LIVE NOW
Published : Feb 20, 2026, 10:03 AM ISTUpdated : Feb 20, 2026, 11:07 PM IST

Karnataka News Live: Amruthadhaare Serial - ಜಯದೇವ್‌ ಕುತಂತ್ರ ಜಾಸ್ತಿಯಾಯ್ತು! ಸಿಡಿದೆದ್ದ ಗೌತಮ್‌ ಈಗ ಸಾಮ್ರಾಜ್ಯ ಕಟ್ಟೋದು ಬಾಕಿ

ಸಾರಾಂಶ

ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಸಿಟಿ (CT) ಮತ್ತು ಎಂಆರ್‌ಐ (MRI) ಸ್ಕ್ಯಾನಿಂಗ್ ಸೇವೆಗಳನ್ನು ನೀಡುತ್ತಿದ್ದ ಖಾಸಗಿ ಸಂಸ್ಥೆಯೊಂದು ದಿಢೀರ್ ಸೇವೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ರೋಗಿಗಳಿಗೆ ತೊಂದರೆಯಾಗದಂತೆ ಕರ್ನಾಟಕ ಸರ್ಕಾರವು ತಕ್ಷಣದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ.

amruthadhaare serial zee kannada

11:07 PM (IST) Feb 20

Amruthadhaare Serial - ಜಯದೇವ್‌ ಕುತಂತ್ರ ಜಾಸ್ತಿಯಾಯ್ತು! ಸಿಡಿದೆದ್ದ ಗೌತಮ್‌ ಈಗ ಸಾಮ್ರಾಜ್ಯ ಕಟ್ಟೋದು ಬಾಕಿ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ತನ್ನ ತಂದೆ ಕಾರ್ಯ ಮಾಡಲು ರೆಡಿ ಆಗಿದ್ದನು. ಆಗ ಗೌತಮ್‌, ಜಯದೇವ್‌ ಇಬ್ಬರೂ ಸೇರಿಕೊಂಡು ಪಿಂಡ ಪ್ರಧಾನ ಮಾಡಲು ಬಂದಿದ್ದರು. ಆಗ ಜಯದೇವ್‌, ಗೌತಮ್‌ ಜೊತೆ ಸೇರಿ ಪಿಂಡ ಬಿಡೋದಿಲ್ಲ ಎಂದು ಹೇಳಿ ಹೋಗಿದ್ದನು. ಶಾಸ್ತ್ರದ ಪ್ರಕಾರ ಬೇರೆ ಬೇರೆ ಪಿಂಡ ಬಿಡೋ ಹಾಗಿಲ್ಲ.

 

Read Full Story

10:51 PM (IST) Feb 20

Karna Serial - ಅರೆಸ್ಟ್‌ ಆದ ಕರ್ಣನನ್ನು ಕಾಪಾಡಲು ಬಂದ್ರು ನಾಲ್ವರು ಹೀರೋಯಿನ! ನಿಧಿ, ನಿತ್ಯಾ ಕಥೆ ಏನು?

ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. Expire Medicine ತಿಂದು, ರೋಗಿಗಳು ಸತ್ತಿದ್ದಾರೆ. ಇದಕ್ಕೆಲ್ಲ ಕಾರಣ ಏನು? ಏನಾಯ್ತು ಎಂದು ಕರ್ಣ ಚೆಕ್‌ ಮಾಡಲು ನೋಡಿದ್ದಾನೆ. ಆದರೂ ಕೂಡ ಸಂಜಯ್‌, ನಯನತಾರಾ, ರಮೇಶ್‌ ಅವಕಾಶ ಕೊಟ್ಟಿಲ್ಲ.

