ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮನೆ-ಮನೆ ಸಮೀಕ್ಷೆ ಸೋಮವಾರ ಅಧಿಕೃತವಾಗಿ ಶುರುವಾಗಿದೆ. ಕೆಲ ಕಡೆ ಗಣತಿದಾರರಿಗೆ ಸಣ್ಣಪುಟ್ಟ ಗೊಂದಲಗಳು ಉಂಟಾಗಿದ್ದವು ಹಾಗೂ ಗಣತಿಗೆ ಒಳಗಾಗುತ್ತಿದ್ದವರಿಗೆ ಮಾಹಿತಿ ಕೊರತೆಯಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿತ್ತು. ಮಾಹಿತಿದಾರರ ಫೋಟೋ ತೆಗೆದು ಅಪ್ಲೋಡ್ ಮಾಡುವುದು ಕಡ್ಡಾಯ. ಇದಕ್ಕೆ ಕೆಲವರು ಅಸಹಕಾರ ತೋರುತ್ತಿದ್ದು, ಅಂತಹವರ ಬಳಿ ಬಿಪಿಎಲ್, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣಪತ್ರ ಪಡೆದು ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್‌ಪೋರ್ಸ್‌ನಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

11:45 PM (IST) May 06
ಆಯುಷ್ಯ, ಶಿಕ್ಷಣ ಮತ್ತು ಆದಾಯದಲ್ಲಿನ ಸುಧಾರಣೆಗಳಿಂದಾಗಿ ಭಾರತದಲ್ಲಿ ಮಹತ್ತರ ಸುಧಾರಣೆಗಳಾಗಿದೆ. ಇದರ ಪರಿಣಾಮ ಭಾರತದ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದ ಶ್ರೇಯಾಂಕ 30 ಕ್ಕೆ ಏರಿಕೆಯಾಗಿದೆ.
ಪೂರ್ತಿ ಓದಿ10:38 PM (IST) May 06
ನಾವು ಅಂದುಕೊಂಡದ್ದು ಆಗಿ, ನಮ್ಮ ಮನೋಕಾಮನೆಗಳು ಈಡೇರಬೇಕು ಎಂದರೆ ಹೀಗೆ ಮಾಡಿ ನೋಡಬೇಕಂತೆ. ಇದು ಮ್ಯಾನಿಫೆಸ್ಟೇಷನ್ ಜಾರ್.ಏನಿದು? ಏನಿದರ ಪ್ರಯೋಜನ?
ಪೂರ್ತಿ ಓದಿ10:33 PM (IST) May 06
ಪೆಹಲ್ಗಾಂ ದಾಳಿಗೆ ಪ್ರತೀಕಾರಕ್ಕೆ ರೆಡಿಯಾಗಿರುವ ಭಾರತ ಇದೀಗ ಮೇ.7 ರಂದು ಯುದ್ಧದ ತುರ್ತ ಪರಿಸ್ಥಿತಿ ಜಾಗೃತಿ ಮೂಡಿಸಲು ಮಾಕ್ ಡ್ರಿಲ್ ನಡೆಸಲು ಕೇಂದ್ರ ಸೂಚಿಸಿದೆ. ಇದರಂದೆ ದೇಶಾದ್ಯಂತ ತಯಾರಿ ನಡೆಸಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಕಾರವಾರ ಹಾಗೂ ರಾಯಚೂರಿನ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ.
ಪೂರ್ತಿ ಓದಿ09:56 PM (IST) May 06
ಪೆಹಲ್ಗಾಂ ದಾಳಿ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿಯರು ಭಾರತ ತೊರೆಯಲು ಸೂಚನೆ ನೀಡಿತ್ತು. ಇದೀಗ ಮೂವರು ಅಪ್ರಾಪ್ತ ಪಾಕಿಸ್ತಾನಿಯರು ಮೈಸೂರಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪೂರ್ತಿ ಓದಿ09:13 PM (IST) May 06
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಂಡನಿಗೆ ಪ್ರಿಯಕರನೊಂದಿಗೆ ಸೇರಿ ಹೆಂಡತಿಯೇ ಓವರ್‌ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಆಸ್ಪತ್ರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಪೂರ್ತಿ ಓದಿ08:44 PM (IST) May 06
ಆಧಾರ್ ಕಾರ್ಡ್ನಲ್ಲಿಯೋ ಜನ್ಮದಿನ ಆನ್ಲೈನ್ನಲ್ಲಿ ಬದಲಿಸಲು ಅವಕಾಶ ಇದೆಯೇ? ಪ್ರೊಸೀಜರ್ ಏನು? ಇಲ್ಲಿದೆ ಪುಲ್ ಡಿಟೇಲ್ಸ್...
