Published : Mar 29, 2026, 06:45 AM ISTUpdated : Mar 29, 2026, 11:33 PM IST

Karnataka News Live: ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ ಪ್ರೀ ವೆಡ್ಡಿಂಗ್‌ನಲ್ಲಿ ಮೇಳೈಸಿದ ಸಂಪ್ರದಾಯ - ಸೀರೆಗೆ ಫ್ಯಾನ್ಸ್ ಫಿದಾ

ಸಾರಾಂಶ

ಬೆಂಗಳೂರು: ಬಿರಿಯಾನಿ ಸವಿಯಲು ಬುಲೆಟ್‌ನಲ್ಲಿ ಹೊರಟಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.

ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ, ದಾವಣಗೆರೆ ಮೂಲದ ಮನೋಜ್ (21), ಹಾಸನ ಜಿಲ್ಲೆ ಬೇಲೂರು ಮೂಲದ ಅಭಿಲಾಷ್ (21), ಆಚಾರ್ಯ ಕಾಲೇಜಿನ ವಿದ್ಯಾರ್ಥಿ, ರಾಯಚೂರು ಮೂಲದ ನವೀನ್ (21) ಮೃತರು. ಅಪಘಾತದ ತೀವ್ರತೆಗೆ ಮನೋಜ್ ಮತ್ತು ಅಭಿಲಾಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನವೀನ್ ಅವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಶನಿವಾರ ಮುಂಜಾನೆ 4ರ ಸುಮಾರಿಗೆ ಕುಣಿಗಲ್‌ಗೆ ಬಿರಿಯಾನಿ ತಿನ್ನಲು ಬುಲೆಟ್‌ನಲ್ಲಿ ತೆರಳುತ್ತಿದ್ದರು. ರಾಗಿ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೈಕ್ ಡಿಕ್ಕಿದೆ.

11:33 PM (IST) Mar 29

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ ಪ್ರೀ ವೆಡ್ಡಿಂಗ್‌ನಲ್ಲಿ ಮೇಳೈಸಿದ ಸಂಪ್ರದಾಯ - ಸೀರೆಗೆ ಫ್ಯಾನ್ಸ್ ಫಿದಾ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ನಲ್ಲಿ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

09:48 PM (IST) Mar 29

ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆ - ಸಿ.ಟಿ.ರವಿ ವಿಶ್ವಾಸ

ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story

08:36 PM (IST) Mar 29

ಅರವಿಂದ ಬೆಲ್ಲದ್‌ ಕೇಂದ್ರ ಸರ್ಕಾರದ ತಾರತಮ್ಯ ಬಗ್ಗೆ ಪ್ರಸ್ತಾಪಿಸಲಿ - ಸಚಿವ ಎಂ.ಬಿ.ಪಾಟೀಲ್‌

ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿರುವ ತಾರತಮ್ಯ ನಿವಾರಣೆಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಪ್ರತಿಕ್ರಿಯಿಸಿದರು.

Read Full Story

06:21 PM (IST) Mar 29

ಹುಡ್ಗಿನ ಲವ್ವಲ್ಲಿ ಬೀಳಿಸ್ಕೊಳ್ಳೋಕೆ Bigg Boss ಗಿಲ್ಲಿಗೆ ಟಿಪ್ಸ್ ಕೇಳಿದ ಯುವಕ ಸುಸ್ತೋ ಸುಸ್ತು

ಬಿಗ್​ಬಾಸ್​ ಖ್ಯಾತಿಯ ಗಿಲ್ಲಿ ನಟ 'ಗೌರಿ ಕಲ್ಯಾಣ' ಸೀರಿಯಲ್ ಸಂತೆಯಲ್ಲಿ ಭಾಗವಹಿಸಿದ್ದರು. ಈ ವೇಳೆ, ಪ್ರೀತಿಯಲ್ಲಿ ಸೋತ ಯುವಕನೊಬ್ಬ ಸಲಹೆ ಕೇಳಿದಾಗ, ತನಗಾದ ಐದು ಬ್ರೇಕಪ್​ಗಳ ಬಗ್ಗೆ ಹೇಳಿ ತಮಾಷೆಯಾಗಿ ಉತ್ತರಿಸಿದ್ದಾರೆ.

