಅರ್ಹರಿಗೂ ಯೋಜನೆಯ ಲಾಭ ತಪ್ಪಿಸಬಾರದು. ಆದರೆ, ಗೃಹ ಲಕ್ಷ್ಮೀ ಯೋಜನೆಯಲ್ಲಿ ಆಗಿರುವಂತೆ ದುರ್ಬಳಕೆಯೂ ಆಗಬಾರದು. ಆ ರೀತಿ ವರದಿ ನೀಡಿ ಎಂದು ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
09:57 PM (IST) Jun 28
ರಾಜ್ಯ ಸರ್ಕಾರ ಗಂಡು ಮಕ್ಕಳಿಗೂ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದೆ. ಈಗಾಗಲೇ ಬಸ್ ಪಾಸ್‌ಗೆ ಹಣ ಪಾವತಿ ಮಾಡಿದ ವಿದ್ಯಾರ್ಥಿಗಳಿಗೆ ನಾಳೆಯಿಂದ ಮರುಪಾವತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಅರ್ಜಿ ಸಲ್ಲಿಕೆ ಹೇಗೆ?
08:56 PM (IST) Jun 28
Kempambudhi: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ವೈಭವ ಮತ್ತು ಜನಪರ ಚಿಂತನೆಗಳನ್ನು ತೆರೆಗೆ ತರುವ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾ ‘ಕೆಂಪಾಂಬುಧಿ’ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
08:34 PM (IST) Jun 28
ಇಂದು ಬೆಂಗಳೂರಿನ ವಿಜಯನಗರದ ಸ್ವಂತ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಬಂಧುಮಿತ್ರರು ಕಣ್ಣೀರಿನ ವಿದಾಯ ಕೋರಿದರು. ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಉಲ್ಲಾಸ್ ಅವರ ಅಂತ್ಯಕ್ರಿಯೆ ನೆರವೇರಿದೆ.
07:55 PM (IST) Jun 28
Radhika Pandit: ಗ್ಲಾಮರ್‌ಗಿಂತ ಪ್ರತಿಭೆಗೆ ಹೆಚ್ಚು ಮೌಲ್ಯ ನೀಡಿದ ನಟಿಯರಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಹೆಸರು ಮೊದಲ ಸಾಲಿನಲ್ಲಿ ಕೇಳಿಬರುತ್ತದೆ. ಅವರ ಜನಪ್ರಿಯತೆ ಮಾತ್ರ ಇಂದಿಗೂ ಅಷ್ಟೇ ಗಟ್ಟಿಯಾಗಿದೆ.
07:13 PM (IST) Jun 28
Chanakya Niti for Family: ಆಚಾರ್ಯ ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ, ಕೆಲವು ವಿಶೇಷ ಸಂದರ್ಭಗಳಲ್ಲಿ ತಂದೆ-ತಾಯಿ, ಮಗ ಮತ್ತು ಹೆಂಡತಿಯೇ ಶತ್ರುಗಳಾಗುತ್ತಾರೆ ಎಂದು ಹೇಳಿದ್ದಾರೆ. ಆ ನೀತಿ ಏನು ಹೇಳುತ್ತೆ? ಇಲ್ಲಿದೆ ವಿವರ.
07:10 PM (IST) Jun 28
ಶಿವರಾಜ್‌ಕುಮಾರ್ ನಟನೆಯ ಈ ಸಿನಿಮಾ ತಮಿಳಿನ ‘ಸುಂದರಕಾಂಡಂ’ ಚಿತ್ರದ ರಿಮೇಕ್. ಇದು ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಸೂಕ್ಷ್ಮ ಕಥೆಯನ್ನು ಒಳಗೊಂಡಿತ್ತು. ಇನ್ನು, ಅನಂತ್ ನಾಗ್-ಸೌಂದರ್ಯ ನಟನೆಯ ‘ತೂಗುವೆ ಕೃಷ್ಣನ’ ಚಿತ್ರವು ತಮಿಳಿನ 'ಆರಾರೋ ಆರಿರಾರೋ' ಚಿತ್ರದ ರೂಪಾಂತರ.