ಪೂರ್ತಿ ಓದಿ08:35 PM (IST) May 06
ಆರ್‌ಸಿಬಿ ಪರ ಸದಾ ಮಿಡಿಯುವ ಎಬಿ ಡಿವಿಲಿಯರ್ಸ್ ಇದೀಗ ವಿರಾಟ್ ಕೊಹ್ಲಿ ನೆರವಿಗೆ ಬಂದಿದ್ದಾರೆ. ಕೊಹ್ಲಿ ಟೀಕಿಸಿದ್ದ ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್‌ಗೆ ಇದನ್ನು ನುಂಗಿಕೊಳ್ಳಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ. ಕೊಹ್ಲಿ ಪರ ಎಬಿಡಿ ಹೇಳಿದ್ದೇನು? ಟೀಕಾಕಾರಾ ಬಾಯಿ ಮುಚ್ಚಿಸಿದ್ದು ಹೇಗೆ?
ಪೂರ್ತಿ ಓದಿ08:23 PM (IST) May 06
ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಚಿತ್ರದುರ್ಗದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಮೇಕೆ ಬಲಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ತಿ ಓದಿ08:19 PM (IST) May 06
ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಾಗರ್ ಬೋರಾಡೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಐಇಡಿ ಸ್ಫೋಟದಲ್ಲಿ ಗಾಯಗೊಂಡ ಸೈನಿಕನನ್ನು ರಕ್ಷಿಸಲು ಹೋದಾಗ ಬೋರಾಡೆ ಅವರು ತಮ್ಮ ಎಡಗಾಲನ್ನು ಕಳೆದುಕೊಂಡಿದ್ದಾರೆ.
ಪೂರ್ತಿ ಓದಿ07:42 PM (IST) May 06
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇಬ್ಬರು ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. ಇದು ಬ್ಯಾಟರಿ ಚಾಲಿತ ಹೃದಯವಾಗಿದೆ. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ನಡೆದ ಮೈಲಿಗಲ್ಲೇನು?
ಪೂರ್ತಿ ಓದಿ07:29 PM (IST) May 06
ಕಂದಾಯ ಇಲಾಖೆಯ ನೌಕರನೊಬ್ಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣದಲ್ಲಿ ಇಬ್ಬರು ಕಂದಾಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಸಿಕ್ಕಿಬಿದ್ದಿದ್ದಾರೆ. ಶಾಲಾ ದಾಖಲೆಗಳನ್ನು ತಿದ್ದಿ, ಸುಳ್ಳು ವರದಿಗಳನ್ನು ಸಲ್ಲಿಸಿ ನೌಕರನನ್ನು ರಕ್ಷಿಸಲು ಯತ್ನಿಸಿದ ಆರೋಪ ಅವರ ಮೇಲಿದೆ.
ಪೂರ್ತಿ ಓದಿ07:18 PM (IST) May 06
ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಖತೆ ಮುಗಿಯಲಿದೆ. ಆದರೆ ನಾವು ಉಳಿಯಬೇಕು. ಇದಕ್ಕಾಗಿ ಜಗತ್ತನ್ನೇ ಸರ್ವನಾಶ ಮಾಡುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ನ್ಯೂಕ್ಲಿಯರ್ ಬೆದರಿಕೆ ಹಾಕಿದ್ದಾನೆ.
ಪೂರ್ತಿ ಓದಿ07:03 PM (IST) May 06
ಸಾಮಾಜಿಕ ಮಾಧ್ಯಮ ಬಳಕೆ ವಿಪರೀತವಾಗಿ ಹೆಚ್ಚಿದೆ. ಚಿಕ್ಕ ಮಕ್ಕಳು ಕೂಡ ಫೋನ್‌ಗಳಿಗೆ ಅಂಟಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ನಕಾರಾತ್ಮಕ ಪರಿಣಾಮಗಳಿವೆ ಎಂದು ತಜ್ಞರು ಹೇಳುತ್ತಲೇ ಇದ್ದಾರೆ. ಮಕ್ಕಳಲ್ಲಿ ಇದು ಹೆಚ್ಚು ಕಂಡುಬರುತ್ತಿದೆ. ಹೀಗಾಗಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.
