ದಾವಣಗೆರೆ : ಉತ್ತರ ಪ್ರದೇಶದ ಬರೇಲಿಯಲ್ಲಿ ಆರಂಭವಾದ ‘ಐ ಲವ್ ಮೊಹಮ್ಮದ್’ ಭಿತ್ತಿಪತ್ರ ವಿವಾದವು ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಬಳಿಕ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ದಾವಣಗೆರೆಯಲ್ಲಿ ಇದೇ ಪೋಸ್ಟರ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಿಗುವಿನ ಸ್ಥಿತಿ ಇದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿ ಭಿತ್ತಿ ಪತ್ರ ಹಾಕಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ವೇಳೆ, ಒಂದು ಗುಂಪು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಲಾಗಿದೆ.

11:24 PM (IST) Sep 25
Samyuktha Hegde on New Reality Show ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ಅವರು 'ರಿಯಾಲಿಟಿ ರಾಣೀಸ್ ಆಫ್ ಜಂಗಲ್' ಎಂಬ ಹೊಸ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಈ ಶೋನಲ್ಲಿ ಪ್ರಾಣಿಗಳ ಹಸಿ ಕಣ್ಣುಗಳನ್ನು ತಿನ್ನುವ ವಿವಾದಾತ್ಮಕ ಟಾಸ್ಕ್ ನೀಡಲಾಗಿದೆ.
10:52 PM (IST) Sep 25
Bengaluru Cricket Coach explicit videos Scandal ಪ್ರಜ್ವಲ್ ರೇವಣ್ಣ ಮಾದರಿಯಲ್ಲಿ ಸಾವಿರಾರು ಮಹಿಳೆಯರಿಗೆ ಮೋಸ ಮಾಡಿದ ಆರೋಪ ಎದುರಿಸುತ್ತಿರುವ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಮ್ಯಾಥ್ಯೂನ ಕಾಮಕಾಂಡವನ್ನು ಸಂತ್ರಸ್ತೆಯೊಬ್ಬರು ಬಯಲು ಮಾಡಿದ್ದಾರೆ..
10:49 PM (IST) Sep 25
ದಾವಣಗೆರೆ ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಇಂದಿರಾ ಗಾಂಧಿ ಮನಸ್ಥಿತಿಯಂತೆ ಡಿ.ಜೆ. ಸೌಂಡ್ ಸಿಸ್ಟಂ ಬಳಕೆಗೆ ನಿರ್ಬಂಧ ಹೇರಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
10:28 PM (IST) Sep 25
ಜಿಲ್ಲೆಯ ಸಿಂಧನೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ತುಂಗಭದ್ರೆಗೆ ಅಂಬಾ ಆರತಿ ಮುಖಾಂತರ ಕಾರ್ಯಕ್ರಮಗಳು ಶುರುವಾಗಿದ್ದು, ಸಿಂಧನೂರು ದಸರಾ ಬಂಗಾಳಿ ಕ್ಯಾಂಪ್ ನಲ್ಲಿ ನಡೆಯಿತು. ಉತ್ಸವವು ಕನ್ನಡ ಭಾಷೆ-ಬಂಗಾಲಿ ಭಾಷೆಗೆ ಸೇತುವೆಯಾದ ಸಂದೇಶ ಸಾರಿತು.
09:24 PM (IST) Sep 25
ನಡುರಸ್ತೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿ ಬೂಟ್ ಕಾಲಿನಲ್ಲಿ ಒದ್ದು ವಿಕೃತಿ ಮೆರೆದ ಅಮಾನುಷ ಘಟನೆ ನಗರದ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಮಹಿಳೆಯು ನೋವಿನಿಂದ ಅಂಗಲಾಚಿದ್ರು, ಪಾಪಿ ಮಾಲೀಕ ಬಿಡದೇ ಥಳಿಸಿದ್ದಾನೆ.
09:10 PM (IST) Sep 25
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವು ಹಿಂಸಾಚಾರಕ್ಕೆ ತಿರುಗಿದೆ. ಲೇಹ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ.
