Published : Jun 09, 2026, 06:43 AM ISTUpdated : Jun 09, 2026, 11:18 PM IST

Karnataka News Live: ಮತ್ತೆ ಅಪ್ಪನಾಗ್ತಿದ್ದಾರಾ ಹಾರ್ದಿಕ್‌? ರಾತ್ರೋರಾತ್ರಿ ಗೆಳತಿಯನ್ನು ಕರ್ಕೊಂಡು ಬೆಂಗಳೂರಿನ ಪ್ರೈಮಾ ಡಯಾಗ್ನೋಸ್ಟಿಕ್ಸ್‌ಗೆ ಬಂದ ಪಾಂಡ್ಯ!

ಸಾರಾಂಶ

ಬೆಂಗಳೂರು: ‘ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರಾದರೂ ಹೇಳುತ್ತಾರೆಯೇ? ಯಾರೂ ಕೂಡ ಹೇಳುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ವಿನಯ್ ಕಾರ್ತಿಕ್‌ ಅವರನ್ನು ಕಾಂಗ್ರೆಸ್‌ನ 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದರು. ಪರಿಷತ್ ಚುನಾವಣೆಯಲ್ಲಿ ವಿನಯ್ ಕಾರ್ತಿಕ್ ಸ್ಪರ್ಧೆ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳಲ್ಲ ಎಂದಷ್ಟೇ ಹೇಳಿದರು.

ಜೆಡಿಎಸ್‌ ಬಗ್ಗೆ ಮಾತನಾಡಲ್ಲ:

ಎಚ್.ಡಿ.ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಿ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಸುರ್ಜೇವಾಲ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಅವರು, ‘ನಾನು ಸದ್ಯಕ್ಕೆ ಆ ವಿಚಾರವಾಗಿ ಏನೂ ಮಾತನಾಡುವುದಿಲ್ಲ. ಸುರ್ಜೇವಾಲ ಅವರು ಮಾತಾಡಿದ್ದಾರೆ. ನಮ್ಮ ಪಕ್ಷದ ಚಿಂತನೆಯನ್ನು ನಾನು ಪಾಲನೆ ಮಾಡುತ್ತೇನೆ ಅಷ್ಟೇ’ ಎಂದರು.

11:18 PM (IST) Jun 09

ಮತ್ತೆ ಅಪ್ಪನಾಗ್ತಿದ್ದಾರಾ ಹಾರ್ದಿಕ್‌? ರಾತ್ರೋರಾತ್ರಿ ಗೆಳತಿಯನ್ನು ಕರ್ಕೊಂಡು ಬೆಂಗಳೂರಿನ ಪ್ರೈಮಾ ಡಯಾಗ್ನೋಸ್ಟಿಕ್ಸ್‌ಗೆ ಬಂದ ಪಾಂಡ್ಯ!

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನ ಯಲಹಂಕದಲ್ಲಿರುವ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ರಾತ್ರೋರಾತ್ರಿ ಭೇಟಿ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.

Read Full Story

09:27 PM (IST) Jun 09

ವಾಟ್ಸಾಪ್ ಯುನಿವರ್ಸಿಟಿ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ - ಸಂಸದ ಬೊಮ್ಮಾಯಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಹರಿದಾಡುತ್ತಿರುವ ಸುದ್ದಿಗಳು 'ವಾಟ್ಸಾಪ್ ಯುನಿವರ್ಸಿಟಿ'ಯ ಸೃಷ್ಟಿಯಾಗಿದ್ದು, ಅಂತಹ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Read Full Story

09:02 PM (IST) Jun 09

ಪಕ್ಷದಲ್ಲಿ ಅನ್ಯಾಯವಾಗಿಲ್ಲ, ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿದೆ - ಸಚಿವ ಸತೀಶ್ ಜಾರಕಿಹೊಳಿ

ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರಿಗೂ ಒಂದೇ ವೇಳೆ ಎಲ್ಲವೂ ಸಿಗಲು ಸಾಧ್ಯವಿಲ್ಲ. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಕೆಲಸ ಮಾಡುವುದು ಮುಖ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Read Full Story

07:00 PM (IST) Jun 09

ಕನಕಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ - ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ ಶಂಕೆ, ಬೆಂಕಿ ಹಚ್ಚಿ ಹ*ತ್ಯೆ?

ಸಮೀಪದ ಕನಕಗಿರಿ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ (40) ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿ ನಂತರ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.