ಪೂರ್ತಿ ಓದಿ06:57 PM (IST) May 06
ಇಲ್ಲೊಂದು ದೇವಾಲಯದಲ್ಲಿ ಜಿರಳೆಗೂ ಗೋವುಗಳಂತೆ ಗೌರವ ನೀಡಿ ಮೊದಲ ಪ್ರಸಾದ ಅಥವಾ ಭೋಜನವನ್ನು ಅವುಗಳಿಗೆ ನೀಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?
ಪೂರ್ತಿ ಓದಿ06:15 PM (IST) May 06
ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರಕ್ಕೆ ಸಜ್ಜಾಗುತ್ತಿರುವ ಭಾರತ ನಾಳೆ ದೇಶದ ಎಲ್ಲಾ ರಾಜ್ಯದಲ್ಲಿ ಮಾಕ್ ಡ್ರಿಲ್ ನಡೆಸಲು ಸೂಚಿಸಿದೆ. ಯುದ್ಧ ಸನ್ನವೇಶದ ಅಣಕು ಪ್ರದರ್ಶನದಿಂದ ನಾಳೆ ಶಾಲೆ, ಕಾಲೇಜು, ಕಚೇರಿಗಳಿಗೆ ರಜೆ ಇಜೆಯಾ?
ಪೂರ್ತಿ ಓದಿ06:10 PM (IST) May 06
ರಾಜಸ್ತಾನದಲ್ಲಿ ನಡೆದ ಮದುವೆಯೊಂದರಲ್ಲಿ ವಧುವಿಗೆ ಆಕೆಯ ಸೋದರ ಮಾವನ ಮನೆಯವರು 15 ಕೋಟಿ ಮೌಲ್ಯದ ಉಡುಗೊರೆ ನೀಡಿದ್ದಾರೆ.
ಪೂರ್ತಿ ಓದಿ06:08 PM (IST) May 06
ಭಾರತದಲ್ಲಿ ಮದ್ಯದ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಲೆಯನ್ನು ಹೊಂದಿದ್ದರೆ, ಗೋವಾ ರಾಜ್ಯದಲ್ಲಿ ಅತಿ ಕಡಿಮೆ ಮದ್ಯದ ಬೆಲೆ ಇದೆ. ಈ ವ್ಯತ್ಯಾಸಕ್ಕೆ ಕಾರಣವೇನು?
ಪೂರ್ತಿ ಓದಿ05:27 PM (IST) May 06
ನಟಿ ರಾಖಿ ಸಾವಂತ್ ಪಾಕಿಸ್ತಾನವನ್ನು ಬೆಂಬಲಿಸಿ 'ಜೈ ಪಾಕಿಸ್ತಾನ್' ಎಂದು ಘೋಷಣೆ ಮಾಡಿರುವ ವೀಡಿಯೊ ವೈರಲ್ ಆಗಿದ್ದು, ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಪೂರ್ತಿ ಓದಿ05:24 PM (IST) May 06
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಉತ್ತರ ಪ್ರದೇಶದ ಬಡಪಾಯಿ ಮುಕೇಶ್ ಅಂಬಾನಿ,ಗೌತಮ್ ಅದಾನಿ, ಅಷ್ಟೇ ಯಾಕೆ ಎಲಾನ್ ಮಸ್ಕ್ ಬ್ಯಾಂಕ್ ಬ್ಯಾಲೆನ್ಸ್ ಹಿಂದಿಕ್ಕಿದ ಘಟನೆ ನಡೆದಿದೆ. ಈ ಬಡಪಾಯಿ ಹಣ ಡ್ರಾ ಮಾಡುವ ಮೊತ್ತ 1,400 ರೂ, 500 ರೂ ಹೀಗೆ. ಆದರೆ ಈತನ ಖಾತೆಗೆ ಜಮೆ ಆಗಿರುವ ಮೊತ್ತ ಬರೋಬ್ಬರಿ 36 ಡಿಜಿಟ್.
