Published : May 19, 2026, 07:34 AM ISTUpdated : May 19, 2026, 10:19 PM IST

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪಂಗನಾಮ ಹಾಕಿದ ಬುರ್ಖಾಧಾರಿ ಮನವಿಗೆ ಸಿಗತ್ತಾ ಮನ್ನಣೆ? ಆದೇಶದ ಗತಿಯೇನು? ಬಿಸಿಬಿಸಿ ಚರ್ಚೆ

ಸಾರಾಂಶ

ಕಾಂಗ್ರೆಸ್ ಸರ್ಕಾರದ 3ನೇ ವರ್ಷದ ಸಂಭ್ರಮದ ಅಂಗವಾಗಿ ತುಮಕೂರಿನಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಯಲಿದ್ದು, ಒಂದೇ ವೇದಿಕೆಯಲ್ಲಿ 1.52 ಲಕ್ಷ ಮಂದಿಗೆ ಹಕ್ಕು ಪತ್ರ ನೀಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ. ಇನ್ನು ಸಮಾವೇಶದಲ್ಲಿ ಕಂದಾಯ ಇಲಾಖೆಯ 60 ಸಾವಿರ, ಗ್ರಾಮೀಣಾಭಿವೃದ್ಧಿ ಇಲಾಖೆಯ 80 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಒಟ್ಟಾರೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

Lakshmi Hebbalkar

10:19 PM (IST) May 19

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪಂಗನಾಮ ಹಾಕಿದ ಬುರ್ಖಾಧಾರಿ ಮನವಿಗೆ ಸಿಗತ್ತಾ ಮನ್ನಣೆ? ಆದೇಶದ ಗತಿಯೇನು? ಬಿಸಿಬಿಸಿ ಚರ್ಚೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೋಮು ಸೌಹಾರ್ದತೆಯ ದ್ಯೋತಕವೆಂದು ಭಾವಿಸಿ ಹಿಂದೂ ವಿಧವೆಯೊಬ್ಬರಿಗೆ ಮನೆ ಕೊಡಿಸಲು ಬಂದ ಬುರ್ಖಾಧಾರಿ ಮಹಿಳೆಯರಿಗೆ ಸಹಾಯ ಮಾಡಲು ಮುಂದಾದರು. ಆದರೆ, ಆ ಬುರ್ಖಾಧಾರಿ ಮಹಿಳೆಯರಲ್ಲಿ ಒಬ್ಬರು ಆ ವಿಧವೆಯ ಮತಾಂತರಗೊಂಡ ಮಗಳೇ ಎಂಬ ಸತ್ಯ ಬಯಲಾಗಿದೆ, ಮುಂದೇನು?

Read Full Story

09:27 PM (IST) May 19

ವಿಜಯವಾಡ ಟು ಬೆಂಗಳೂರು ಜಸ್ಟ್ 6 ಗಂಟೆ - ಶೀಘ್ರದಲ್ಲೇ ಲಭ್ಯವಾಗಲಿದೆ ನೂತನ ಗ್ರೀನ್‌ಫೀಲ್ಡ್ ಹೈವೇ

ಬೆಂಗಳೂರು ಮತ್ತು ವಿಜಯವಾಡ ನಡುವೆ ನಿರ್ಮಾಣವಾಗುತ್ತಿರುವ ಹೊಸ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ (NH-544G) ಕಾಮಗಾರಿ ಅಂತಿಮ ಹಂತದಲ್ಲಿದೆ. ಈ 6 ಪಥದ ಹೆದ್ದಾರಿಯು 2027ರ ವೇಳೆಗೆ ಪೂರ್ಣಗೊಳ್ಳಲಿದ್ದು, ಉಭಯ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 6 ಗಂಟೆಗಳಿಗೆ ಇಳಿಸಲಿದೆ.
Read Full Story

09:22 PM (IST) May 19

ಯಶ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ - ಈ ದಿನದಂದು ತೆರೆ ಮೇಲೆ 'ಟಾಕ್ಸಿಕ್' ಸಿನಿಮಾ ಬರೋದು ಫಿಕ್ಸ್?

