ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಭಾಗಿ ಆಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಎಂಪಿಎಸ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕ ಆಗಿರುವ ಚಂದ್ರು ನುಗ್ಲಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಸಿದ್ದರಾಮಯ್ಯ ನಡೆಸಿದ ಪ್ರಚಾರ ಸಭೆಯಲ್ಲಿ ಚಂದ್ರು ನುಗ್ಲಿ ಭಾಗಿಯಾಗಿದ್ದರು.
ಮಾಧ್ಯಮವರು ವಿಡಿಯೋ ಮಾಡುವುದನ್ನು ಕಂಡು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಬ್ಬಿನ ಗದ್ದೆಯ ಕಡೆಗೆ ಹೋಗಿ ಮರೆಯಾದರು. ಮುಖ ಮುಚ್ಚಿಕೊಂಡು ಮಾಸ್ಕ್ ಹಾಕಿಕೊಂಡು ಹೋಗುವ ದೃಶ್ಯ ಸಹ ಕಂಡಿದೆ. ಸರ್ಕಾರಿ ನೌಕರರು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದು ನಿಷಿದ್ಧವಾಗಿದೆ.
10:30 PM (IST) Mar 31
ಚೆನ್ನೈನಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಕಿಕ್‌ಬಾಕ್ಸಿಂಗ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿಭೆ ದಾನ್ವಿ ಸುರೇಶ್ ಗೌಡ ಬೆಳ್ಳಿ ಪದಕ ಲಭಿಸಿದೆ. ಎಂಟನೇ ತರಗತಿಯ ಈ ವಿದ್ಯಾರ್ಥಿನಿ ಬೆಳ್ಳಿ ಪದಕ ಗಳಿಸಿದ್ದಾರೆ.
09:57 PM (IST) Mar 31
ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರು, ಮಣಿಪಾಲ ಆಸ್ಪತ್ರೆ ತೀವ್ರ ನಿಘಾ ಘಟಕಕ್ಕೆ ದಾಖಲು, ವೈದ್ಯರ ತಂಡ ಸಚಿವರಿಗೆ ಚಿಕಿತ್ಸೆ ನೀಡುತ್ತಿದೆ. ಡಿ ಸುಧಾಕರ್ ಆರೋಗ್ಯದ ಅಪ್‌ಡೇಟ್ ಇಲ್ಲಿದೆ.
08:53 PM (IST) Mar 31
ಹಿಂದೂ ಮತ್ತು ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆಯಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
07:55 PM (IST) Mar 31
ಟಾಕ್ ಶೋವೊಂದರಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮ್ಮ ತಮ್ಮ ಪವನ್ ಕಲ್ಯಾಣ್ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗನ್‌ಗಳ ಮೇಲೆ ವಿಪರೀತ ಆಸಕ್ತಿ ಹೊಂದಿದ್ದ ಪವನ್, ನಕ್ಸಲೈಟ್ ಆಗಿಬಿಡುತ್ತಾನೇನೋ ಎಂದು ತಾವು ಭಯಪಟ್ಟಿದ್ದಾಗಿ ಚಿರಂಜೀವಿ ಹೇಳಿಕೊಂಡಿದ್ದಾರೆ.
07:45 PM (IST) Mar 31
ನಟ ಕಿಶೋರ್ ಅವರು ರಾಮನ ಕುರಿತು ತಮ್ಮ ವಿಭಿನ್ನ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ವ್ಯವಸ್ಥೆಗಾಗಿ ವಾಲಿಯನ್ನು ಕೊಂದ, ಸೀತೆಯನ್ನು ಕಾಡಿಗಟ್ಟಿದ ರಾಮನಿಗಿಂತ, ಸಹಾನುಭೂತಿಯಿಂದ ಎಲ್ಲವನ್ನೂ ಪ್ರಶ್ನಿಸುವ, ಸಂವಾದಕ್ಕೆ ಒತ್ತು ನೀಡುವ ಮಾನವೀಯ ರಾಮನೇ 'ನನ್ನ ರಾಮ' ಎಂದು ಅವರು ಪ್ರತಿಪಾದಿಸಿದ್ದಾರೆ.
