ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಹಿರಿಯ ನಾಯಕ ದೇವೇಗೌಡರ ಮಾತಿಗೆ ನಾನು ಕೌಂಟರ್ ಕೊಡಲು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಪತನ ಆಗಲು ಮೂಲಕಾರಣ ಡಿ.ಕೆ.ಶಿವಕುಮಾರ್. ಅವರು ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರ ಕೆಡವಿದೆ. ನನ್ನ ಜೊತೆಗೆ ಮಿತ್ರ ಮಂಡಳಿ ಕೂಡ ಇತ್ತು. ಈಗ ಏನಾಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
11:58 PM (IST) Nov 25
ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ ನೀಡಿದ್ದಾರೆ. ಇದೇ ವೇಳೆ ಮೋದಿ ಸಂಚರಿಸು ಮಾರ್ಗಗಳಲ್ಲೂ ನಿರ್ಬಂಧ ಹೇರಲಾಗಿದೆ. ಜಿಲ್ಲಾಧಿಕಾರಿ ಆದೇಶದಲ್ಲಿ ಯಾವೆಲ್ಲಾ ನಿರ್ಬಂಧ ಹೇರಲಾಗಿದೆ?
11:18 PM (IST) Nov 25
ರಾಯಚೂರಿನಲ್ಲಿ ಶಾಲಾ ವಾಹನ ಟ್ರಕ್ ನಡುವೆ ಡಿಕ್ಕಿ, ಗಾಯಗೊಂಡ 8 ಮಕ್ಕಳ ಆಸ್ಪತ್ರೆ ದಾಖಲು ಮಾಡಲಾಗಿದೆ. ಓರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
10:47 PM (IST) Nov 25
ರೊಟ್ಟಿ ವ್ಯಾಪಾರ ಮಾಡಿ ಮಹಾಂತೇಶ್ ಬೀಳಗಿ ಸಾಕಿದ್ದ ತಾಯಿ, IAS ಅಧಿಕಾರಿ ಹುಟ್ಟೂರಿನಲ್ಲಿ ನೀರವ ಮೌನ, ಅಪಘಾತದಲ್ಲಿ ಮೃತಪಟ್ಟ ಮಹಾಂತೇಶ್ ಬೀಳಗಿ ಬದುಕೇ ಒಂದು ಸ್ಪೂರ್ತಿ, ಒಂದು ಹೊತ್ತಿನ ಊಟಕ್ಕೂ ಪರಡಾಡುತ್ತಿದ್ದ ಕುಟುಂಬದಿಂದ ಬಂದು ಉನ್ನತ ಸ್ಥಾನಕ್ಕೇರಿದ್ದರು.
09:19 PM (IST) Nov 25
ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ, ಜೇವರ್ಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮಹಾಂತೇಶ ಬೀಳಗಿ ಮೃತಪಟ್ಟಿದ್ದಾರೆ. ಇವರ ಜೊತೆ ಸೋದರ ಸಂಬಂಧಿಗಳು ಮೃತಪಟ್ಟಿದ್ದಾರೆ.
08:46 PM (IST) Nov 25
ನವೆಂಬರ್ 28ಕ್ಕೆ ಉಡುಪಿ ಜಿಲ್ಲೆಯ ಮೂರು ಠಾಣಾ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಅಂಗನವಾಡಿಯಿಂದ ಹಿಡಿದು ಪ್ರೌಢಶಾಲೆ ವರೆಗೆ ರಜೆ ನೀಡಲಾಗಿದೆ.
08:00 PM (IST) Nov 25
ಭೀಕರ ಅಪಘಾತದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಸಾವು, ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಂತಾಜನಕ ಸ್ಥಿತಿಯಲ್ಲಿ ಬೀಳಗಿ ಮೃತಪಟ್ಟಿದ್ದಾರೆ.
07:31 PM (IST) Nov 25
ಕೆಟ್ಟುನಿಂತ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಡ್ರಾಪ್, ರ‍್ಯಾಪಿಡೋ ಚಾಲಕನ ಹೊಗಳಿದ ಬೆಂಗಳೂರು ಮಹಿಳೆ , ಮಹಿಳೆ ಮನೆ ತಲುಪುವಷ್ಟರಲ್ಲಿ ರಾತ್ರಿ 1 ಗಂಟೆ. ಆದರೆ ಸುರಕ್ಷಿವಾಗಿ ಮನೆ ತಲುಪಿದ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ನಡೆದ ಘಟನೆ ಹೇಳಿದ್ದಾಳೆ.