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್‌ಡೇಟ್ ಒಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಈ ಹಿಂದೆ ಹಲವು ಬಾರಿ ಮುಂದೂಡಲಾಗಿತ್ತು.

Read Full Story

08:48 PM (IST) May 19

'ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..' ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ

ಬಳ್ಳಾರಿಯ ಕಂಪ್ಲಿಯಲ್ಲಿ, ಪತಿ ಮತ್ತು ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಐಶ್ವರ್ಯ ಎಂಬ ಗೃಹಿಣಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದರೂ, ನಿರಂತರ ಗೃಹಹಿಂಸೆಯಿಂದ ನೊಂದು ತವರುಮನೆಯಲ್ಲಿ ನೇಣಿಗೆ ಶರಣಾಗಿದ್ದು, ಡೆತ್‌ನೋಟ್ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story

08:27 PM (IST) May 19

ಗಂಗಾವತಿ ಕಾಂಗ್ರೆಸ್‌ನಲ್ಲಿ ಭಿನ್ನಮತ? ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಗಂಭೀರ ಆರೋಪ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

07:41 PM (IST) May 19

ದುಬಾರೆ ಘಟನೆ ಬೆನ್ನಲ್ಲೇ ಬಿಗ್ ಆಕ್ಷನ್ - ಮೈಸೂರು ದಸರಾದಿಂದ ಕಂಜನ್ ಆನೆ ಶಾಶ್ವತ ವಜಾ

ದುಬಾರೆ ಆನೆ ಶಿಬಿರದಲ್ಲಿ ಸಹ ಆನೆ 'ಮಾರ್ತಾಂಡ'ನ ಸಾವಿಗೆ ಕಾರಣವಾದ 'ಕಂಜನ್' ಆನೆಯನ್ನು, ಅದರ ಆಕ್ರಮಣಕಾರಿ ನಡವಳಿಕೆಯಿಂದಾಗಿ ಮುಂಬರುವ ಮೈಸೂರು ದಸರಾ ಮಹೋತ್ಸವದಿಂದ ಶಾಶ್ವತವಾಗಿ ನಿಷೇಧಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
Read Full Story

06:20 PM (IST) May 19

ಬೀದರ್-ಬೆಂಗಳೂರು ನೇರ ವಿಮಾನಯಾನ ಜೂನ್ 1 ರಿಂದ ಆರಂಭ, ವೇಳಾಪಟ್ಟಿ ಬಿಡುಗಡೆ, ಚೆಕ್ ಮಾಡಿಕೊಳ್ಳಿ

ಜೂನ್ 1 ರಿಂದ ಬೀದರ್-ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಸ್ಟಾರ್ ಏರ್ ಮೂಲಕ ಪುನರಾರಂಭಗೊಳ್ಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಮತ್ತು ಬೀದರ್‌ನಿಂದ 8:15ಕ್ಕೆ ವಿಮಾನಗಳು ಹೊರಡಲಿದ್ದು, ಈ ಸೇವೆಯು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Read Full Story

06:17 PM (IST) May 19

ಬಾದಾಮಿ ಗುಹಾಂತರ ದೇವಾಲಯದ ಒಳಗೆ ಚಪ್ಪಲಿ ಧರಿಸಿ ಬಂದ ಮುಸ್ಲಿಂ ಮಹಿಳೆ, ತರಾಟೆಗೆ ತೆಗೆದುಕೊಂಡ ಟೂರಿಸ್ಟ್‌!

ಬಾಗಲಕೋಟೆಯ ಪ್ರಸಿದ್ಧ ಬಾದಾಮಿ ಗುಹಾಂತರ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿದ್ದ ಮುಸ್ಲಿಂ ಮಹಿಳೆಯನ್ನು ಇನ್ನೊಬ್ಬ ಮಹಿಳಾ ಪ್ರವಾಸಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

05:37 PM (IST) May 19

ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!