ಪೂರ್ತಿ ಓದಿ05:09 PM (IST) May 06
Noida Dog Attack: ನೋಯ್ಡಾದಲ್ಲಿ ನಾಯಿ ದಾಳಿ ಭಯದಿಂದ 20 ಅಡಿ ಆಳಕ್ಕೆ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೂರ್ತಿ ಓದಿ04:42 PM (IST) May 06
ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ತೀವ್ರ ಬೇಸರಗೊಂಡಿದ್ದಾರೆ. ಇದರ ಬೆನ್ನಲ್ಲೇ ಗಾಯಕ ರಾಹುಲ್ ವೈದ್ಯ ಪ್ರಖರ ಮಾತುಗಳಿಂದ ಕೊಹ್ಲಿಯನ್ನು ಮತ್ತೆ ನೋಯಿಸಿದ್ದಾರೆ. ಈ ಬಾರಿ ರಾಹುಲ್ ವೈದ್ಯ ಮಾತುಗಳು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣಾಗಿದೆ.
04:40 PM (IST) May 06
ಅವಳಿ ಸಹೋದರಿಯರು ಒಂದೇ ಪ್ರಮಾಣಪತ್ರ ಬಳಸಿ 18 ವರ್ಷಗಳ ಕಾಲ ಸರ್ಕಾರಿ ಶಾಲೆ ಶಿಕ್ಷಕಿಯರಾಗಿ ಕೆಲಸ ಮಾಡಿ 1.60 ಕೋಟಿ ರೂ. ಸಂಬಳ ಪಡೆದಿದ್ದಾರೆ. ವರ್ಗಾವಣೆ ಅರ್ಜಿ ಸಲ್ಲಿಸಿದಾಗ ಹಗರಣ ಬೆಳಕಿಗೆ ಬಂದಿದೆ.
ಪೂರ್ತಿ ಓದಿ04:16 PM (IST) May 06
ಅಕ್ರಮ ಗಣಿಗಾರಿಕೆ ಮತ್ತು ಗಡಿ ಒತ್ತುವರಿ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯನ್ನು ದೋಷಿ ಎಂದು ಸಿಬಿಐ ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಇನ್ನೂ ಪ್ರಕಟಿಸಬೇಕಿದೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ರೆಡ್ಡಿ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಘೋಷಿಸಲಾಗಿದೆ.
ಪೂರ್ತಿ ಓದಿ04:11 PM (IST) May 06
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿಗೆ ₹1 ಕೋಟಿ ಬೇಡಿಕೆ ಇಟ್ಟು ಜೀವ ಬೆದರಿಕೆ ಇಮೇಲ್ ಬಂದಿದೆ. ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಶಮಿಗೆ ಈ ಬೆದರಿಕೆ ಹಾಕಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೂರ್ತಿ ಓದಿ04:03 PM (IST) May 06
ನಾವು ಹೇಳ ಹೊರಟಿರುವುದು ಓರ್ವ ವಿಷ ಪುರುಷನ ಬಗ್ಗೆ. 200 ಹಾವುಗಳಿಂದ ಕಚ್ಚಿಸಿಕೊಂಡರೂ ಈತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ, ಹಾಗಿದ್ದರೆ ಯಾರು ಈ ವಿಷಕಂಠ ಅಂತ ನೋಡೋಣ ಬನ್ನಿ.
ಪೂರ್ತಿ ಓದಿ03:48 PM (IST) May 06
15 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಚೀನಾದ ಪ್ರಸಿದ್ಧ ಇನ್ಫ್ಲುಯೆನ್ಸರ್ ದಂಪತಿಗಳು ₹266 ಕೋಟಿ ಗಳಿಸಿದ ನಂತರ ಲೈವ್ ಸ್ಟ್ರೀಮಿಂಗ್‌ಗೆ ವಿದಾಯ ಹೇಳಿದ್ದಾರೆ. ಆರೋಗ್ಯ ಮತ್ತು ಕುಟುಂಬದ ಮೇಲೆ ಹೆಚ್ಚು ಗಮನ ಹರಿಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಪೂರ್ತಿ ಓದಿ03:35 PM (IST) May 06
ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ಟಾಪ್ 10 ರಾಜ್ಯಗಳ ಬಗ್ಗೆ ಈ ಸುದ್ದಿಯಲ್ಲಿ ವಿವರವಾಗಿ ನೋಡೋಣ.