09:04 PM (IST) Sep 25
SL Bhyrappas Will Goes Viral ಸಾಹಿತಿ ಎಸ್.ಎಲ್. ಭೈರಪ್ಪ ಅವರು ಬರೆದಿದ್ದಾರೆ ಎನ್ನಲಾದ ವಿಲ್ ವೈರಲ್ ಆಗಿದ್ದು, ತಮ್ಮ ಅಂತ್ಯಸಂಸ್ಕಾರವನ್ನು ಮಕ್ಕಳು ಮಾಡಬಾರದೆಂದು ಉಲ್ಲೇಖಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿದೆ.
08:56 PM (IST) Sep 25
ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ಹರಡಿಕೊಂಡಿದೆ. ಇಂತಹ ಕಳಂಕಗಳಿಂದ ಚಿತ್ರರಂಗ ಹೊರಬಂದು ಮನೋರಂಜನೆಯ ಜತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
08:55 PM (IST) Sep 25
ಸಲ್ಮಾನ್ ಅವರ ಈ ತಮಾಷೆಯು ಅಮೀರ್ ಅವರ ಇತ್ತೀಚಿನ ಖಾಸಗಿ ಜೀವನ ಮತ್ತು ಪ್ರಣಯದ ಸುತ್ತ ಸುತ್ತುತ್ತಿರುವ ಸುದ್ದಿಗಳಿಗೆ ಸ್ಪಷ್ಟವಾದ ಒಪ್ಪಿಗೆಯಾಗಿತ್ತು. ಕಿರಣ್ ರಾವ್ ಅವರಿಂದ ಬೇರೆಯಾದ ಹಲವು ವರ್ಷಗಳ ನಂತರ, ಅಮೀರ್ ಇತ್ತೀಚೆಗೆ ಗೌರಿ ಸ್ಪ್ರ್ಯಾಟ್ ಅವರೊಂದಿಗಿನ ತಮ್ಮ ಪ್ರಣಯವನ್ನು ಬಹಿರಂಗಪಡಿಸಿದ್ದಾರೆ.
07:58 PM (IST) Sep 25
07:56 PM (IST) Sep 25
ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧಿಸಿದ್ದ ದಾವಣಗೆರೆ ಜಿಲ್ಲಾಡಳಿತದ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
07:34 PM (IST) Sep 25
ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನೀಡಲಾಗಿದ್ದು, ಅಧಿಕಾರಿಗಳ ಜತೆ ಸಾರ್ವಜನಿಕರು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
07:21 PM (IST) Sep 25
ರಾಜ್ಯದ ಪ್ರಗತಿಗೆ ಅತ್ಯಂತ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, 2032 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಹೊಂದಲಾಗಿದ್ದು, ಇದನ್ನು ಸಾಕಾರಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
07:04 PM (IST) Sep 25
ಬೆಂಗಳೂರಿನ ಹೊರವರ್ತುಲ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲು, ವಿಪ್ರೋ ಸರ್ಜಾಪುರ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ಅಜೀಂ ಪ್ರೇಮ್‌ಜಿ ತಿರಸ್ಕರಿಸಿದ್ದಾರೆ.