Read Full Story

06:45 PM (IST) Jun 09

ಕಾಡುಗೋಡಿ ಮಗು ಹತ್ಯೆ ಪ್ರಕರಣ - ಐಸ್‌ಕ್ರೀಂ ಕೇಳಿದ್ದಕ್ಕೆ ಕಾರಲ್ಲೇ ಒದ್ದು ಕೊಂದೆ, ಪೊಲೀಸರೆದುರು ಬಾಯಿಬಿಟ್ಟ ಪ್ರಿಯಕರ!

ಬೆಂಗಳೂರಿನ ಕಾಡುಗೋಡಿಯಲ್ಲಿ, ಪ್ರಿಯಕರನೊಂದಿಗೆ ಸೇರಿ ಮಗಳನ್ನು ಕೊಂದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಮೋಹನ್ ಸಿಕ್ಕಿಬಿದ್ದಿದ್ದಾನೆ. ಐಸ್‌ಕ್ರೀಂಗಾಗಿ ಹಠ ಹಿಡಿದ ಮಗುವನ್ನು ಮೋಹನ್ ಕಾರಿನಲ್ಲೇ ಒದ್ದು ಕೊಂದಿದ್ದು, ನಂತರ ಇಬ್ಬರೂ ಸೇರಿ ಕೊಲೆಯನ್ನು ಮುಚ್ಚಿಹಾಕಲು ನಾಟಕವಾಡಿದ್ದರು.  

Read Full Story

05:25 PM (IST) Jun 09

ಗದಗದಲ್ಲಿ ರಾಷ್ಟ್ರಕೂಟ ಕಾಲದ ವಿಶಿಷ್ಟ ವೀರಗಲ್ಲು ಪತ್ತೆ, ರಾಜನ ಮೇಲಿನ ಪ್ರೀತಿಗೆ ಪ್ರಾಣತ್ಯಾಗದ 'ಕೀಲುಗುಂಟೆ' ಪದ್ಧತಿ!

ಗದಗ ಜಿಲ್ಲೆಯ ಮೇವುಂಡಿಯಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದು ತನ್ನ ಅರಸನ ಸಾವಿನ ನಂತರ, ರಾಜಭಕ್ತಿಯಿಂದ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ರಟ್ಟೆಯಣ್ಣ ಎಂಬ ಸೇವಕನ ಕಥೆಯನ್ನು ಹೇಳುತ್ತದೆ. ಈ ವಿಶಿಷ್ಟ ಆಚರಣೆಯನ್ನು 'ಕೀಲುಗುಂಟೆ' ಎಂದು ಕರೆಯಲಾಗುತ್ತಿತ್ತು.
Read Full Story

04:24 PM (IST) Jun 09

ದುನಿಯಾ ವಿಜಯ್‌ಗೆ ನಡುಕ ಹುಟ್ಟಿಸಿದ ವಿಜಯ್ ಸೇತುಪತಿ - 'ಸ್ಲಮ್‌ಡಾಗ್' ಟೀಸರ್‌ನಲ್ಲಿ ಬಿಗ್ ಸಸ್ಪೆನ್ಸ್

ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆಕ್ಷನ್ ಸಿನಿಮಾ 'ಸ್ಲಮ್‌ಡಾಗ್: 33 ಟೆಂಪಲ್ ರೋಡ್' ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಟೀಸರ್‌ನಲ್ಲಿ ರಾಷ್ಟ್ರ ಪ್ರಶಸ್ತಿ..

Read Full Story

04:07 PM (IST) Jun 09

ರೆಸಾರ್ಟ್ ರಾಜಕೀಯ - ಅಡ್ಡ ಮತದಾನದ ಭೀತಿ, ಬೆಂಗಳೂರಿನ ರೆಸಾರ್ಟ್‌ಗೆ ಶಿಫ್ಟ್ ಆದ ಮಧ್ಯಪ್ರದೇಶದ 63 ಕಾಂಗ್ರೆಸ್ ಶಾಸಕರು!

ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮತ್ತು ಆಪರೇಷನ್ ಕಮಲದ ಭೀತಿಯಿಂದಾಗಿ, ಮಧ್ಯಪ್ರದೇಶದ 63 ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ವಂಡರ್‌ಲಾ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮತದಾನದವರೆಗೂ ಸುಮಾರು 10 ದಿನಗಳ ಕಾಲ ಶಾಸಕರು ಇಲ್ಲೇ ವಾಸ್ತವ್ಯ ಹೂಡಲಿದ್ದು, ಈ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲ ಕೆರಳಿಸಿದೆ.
Read Full Story

03:31 PM (IST) Jun 09

ಬೆಂಗಳೂರಿಗೆ ಬಿಗ್‌ ಗಿಫ್ಟ್ - ಈ ರಸ್ತೆಲಿ 10.3 ಕಿ.ಮೀ ಉದ್ದದ ಬೃಹತ್ ಸೈಕ್ಲಿಂಗ್ ಕಾರಿಡಾರ್ ಜೂ.27ಕ್ಕೆ ಲೋಕಾರ್ಪಣೆ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು  ನಗರದ ಟ್ರಾಫಿಕ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು 10.3 ಕಿ.ಮೀ ಉದ್ದದ ವಿಶೇಷ ಸೈಕ್ಲಿಂಗ್ ಕಾರಿಡಾರ್ ನಿರ್ಮಿಸುತ್ತಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ಪರಿಸರ ಸ್ನೇಹಿ ಮಾರ್ಗವು ಸೈಕಲ್ ಸವಾರರಿಗೆ ಸುರಕ್ಷಿತ ಸಂಚಾರವನ್ನು ಒದಗಿಸಲಿದೆ.

Read Full Story

02:35 PM (IST) Jun 09

ಶಿವಮೊಗ್ಗಕ್ಕೆ ವಿಮಾನ ಹಾರಾಟ ಸ್ಥಗಿತ, ಮರು ಚಾಲನೆಗೆ ಪ್ರಯತ್ನಿಸುವೆ ಎಂದ ಸಂಸದ ರಾಘವೇಂದ್ರ, ಸರ್ಕಾರದ ವಿರುದ್ಧ ಕಿಡಿ!

ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಸ್ಪೈಸ್‌ಜೆಟ್ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿವೆ. ರಾಜ್ಯ ಸರ್ಕಾರದ ಸಬ್ಸಿಡಿ ನಿಲುಗಡೆಯೇ ಇದಕ್ಕೆ ಕಾರಣವೆಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದು, 'ಉಡಾನ್' ಯೋಜನೆ ಮೂಲಕ ಸೇವೆ ಪುನರಾರಂಭಿಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಸ್ಟಾರ್ ಏರ್ ಮಾತ್ರ ಹೈದರಾಬಾದ್, ತಿರುಪತಿ ಮತ್ತು ಗೋವಾಗೆ ಸೇವೆ ಮುಂದುವರಿಸಿದೆ.
Read Full Story

12:16 PM (IST) Jun 09

ಉತ್ತರ ಕರ್ನಾಟಕ ಪ್ರವಾಸೋದ್ಯಮ - ಹಿಡಕಲ್ ಡ್ಯಾಂ ಇನ್ನು ಮುಂದೆ ಪ್ರವಾಸಿ ತಾಣ, ಉದ್ಯಾನ, ಮಕ್ಕಳ ರೈಲು, ಬೋಟಿಂಗ್, ತಾರಾಲಯ

ಹಿಡಕಲ್ ಡ್ಯಾಂ ಅನ್ನು ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ಬೃಂದಾವನ ಮಾದರಿಯ 'ರಾಜಾ ಲಖಮಗೌಡ ಉದ್ಯಾನಕಾಶಿ'ಯ ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದಿ, ಮಕ್ಕಳ ರೈಲು, ಬೋಟಿಂಗ್, ತಾರಾಲಯ ಸೇರಿದಂತೆ ಹಲವು ಆಕರ್ಷಣೆಗಳು ತಲೆ ಎತ್ತಲಿವೆ.

Read Full Story

11:46 AM (IST) Jun 09

ಬಿಟ್‌ಕಾಯಿನ್ ಹಗರಣ - ನೆಪ ಹೇಳಿ ತಪ್ಪಿಸಿಕೊಂಡ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಗೆ ಇಡಿ 3ನೇ ಸಮನ್ಸ್!