ಪೂರ್ತಿ ಓದಿ03:24 PM (IST) May 06
ಟಿಸಿಎಸ್ ತನ್ನ ಹಿರಿಯ ನೌಕರರ ವೇರಿಯಬಲ್ ವೇತನವನ್ನು ಮತ್ತೊಮ್ಮೆ ಕಡಿತಗೊಳಿಸಿದೆ. ಕಚೇರಿ ಹಾಜರಾತಿಯನ್ನು ಆಧರಿಸಿ ವೇರಿಯಬಲ್ ವೇತನವನ್ನು ನಿರ್ಧರಿಸುವ ಹೊಸ ನಿಯಮ ಜಾರಿಗೊಳಿಸಿದೆ. ಜೊತೆಗೆ, ವಾರ್ಷಿಕ ವೇತನ ಹೆಚ್ಚಳವನ್ನೂ ಮುಂದೂಡಿದೆ.
ಪೂರ್ತಿ ಓದಿ03:21 PM (IST) May 06
ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಬ್ಯಾಟಿಂಗ್ ಮತ್ತು ನಾಯಕತ್ವದ ಒತ್ತಡ ನಿಭಾಯಿಸುವುದು ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ. ತಮ್ಮ ಆಟವನ್ನು ಎಂಜಾಯ್ ಮಾಡಲು ಮತ್ತು ಒತ್ತಡದಿಂದ ಮುಕ್ತರಾಗಲು ನಾಯಕತ್ವ ತ್ಯಜಿಸಿದ್ದಾಗಿ ತಿಳಿಸಿದ್ದಾರೆ.
ಪೂರ್ತಿ ಓದಿ03:05 PM (IST) May 06
ಮೈಸೂರಿನಲ್ಲಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗಿ ವಿಚಾರಕ್ಕೆ ಗಲಾಟೆ ನಡೆದು ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಮೃತದೇಹದ ಮುಂದೆ ಡ್ಯಾನ್ಸ್ ಮಾಡಿ ಫೋಟೋ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ತಿ ಓದಿ03:04 PM (IST) May 06
ಭಾರತವು 24 ಗಂಟೆಗಳ ಕಾಲ ನೀರು ತಡೆಹಿಡಿದ ನಂತರ ಚೆನಾಬ್ ನದಿಗೆ ದೊಡ್ಡ ಪ್ರಮಾಣದಲ್ಲಿ ನೀರನ್ನು ಬಿಟ್ಟಿದ್ದು, ಪಾಕಿಸ್ತಾನದಲ್ಲಿ ಪ್ರವಾಹದ ಭೀತಿಯನ್ನು ಹೆಚ್ಚಿಸಿದೆ. ಈ ಹಠಾತ್ ನೀರು ಬಿಡುಗಡೆಯಿಂದಾಗಿ ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಪೂರ್ತಿ ಓದಿ03:02 PM (IST) May 06
ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಸರಾಸರಿ 60. ಹಲವು ಪ್ರೈವೇಟ್ ಕಂಪನಿ ಉದ್ಯೋಗಿಗಳಿಗೂ ಇದೇ ನಿವೃತ್ತಿ ವಯಸ್ಸು. ಆದರೆ ಇದೀಗ ಕಾಲ ಬದಲಾಗಿದೆ. ಕಾರ್ಪೋರೇಟ್ ಸೇರಿದಂತೆ ಪ್ರೈವೇಟ್ ಕಂಪನಿಗಳ ಉದ್ಯೋಗಿಗಳ ನಿವೃತ್ತಿ ವಯಸ್ಸು ಎಷ್ಟು ಮಾಡಿದ್ದಾರೆ ಗೊತ್ತಾ? ಈ ವಯಸ್ಸು ದಾಟಿದರೆ ಬಳಿಕ ಯಾವ ಕಂಪನಿಗೂ ಬೇಡ.
ಪೂರ್ತಿ ಓದಿ02:58 PM (IST) May 06
ನಾಗ್ಪುರದ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ವನ್ಯಜೀವಿ ಕಳ್ಳಸಾಗಣೆದಾರರನ್ನು ಬಂಧಿಸಿ, ಚಿರತೆ ಚರ್ಮ ಮತ್ತು ಕಾಡುಹಂದಿ ಕೋರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪೂರ್ತಿ ಓದಿ02:22 PM (IST) May 06
ಮೇ 10 ರಿಂದ ಐದು ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಉತ್ತಮ ಬದಲಾವಣೆಗಳು ಸಂಭವಿಸಲು ಪ್ರಾರಂಭಿಸಬಹುದು.