07:01 PM (IST) Sep 25
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26ನೇ ಸಾಲಿಗಾಗಿ ವಿವಿಧ ಸಾಲ ಯೋಜನೆಗಳನ್ನು ಪ್ರಕಟಿಸಿದೆ. ಮತೀಯ ಅಲ್ಪಸಂಖ್ಯಾತ ಸಮುದಾಯದವರು ವೃತ್ತಿ ಪ್ರೋತ್ಸಾಹ, ಸ್ವಾವಲಂಭಿ ಸಾರಥಿ, ಶ್ರಮಶಕ್ತಿ, ವ್ಯಾಪಾರ, ಮತ್ತು ವಿದೇಶಿ ಶಿಕ್ಷಣ ಸಾಲಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
06:59 PM (IST) Sep 25
ಈ ದಿನ ಐತಿಹಾಸಿಕ ಸಭೆ ನಡೆದಿದೆ. ಹಿಂದುಳಿದ ವರ್ಗ ಎಂದು ಗುರುತಿಸಿಕೊಂಡ ಸಚಿವರು, ಶಾಸಕರು ಬಂದಿದ್ದಾರೆ. ಈ ಸಭೆ ಮೊದಲೇ ಆಗಬೇಕಿತ್ತು. ಸಾಮಾಜಿಕ, ಶೈಕ್ಷಣಿಕ ಹಕ್ಕನ್ನ ಕಸಿಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
06:53 PM (IST) Sep 25
ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಸ್ಪರ್ಧಿಗಳಿಗೆ ಕಿವಿಮಾತು ಹಾಗೂ ಎಚ್ಚರಿಕೆ ಕೊಟ್ಟಿದ್ದಾರೆ. ಇದಾಗಲೇ ಅವರು, ವರ್ತೂರು ಸಂತೋಷ್ ಜೊತೆಗಿನ ಮದುವೆ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
06:41 PM (IST) Sep 25
ಮಂಗಳೂರಿನಲ್ಲಿ ಅತಿದೊಡ್ಡ ಟೆಕ್ ಪಾರ್ಕ್‌ನ ಪ್ರಸ್ತಾವನೆಯು ಅನುಮೋದನೆಗಾಗಿ ರಾಜ್ಯ ಸಚಿವ ಸಂಪುಟದ ಮುಂದೆ ಬರಲಿದೆ. ಇನ್ನೊಂದು ವಾರದೊಳಗೆ ಇದಕ್ಕೆ ಅನುಮೋದನೆ ನೀಡುವ ಕೆಲಸ ಆಗಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
06:29 PM (IST) Sep 25
ಕಲೆಗೆ ಜಾತಿ ಧರ್ಮದ ಭೇದ ಭಾವವಿಲ್ಲ. ಆದಿಚುಂಚನಗಿರಿ ಮಠವು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಸಂಖ್ಯಾತ ಮನೆಗಳಲ್ಲಿ ಜ್ಞಾನದ ಬೆಳಕನ್ನು ಬಿತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಣ್ಣಿಸಿದರು.
06:05 PM (IST) Sep 25
ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರದ ಬಳಿ ಸಿಕ್ಕ ಚಾಲನ ಪರವಾನಿಗೆಯು, 2013ರಲ್ಲಿ ನಾಪತ್ತೆಯಾಗಿದ್ದ ತುಮಕೂರಿನ ಆದಿಶೇಷ ನಾರಾಯಣ ಎಂಬ ಯುವಕನದ್ದೆಂದು ಶಂಕಿಸಲಾಗಿದೆ. ಈ ಸುಳಿವಿನ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಆತನ ಕುಟುಂಬವನ್ನು ವಿಚಾರಣೆ ನಡೆಸಿದೆ.
05:56 PM (IST) Sep 25
ಕಿಚ್ಚ ಸುದೀಪ್ ತಮ್ಮ ಆಪ್ತರಿಗೆ, ತಮ್ಮ ಸಿನಿಮಾಗಳ ನಿರ್ದೇಶಕರಿಗೆ ಗಿಫ್ಟ್ ನೀಡುವುದರಲ್ಲಿ ಸದಾ ಮುಂದಿರುತ್ತಾರೆ. ಈ ಹಿಂದೆ ಅನೂಪ್ ಭಂಡಾರಿ, ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕಾರುಗಳನ್ನು ನೀಡಿದ್ದು ಗೊತ್ತೇ ಇದೆ.
05:55 PM (IST) Sep 25
ಭ್ರಷ್ಟಾಚಾರ ತನಿಖಾ ಆಯೋಗದ ಮುಖ್ಯಸ್ಥ ನ್ಯಾ. ನಾಗಮೋಹನ್ ದಾಸ್, ತಮ್ಮ ವರದಿಯ ಮೇಲೆ ಸರ್ಕಾರ ಕ್ರಮ ಕೈಗೊಳ್ಳದೆ ಮತ್ತೊಂದು ಸಮಿತಿ ರಚಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಲಕ್ಷ್ಯದ ನಡುವೆಯೂ, ಆಯೋಗದ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಲು ಒಂದು ತಿಂಗಳು ವಿಸ್ತರಿಸಲಾಗಿದೆ.