ಶಿವಂ ಅಸೋಸಿಯೇಟ್ಸ್‌ನ ₹4500 ಕೋಟಿ ಠೇವಣಿ ವಂಚನೆ ಪ್ರಕರಣವು ಹೊಸ ತಿರುವು ಪಡೆದಿದೆ. ಸಾರ್ವಜನಿಕರ ಹಣದಿಂದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ.  

Read Full Story

05:35 PM (IST) May 19

ಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?

ಗಾಯದ ಸಮಸ್ಯೆಯಿಂದಾಗಿ ಎಂ.ಎಸ್‌.ಧೋನಿ ಚೆಪಾಕ್‌ನ ಕೊನೆಯ ಲೀಗ್ ಪಂದ್ಯದಿಂದ ಹೊರಗುಳಿದಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇ ಆಫ್ ಹಾದಿ ಬಹುತೇಕ ಅಂತ್ಯಗೊಂಡಿದೆ.
Read Full Story

05:28 PM (IST) May 19

ವಿಜಯಲಕ್ಷ್ಮೀ, ನಿಖಿತಾ, ಪವಿತ್ರಾ ಗೌಡರಿಂದ ಜೈಲುವರೆಗೆ - ದರ್ಶನ್ ಜೀವನದ ವಿವಾದಗಳು ಏನೇನಿದೆ ಗೊತ್ತಾ?

ಮನಸಾರೆ ಪ್ರೀತಿಸಿ, ಮನೆಯವರನ್ನೂ ಒಪ್ಪಿಸಿ ಧರ್ಮಕ್ಷೇತ್ರದಲ್ಲಿ ಮದುವೆಯೂ ಆಗಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದ ದರ್ಶನ್​​ರ ಮುದ್ದು ರಾಕ್ಷಸಿ ವಿಜಯಲಕ್ಷ್ಮೀ ಜೀವನ ಬೀದಿಗೆ ಬಂದಿದ್ದು 2011ರಲ್ಲಿ. 

Read Full Story

05:10 PM (IST) May 19

ವಿಶೇಷ ದಿನಕ್ಕೆ ದರ್ಶನ್ ಬೇಡಿಕೆ.. ಎಸ್‌ಪಿಗೆ ಪತ್ರ - ಗಂಡನ ನೆನಪಲ್ಲಿ ಒಡೆದ ಹೃದಯ.. ವಿಜಯಲಕ್ಷ್ಮೀ ಭಾವುಕ!

ಎಂತದ್ದೇ ಕಷ್ಟಗಳು ಎದುರಾದ್ರು, ಎದೆಗುಂದದೆ ಇಷ್ಟು ವರ್ಷಗಳಿಂದ ಸಂಸಾರದ ದೋಣಿಯನ್ನ ಮುನ್ನಡೆಸುತ್ತಿರೋ ದರ್ಶನ್​ ವಿಜಯಲಕ್ಷ್ಮೀಗೆ ಇದೇ ಮೊದಲ ಭಾರಿಗೆ ದೂರಾಗಿ ವಿವಾಹ ವಾರ್ಷಿಕೋತ್ಸವ ಮಾಡಿಕೊಳ್ಳಬೇಕಿದೆ.

Read Full Story

04:48 PM (IST) May 19

ಯುರೋಪ್‌ ಈಗ ಮತ್ತಷ್ಟು ಹತ್ತಿರ - ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಆರಂಭ, ಸ್ವಿಸ್ ಏರ್‌ಲೈನ್ಸ್‌ ಸಿಹಿ ಸುದ್ದಿ

ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್, 2026ರ ಅಕ್ಟೋಬರ್‌ನಿಂದ ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಐದು ದಿನ ಲಭ್ಯವಿರುವ ಈ ಸೇವೆಯು, ದಕ್ಷಿಣ ಭಾರತದ ಪ್ರಯಾಣಿಕರಿಗೆ ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸುಲಭ ಸಂಪರ್ಕ ಕಲ್ಪಿಸಲಿದೆ.
Read Full Story