Read Full Story

09:53 PM (IST) Feb 20

ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj

ನಟಿ ಮೇಘನಾ ರಾಜ್ ಅವರು ಮೊದಲ ಬಾರಿಗೆ ತಮ್ಮ ಜೀವನದಲ್ಲಿ ಸಂಗಾತಿಯ ಅಗತ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರತಿಯೊಬ್ಬರಿಗೂ ಕಷ್ಟ-ಸುಖ ಹಂಚಿಕೊಳ್ಳಲು ಒಬ್ಬ ಜೊತೆಗಾರ ಬೇಕು ಎಂದಿರುವ ಅವರು, ತಮ್ಮ ತಂದೆ ಸುಂದರ ರಾಜ್ ಅವರ ಆಶಯದಂತೆಯೇ ಸಹಬಾಳ್ವೆಯ ಕುರಿತು ಸಕಾರಾತ್ಮಕ ಸೂಚನೆ ನೀಡಿದ್ದಾರೆ.
Read Full Story

09:04 PM (IST) Feb 20

ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ - ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ

ಕಡಿಮೆ ಬಜೆಟ್‌ನಲ್ಲಿ ಸತತ ಹಿಟ್ ಚಿತ್ರಗಳನ್ನು ನೀಡುತ್ತಿರುವ ರಾಜ್ ಬಿ. ಶೆಟ್ಟಿ ಅವರ ಯಶಸ್ಸಿನ ರಹಸ್ಯವನ್ನು ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಅವರೇ ಕೇಳಿದ್ದಾರೆ.  ರಾಜ್ ಶೆಟ್ಟಿ ತಮ್ಮ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

Read Full Story

08:08 PM (IST) Feb 20

ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್

ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಗದಗ-ವಾಡಿ, ತುಮಕೂರು-ದಾವಣಗೆರೆ ಸೇರಿದಂತೆ ಹಲವು ಪ್ರಮುಖ ರೈಲ್ವೆ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. 10 ಯೋಜನೆಗಳ ಪೈಕಿ 7 ಯೋಜನೆಗಳಿಗೆ ಇನ್ನೂ 3,338 ಎಕರೆ ಭೂಮಿ ಸ್ವಾಧೀನವಾಗಬೇಕಿದ್ದು, ಇದು ಕಾಮಗಾರಿಗೆ ದೊಡ್ಡ ಅಡ್ಡಿಯಾಗಿದೆ. 

Read Full Story

07:45 PM (IST) Feb 20

ಬಾಗಲಕೋಟೆ ಶಿವಾಜಿ ಮೆರವಣಿಗೆಗೆ ಕಲ್ಲು ತೂರಿದ ಮುಸ್ಲಿಂ ಮತಾಂಧರಿಗೆ ಪಾಕಿಸ್ತಾನ ನಂಟಿನ ಶಂಕೆ; ಆರ್. ಅಶೋಕ್

ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ, ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕೃತ್ಯದ ಹಿಂದೆ ಪಾಕಿಸ್ತಾನದ ನಂಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Read Full Story

07:37 PM (IST) Feb 20

ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ!

ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನವು ಕೋಟ್ಯಂತರ ರೂಪಾಯಿ ಆದಾಯ ಹೊಂದಿದ್ದರೂ, ಇಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ ಶೌಚಾಲಯ ಮತ್ತು ಸ್ನಾನಘಟ್ಟಗಳಂತಹ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ದಶಕಗಳಿಂದ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿದೆ.

Read Full Story

06:46 PM (IST) Feb 20

ನಟೇಶ್ ಭ್ರಷ್ಟಾಚಾರ ಆರೋಪ - 6 ಸೆಕೆಂಡು ಆಡಿಯೋ ರಿಲೀಸ್‌ ಮಾಡಿದ ಸ್ನೇಹಮಯಿ ಮನೆಗೆ ಸಿಸಿಬಿ ರೈಡ್! ಏನೆಲ್ಲಾ ದಾಖಲೆ ಸಿಕ್ತು?

ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಆಡಿಯೋ ಕ್ಲಿಪ್‌ಗಾಗಿ ಸಿಸಿಬಿ ಅಧಿಕಾರಿಗಳು  ಸ್ನೇಹಮಯಿ ಕೃಷ್ಣ ಅವರ ಮೈಸೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ,ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

Read Full Story

05:48 PM (IST) Feb 20

ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!

