ಬೆಂಗಳೂರು: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಭಾನುವಾರವೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರ ಚಾಮರಾಜನಗರ, ಮೈಸೂರು, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಮುನ್ಸೂಚನೆ ಇದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಹಾಗೂ ಉತ್ತರ ಒಳನಾಡಿನ ವಿಜಯಗರ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯ ಬ್ರಹ್ಮಾವರದಲ್ಲಿ ಗರಿಷ್ಠ 10 ಸೆಂ.ಮೀ. ಮಳೆಯಾಗಿದೆ. ಧರ್ಮಸ್ಥಳ, ಹಾಸನದ ಕೊಣನೂರಿನಲ್ಲಿ ತಲಾ 8 ಸೆಂ.ಮೀ, ಹುಬ್ಬಳ್ಳಿ, ಕುಶಾಲನಗರ, ಪೊನ್ನಂಪೇಟೆಯಲ್ಲಿ ತಲಾ 7 ಸೆಂ.ಮೀ. ಅರಕಲಗೂಡು, ಮಂಕಿ, ಕೊಲ್ಲೂರಿನಲ್ಲಿ ತಲಾ 6 ಸೆಂ.ಮೀ, ಕೋಟ, ಬೆಳ್ತಂಗಡಿ, ಎಚ್.ಡಿ ಕೋಟೆ, ಶ್ರೀರಾಮಪುರ, ಸರಗೂರಿನಲ್ಲಿ ತಲಾ 5 ಸೆಂ.ಮೀ., ಸೋಮವಾರಪೇಟೆ, ಕೃಷ್ಣರಾಜಪೇಟೆಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
08:17 AM (IST) Oct 25
07:58 AM (IST) Oct 25
ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅಂತಾರಾಷ್ಟ್ರೀಯ ಕಳ್ಳರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರ ಮನಪರಿವರ್ತನೆಗಾಗಿ ನ್ಯಾಯಾಲಯವು ವಿಶೇಷ ಚೇತನರ ಆಶ್ರಮಕ್ಕೆ 75 ಕೆ.ಜಿ. ಅಕ್ಕಿ ನೀಡುವಂತೆ ವಿಶಿಷ್ಟ ಶಿಕ್ಷೆ ವಿಧಿಸಿದೆ.
07:47 AM (IST) Oct 25
ಮಾತೃತ್ವ ರಜೆಯ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಗೈರು ಹಾಜರಾಗಿದ್ದ ಮಹಿಳಾ ನೌಕರರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮಾತೃತ್ವ ರಜೆಯನ್ನು ಅನಧಿಕೃತ ಗೈರುಹಾಜರಿಗೆ ಅಸ್ತ್ರವನ್ನಾಗಿ ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
07:33 AM (IST) Oct 25
ಪರಿಷ್ಕೃತ ನೂತನ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 50 ಲಕ್ಷ ರು. ವಿಮಾ ಮೊತ್ತವನ್ನು 1 ಕೋಟಿ ರು.ಗೆ ಹೆಚ್ಚಿಸಲಾಗಿದೆ. ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರು. ವಿಮಾ ಪರಿಹಾರ ಮೊತ್ತ ದೊರೆಯುವಂತೆ ಮಾಡಲಾಗುತ್ತದೆ.