05:07 PM (IST) Sep 25
ಬಿಗ್ಬಾಸ್ 10ರ ನಂತರ ಸಖತ್ ಬೇಡಿಕೆಯಲ್ಲಿರುವ ನಟ ವಿನಯ್ ಗೌಡ, ಶೋನ ಸಂಭಾವನೆ ಕುರಿತ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಬಿಗ್ಬಾಸ್ನಿಂದ ತಮಗೆ ಪೇಮೆಂಟ್ ಬಂದಿಲ್ಲ ಎಂದು ಹೇಳುತ್ತಿರುವವರಿಗೆ ಚಾಟಿ ಬೀಸಿರೋ ನಟ ವಿನಯ್ ಹೇಳಿದ್ದೇನು ಕೇಳಿ…
05:04 PM (IST) Sep 25
04:30 PM (IST) Sep 25
ಶ್ರೀಶಾರದಾ ಇನ್ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಸ್ವಾಮಿ ಚೈತನ್ಯನಂದ ಸರಸ್ವತಿ ವಿರುದ್ಧ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಸಂಸ್ಥೆಯಲ್ಲಿ "ಟಾರ್ಚರ್ ರೂಮ್" ನಿರ್ಮಿಸಿ ದೌರ್ಜನ್ಯ ಎಸಗುತ್ತಿದ್ದ ಈತ, ಇದೀಗ ತಲೆಮರೆಸಿಕೊಂಡಿದ್ದಾನೆ.
04:26 PM (IST) Sep 25
04:04 PM (IST) Sep 25
GST Reforms to Lower Tax Burden as Economy Strengthens says PM Modi ಪ್ರಧಾನಿ ನರೇಂದ್ರ ಮೋದಿಯವರು ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಘೋಷಿಸಿದ್ದು, ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಕೇವಲ ಶೇ. 5 ಮತ್ತು ಶೇ. 18 ಕ್ಕೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.
03:49 PM (IST) Sep 25
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಮೇಲೆ ಕ್ರಮ ಕೈಗೊಳ್ಳಲು ಅನುಮತಿ ಕೇಳಿದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಬೈಕ್ ಟ್ಯಾಕ್ಸಿ ನೀತಿ ರೂಪಿಸುವುದಕ್ಕೆ ತಿಳಿಸಿ ತಿಂಗಳಾದರೂ ಕೆಲಸ ಮಾಡದೇ, ಕಾರ್ಮಿಕರ ವಿರುದ್ಧ ಕ್ರಮಕ್ಕೆ ಮುಂದಾಗುವಿರಾ ಎಂದು ಛೇಡಿಸಿದೆ. ಅ.15ಕ್ಕೆ ವಿಚಾರಣೆ ಮುಂದೂಡಿದೆ.
03:06 PM (IST) Sep 25
Bihar west bengal tamil nadu election 2026: ಭಾರತೀಯ ಜನತಾ ಪಕ್ಷವು ಮುಂಬರುವ ಬಿಹಾರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಿಗೆ ತನ್ನ ಉಸ್ತುವಾರಿಗಳನ್ನು ನೇಮಿಸಿದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಬಿಹಾರ, ಭೂಪೇಂದ್ರ ಯಾದವ್ ಅವರಿಗೆ ಪಶ್ಚಿಮ ಬಂಗಾಳದ ಜವಾಬ್ದಾರಿ.