'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ, ಕಾರ್ತಿಕ್ ಮಹೇಶ್ ಜೊತೆಗಿನ ಸಂಬಂಧದ ವದಂತಿಗಳಿಗೆ ಬೇಸತ್ತಿದ್ದಾರೆ. ಇತ್ತೀಚೆಗೆ 'ಆಲ್ಫಾ' ಸಿನಿಮಾ ವೀಕ್ಷಿಸಿ ಹೊರಬಂದಾಗ ಪಾಪರಾಜಿಗಳು ಸುತ್ತುವರೆದಿದ್ದು, ಈ ವೇಳೆ ನಟಿ ತಮ್ಮ ಎಂದಿನ ಹಾಸ್ಯ ಪ್ರವೃತ್ತಿಯಿಂದಲೇ ಅವರಿಗೆ ತಿರುಗೇಟು ನೀಡಿದ್ದಾರೆ.
Read Full Story

05:16 PM (IST) Feb 20

ಸರ್ಕಾರದಿಂದ ಸ್ನೇಹಮಯಿ ಕೃಷ್ಣನ ಜೀವಕ್ಕೆ ಅಪಾಯ; ಸಿಸಿಬಿ ಅರೆಸ್ಟ್ ಮಾಡಿದರೂ ನಮ್ಮಪ್ಪನ ಸುಳಿವೇ ಸಿಗ್ತಿಲ್ಲ- ವಿವೇಕ್!

ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ನ್ಯಾಯಾಲಯದ ಆವರಣದಿಂದ ಬಲವಂತವಾಗಿ ಕರೆದೊಯ್ದಿದ್ದಾರೆ. ಅವರ ಪುತ್ರ ವಿವೇಕ್, ತಂದೆಯ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಪ್ರಭಾವಿಗಳನ್ನು ರಕ್ಷಿಸಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Read Full Story

05:03 PM (IST) Feb 20

ರಾಜ್ಯದ ಜನಕ್ಕೆ ಸದ್ಯವೇ ಸಿಗಲಿದೆ ಶಾಕಿಂಗ್ ಸುದ್ದಿ, ಬೇಸಿಗೆ ಆರಂಭದಲ್ಲೇ ವಿದ್ಯುತ್ ದರ ಏರಿಕೆಗೆ ಸಿದ್ಧತೆ!

ರಾಜ್ಯದ ಎಸ್ಕಾಂಗಳು ನಷ್ಟದ ಕಾರಣ ನೀಡಿ ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ದರ ಪರಿಷ್ಕರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಏರಿಕೆಯು ಗೃಹಜ್ಯೋತಿ ಯೋಜನೆಯ ನಡುವೆಯೂ ಜಾರಿಯಾಗುವ ಸಾಧ್ಯತೆಯಿದೆ.

Read Full Story

04:46 PM (IST) Feb 20

ದಾಸನ ಬೇಲ್ ಭವಿಷ್ಯ - ದರ್ಶನ್ 2 ತಿಂಗಳಲ್ಲಿ ರಿಲೀಸ್ ಆಗೊದು ಪಕ್ಕಾನಾ? ಕಾನೂನು ಪಂಡಿತರು ಹೇಳೋದೇನು?

ನಟ ದರ್ಶನ್‌ಗೆ ಶೀಘ್ರದಲ್ಲೇ ಬೇಲ್ ಸಿಗಲಿದೆ ಎಂಬ ಚರ್ಚೆಗಳ ನಡುವೆ, 272 ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೂ ಕೇವಲ ಇಬ್ಬರು ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ದರ್ಶನ್ ಬಿಡುಗಡೆ ವರ್ಷಗಟ್ಟಲೆ ತೆಗೆದುಕೊಳ್ಳಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Read Full Story

04:41 PM (IST) Feb 20

ಚಿಕ್ಕಮಗಳೂರು - ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಮಿಸ್ಸಿಂಗ್! ಅಧಿಕಾರಿಗಳಿಗೆ ಜ್ವರ ಬರೋದೊಂದೇ ಬಾಕಿ

ಚಿಕ್ಕಮಗಳೂರಿನಲ್ಲಿ ಕಾರ್ಮಿಕನನ್ನು ಕೊಂದ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ, ಜೂನಿಯರ್ ಅರ್ಜುನ್ ಎಂಬ ಸಾಕಾನೆಯು ಕಾಡಿನಲ್ಲಿ ನಾಪತ್ತೆಯಾಗಿತ್ತು. ಒಂದು ಗಂಟೆಯ ಹುಡುಕಾಟದ ನಂತರ ಸಾಕಾನೆಯನ್ನು ಪತ್ತೆಹಚ್ಚಲಾಗಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Read Full Story

04:41 PM (IST) Feb 20

ಧರ್ಮಸ್ಥಳ ಕೇಸ್ ಮರು ತನಿಖೆಗೆ ಹೈಕೋರ್ಟ್ ಆದೇಶ; ರಾಜ್ಯ ಸರ್ಕಾರದಿಂದ ಐಜಿಪಿ ಲಭೂರಾಮ್ ನೇತೃತವದಲ್ಲಿ SIT ರಚನೆ!