Read Full Story

06:19 PM (IST) Mar 29

ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ನಟ ವಿಕ್ಟರಿ ವೆಂಕಟೇಶ್ - ವಿಡಿಯೋ ವೈರಲ್!

ವಿಕ್ಟರಿ ವೆಂಕಟೇಶ್ ತೆಲುಗು ಚಿತ್ರರಂಗದಲ್ಲಿ ಯಾವುದೇ ವಿವಾದಗಳಿಲ್ಲದ ನಟ. ಸದ್ಯ ಅವರು ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟು ಅಲ್ಲಿನ ಫೇಮಸ್ ಮಸಾಲೆ ದೋಸೆ ಸೇರಿದಂತೆ ಇತರ ಉಪಹಾರಗಳನ್ನು ಸವಿದಿದ್ದಾರೆ.

Read Full Story

05:32 PM (IST) Mar 29

Situationship - ಹೊಸ ಟ್ರೆಂಡ್ ಸಿಚುಯೇಷನ್‌ಶಿಪ್‌ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!

ಒಂದು ಕಮಿಟೆಡ್ ಸಂಬಂಧದಲ್ಲಿ ಇಬ್ಬರಿಗೂ ಸ್ಪಷ್ಟತೆ, ನಂಬಿಕೆ ಮತ್ತು ಭವಿಷ್ಯದ ಬಗ್ಗೆ ಯೋಚನೆಗಳಿರುತ್ತವೆ. ಆದರೆ ಸಿಚುಯೇಷನ್‌ಶಿಪ್‌ನಲ್ಲಿ ಪರಿಸ್ಥಿತಿ ಬೇರೆಯೇ ಇರುತ್ತೆ. ಸಂಬಂಧಕ್ಕೆ ಒಂದು ಹೆಸರಿರುವುದಿಲ್ಲ.

Read Full Story

04:24 PM (IST) Mar 29

ಮದ್ವೆಗಿಂತ ಬ್ರೇಕಪ್​ ಒಳ್ಳೇದು ಅಂದಿದ್ದೇ ತಪ್ಪಾಯ್ತಾ? ನಂಗೆ ಬೇರೆ ಐಡೆಂಟಿಟಿನೇ ಇಲ್ವಾ? ನಟಿ ಅಮೃತಾ ​ಗರಂ

ನಟಿ ಅಮೃತಾ ಅಯ್ಯಂಗಾರ್ ಅವರು ತಮ್ಮ ವೃತ್ತಿಜೀವನದ ಸಾಧನೆಗಳನ್ನು ಕಡೆಗಣಿಸಿ, ಮಾಧ್ಯಮಗಳು ತಮ್ಮ ಹಿಂದಿನ ಬ್ರೇಕಪ್ ವಿಷಯವನ್ನೇ ನಿರಂತರವಾಗಿ ಹೈಲೈಟ್ ಮಾಡುವುದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಕಾರಾತ್ಮಕ ಪ್ರಚಾರವು ತಮ್ಮ ಗುರುತಾಗಿ ಬದಲಾಗುತ್ತಿರುವುದಕ್ಕೆ  ಬೇಸರ ವ್ಯಕ್ತಪಡಿಸಿದ್ದಾರೆ

Read Full Story

01:49 PM (IST) Mar 29

ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ

ಬಿಗ್​ಬಾಸ್​ ಸೀಸನ್​ 10ರ ಜನಪ್ರಿಯ ಸ್ಪರ್ಧಿ ಸಂಗೀತಾ ಶೃಂಗೇರಿ, ಶೋನಿಂದ ಹೊರಬಂದ ನಂತರ ಅಭಿಮಾನಿಗಳು ಕಾಯ್ತದ್ದ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್​  ಮೀಡಿಯಾದಲ್ಲಿ ಫೋಟೋಗಳನ್ನು ಶೇರ್​ ಮಾಡಿದ್ದಾರೆ ನಟಿ.