06:49 PM (IST) Jun 28
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕೆಮಿಕಲ್ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಭಾನುವಾರವಾದರೂ ಸುಮಾರು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದೆ.
06:32 PM (IST) Jun 28
ಕಾರಿನಲ್ಲಿ ಬಂದು ದುಬಾರಿ ಮೌಲ್ಯದ ಶೂಗಳನ್ನು ಕದಿಯುವ ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಅಪಾರ್ಟ್‌ಮೆಂಟ್‌ನಿಂದ ಬರೋಬ್ಬರಿ 1.35 ಲಕ್ಷ ರೂ ಮೌಲ್ಯದ ಶೂಗಳನ್ನು ಕದಿಯಲಾಗಿದೆ.
06:14 PM (IST) Jun 28
Gardening Tips: ನಿಮ್ಮ ಮೆಣಸಿನ ಗಿಡದ ಎಲೆಗಳು ಇದ್ದಕ್ಕಿದ್ದಂತೆ ಮುದುಡಿಕೊಳ್ಳುತ್ತಿವೆಯೇ? ಹೊಸ ಚಿಗುರುಗಳು ಕುಗ್ಗಿವೆಯೇ? ಅಥವಾ ಎಲೆಗಳ ಕೆಳಗೆ ಸಣ್ಣಗೆ ಹಸಿರು, ಕಪ್ಪು ಅಥವಾ ಬಿಳಿ ಬಣ್ಣದ ಹುಳುಗಳು ಕಾಣಿಸುತ್ತಿವೆಯೇ?
05:54 PM (IST) Jun 28
Tomato Varieties: ಎಲ್ಲಾ ಟೊಮೆಟೊ ಒಂದೇ ರೀತಿ ಇರಲ್ಲ. ಚೆರಿ, ದೇಸಿ, ರೋಮಾ ಮತ್ತು ಹೈಬ್ರಿಡ್ ಟೊಮೆಟೊಗಳದ್ದೇ ಆದ ಪ್ರತ್ಯೇಕ ವಿಶೇಷತೆಗಳಿವೆ. ಯಾವ ತಳಿಯ ಟೊಮೆಟೊ ಹೆಚ್ಚು ಕಾಲ ಫಸಲು ಕೊಡುತ್ತದೆ ಮತ್ತು ಭರ್ಜರಿ ಇಳುವರಿಗಾಗಿ ಅದರ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ.
02:22 PM (IST) Jun 28
02:02 PM (IST) Jun 28
ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್, 2027ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ 'ಬೌದ್ಧ', ಜಾತಿಯಲ್ಲಿ 'ಮಹಾರ್' ಮತ್ತು ಭಾಷೆಯಲ್ಲಿ 'ಪಾಲಿ' ಎಂದು ನಮೂದಿಸಲು ಕರೆ ನೀಡಿದ್ದಾರೆ.
02:02 PM (IST) Jun 28
'ಈ ನೋವು ಕಳೆದುಕೊಂಡವ್ರಿಗೆ ಗೊತ್ತು. ಉಲ್ಲಾಸ್ ಒಬ್ಬ ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಡುವ ನಿರ್ದೇಶಕನಾಗಿ ಬರಬೇಕಿತ್ತು. ಗೋವಾಗೆ ಫಿಲ್ಮ್ ಫೆಸ್ಟ್‌ಗೆ ಹೋದಾಗ ಬಾಡಿಗೆಗೆ ಬೈಕ್ ತೊಗೊಂಡು ಓಡಾಡಿಸಿದ್ದ. ಆ ನೆನಪುಗಳು ಹಚ್ಚ ಹಸಿರಾಗಿವೆ. ಉಲ್ಲಾಸ್ ನಿಂದ ಸ್ನೇಹಜೀವಿ, ಸಮಯ ಪ್ರಜ್ಞೆ, ದೊಡ್ಡವ್ರಿಗೆ ಕೊಡಬೇಕಾದ ಗೌರವ ಎಲ್ಲವೂ ಇತ್ತು.