ಧರ್ಮಸ್ಥಳದಲ್ಲಿ ನಡೆದ ಶ್ರೀಧರ್ ಎಂಬುವವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಐಜಿಪಿ ಲಭೂರಾಮ್ ನೇತೃತ್ವದ ಈ ತಂಡವು, ಕಳಪೆ ತನಿಖೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

Read Full Story

04:39 PM (IST) Feb 20

Gilli Nataನ ಒಂದೇ ಒಂದು ಫೋನ್​ ಕಾಲ್​, ಭವಿಷ್ಯವೇ ಬದಲಾಗತ್ತೆ - ನಿರ್ದೇಶಕ ತರುಣ್​ ಸುಧೀರ್​ ಬಿಗ್​ ಸರ್​ಪ್ರೈಸ್​

ಬಿಗ್​ಬಾಸ್​ ಗೆದ್ದ ಬಳಿಕ ಸತತ ಕಾರ್ಯಕ್ರಮಗಳಿಂದ ಸುಸ್ತಾಗಿರುವ ಗಿಲ್ಲಿ ನಟನಿಗೆ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ. ನಟನೆ, ನಿರ್ದೇಶನ ಅಥವಾ ಬರವಣಿಗೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಯೋಚಿಸಲು ಹೇಳಿದ್ದು, ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
Read Full Story

04:01 PM (IST) Feb 20

100 ರೂ ಕೊಟ್ಟು ಸಿನಿಮಾ ನೋಡ್ರಿ, ನಿಮ್‌ ಗಂಟು ಹೋಗಲ್ಲ - ರವಿಚಂದ್ರನ್‌ ಮಾತಿಗೆ ಪ್ರೇಕ್ಷಕರು ಬೇಸರ

ಮೊದಲು ಸಿನಿಮಾ ನೋಡಿ, ವಿಮರ್ಶೆ ಮಾಡಬೇಕು ಎಂದು ಹೋಗಬೇಡಿ. 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ನಿಮ್ಮ ಗಂಟು ಹೋಗಲ್ಲ, ಪ್ರೇಕ್ಷಕರು ಮೂರು ಗಂಟೆ ತಲ್ಲೀನವಾಗಿ ಸಿನಿಮಾ ನೋಡಬೇಕು, ಆ ಥರ ಸಿನಿಮಾ ಬೇಕು ಎಂದು ರವಿಚಂದ್ರನ್‌ ಅವರು ಹೇಳಿದ್ದರು. ಈ ಬಗ್ಗೆ ಬರಹಗಾರ ನಂದೀಶ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story

03:43 PM (IST) Feb 20

Byndoor - ಹರ್ಕೂರಿನ ಕೊರಗ ಸಮುದಾಯದ ಮನೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಗ್ರಾಮ ವಾಸ್ತವ್ಯ!

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಹರ್ಕೂರು ಗ್ರಾಮದ ಹಿಂದುಳಿದ ಕೊರಗ ಸಮುದಾಯದ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಅವರೊಂದಿಗೆ ಭೋಜನ ಸವಿದು, ಸಮಸ್ಯೆಗಳನ್ನು ಆಲಿಸಿದ್ದಾರೆ.

Read Full Story

03:39 PM (IST) Feb 20

Bhagyalakshmi Serial - ತಾಂಡವ್‌ ಮನೆಗೆ ಬಂದ್ರೂ ಭಾಗ್ಯ ನಂಗೆ ಬೇಕೇ ಬೇಕು; ಹಠ ಹಿಡಿದ ಆದಿ; ವೀಕ್ಷಕರ ಆಕ್ರೋಶ

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾನು ಬದಲಾಗಿದ್ದೀನಿ, ಭಾಗ್ಯ ಜೊತೆ ಸಂಸಾರ ಮಾಡ್ತೀನಿ ಎಂದು ತಾಂಡವ್‌ ಹಠ ಹಿಡಿದು ಕೂತಿದ್ದಾನೆ. ಅತ್ತ ಆದಿ, ಭಾಗ್ಯ ಜೊತೆ ಬದುಕ್ತೀನಿ ಎಂದು ಪಣ ತೊಟ್ಟಿದ್ದಾಳೆ. ಈಗ ಈ ಕಥೆ ತ್ರಿಕೋನ ಪ್ರೇಮಕಥೆಯ ತಿರುವು ಪಡೆದಿದೆ.