Read Full Story

01:29 PM (IST) Mar 29

Vastu Tips - T ಜಂಕ್ಷನ್ ಇರುವ ಮನೆ ಖರೀದಿ ಮಾಡಿದ್ರೆ ಏನಾಗುತ್ತೆ? ಇದರ ಹಿಂದಿನ ಸೈಂಟಿಫಿಕ್ ಕಾರಣ ತಿಳಿದರೆ ಅಚ್ಚರಿ ಪಡ್ತೀರಾ!

ವಾಸ್ತು ಶಾಸ್ತ್ರದಲ್ಲಿ T ಜಂಕ್ಷನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೊಸ ಮನೆ ಕಟ್ಟುವವರು ಅಥವಾ ಜಾಗ ಖರೀದಿಸುವವರು ಮೊದಲು ನೋಡುವುದೇ T ಜಂಕ್ಷನ್‌ ಇದೆಯಾ ಇಲ್ವಾ ಅಂತ. ಹಾಗಿದ್ರೆ T ಜಂಕ್ಷನ್‌ ಅಂದ್ರೆ ಏನು? ಇದರಿಂದ ಆಗುವ ನಷ್ಟಗಳೇನು? ಇದರ ಹಿಂದಿನ ವೈಜ್ಞಾನಿಕ ಕಾರಣವೇನು? ನೋಡೋಣ ಬನ್ನಿ

Read Full Story

01:16 PM (IST) Mar 29

ಆರ್ಥಿಕ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರದ್ದು - ಬೊಮ್ಮಾಯಿ ವಾಗ್ದಾಳಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೆ ಈ ಭಾಗದ ಜನರಿಗೆ ಅನ್ಯಾಯ ಮಾಡಿದೆ ಹಾಗೂ ಗ್ಯಾರಂಟಿ ಯೋಜನೆಗಳಿಗಾಗಿ ಸಾಲ ಮಾಡಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ

Read Full Story

12:42 PM (IST) Mar 29

ಕಲಬುರಗಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಾಗಿ ಪರದಾಟ, ಕ್ಯೂ ತಪ್ಪದಂತೆ ನಡುರಸ್ತೆಯಲ್ಲೇ ಹಾಸಿಗೆ ಹಾಸಿ ಮಲಗಿದ ಜನ!

ಇರಾನ್-ಇಸ್ರೇಲ್ ಯುದ್ಧ ಸಂಘರ್ಷದಿಂದಾಗಿ ಕಲಬುರಗಿಯ ಆಳಂದ ಪಟ್ಟಣದಲ್ಲಿ ತೀವ್ರ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿದೆ. ಸಿಲಿಂಡರ್‌ಗಾಗಿ ಜನರು ರಾತ್ರಿಯಿಡೀ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದು, ಅಡುಗೆ ಮಾಡಲು ಪರದಾಡುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ಪಟ್ಟಣದ ಜನಜೀವನ ಅಸ್ತವ್ಯಸ್ತಗೊಂಡಿದೆ.
Read Full Story

12:09 PM (IST) Mar 29

Leftovers - ರಾತ್ರಿ ಉಳಿದ ಅನ್ನ, ಚಿಕನ್, ಪಿಜ್ಜಾ ತಿನ್ನುವ ಮುನ್ನ ಎಚ್ಚರ! ಫುಡ್ ಪಾಯ್ಸನಿಂಗ್ ಅಪಾಯ ಕಾದಿದೆ