04:45 PM (IST) May 19

ನೀ ತಾನೇ ನನ್ನ ಜೀವ.. ಎಂದು ಪತ್ನಿ-ಮಗನನ್ನು ಅಪ್ಪಿ ಹಣೆಗೆ ಮುತ್ತಿಟ್ಟ ಕೊಲೆ ಆರೋಪಿ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, 8 ತಿಂಗಳ ನಂತರ ಮೊದಲ ಬಾರಿಗೆ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. 23ನೇ ಮದುವೆ ವಾರ್ಷಿಕೋತ್ಸವದಂದು ನಡೆದ ಈ ವಿಶೇಷ ಮುಖಾಮುಖಿಗೆ ಅವಕಾಶ ನೀಡಲಾಗಿತ್ತು.

Read Full Story

04:38 PM (IST) May 19

BTS Fan - ಕೊರಿಯನ್ ಬಾಯ್‌ಫ್ರೆಂಡ್ ಬೇಕಿತ್ತು.. ತಂಗಿ-ಅಮ್ಮನ ಬಗ್ಗೆ ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಅಹಾನಾ

ತನ್ನ ತಂಗಿ ಹಂಸಿಕಾಳಿಗೆ ಕೊರಿಯನ್ ಬಾಯ್‌ಫ್ರೆಂಡ್ ಬೇಕು ಅನ್ನೋ ಆಸೆ ಇದೆ. ಅಷ್ಟೇ ಅಲ್ಲ, ಅಮ್ಮನಿಗೂ ಕೊರಿಯನ್ ಅಳಿಯ ಬೇಕು ಅನ್ನೋ ಆಸೆ ಬಂದಿತ್ತು ಅಂತ ನಟಿ ಅಹಾನಾ ಕೃಷ್ಣ ಹೇಳಿಕೊಂಡಿದ್ದಾರೆ.

Read Full Story

04:24 PM (IST) May 19

ಸೋಮಾಲಿಯಾ ಜೆಟ್ ವೇವ್ಸ್ ಮೂಲಕ ಕರಾವಳಿಗೆ ಮುಂಗಾರು ಮಳೆ ಎಂಟ್ರಿ, ಸಮುದ್ರ ಅಬ್ಬರದ ಆತಂಕ ಜಲಕ್ರೀಡೆ ಸ್ಥಗಿತ!

ಹವಾಮಾನ ಇಲಾಖೆಯ ಚಂಡಮಾರುತ ಹಾಗೂ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಲಸಾಹಸ ಕ್ರೀಡೆ ಮತ್ತು ಪ್ರವಾಸಿ ಬೋಟಿಂಗ್ ಅನ್ನು ನಿಷೇಧಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗೋಕರ್ಣ, ಮುರುಡೇಶ್ವರ, ಮತ್ತು ನೇತ್ರಾಣಿ ದ್ವೀಪದಂತಹ ಪ್ರಮುಖ ತಾಣಗಳಲ್ಲಿ ನಿರ್ಬಂಧ.

Read Full Story

04:19 PM (IST) May 19

ರಾಜ್ಯದ 10 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' - 48 ಗಂಟೆಗಳ ಕಾಲ ಮಳೆ ಅಬ್ಬರ, ಮನೆ ಬಿಡುವ ಮುನ್ನ ಎಚ್ಚರ!

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 10 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಹಾಗೂ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದ್ದುದೆ.

Read Full Story

03:47 PM (IST) May 19

ಶಿವಂ ಹಗರಣ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!

‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ₹4,500 ಕೋಟಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್‌ನನ್ನು 10 ದಿನಗಳ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಹೂಡಿಕೆದಾರರಿಂದ ಮೊದಲ ಅಧಿಕೃತ ದೂರು ದಾಖಲಾಗಿದೆ.
Read Full Story

02:51 PM (IST) May 19

ಭಾರತದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ ಬಲ - ಗೇಟ್ಸ್ ಫೌಂಡೇಶನ್ ಜೊತೆ ವಾಧ್ವಾನಿ ಫೌಂಡೇಶನ್ ಮಹತ್ವದ ಒಪ್ಪಂದ