 

Read Full Story

03:33 PM (IST) Feb 20

ಮುಡಾ ಹಗರಣದ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್ - ಭ್ರಷ್ಟಾಚಾರದ ಆರೋಪ ಹೊರಿಸಿ ಸಿಸಿಬಿ ಬಲೆಗೆ ಬಿದ್ದ ಹೋರಾಟಗಾರ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಬಳಿ ಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

Read Full Story

03:23 PM (IST) Feb 20

ಬೆಂಗಳೂರು - ಮಗನಿಂದಲೇ ನಿವೃತ್ತ ನೇವಿ ಕ್ಯಾಪ್ಟನ್, ಪತ್ನಿ ಹತ್ಯೆ ಪ್ರಕರಣ, ಆರೋಪಿ ಮನೆಯಲ್ಲಿ ಕಾಂಡೋಮ್ ಪತ್ತೆ, ಅನೈತಿಕ ಸಂಬಂಧ ಶಂಕೆ!

ಬೆಂಗಳೂರಿನಲ್ಲಿ ನಿವೃತ್ತ ನೇವಿ ಕ್ಯಾಪ್ಟನ್ ಮತ್ತು ಅವರ ಪತ್ನಿಯನ್ನು ಹತ್ಯೆಗೈದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದರೂ, ಆರೋಪಿ ಮಗನ ಮನೆಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಅನೈತಿಕ ಸಂಬಂಧದ ಶಂಕೆ ಮೂಡಿದೆ. 

Read Full Story

03:14 PM (IST) Feb 20

ಆಸೀಸ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದೆವು.! ಪಾಕಿಸ್ತಾನ ಹಾಕಿ ಅವ್ಯವಸ್ಥೆ ಬಿಚ್ಚಿಟ್ಟ ನಾಯಕನಿಗೆ 2 ವರ್ಷ ಬ್ಯಾನ್!

ಕರಾಚಿ: ಪಾಕಿಸ್ತಾನ ಹಾಕಿ ಫೆಡರೇಷನ್‌ನ ಅವ್ಯವಸ್ಥೆಯ ಬಗ್ಗೆ ಬಹಿರಂಗವಾಇ ಮಾತನಾಡಿದ್ದ ಪಾಕಿಸ್ತಾನದ ನಾಯಕನ ಮೇಲೆ ಪಾಕ್ ಹಾಕಿ ಫೆಡರೇಷನ್ ಎರಡು ವರ್ಷ ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಹಾಕಿ ಫೆಡರೇಷನ್ ಅಧ್ಯಕ್ಷ ಹುದ್ದೆಗೆ ತಾರಿಖ್ ಬುಗ್ತಿ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.

 

Read Full Story

03:13 PM (IST) Feb 20

ಶಾಲು ಬಿಟ್ಟು ನೀವು ಏನೂ ಹಾಕಲ್ವಲ್ಲಾ ಸಾರ್​ ಎಂದು ಸಿಎಂಗೆ ಹೇಳಿದ ನಟಿ ಜಯಮಾಲಾ - ವಿಡಿಯೋ ವೈರಲ್​

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಆಯ್ಕೆಯಾದ ನಟಿ ಜಯಮಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಿಎಂಗೆ ಶಾಲು ಹೊದಿಸುವಾಗ ನಡೆದ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

02:46 PM (IST) Feb 20

ಬೆಂಗಳೂರಲ್ಲೂ ಹಳಿ ತಪ್ಪಿದ ನಮ್ಮ ಮೆಟ್ರೋ 'ಡ್ರೈವರ್‌ಲೆಸ್' ರೈಲು; ಘಟನೆಯ ತನಿಖೆಗೆ ಸಮಿತಿ ರಚಿಸಿದ ಬಿಎಂಆರ್‌ಸಿಎಲ್!