ಬಹುಕೋಟಿ ಬಿಟ್‌ಕಾಯಿನ್ ಹಗರಣದ ತನಿಖೆ ತೀವ್ರಗೊಂಡಿದ್ದು,  ಮೊಹಮ್ಮದ್ ನಲಪಾಡ್‌ಗೆ ಇಡಿ ಮೂರನೇ ಸಮನ್ಸ್ ಜಾರಿ ಮಾಡಿದೆ. ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿಯೂ ನಲಪಾಡ್ ಹೆಸರು ಉಲ್ಲೇಖವಾಗಿದ್ದು, ಹ್ಯಾಕರ್ ಶ್ರೀಕಿಯಿಂದ ಬಿಟ್‌ಕಾಯಿನ್‌ಗಳನ್ನು ಹವಾಲಾ ಮೂಲಕ ನಗದೀಕರಣ ಮಾಡಿಕೊಟ್ಟ ಆರೋಪವಿದೆ

Read Full Story

11:07 AM (IST) Jun 09

ತೀರ್ಥಹಳ್ಳಿಯಲ್ಲಿ ಅಡಿಕೆ ಕಳ್ಳರು ಅರೆಸ್ಟ್, ಹಾವೇರಿಯ ಇಬ್ಬರಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ!

ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಗ್ರಾಮದಲ್ಲಿ ನಡೆದಿದ್ದ ಸರಣಿ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಮೂಲದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

11:05 AM (IST) Jun 09

ಡಿಕೆಶಿ ಸರ್ಕಾರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; ಜಮೀರ್ ಪರ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು!

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ಮತ್ತು ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಗ್ರಹಿಸಿ ಹೊಸಪೇಟೆ ಹಾಗೂ ಶಿವಮೊಗ್ಗದಲ್ಲಿ ಪ್ರತಿಭಟನೆಗಳು ನಡೆದಿವೆ. ತಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಜಮೀರ್ ಅವರ ಅಭಿಮಾನಿಗಳು ಮತ್ತು ರೈತ ಸಂಘಟನೆಗಳು ಎಚ್ಚರಿಕೆ.

Read Full Story

09:26 AM (IST) Jun 09

ಗಾಂಧೀಜಿ ಹತ್ಯೆ ಪ್ರಕರಣ - ವಿಚಾರಣಾ ಆಯೋಗ ರಚನೆ ವಿಳಂಬ ಪ್ರಶ್ನಿಸಿದ್ದ ಅರ್ಜಿ ವಜಾ, ಅರ್ಜಿದಾರನಿಗೆ 10,000 ದಂಡ ವಿಧಿಸಿದ ಹೈಕೋರ್ಟ್‌!

ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
Read Full Story

09:19 AM (IST) Jun 09

ಬೆಲೆ ಏರಿಕೆ ನಡುವೆ ಬೆಂಗಳೂರಿಗರಿಗೆ ಬಿಗ್ ರಿಲೀಫ್, ಕೆಲ ವಲಯದಲ್ಲಿ ದರ ಹೆಚ್ಚಳ ಇಲ್ಲ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಕೆಲ ರಿಲೀಫ್ ಸಿಕ್ಕಿದೆ. ಯಾವೆಲ್ಲಾ ವಲಯದಲ್ಲಿ ಬೆಲೆ ಹೆಚ್ಚಳಕ್ಕೆ ಬ್ರೇಕ್ ಹಾಕಲಾಗಿದೆ?

Read Full Story

09:02 AM (IST) Jun 09

ಸಿಎಂ ಘೋಷಿಸಿದ್ರೂ ವಿದ್ಯಾರ್ಥಿಗಳಿಗಿಲ್ಲ ಉಚಿತ ಪ್ರಯಾಣದ ಸೌಲಭ್ಯ! ಬಾರದ ಅಧಿಕೃತ ಸುತ್ತೋಲೆ

ರಾಜ್ಯ ಸರ್ಕಾರದ ಉಚಿತ ಬಸ್ ಪಾಸ್ ಘೋಷಣೆ ಇನ್ನೂ ಜಾರಿಗೆ ಬಂದಿಲ್ಲ. ಅಧಿಕೃತ ಸುತ್ತೋಲೆ ಬಾರದಿರುವುದರಿಂದ, ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪಾಸ್ ಪಡೆಯುವಂತಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.
Read Full Story

08:54 AM (IST) Jun 09

ತಾಯಿಯ ಮಮತೆಗೆ ಗಡಿಗಳಿಲ್ಲ - ದಾವಣಗೆರೆಯ 4 ಅನಾಥ ಮಕ್ಕಳನ್ನು ದತ್ತು ಪಡೆದ ವಿದೇಶಿ ದಂಪತಿಗಳು!