01:04 PM (IST) Jun 28
ಕಿರಣ್ ಮಜುಂದಾರ್-ಶಾ ಅವರು ಬೆಂಗಳೂರಿನ ಅವೈಜ್ಞಾನಿಕ ನಗರೀಕರಣದ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡ ಚಿತ್ರವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಕಾಂಕ್ರೀಟ್ ರಸ್ತೆಗಳು ಮತ್ತು ಹಸಿರು, ಸುಸ್ಥಿರ ರಸ್ತೆಗಳ ನಡುವಿನ ವ್ಯತ್ಯಾಸವನ್ನು ತೋರಿಸುವ ಈ ಪೋಸ್ಟ್, ನಗರದ ಕಳಪೆ ಯೋಜನೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
01:02 PM (IST) Jun 28
ಕೃಷಿಯಲ್ಲಿ ಯಾಂತ್ರೀಕರಣದಿಂದಾಗಿ ಎತ್ತುಗಳ ಬಳಕೆ ಕಡಿಮೆಯಾಗಿದ್ದು, ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಮಹತ್ವ ಪಡೆಯುವ ಎತ್ತುಗಳ ಕೊಂಬು ಕೆತ್ತುವ ದೇಶಿ ಕಸುಬು ನೇಪಥ್ಯಕ್ಕೆ ಸರಿಯುತ್ತಿದೆ. ಈ ಕಾಯಕವನ್ನೇ ನಂಬಿ ಬದುಕುತ್ತಿರುವ ವರದಾಪುರದ ನೂರ್ ಸಾಹೇಬ್‌ರಂತಹ ಕೆಲವೇ ಕುಶಲಕರ್ಮಿಗಳು ಮಾತ್ರ ಉಳಿದುಕೊಂಡಿದೆ.
11:53 AM (IST) Jun 28
Director SN Shankar Death: ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಖ ಎಸ್ ಎನ್ ಶಂಕರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರು ಇಂದು ಇನ್ನಿಲ್ಲ ಎನ್ನೋದು ಅನೇಕರಿಗೆ ಶಾಕ್ ನೀಡಿದೆ.
09:56 AM (IST) Jun 28
ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆಯ 23ನೇ ಕಂತಿನ ಹಣವು ರಾಜ್ಯದ 6 ಲಕ್ಷಕ್ಕೂ ಅಧಿಕ ರೈತರಿಗೆ ತಲುಪಿಲ್ಲ. ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿರುವುದು ಈ ತಾಂತ್ರಿಕ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಹಣ ಬರದಿದ್ದರೆ ತಡಮಾಡದೆ ಈ ಕೆಲಸ ಮಾಡಿ.
09:54 AM (IST) Jun 28
Kannada Actress Sharmiela Mandre: ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಎಂಗೇಜ್ ಆಗಲಿದ್ದಾರೆ ಎನ್ನಲಾಗಿತ್ತು, ಆಮೇಲೆ ಅವರೇ ಹೌದು ಎಂದು ಹೇಳಿದ್ದರು. ಈಗ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
08:55 AM (IST) Jun 28
Bloom Avenue Greening Project: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್ ಆರ್ಟಿರಿಯಲ್ ರಸ್ತೆಯು (MAR) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಂಸ್ಥೆ ‘ಬ್ಲೂಮ್ ಅವೆನ್ಯೂ’ ಪ್ರಾಜೆಕ್ಟ್.
08:53 AM (IST) Jun 28
08:15 AM (IST) Jun 28
08:05 AM (IST) Jun 28
07:48 AM (IST) Jun 28