ಬೆಂಗಳೂರಿನ ಹೆಬ್ಬಗೋಡಿ ಡಿಪೋದಲ್ಲಿ ಚಾಲಕ ರಹಿತ 'ನಮ್ಮ ಮೆಟ್ರೋ' ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಹಳಿ ತಪ್ಪಿದೆ. ಈ ಘಟನೆಯ ಬೆನ್ನಲ್ಲೇ, ಬಿಡದಿ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ್ದು, ಈ ಸರಣಿ ಘಟನೆಗಳು ರೈಲ್ವೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿವೆ.
Read Full Story

01:46 PM (IST) Feb 20

ಗಂಡ ಫಾರಿನ್ ಟ್ರಿಪ್ ಕಳಿಸಿಲ್ಲವೆಂದು, ಡೈರೆಕ್ಟ್ ಯಮಲೋಕಕ್ಕೆ ಪರ್ಮನೆಂಟ್ ಪ್ರವಾಸ ಹೋದ ಹೆಂಡತಿ!

ಮೈಸೂರಿನಲ್ಲಿ ಪ್ರವಾಸಕ್ಕೆ ಪತಿ ಅನುಮತಿ ನಿರಾಕರಿಸಿದ್ದಕ್ಕೆ ಗೃಹಿಣಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮ*ಹತ್ಯೆಯಲ್ಲ, ಕೊಲೆ ಎಂದು ಮಗಳು ಆರೋಪಿಸಿದರೆ, ಮಗ ತಂದೆಯ ಪರ ನಿಂತಿದ್ದಾನೆ. ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

01:01 PM (IST) Feb 20

ಮದ್ವೆಯಾದ್ರೂ ನಾವಿಬ್ಬರೂ ನಮ್ಮ ಮೊದಲ ಪ್ರೀತಿ ಮರೆತಿಲ್ಲ - ಇದೇನಿದು Tarun Sudhir ಕೊಟ್ಟ ಸ್ಟೇಟ್​ಮೆಂಟ್​?

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ತರುಣ್, ತಮಗಿಬ್ಬರಿಗೂ  ಮೊದಲ ಪ್ರೀತಿ  ಬೇರೆಯದ್ದೇ  ಇದೆ ಎಂದಿದ್ದಾರೆ.  ಈ ಸಮಾನ ಮನಸ್ಥಿತಿಯೇ ತಮ್ಮ ಸುಗಮ ದಾಂಪತ್ಯಕ್ಕೆ ಕಾರಣ ಎಂದಿದ್ದಾರೆ.

 

Read Full Story

12:45 PM (IST) Feb 20

ಸತ್ತಂತೆ ಕಥೆ ಕಟ್ಟಿದ್ದ ಹಾಸನದ ವಿವಾಹಿತೆ - ಪ್ರಿಯಕರ ಡೇವಿಡ್‌ಗೆ ಕೈ ಕೊಟ್ಟು ಗಂಡನ ಜೊತೆ ಹೋಗಲು ಒಪ್ಪಿದ ಪ್ರಿಯಾಂಕ!

ಹಾಸನದಲ್ಲಿ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣವು,  ಕೊಲೆ ಶಂಕೆ ಹುಟ್ಟಿಸಿದ್ದ ಈ ಘಟನೆಯು, ಪೊಲೀಸರ ತನಿಖೆ ಹಾಗೂ ಸಾಂತ್ವಾನ ಕೇಂದ್ರದ ಸಮಾಲೋಚನೆಯ ನಂತರ, ಪ್ರಿಯಾಂಕ ತನ್ನ ತಪ್ಪನ್ನು ಅರಿತು ಪತಿ ಮತ್ತು ಕುಟುಂಬದೊಂದಿಗೆ  ಒಂದಾಗುವುದರೊಂದಿಗೆ ಸುಖಾಂತ್ಯ ಕಂಡಿದೆ.