ದಾವಣಗೆರೆಯ ಸರ್ಕಾರಿ ದತ್ತು ಸಂಸ್ಥೆಯಿಂದ ಇತ್ತೀಚೆಗೆ ನಾಲ್ಕು ಮಕ್ಕಳನ್ನು ಸ್ವದೇಶ ಮತ್ತು ವಿದೇಶಗಳಿಗೆ ದತ್ತು ನೀಡಲಾಗಿದೆ. ಈ ಪೈಕಿ ಇಟಲಿಯ ದಂಪತಿಗಳು ಅನಾಥ ಮಗುವೊಂದನ್ನು ಕಾನೂನುಬದ್ಧವಾಗಿ ದತ್ತು ಪಡೆದಿದ್ದು, ಈ ಪ್ರಕ್ರಿಯೆಯು ಅನಾಥ ಮಕ್ಕಳಿಗೆ ಹೊಸ ಬದುಕನ್ನು ನೀಡುತ್ತಿದೆ.
Read Full Story

08:45 AM (IST) Jun 09

ಬಳ್ಳಾರಿ–ರಾಯದುರ್ಗ–ತುಮಕೂರು ನಡುವಿನ ರೈಲ್ವೆ ಮಾರ್ಗ ಆರಂಭ ಯಾವಾಗ? ಜಿ.ಪರಮೇಶ್ವರ ಮಾಹಿತಿ

ಬಳ್ಳಾರಿ-ರಾಯದುರ್ಗ-ತುಮಕೂರು ರೈಲ್ವೆ ಮಾರ್ಗವನ್ನು 2027ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಜಿ.ಪರಮೇಶ್ವರ ತಿಳಿಸಿದ್ದಾರೆ. ಭೂಸ್ವಾಧೀನ ವಿಳಂಬದಿಂದ ಕುಂಠಿತಗೊಂಡಿದ್ದ ಈ ಯೋಜನೆಯ ಜೊತೆಗೆ, ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ನೌಕರರು ಸಲ್ಲಿಸಿದ ಮನವಿಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Read Full Story

08:31 AM (IST) Jun 09

ನನ್ನ ಬಳಿ ಕೆಜಿಗಟ್ಟಲೇ ಕದ್ದ ಚಿನ್ನ ಐತಿ, ಬನ್ನಿ ಎಂದು ಪಂಗನಾಮ ಹಾಕಿದ ಶಿಗ್ಲಿ ಬಸ್ಯಾ

ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ದಾವಣಗೆರೆ ಜಿಲ್ಲೆಯ ಸುರಹೊನ್ನೆ ಗ್ರಾಮದ ಶಿವರಾಜ ಎಂಬುವವರಿಗೆ ಶಿಗ್ಲಿ ಬಸ್ಯಾ ಎಂಬಾತ ₹70 ಸಾವಿರ ವಂಚಿಸಿದ್ದಾನೆ. ಜಗಳೂರಿನಲ್ಲಿ ಹಣ ಪಡೆದು ನಾಪತ್ತೆಯಾದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
Read Full Story

08:18 AM (IST) Jun 09

ಬಿಲ್ ಪಾವತಿ, ಹೊಸ ಸಂಪರ್ಕ, ವರ್ಗಾವಣೆ ಸೇರಿ ಬೆಸ್ಕಾಂ ಆನ್‌ಲೈನ್ ಸೇವೆಗಳು ಇನ್ನು 21 ದಿನ ಸಿಗಲ್ಲ

ಬೆಸ್ಕಾಂ ಆನ್‌ಲೈನ್ ಸೇವೆಗಳು 21 ದಿನಗಳ ಕಾಲ ಅಲಭ್ಯವಾಗಿದೆ. ಹೊಸ ಸಂಪರ್ಕ, ಬಿಲ್ ಪಾವತಿ, ಲೋಡ್ ಹೆಚ್ಚಳ ಸೇರಿದಂತೆ ಹಲವು ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಬೆಸ್ಕಾಂ ಮಹತ್ವದ ಪ್ರಕಟಣೆ ಹೊರಡಿಸಿದೆ.

 

Read Full Story

08:04 AM (IST) Jun 09

ಸಾರಿಗೆ ಬಸ್‌ನಲ್ಲಿ ಮಹಿಳೆಯರ ಜೊತೆ ಪುರುಷ ಪ್ರಯಾಣಿಕರಿಗೂ ಸ್ಮಾರ್ಟ್‌ ಕಾರ್ಡ್ ಭಾಗ್ಯ!