ನಿನ್ನೆ ಉಳಿದ ಪಿಜ್ಜಾ, ಚಿಕನ್ ಅಥವಾ ಅನ್ನವನ್ನು ಇಂದು ತಿನ್ನುವುದು ಸುರಕ್ಷಿತವೇ? ಮೈಕ್ರೋಬಯಾಲಜಿಸ್ಟ್ ಒಬ್ಬರು ಇದರಲ್ಲಿರುವ ಗುಪ್ತ ಅಪಾಯಗಳ ಬಗ್ಗೆ ವಿವರಿಸಿದ್ದಾರೆ. ಆಹಾರವನ್ನು ಸರಿಯಾಗಿ ಶೇಖರಿಸಿಡದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಸಾಧ್ಯತೆ ಇದೆ. ಸುರಕ್ಷಿತವಾಗಿರುವುದು ಹೇಗೆಂದು ತಿಳಿಯಿರಿ.

Read Full Story

11:39 AM (IST) Mar 29

ತಂದೆಯ ಸಾವಿನ ದುಃಖದಲ್ಲೂ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಬರೆದ ವಿದ್ಯಾರ್ಥಿ!

ಬೀರೂರು ತಾಲೂಕಿನ ಬುಕ್ಕಸಾಗರ ಗ್ರಾಮದ ವಿದ್ಯಾರ್ಥಿ ಭರತ್, ತಂದೆಯ ಅಕಾಲಿಕ ಮರಣದ ದುಃಖದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದಿದ್ದಾನೆ. ಶನಿವಾರ ಬೆಳಿಗ್ಗೆ ಗಣಿತ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾನೆ.
Read Full Story

11:20 AM (IST) Mar 29

ರಾಜ್ಯದಲ್ಲಿ 2028ಕ್ಕೆ ಬಿಜೆಪಿಗೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ - ಬಾಲಚಂದ್ರ ಜಾರಕಿಹೊಳಿ ಭವಿಷ್ಯ

ಗೋಕಾಕದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, 2028ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.

Read Full Story

10:04 AM (IST) Mar 29

ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ

ಅಮೆರಿಕ, ಇಸ್ರೇಲ್ ಮೈತ್ರಿಕೂಟವನ್ನು ಬೆಂಬಲಿಸುವ ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಎಚ್ಚರಿಕೆ ನೀಡಿದದ್ದಾರೆ. ನಿಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಭದ್ರತೆ ಇರಬೇಕು ಎಂದು ಬಯಸಿದರೆ ಅಮೆರಿಕ ಮತ್ತು ಇಸ್ರೇಲ್‌ಗೆ ನಿಮ್ಮ ಭೂಮಿ ಬಳಸಲು ಅನುಮತಿಸಬೇಡಿ ಎಂದು ಎಚ್ಚರಿಸಿದ್ದಾರೆ.

Read Full Story

09:56 AM (IST) Mar 29

ರೀಲ್ಸ್ ಸ್ಟಾರ್ ಲಕ್ಷ್ಮೀ ಅಜ್ಜಿ ಇನ್ನಿಲ್ಲ; ಕಿವಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ನಟನೆ

ರೀಲ್ಸ್ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಮೊಮ್ಮಗ ಸೂರಜ್ ಜೊತೆ ಸೇರಿ, ಉತ್ತರ ಕನ್ನಡದ ಸ್ಥಳೀಯ ಭಾಷೆಯಲ್ಲಿಯೇ ರೀಲ್ಸ್ ಮಾಡುತ್ತಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
Read Full Story

09:50 AM (IST) Mar 29

ದುಬೈನ ಅಮೆರಿಕ ನೆಲೆ, ಕುವೈತ್‌ ಏರ್‌ಪೋರ್ಟ್‌ಗೆ ಇರಾನ್‌ ದಾಳಿ

ದುಬೈನಲ್ಲಿರುವ 2 ಅಮೆರಿಕ ಸೈನ್ಯದ ಅಡಗುತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್‌, 500ಕ್ಕೂ ಹೆಚ್ಚು ಅಮೆರಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದ ಈ ಸ್ಥಳಗಳ ಮೇಲೆ ನಿಖರವಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ

Read Full Story

09:02 AM (IST) Mar 29

ನಮ್ಮ ಮತ ಮಾರಾಟಕ್ಕಿಲ್ಲ - ಮನೆ ಮುಂದೆ ನಾಮಫಲಕ ಅಳವಡಿಸಿದ ಪಾಲಹಳ್ಳಿಯ ರುದ್ರಮ್ಮ ಅಜ್ಜಿ

ಪಾಲಹಳ್ಳಿಯ 80 ವರ್ಷದ ವೃದ್ಧೆ ರುದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿನ ಆಮಿಷಗಳಿಗೆ ಬೇಸತ್ತು 'ನಮ್ಮ ಓಟು ಮಾರಾಟಕ್ಕಿಲ್ಲ, ಖರೀದಿಗೆ ಬಂದವರಿಗೆ ಓಟಿಲ್ಲ' ಎಂಬ ನಾಮಫಲಕವನ್ನು ತಮ್ಮ ಮನೆ ಮುಂದೆ ಹಾಕಿದ್ದಾರೆ. 

Read Full Story

08:44 AM (IST) Mar 29

ಜನ ನನ್ನನ್ನು ಶಾಂತಿದೂತ ಎಂದು ಸ್ಮರಿಸುವುದು ನನ್ನ ಬಯಕೆ - ಟ್ರಂಪ್‌

ನಾನು ಭಾರತ ನಡುವಿನ ಪಾಕಿಸ್ತಾನ ಸಂಘರ್ಷವೂ ಸೇರಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಜನ ನನ್ನನ್ನು ಮಹಾನ್‌ ಶಾಂತಿದೂತನಾಗಿ ಸ್ಮರಿಸಬೇಕೆನ್ನುವುದು ನನ್ನ ಬಯಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Read Full Story

08:36 AM (IST) Mar 29

Davanagere Bypolls - ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದ ಪ್ರದೀಪ್ ಈಶ್ವರ್; ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ಮುಖಂಡರ ಸವಾಲು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊರಕೆ, ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಪಕ್ಷಗಳ ನಡುವೆ ಘೋಷಣೆಗಳ ಸಮರ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
Read Full Story

08:33 AM (IST) Mar 29

ದೇಶದ ಅತಿದೊಡ್ಡ ಏರ್‌ಪೋರ್ಟ್‌ನ ಹಂತ-1 ಲೋಕಾರ್ಪಣೆ

ದೇಶದ ಅತಿ ದೊಡ್ಡ ಏರ್‌ಪೋರ್ಟ್‌ ಎಂಬ ಖ್ಯಾತಿಗೆ ಭವಿಷ್ಯದಲ್ಲಿ ಭಾಜನವಾಗಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ1 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾ ಸನಿಹದ ಜೆವಾರ್‌ನಲ್ಲಿ ಉದ್ಘಾಟಿಸಿದರು.

Read Full Story

08:22 AM (IST) Mar 29

ಸೋನಿಯಾ ಚೇತರಿಕೆಗಾಗಿ ಆಂಜನೇಯನ ಮೊರೆ ಹೋದ ಕಾಂಗ್ರೆಸ್ - ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು

ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ  ಆರೋಗ್ಯ ಚೇತರಿಕೆಗಾಗಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜ್ವರ ಹಾಗೂ ಸೋಂಕಿನಿಂದ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Read Full Story

08:02 AM (IST) Mar 29

Davanagere By Poll Rich vs Poor Battle - ದಾವಣಗೆರೆಯಲ್ಲಿ ಶ್ರೀಮಂತ ವರ್ಸಸ್‌ ಬಡವ - ಶ್ರೀನಿವಾಸ್ - ನಾನು ಹಮಾಲಿ ಮಾಡುವವರ ಮಗ - ಬಿಜೆಪಿಗ

ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಈ ಬಾರಿಯ ಚುನಾವಣೆಯನ್ನು ಶ್ರೀಮಂತರು ಮತ್ತು ಬಡವರ ನಡುವಿನ ಹೋರಾಟ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಶ್ರೀಮಂತ ಹಿನ್ನೆಲೆಯನ್ನು ಟೀಕಿಸಿರುವ ಅವರು, ಹಮಾಲಿ ಮಾಡುವವರ ಮಗನಾದ ನನಗೆ ಜನ ಬೆಂಬಲ ಇದೆ ಎಂದಿದ್ದಾರೆ.

Read Full Story

07:45 AM (IST) Mar 29

Davanagere Bypolls - ನನ್ನ ಆಸ್ತಿಗಿಂತ ಬಿಜೆಪಿ ಅಭ್ಯರ್ಥಿಯ ಆಸ್ತಿ ದುಪ್ಪಟ್ಟಿದೆ - ಬೇಕಾದರೆ ಅಫಿಡವಿಟ್‌ ನೋಡಿ - ಕೈ ಅಭ್ಯರ್ಥಿ ಸಮರ್ಥ

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ಶ್ರೀಮಂತ ವರ್ಸಸ್ ಬಡವರ ಚುನಾವಣೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳನ್ನು ಹೋಲಿಸಿದರೆ, ಬಿಜೆಪಿ ಅಭ್ಯರ್ಥಿಯ ಆಸ್ತಿಯೇ ತಮಗಿಂತ ಎರಡು ಪಟ್ಟು ಹೆಚ್ಚಿದೆ ಎಂದಿದ್ದಾರೆ.

Read Full Story

07:41 AM (IST) Mar 29

ಮೂರು ಕಾರಣಗಳಿಗೆ ಟಾಕ್ಸಿಕ್‌ ಚಿತ್ರಕ್ಕೆ ಕಿಯಾರಾ ಆಯ್ಕೆಯಾಗಿದ್ದು - ನಿರ್ದೇಶಕಿ ಗೀತು ಮೋಹನ್‌ ದಾಸ್‌

Bollywood Actress Kiara Advani in Toxic movie: ಯಶ್ ಅಭಿನಯದ 'ಟಾಕ್ಸಿಕ್‌' ಚಿತ್ರಕ್ಕೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಆಯ್ಕೆಯಾಗಲು ನಿರ್ದೇಶಕಿ ಗೀತು ಮೋಹನ್‌ ದಾಸ್‌ ಮೂರು ಪ್ರಮುಖ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. 

Read Full Story

07:28 AM (IST) Mar 29

SSLC ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಭದ್ರತೆ ಇಲ್ಲದೆ ಬೈಕ್‌ನಲ್ಲಿ ಸಾಗಿಸಿ ಶಿಕ್ಷಣ ಇಲಾಖೆ!

ಬೆಳಗಾವಿಯ ಮೂಡಲಗಿ ಪಟ್ಟಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನಿಯಮಬಾಹಿರವಾಗಿ ಬೈಕ್‌ನಲ್ಲಿ ಸಾಗಿಸಲಾಗಿದೆ. ಉಮಾಬಾಯಿ ಪ್ರೌಢಶಾಲೆಯಿಂದ ಬಿಇಒ ಕಚೇರಿಗೆ ಯಾವುದೇ ಪೊಲೀಸ್ ಭದ್ರತೆ ಇಲ್ಲದೆ ಪತ್ರಿಕೆಗಳನ್ನು ಕೊಂಡೊಯ್ದಿದ್ದು, ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ  ತೀವ್ರ ಆಕ್ರೋಶ 

Read Full Story

07:27 AM (IST) Mar 29

Bengaluru ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

ಬೆಂಗಳೂರಿನ ಆನೇಕಲ್ ಬಳಿ ಸಾಲದ ಬಾಧೆ ತಾಳಲಾರದೆ ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Read Full Story

More Trending News