Read Full Story

12:43 PM (IST) Feb 20

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ಇಷ್ಟೇ ನೋಡಿ ಬರೋಬ್ಬರಿ 8 ವರ್ಷಗಳಿಂದ ನಿಯತ್ತಾಗಿ ಗೃಹ ಸಾಲ ಕಟ್ಟಿದ್ದರೂ ಬ್ಯಾಂಕ್ ಕೇಳಲಿಲ್ಲ. ಮನೆಯಲ್ಲಿ ಬ್ಯಾಂಕ್ 90 ಲಕ್ಷಕ್ಕೆ ಹರಾಜು ಹಾಕಿದ ಕಣ್ಣೀರಿನ ಘಟನೆ ಬೆಂಗಳೂರಲ್ಲಿ ನಡೆದಿದೆ.

 

Read Full Story

12:40 PM (IST) Feb 20

ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಮೇಲೆ ಕಲ್ಲು ತೂರಾಟ; ಎಸ್‌ಪಿ ಸಿದ್ಧಾರ್ಥ ಗೋಯಲ್‌ಗೆ ಗಾಯ!

ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪಂಕಾ ಮಸೀದಿ ಬಳಿ ನಡೆದ ಈ ಘಟನೆಯಲ್ಲಿ ಎಸ್‌ಪಿ ಸಿದ್ಧಾರ್ಥ ಗೋಯಲ್ ಸೇರಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

Read Full Story

12:23 PM (IST) Feb 20

ಬೆಂಗಳೂರು ಮಹಿಳಾ ಟೆಕ್ಕಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್; ಹಂತಕನ ವಿಕೃತಿಗೆ ಪೊಲೀಸರೇ ಶಾಕ್!

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. 

Read Full Story

12:20 PM (IST) Feb 20

ನಿಮ್ಮ ಮನೇಲಿರೋ ಈ ವೇಸ್ಟ್‌ ಹಾಕ್ರೀ ಸಾಕು, ಕರಿಬೇವು, ಪುದಿನಾ, ಕುತ್ತುಂಬರಿ ಗಿಡವಂತೂ ಸೋಂಪಾಗಿ ಬೆಳೆಯುತ್ತೆ!

Simple easy Kitchen Scraps for Garden: ನಿಮ್ಮ ಮನೆಯಲ್ಲಿ ಉಳಿದ ಆಹಾರ ಕೂಡ ಮಣ್ಣನ್ನು ಫಲವತ್ತಾಗಿಸಬಹುದು. ಬಾಳೆಹಣ್ಣಿನ ಸಿಪ್ಪೆ, ಕಾಫಿ, ಮೊಟ್ಟೆಯ ಚಿಪ್ಪು ಮತ್ತು ಹುಳಿ ಹಣ್ಣುಗಳ ಸಿಪ್ಪೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಕೀಟಗಳನ್ನು ದೂರವಿಡುವ ಸುಲಭ ಮನೆಮದ್ದುಗಳ ಬಗ್ಗೆ ತಿಳಿಯಿರಿ.

 

Read Full Story

12:18 PM (IST) Feb 20

ಶೂಟಿಂಗ್​ನಲ್ಲಿ ಅವಘಡದ ಮುನ್ನ ಆಗಿದ್ದೇನು? Naa Ninna Bidalaare ಅಂಬಿಕಾ ಆಸ್ಪತ್ರೆಯಿಂದ್ಲೇ ವಿಡಿಯೋ ಶೇರ್​!

'ನಾ ನಿನ್ನ ಬಿಡಲಾರೆ' ಸೀರಿಯಲ್‌ನ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಶೂಟಿಂಗ್ ವೇಳೆ ಸ್ಟಂಟ್ ಮಾಡುವಾಗ ಕಾಲು ಮುರಿದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಕೆಲವು ದಿನಗಳ ಕಾಲ ಚಿತ್ರೀಕರಣದಿಂದ ದೂರ ಉಳಿಯಲಿದ್ದಾರೆ.
Read Full Story

12:00 PM (IST) Feb 20

ದೇಗುಲಗಳಲ್ಲಿ ರೀಲ್ಸ್, ಶೂಟಿಂಗ್ ಮಾಡಲು ಇನ್ನು ಅನುಮತಿ ಜೊತೆಗೆ ಶುಲ್ಕವೂ ಕಡ್ಡಾಯ! ಮುಜರಾಯಿ ಇಲಾಖೆ ಹೊಸ ಸುತ್ತೋಲೆ

ರಾಜ್ಯದ ದೇವಾಲಯಗಳಲ್ಲಿ ಹೆಚ್ಚುತ್ತಿರುವ ರೀಲ್ಸ್ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಕಡಿವಾಣ ಹಾಕಲು, ಮುಜರಾಯಿ ಇಲಾಖೆಯು ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಇನ್ನುಮುಂದೆ ಸಿನಿಮಾ, ಧಾರಾವಾಹಿ, ಅಥವಾ ಯಾವುದೇ ವೃತ್ತಿಪರ ಚಿತ್ರೀಕರಣಕ್ಕೆ ಪೂರ್ವಾನುಮತಿ ಹಾಗೂ ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.