07:01 PM (IST) Mar 31
ಸಮಂತಾ ರುತ್ ಪ್ರಭು.. ಈ ಹೆಸ್ರು ಸೌತ್ ಸಿನಿ ಇಂಡಸ್ಟ್ರಿಯ ಪ್ರೈಡ್.. ಯಾಕಂದ್ರೆ ಕಳೆದ 15 ವರ್ಷದಿಂದ ಸಮಂತಾ ತೆಲುಗು ಚಿತ್ರರಂಗವನ್ನ ಆಳುತ್ತಿದ್ದಾರೆ. ರಶ್ಮಿಕಾರಂತಹ ಸ್ಟ್ರಾಂಗೆಸ್ಟ್ ನಟಿಯರು ಬಂದ್ರು ಅವರಿಗಿಂತ ಗಟ್ಟಿಗಿತ್ತಿ.
06:59 PM (IST) Mar 31
ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ಹೈದರಾಬಾದ್‌ನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು, ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಆಡುಗೋಡಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
06:55 PM (IST) Mar 31
06:30 PM (IST) Mar 31
ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್‌ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ.
06:06 PM (IST) Mar 31
ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ 'ಕೆಜಿಎಫ್'ಗೂ ಮೊದಲು ಮತ್ತು ಕೆಜಿಎಫ್ ನಂತರ ಅಂತ ಡಿವೈಡ್ ಮಾಡಬೇಕು.
05:57 PM (IST) Mar 31
04:32 PM (IST) Mar 31
ಮುಸ್ಲಿಂ ಯುವಕರು ಕೇಳಿದ ಹಣವನ್ನು ಕೊಡಲು ನಿರಾಕರಿಸಿದ ಕೋಪಕ್ಕೆ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ.
04:23 PM (IST) Mar 31
ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುತ್ತಿದ್ದ ಸಂಪೂರ್ಣ ರಸ್ತೆ ತೆರಿಗೆ ವಿನಾಯಿತಿಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಇನ್ನು ಮುಂದೆ, ವಾಹನದ ಬೆಲೆಗೆ ಅನುಗುಣವಾಗಿ 5% ರಿಂದ 10% ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುವುದು.
04:01 PM (IST) Mar 31
03:07 PM (IST) Mar 31
ಬೆಂಗಳೂರಿನಲ್ಲಿ 'ಬ್ಯಾಟರ್ ಬಾಕ್ಸ್' ಎಂಬ ಕಂಪನಿಯು ತನ್ನ ಜಾಹೀರಾತಿನಲ್ಲಿ "Enjoyment in every bite" ಎಂಬುದನ್ನು 'ಪ್ರತಿ ಕಚ್ಚುವಿಕೆಯಲ್ಲಿ ಆನಂದ' ಎಂದು ತಪ್ಪಾಗಿ ಭಾಷಾಂತರಿಸಿದೆ. ಈ ಭಾಷಾ ಪ್ರಮಾದವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
01:41 PM (IST) Mar 31
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ, ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ ಮೂರು ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎರಡು ಉಚಿತ ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ ಹೆಚ್ಚಳ, ಹೊಸ ಕ್ರೀಡಾಂಗಣದ ಬಗ್ಗೆಯೂ ಚರ್ಚೆ.
12:53 PM (IST) Mar 31
ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ, ಬಿಜೆಪಿ ಮುಖಂಡ ಚಲುವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಜನರೇ ಮಣ್ಣು ಮುಚ್ಚಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
12:51 PM (IST) Mar 31
ಅಣ್ಣನೇ ತನ್ನ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಡೆದ ಗಲಾಟೆಯಲ್ಲಿ ಈ ಕೃತ್ಯ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಅಣ್ಣ ಮತ್ತು ತಂದೆಯನ್ನು ಬಂಧಿಸಿದ್ದಾರೆ.