ವಾಧ್ವಾನಿ ಫೌಂಡೇಶನ್ ಮತ್ತು ಗೇಟ್ಸ್ ಫೌಂಡೇಶನ್ ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಒಪ್ಪಂದ ಮಾಡಿಕೊಂಡಿವೆ. ಈ ಸಹಭಾಗಿತ್ವವು 'ನ್ಯಾಷನಲ್ ಇನ್ನೋವೇಶನ್ ನೆಟ್‌ವರ್ಕ್' (NIN) ಮೂಲಕ ಆರೋಗ್ಯ, ಪೌಷ್ಟಿಕಾಂಶದಂತಹ ಕ್ಷೇತ್ರಗಳಲ್ಲಿನ ಶೈಕ್ಷಣಿಕ ಸಂಶೋಧನೆಗಳನ್ನು ಸಮಾಜಮುಖಿ ಪರಿಹಾರಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.
Read Full Story

02:30 PM (IST) May 19

ಗಮನಿಸಿ, ಮೇ 20 ರಿಂದ ಜೂನ್ 2ರವರೆಗೆ ಮಂಗಳೂರಿನಿಂದ ಹೊರಡುವ ಎಲ್ಲಾ ರೈಲುಗಳ ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆ!

ನೈಋತ್ಯ ರೈಲ್ವೆಯ ತಿರುವನಂತಪುರಂ ವಿಭಾಗದಲ್ಲಿ ಹಳಿ ನಿರ್ವಹಣೆ ಹಿನ್ನೆಲೆ, ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ಭಾಗಶಃ ರದ್ದಾಗಿದ್ದು, ಅಂತ್ಯೋದಯ ಮತ್ತು ಮಾವೇಲಿ ಎಕ್ಸ್‌ಪ್ರೆಸ್ ಸೇರಿದಂತೆ ಇತರ ರೈಲುಗಳನ್ನು ಬೇರೆ ಮಾರ್ಗದಲ್ಲಿ ಓಡಿಸಲಾಗುವುದು ಅಥವಾ ನಿರ್ಬಂಧಿಸಲಾಗುವುದು.
Read Full Story

01:05 PM (IST) May 19

ಇಡೀ ಜಗತ್ತೇ ಎದುರಾದ್ರೂ ನಾನು ನಿನ್ನ ಬಿಡೋದಿಲ್ಲ, ದೂರ ಆಗಲ್ಲ - Darshan Thoogudeepa ಪತ್ನಿ ವಿಜಯಲಕಷ್ಮೀ

Actor Vijayalakshmi Darshan: ವಿಜಯಲಕ್ಷ್ಮೀ ಹಾಗೂ ನಟ ದರ್ಶನ್‌ ತೂಗುದೀಪ ಅವರು 2003 ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದು ವಿವಾಹ ವಾರ್ಷಿಕೋತ್ಸವದ ಖುಷಿಯಿದ್ದರೂ ಕೂಡ, ದರ್ಶನ್‌ ಮಾತ್ರ ಜೈಲಿನಲ್ಲಿದ್ದಾರೆ. ಈಗ ವಿಜಯಲಕ್ಷ್ಮೀ ಅವರು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

12:49 PM (IST) May 19

Breaking - ವಿಜಯಪುರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದು ಬೆನ್ನಲ್ಲೇ ಭೂಕಂಪನ ಅನುಭವ!

ವಿಜಯಪುರ ಜಿಲ್ಲೆಯ ತಿಕೋಟ ಭಾಗದಲ್ಲಿ ಇಂದು ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕ. ಭಾರೀ ಶಬ್ಧದೊಂದಿಗೆ ಭೂಮಿ ನಡುಗಿದ ಅನುಭವವಾದ ಕಾರಣ, ಹಲವು ಗ್ರಾಮಗಳ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಈ ಭಾಗದಲ್ಲಿ ಪದೇಪದೆ ಭೂಕಂಪನ ಸಂಭವಿಸುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ.