ಸಾರಿಗೆ ಸಚಿವ ಬೈರತಿ ಸುರೇಶ್ ಅವರು ರಾಜ್ಯದ ಮೂರು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸ್ಮಾರ್ಟ್‌ ಕಾರ್ಡ್ ಮತ್ತು ಪುರುಷರಿಗೆ  ಕಾರ್ಡ್‌ಗಳನ್ನು ನೀಡಲಾಗುವುದು. 

Read Full Story

07:59 AM (IST) Jun 09

ರಾಜ್ಯಾದ್ಯಂತ ಜೂನ್ 11ರ ವರೆಗೆ ಭಾರಿ ಮಳೆ ಮುನ್ಸೂಚನೆ, ಐದು ಜೆಲ್ಲೆಗೆ ರೆಡ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ಮಳೆ ಆರಂಭಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಜೂನ್ 11ರ ವರೆಗೆ ಭಾರಿ ಮಳೆಯಾಗಲಿದೆ ಎಂದಿದೆ.

 

Read Full Story

07:46 AM (IST) Jun 09

ಕಾರವಾರ-ಹಳಗಾ ಸಾರಿಗೆ ಬಸ್ ಉಳಗಾ ವರೆಗೆ ವಿಸ್ತರಿಸಲು ಆಗ್ರಹ - ಡಿಪೋ ಮ್ಯಾನೇಜರ್‌ಗೆ ಮನವಿ

ಕಾರವಾರದಿಂದ ಹಳಗಾಕ್ಕೆ ಸಂಚರಿಸುವ ಸಾರಿಗೆ ಬಸ್ಸನ್ನು ನೆರೆಯ ಉಳಗಾ ಗ್ರಾಮದವರೆಗೂ ವಿಸ್ತರಿಸಬೇಕೆಂದು ಹಳಗಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
Read Full Story

07:35 AM (IST) Jun 09

ಕೊಡಗು, ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ; ಯಾರೆಲ್ಲಾ ಬರಬಹುದು? ಇಲ್ಲಿದೆ ಮಾಹಿತಿ

ಕೊಡಗು ಗೌಡ ನಿವೃತ್ತ ನೌಕರರ ಸಂಘವು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯಕ್ಕಾಗಿ ವಧು-ವರರ ಸಮಾವೇಶವನ್ನು ಆಯೋಜಿಸಿದೆ. ರೈತಾಪಿ ಯುವಕರು ಸೇರಿದಂತೆ ಮರುವಿವಾಹ ಬಯಸುವವರು, ವಿಚ್ಛೇದಿತರು ಕೂಡ ಈ ಸಮಾವೇಶದಲ್ಲಿ ಭಾಗವಹಿಸಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

Read Full Story

07:04 AM (IST) Jun 09

No ID no Entry - ಬಾರ್‌, ಪಬ್‌ಗಳಿಗೆ ಗುರುತಿನ ಚೀಟಿ ಇಲ್ಲದಿದ್ರೆ ಪ್ರವೇಶವಿಲ್ಲ

ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯವ್ಯಸನವನ್ನು ತಡೆಯಲು, ರಾಜ್ಯ ಸರ್ಕಾರವು ಬಾರ್, ಕ್ಲಬ್‌ಗಳು ಮತ್ತು ಮದ್ಯದ ಮಳಿಗೆಗಳಲ್ಲಿ 'ನೋ ಐಡಿ, ನೋ ಎಂಟ್ರಿ' ನಿಯಮವನ್ನು ಕಡ್ಡಾಯಗೊಳಿಸಿದೆ.

Read Full Story

07:00 AM (IST) Jun 09

ಘಟಪ್ರಭಾ ಕುಷ್ಟಗಿ ರೈಲ್ವೆ ಮಾರ್ಗ ಆರಂಭಿಸಲು ಆಗ್ರಹ - ಸಚಿವ ಜೋಶಿ ನೀಡಿದ ಭರವಸೆ ಏನು?

ಹೋರಾಟದ ನಾಡು ನರಗುಂದಕ್ಕೆ ಘಟಪ್ರಭಾದಿಂದ ಕುಷ್ಟಗಿಯವರೆಗೆ ಹೊಸ ರೈಲ್ವೆ ಮಾರ್ಗವನ್ನು ಪ್ರಾರಂಭಿಸಬೇಕೆಂದು ರೈಲ್ವೆ ಹೋರಾಟ ಸಮಿತಿಯು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿತು. 

Read Full Story

More Trending News