02:02 PM (IST) May 06
ಐಪಿಎಲ್ ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಂಗಳವಾರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ಪ್ಲೇ-ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸುತ್ತದೆ. ಗುಜರಾತ್ ತಂಡದ ಬ್ಯಾಟಿಂಗ್ ಮುಂಬೈನ ಬೌಲಿಂಗ್ ದಾಳಿಯನ್ನು ಹೇಗೆ ಎದುರಿಸಲಿದೆ ಎಂಬುದು ಕುತೂಹಲ.
ಪೂರ್ತಿ ಓದಿ01:50 PM (IST) May 06
ಪ್ರಖ್ಯಾತ ಕ್ರಿಕೆಟ್ ಅಂಕಿಅಂಶ ತಜ್ಞ ಚೆನ್ನಗಿರಿ ಕೇಶವಮೂರ್ತಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ರೀಡಾ ಪತ್ರಕರ್ತರಿಗೆ ನಡೆದಾಡುವ ಗ್ರಂಥಾಲಯವಾಗಿದ್ದ ಅವರು, ಕರ್ನಾಟಕ ಕ್ರಿಕೆಟ್‌ನ ಅಪಾರ ಅಂಕಿಅಂಶಗಳನ್ನು ಸಂಗ್ರಹಿಸಿದ್ದರು.
ಪೂರ್ತಿ ಓದಿ01:21 PM (IST) May 06
ಕೇಂದ್ರ ಸರ್ಕಾರದ ಮಾಕ್ ಡ್ರಿಲ್‌ನ ಹಿನ್ನೆಲೆಯಲ್ಲಿ ಯುದ್ಧದ ಊಹಾಪೋಹಗಳು ಹರಿದಾಡುತ್ತಿವೆ. 1971 ರ ಯುದ್ಧದಂತೆ ತಾಳ್ಮೆ ಮತ್ತು ತಂತ್ರ ಮುಖ್ಯ ಎಂಬುದನ್ನು ಸ್ಮರಿಸಲಾಗುತ್ತಿದೆ. ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
ಪೂರ್ತಿ ಓದಿ12:54 PM (IST) May 06
ಸಚಿವ ಜಮೀರ್ ಅಹ್ಮದ್ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ಧ ಹೋರಾಡಬೇಕೆಂದು ಸಿ.ಟಿ. ರವಿ ಹೇಳಿದ್ದಾರೆ. ಅಲ್ಲಾ ಒಬ್ಬನೇ ದೇವರು ಎನ್ನುವುದನ್ನು ಬದಲಿಸಿ, ದೇವನೊಬ್ಬ ನಾಮ ಹಲವು ಎಂದು ಹೇಳಿ ಎಂದು ಸವಾಲು ಹಾಕಿದ್ದಾರೆ. ರೌಡಿಶೀಟರ್, ದನಗಳ್ಳತನ, ಕೋಮುಗಲಭೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಪೂರ್ತಿ ಓದಿ12:34 PM (IST) May 06
ಮೇ 7 ರಿಂದ ಮೂರು ದಿನಗಳ ಕಾಲ ದೇಶದ 244 ಜಿಲ್ಲೆಗಳಲ್ಲಿ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ಸ್ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ನಗರ, ಕಾರವಾರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಅಭ್ಯಾಸ ನಡೆಯಲಿದ್ದು, ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಲಾಗುತ್ತದೆ.
ಪೂರ್ತಿ ಓದಿ12:01 PM (IST) May 06
ತಂದೂರಿ ರೊಟ್ಟಿಗಾಗಿ ಸಂಬಂಧಿಕರ ನಡುವೆ ನಡೆದ ಜಗಳವೊಂದು ಮದುವೆ ಮನೆಯಲ್ಲಿ ಇಬ್ಬರು ಸೋದರ ಸಂಬಂಧಿಗಳ ಸಾವಿಗೆ ಕಾರಣವಾಗಿದೆ.
ಪೂರ್ತಿ ಓದಿ