12:41 PM (IST) Mar 31
ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸೆಪ್ಟೆಂಬರ್‌ನಲ್ಲಿ ಹೊಸ ಅತಿಥಿಯ ಆಗಮನವಾಗಲಿದ್ದು, ಈ ಸಂತಸದ ಸುದ್ದಿಯನ್ನು ಪ್ಯಾರಿಸ್ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
12:19 PM (IST) Mar 31
ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
11:35 AM (IST) Mar 31
11:24 AM (IST) Mar 31
ರೈತ ಮೌಲಪ್ಪ ನಾಯಕರ 37 ಕ್ವಿಂಟಲ್‌ಗೂ ಅಧಿಕ ಮೆಣಸಿನಕಾಯಿ ರಾಶಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದಾಗಿ ರೈತರಿಗೆ ಅಂದಾಜು ಏಳು ಲಕ್ಷ ರೂಪಾಯಿ ನಷ್ಟವಾಗಿದೆ.
11:14 AM (IST) Mar 31
ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ ನುಗ್ಗಿ ಆತಂಕ ಮೂಡಿಸಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಘಟನೆ ಸೋಮವಾರ ನಡೆದಿದೆ. ಘಟನೆಯ ಫೋಟೋಗಳು ಇಲ್ಲಿವೆ.
10:38 AM (IST) Mar 31
10:23 AM (IST) Mar 31
10:09 AM (IST) Mar 31
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ರೈತರ ಬೆಳೆಗಳಿಗೂ ತಟ್ಟಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಳಿಕೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಬಸವಣ್ಣ ಎಂಬುವವರು ತಾವೇ ಕಷ್ಟಪಟ್ಟು ಬೆಳೆದಿದ್ದ ಸಮೃದ್ಧ ಹೂಕೋಸಿನ ಬೆಳೆಯನ್ನು ನಾಶಪಡಿಸಿದ ಘಟನೆ ನಡೆದಿದೆ.
08:26 AM (IST) Mar 31
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಖಂಡಿಸಿದ್ದಾರೆ. ಈ ನೀತಿಯು ತಜ್ಞರೊಂದಿಗೆ ಚರ್ಚಿಸದೆ ಜಾರಿಗೆ ತಂದಿದ್ದು, ಇದು ಹಿಂದಿ ಸೇರಿದಂತೆ ಇತರೆ ತೃತೀಯ ಭಾಷೆಗಳಿಗೂ ಹೊಡೆತ ಬೀಳಲಿದೆ ಎಂದು ಆಕ್ರೋಶ.
08:16 AM (IST) Mar 31
08:13 AM (IST) Mar 31
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಸಮಯಕ್ಕೆ ಸರಿಯಾಗಿ ಬಂದ ಗರುಡ ಪಕ್ಷಿಯನ್ನು ಭಕ್ತರು ಕಣ್ತುಂಬಿಕೊಂಡರು.
08:13 AM (IST) Mar 31
07:51 AM (IST) Mar 31
ರಾಜ್ಯ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಮೊತ್ತದಿಂದ ಕೈಬಿಟ್ಟು ಗ್ರೇಡ್ ನೀಡುವ ಹಠಾತ್ ನಿರ್ಧಾರ ಕೈಗೊಂಡಿದೆ. ಈ ಕ್ರಮದಿಂದ ವರ್ಷವಿಡೀ ಶ್ರಮಪಟ್ಟು ಓದಿದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದು, ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿ ಶಿಕ್ಷಣ ಸಚಿವರಿಗೆ ಪತ್ರ ಚಳವಳಿ ಶುರು
07:51 AM (IST) Mar 31
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ರಾಜ್ಯದ ಹಲವೆಡೆ ಕೃತಕ ಗ್ಯಾಸ್ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ಆಟೋ ಚಾಲಕರು ಇಂಧನಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವಂತಾಗಿದೆ.
07:42 AM (IST) Mar 31
ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ಉದ್ಯೋಗಿ ಭುವನೇಶ್ವರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತಿ ಸೆಲ್ವ ಬಾಲಮುರುಗನ್ ಸೇರಿದಂತೆ ಏಳು ಮಂದಿ ವಿರುದ್ಧ ಪೊಲೀಸರು 495 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
07:19 AM (IST) Mar 31