Read Full Story

12:41 PM (IST) May 19

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ - ರಾಜ್ಯದಲ್ಲೇ ಮೊದಲ ಬಾರಿಗೆ ಮೊಬೈಲ್ ಕಮಾಂಡ್ ಪೋಸ್ಟ್ ವಾಹನ ನಿಯೋಜನೆ

ಹುಬ್ಬಳ್ಳಿ ವಿಮಾನ ನಿಲ್ದಾಣವು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅತ್ಯಾಧುನಿಕ 'ಮೊಬೈಲ್ ಕಮಾಂಡ್ ಪೋಸ್ಟ್' ವಾಹನವನ್ನು ಪಡೆದಿದೆ. ರಾಜ್ಯದಲ್ಲೇ ಇಂತಹ ಸೌಲಭ್ಯ ಪಡೆದ ಮೊದಲ ವಿಮಾನ ನಿಲ್ದಾಣ ಇದಾಗಿದ್ದು, ಈ ವಾಹನವು ಸುಧಾರಿತ ಸಂವಹನ ಮತ್ತು 360-ಡಿಗ್ರಿ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ.
Read Full Story

12:07 PM (IST) May 19

ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ

ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮುಷ್ಕರದಿಂದ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.

Read Full Story

08:59 AM (IST) May 19

ದುಬಾರೆ ಆನೆ ಶಿಬಿರಕ್ಕೆ 2 ದಿನ ಪ್ರವೇಶ ನಿರ್ಬಂಧ; ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡ 'ಮಾರ್ತಾಂಡ' ಆನೆಗೆ ಚಿಕಿತ್ಸೆ!

ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಪ್ರವಾಸಿಗರ ಸುರಕ್ಷತೆಗಾಗಿ ಶಿಬಿರಕ್ಕೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
Read Full Story

08:59 AM (IST) May 19

God Exists Beware - ದೇವರಿದ್ದಾನೆ, ಹುಷಾರಾಗಿರಿ! ದಿಲೀಪ್‌ ರಾಜ್‌ ಪತ್ನಿ ಪೋಸ್ಟ್‌ ವೈರಲ್!

ಹೃದಯಸ್ತಂಭನದಿಂದ ನಿಧನರಾದ ನಟ ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ, ಪತಿಯ ಅಗಲಿಕೆಯ ನೋವಿನಲ್ಲಿ ದೇವರಿಗೆ ಹಿಡಿಶಾಪ ಹಾಕಿದ್ದಾರೆ. ಖುಷಿಯಾಗಿರುವ ಸಂಸಾರಗಳನ್ನು ದೇವರು ನಾಶಮಾಡುತ್ತಾನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಮತ್ತು ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
Read Full Story

08:12 AM (IST) May 19

ಕನ್ನಡಿಗರೇ, ಕನ್ನಡದ ಮೊದಲ ಹಲ್ಮಿಡಿ ಶಾಸನ ನೋಡಬೇಕೆ? ಕೇವಲ 5 ದಿನ ಅವಕಾಶವಿದೆ, ತಪ್ಪದೇ ಇಲ್ಲಿಗೆ ಭೇಟಿ ನೀಡಿ!

ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯ ಅಂಗವಾಗಿ, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನ ಹಾಗೂ ಕರ್ನಾಟಕದ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಮೇ ೨೪ರವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.
Read Full Story

07:36 AM (IST) May 19

ಸರ್ಕಾರದ ಸಾಧನಾ ರ್‍ಯಾಲಿಗೆ ತುಮಕೂರು ಸಜ್ಜು; 2 ಲಕ್ಷ ಜನರು ಭಾಗಿ, ರಾಜ್ಯ ಸರ್ಕಾರಕ್ಕೆ ನಾಳೆ 3: ಇಂದು ‘ಗಿನ್ನೆಸ್‌ ದಾಖಲೆ’ಯ ಸಮಾವೇಶ!

ಕಾಂಗ್ರೆಸ್‌ ಸರ್ಕಾರದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತುಮಕೂರಿನಲ್ಲಿ 'ಸಾಧನಾ ಸಮಾವೇಶ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.

 

Read Full Story

More Trending News