02:51 PM (IST) Sep 25
ಯೂಟ್ಯೂಬರ್ ಮುಕುಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ ‘ಹಿಂದೂ ಹುಡುಗಿಯರು ದುಡ್ಡು ಕೊಟ್ರೆ ಬರ್ತಾರೆ, ಮುಸ್ಲಿಂ ಹುಡುಗಿಯರು ಬರಲ್ಲ’ ಅಂತಾ ಇತರರಲ್ಲಿ ಹೇಳಿದ್ದಾನೆ. ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿ ಮದುವೆಯಾಗಿದ್ದಾನೆ ಎಂದು ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
02:36 PM (IST) Sep 25
Hayley Black UK Woman ಎಂಬ ಮಹಿಳೆ, ಬೆಳಿಗ್ಗೆ ಆಕಳಿಸಿದಾಗ ತನ್ನ ಬೆನ್ನುಮೂಳೆ ಮುರಿದುಹೋಗಿದೆ.ಈ ಅಸಾಮಾನ್ಯ ಘಟನೆಯಿಂದಾಗಿ ಆಕೆಯ C6 ಮತ್ತು C7 ಕಶೇರುಖಂಡ ಸ್ಥಳಾಂತರಗೊಂಡು, ಪಾರ್ಶ್ವವಾಯು ಕಾರಣವಾಯಿತು. ಬಲವಾದ ಆಕಳಿಕೆ ಸಂಭಾವ್ಯ ಅಪಾಯ ದೇಹದ ಸಂಕೇತ ನಿರ್ಲಕ್ಷಿಸಬಾರದು ಎಂಬುದನ್ನು ಎತ್ತಿ ತೋರಿಸುತ್ತದೆ.
01:58 PM (IST) Sep 25
Bengaluru robbery case: ಡ್ರಾಪ್ ಕೊಡುವ ನೆಪದಲ್ಲಿ ಹೊಸಪೇಟೆಯ ಗುತ್ತಿಗೆದಾರರನ್ನು ಕಾರಿಗೆ ಹತ್ತಿಸಿಕೊಂಡು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ನಾಲ್ವರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಐಫೋನ್ ಮೇಲಿನ ಪ್ರೀತಿಯಿಂದ ಸಂತ್ರಸ್ತ ದೂರು ನೀಡಿದ ಬಳಿಕ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನ
01:43 PM (IST) Sep 25
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಹತ್ಯೆ ಮತ್ತು ಇತರ ದೌರ್ಜನ್ಯಗಳಿಗೆ ನ್ಯಾಯ ಕೋರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಗಳು ಮತ್ತು ಹೋರಾಟಗಾರರು 'ನ್ಯಾಯ ಸಮಾವೇಶ'ದಲ್ಲಿ ಪಾಲ್ಗೊಂಡು, ಪ್ರಕರಣಗಳ ಮರುತನಿಖೆಗೆ ಸರ್ಕಾರವನ್ನು ಒತ್ತಾಯಿಸಿದರು.
01:38 PM (IST) Sep 25
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಪಿಐಎಲ್ ವಜಾ ಆದೇಶ ಮುಚ್ಚಿಟ್ಟು ರಾಜ್ಯ ಸರ್ಕಾರದಿಂದ ಎಸ್‌ಐಟಿ ರಚನೆಗೆ ಮೋಸದಿಂದ ಒತ್ತಾಯ ಮಾಡಿದ್ದಾರೆ. ಇದರಲ್ಲಿ ಯಶಸ್ವಿ ಆಗಿದ್ದು, ಈ ವಿಚಾರ ಸುವರ್ಣ ನ್ಯೂಸ್ ಬಯಲಿಗೆಳದಿದೆ.
01:32 PM (IST) Sep 25
ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬಾಲ್ಯದ ಕಷ್ಟಗಳನ್ನು ಮೆಟ್ಟಿ ನಿಂತು ದೇಶವೇ ಮೆಚ್ಚುವ ಸಾಹಿತಿಯಾದರು. ತಮ್ಮ ಕೃತಿಗಳ ಮೂಲಕ ಅಪಾರ ಜನಮನ್ನಣೆ ಗಳಿಸಿ, ಪದ್ಮಭೂಷಣದಂತಹ ಗೌರವಕ್ಕೆ ಪಾತ್ರರಾದರು. ಕೊನೆಗಾಲದಲ್ಲಿ ತಮ್ಮ ಸಂಪಾದನೆಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ಹುಟ್ಟೂರಿನ ಅಭಿವೃದ್ಧಿಗೆ ಮೀಸಲಿಟ್ಟರು.