Read Full Story

11:57 AM (IST) Feb 20

ಈ ಕಲರ್ ಪರ್ಸ್ ಬಳಸಿದ್ರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತೆ! ನೀವು ಕಪ್ಪು ವ್ಯಾಲೆಟ್ ಬಳಸ್ತಿದ್ದೀರಾ?

ನಿಮ್ಮ ಪರ್ಸ್‌ನ ಬಣ್ಣ ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಹುದು ಅನ್ನೋದು ನಿಮಗೆ ಗೊತ್ತಾ? ನೀಲಿಯಿಂದ ಕೆಂಪು ಬಣ್ಣದವರೆಗೆ, ಯಾವ ಬಣ್ಣದ ಪರ್ಸ್ ನಿಮಗೆ ಹಣ ಮತ್ತು ಯಶಸ್ಸನ್ನು ತಂದುಕೊಡುತ್ತೆ ಅಂತ ತಿಳಿಯಿರಿ!

 

Read Full Story

11:43 AM (IST) Feb 20

2016ರಿಂದ ಇಲ್ಲಿಯವರೆಗೆ..; ಪತಿಯಿಂದ ದೂರ ಮಾಡಲು ಬಂದ್ರವ್ರ ಬಗ್ಗೆ ಫಸ್ಟ್‌ ಟೈಮ್‌ ಬಾಯಿಬಿಟ್ಟ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಪತಿ ಶ್ರೀಕಾಂತ್‌ ಕಶ್ಯಪ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೀಕಾಂತ್‌ ಕಶ್ಯಪ್‌ ಅವರ ಪರಿಚಯ ಆದ ದಿನದಿಂದ ಹಿಡಿದು, ಇಲ್ಲಿಯವರೆಗಿನ ಫೋಟೋಗಳನ್ನು ಹಂಚಿಕೊಂಡು ಜೊತೆಯಾಗಿ ಬಂದ ಸ್ನೇಹ, ಪ್ರೀತಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

11:29 AM (IST) Feb 20

Karnataka Weather - ಬೆಂಕಿ ಬಿಸಿಲಿಗೆ ಬ್ರೇಕ್ ಇಲ್ಲ, ಇಬ್ಬನಿ ಚಳಿಗೆ ಕೊನೆಯಿಲ್ಲ - ಇಂದಿನ ರಾಜ್ಯದ ಹವಾಮಾನ ಹೇಗಿದೆ ಗೊತ್ತಾ?

ಇಂದು ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದೆ. ಆಕಾಶವು ಶುಭ್ರವಾಗಿದ್ದು, ರಾತ್ರಿಗಳು ತಂಪಾಗಿರಲಿವೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ವಿಜಯಪುರದಲ್ಲಿ ಕನಿಷ್ಠ ತಾಪಮಾನ 15°C ನಷ್ಟು ಕಡಿಮೆ ದಾಖಲಾಗಿದೆ.

Read Full Story

10:47 AM (IST) Feb 20

ಕಿಮ್ಮನೆ ರತ್ನಾಕರ್ ಆಪ್ತನಿಂದ ಮಹಿಳೆಗೆ ವಂಚನೆ; ಅದಾನಿ ಗ್ರೂಪ್‌ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಪಂಗನಾಮ!

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಆಪ್ತನೆಂದು ಹೇಳಿಕೊಂಡು ಅಮ್ರಪಾಲಿ ಸುರೇಶ್ ಎಂಬಾತ, ಅದಾನಿ ಗ್ರೂಪ್‌ನಿಂದ 100 ಕೋಟಿ ಸಿಎಸ್‌ಆರ್ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 35 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

More Trending News