12:48 PM (IST) Sep 25
SL Bhyrappa: ಲೇಖಕಿ ಸಹನಾ ವಿಜಯಕುಮಾರ್ ಅವರು ಎಸ್.ಎಲ್. ಭೈರಪ್ಪನವರೊಂದಿಗಿನ ತಮ್ಮ ಒಡನಾಟ, ಅವರ ಕೊನೆಯ ದಿನಗಳ ಹಠ ಮತ್ತು ಟ್ರಸ್ಟ್ ಸ್ಥಾಪನೆಯ ಕನಸನ್ನು ನೆನಪಿಸಿಕೊಂಡಿದ್ದಾರೆ. ಭೈರಪ್ಪನವರು ತಮ್ಮ ಸಾಹಿತ್ಯಿಕ ಬದುಕಿಗೆ ನೀಡಿದ ಮಾರ್ಗದರ್ಶನ ತಮ್ಮ ಮೇಲಿರುವ ‘ಆಚಾರ್ಯ ಋಣ’ ಈ ಲೇಖನದಲ್ಲಿ ವಿವರಿಸಿದ್ದಾರೆ.
12:35 PM (IST) Sep 25
ಪ್ರತಿನಿತ್ಯ ಬಾಗಿಲು ತೆರೆದು ಮದ್ಯ ಮಾರಾಟ ಮಾಡದ ಸುಮಾರು 579 ಮದ್ಯದಂಗಡಿಗಳ (CL-2, CL-9, CL-11) ಪರವಾನಗಿಗಳನ್ನು ಹರಾಜು ಹಾಕಲು ರಾಜ್ಯ ಅಬಕಾರಿ ಇಲಾಖೆ ನಿರ್ಧರಿಸಿದೆ. ಪಾರದರ್ಶಕತೆಗಾಗಿ ಇ-ಹರಾಜು ನಡೆಸಲು ಚಿಂತನೆ ನಡೆಸಲಾಗಿದೆ.
12:16 PM (IST) Sep 25
Yadgir annabhagya rice smuggling case: ವಿದೇಶಕ್ಕೆ ಪಡಿತರ ಅಕ್ಕಿ ಸಾಗಣೆ ಹಗರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. ಎಸ್‌ಪಿ ಎಂ.ಡಿ.ಶರತ್ ನೇತೃತ್ವದ ತಂಡವು ಆಹಾರ ಇಲಾಖೆ ಯಾದಗಿರಿ ಪೊಲೀಸರಿಂದ ಮಾಹಿತಿ ಸಂಗ್ರಹ.. ಬಡವರ ಪಾಲಿನ ಅಕ್ಕಿ ಅಕ್ರಮವಾಗಿ ಸಾಗಾಟ. ತನಿಖೆಗಾಗಿ ಪ್ರಕರಣ ಸಿಐಡಿಗೆ ವಹಿಸಲಾಗಿದೆ.
12:04 PM (IST) Sep 25
ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ 'ಐ ಲವ್ ಮೊಹಮ್ಮದ್' ಫ್ಲೆಕ್ಸ್ ಅಳವಡಿಕೆ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಕಲ್ಲುತೂರಾಟ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಾದಿತ ಫ್ಲೆಕ್ಸ್ ತೆರವುಗೊಳಿಸಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
11:23 AM (IST) Sep 25
ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ನಿವೃತ್ತ ನ್ಯಾ. ಕೆ.ಎನ್. ಕೇಶವನಾರಾಯಣ ಆಯೋಗ ಸಲ್ಲಿಸಿರುವ ವರದಿ, ಶಿಫಾರಸು ತಿರಸ್ಕರಿಸಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ. ಈ ಹಿಂದೆ ಸಿಬಿಐ ಕ್ಲೀನ್‌ಚಿಟ್ ನೀಡಿತ್ತು. ಆಯೋಗ ಯಾವ ಶಿಫಾರಸು ಮಾಡಿತ್ತು ಎಂಬ ಕುತೂಹಲ.