06:27 PM (IST) Nov 25
ಅಯೋಧ್ಯೆ ರಾಮ ಮಂದಿರದ ಶಿಖರದಲ್ಲಿ ಧರ್ಮ ಧ್ವಜ ಹಾರಿಸುವಾಗ ಪ್ರಧಾನಿ ಮೋದಿಯವರ ಕೈಗಳು ನಡುಗಿದವು. ಇದನ್ನು ಹಿಂದೂ ಧರ್ಮದಲ್ಲಿ 'ಸಾತ್ವಿಕ ಭಾವ' ಎನ್ನಲಾಗಿದ್ದು, ಇದು ಅವರ ಪರಮ ಭಕ್ತಿ ಮತ್ತು ಭಾವನಾತ್ಮಕ ಉತ್ತುಂಗವನ್ನು ಪ್ರದರ್ಶಿಸಿತು.
06:22 PM (IST) Nov 25
ವಿದ್ಯಾರ್ಥಿನಿಗೆ I Love You ಮೆಸೇಜ್, 2 ವರ್ಷ ಬಳಿಕ ಉಪನ್ಯಾಸಕನ ವಿರುದ್ಧ ಕೊಟ್ಟ ದೂರಿನಿಂದ ಹೈಡ್ರಾಮ ಸೃಷ್ಟಿಯಾಗಿದೆ. 2 ವರ್ಷಗಳ ಹಿಂದೆ ಉಪನ್ಯಾಸ ಮಾಡಿದ್ದ ಮೆಸೇಜ್‌ಗ ಈಗ ದೂರು ನೀಡಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
06:11 PM (IST) Nov 25
ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಯಶ್, ಸುದೀಪ್, ದರ್ಶನ್, ಮತ್ತು ಉಪೇಂದ್ರರಂತಹ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
05:31 PM (IST) Nov 25
ಬಿಗ್ ಬಾಸ್ 12 ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಸಂಬಂಧದ ಬಗ್ಗೆ ಧನುಷ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಗಿಲ್ಲಿಗೆ ಕಂಟೆಂಟ್ ಹಾಗೂ ಮೈಲೇಜ್‌ಗಾಗಿ ಅಶ್ವಿನಿ ಬೇಕು ಎಂದು ಕಾವ್ಯಾ ಬಳಿ ಹೇಳಿದ್ದು, ಇದು ಗಿಲ್ಲಿ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
05:21 PM (IST) Nov 25
ಕನ್ನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರಾಕರಣೆ ಆದೇಶಕ್ಕೆ ತಡೆ, ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್, ಜಿಲ್ಲಾಧಿಕಾರಿ ವಿಧಿಸಿದ್ದ ನಿರ್ಬಂಧ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದೆ.
04:55 PM (IST) Nov 25
04:50 PM (IST) Nov 25
04:25 PM (IST) Nov 25
ಕೋಟಿ ಕೋಟಿ ಆಸ್ತಿಗಾಗಿ ಕಾನೂನಿನ ತೊಡಕಿನಲ್ಲಿ ಸಿಲುಕಿರುವ ಜೈದೇವ್, ಪ್ರಾಪರ್ಟಿ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕಿಕೊಂಡು ಮಾಲ್‌ಗೆ ಬರುತ್ತಾನೆ. ಅಲ್ಲಿ ಮಕ್ಕಳೊಂದಿಗೆ ಇರುವ ಮಲ್ಲಿ, ಅಡಗಿಕೊಳ್ಳುತ್ತಾಳೆ. ಆದರೆ ಜೈದೇವ್, ಮಕ್ಕಳ ಬಳಿಯೇ ಮಲ್ಲಿಯ ಫೋಟೋ ತೋರಿಸಿ ವಿಚಾರಿಸುತ್ತಾನೆ.
04:17 PM (IST) Nov 25
ಈ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತಡೇ ಆಚರಿಸಿಕೊಂಡಿದ್ದ ಗುಬ್ಬಚ್ಚಿ ಸೀನನನ್ನೂ ಬೆಳಗಾವಿಗೆ ಎತ್ತಂಗಡಿ ಮಾಡಲಾಗಿತ್ತು. ಈಗ ಅದೇ ಸೀನ್ ಅಂಡ್ ನಾಗ ಸೇರಿ ಪರಪ್ಪನ ಅಗ್ರಹಾರ ವಿಡಿಯೋ ವೈರಲ್ ಮಾಡಿದ್ದಾರೆ ಅನ್ನೋ ಆರೋಪ ಬಂದಿದೆ. ಇವರು ದರ್ಶನ್ಗಾಗಿ ಇದನ್ನ ಮಾಡಿದ್ರಾ? ತನಿಖೆ ನಡೀತಾ ಇದೆ.
02:57 PM (IST) Nov 25
01:57 PM (IST) Nov 25
ಪ್ರಸಿದ್ಧ ಫಾರ್ಮಾ ದಿಗ್ಗಜ ರಾಮ ರಾಜು ಮಂತೇನಾ ಅವರ ಪುತ್ರಿ ನೇತ್ರಾ ಮಂತೇನಾ ಅವರ ವಿವಾಹ ಸಮಾರಂಭದಲ್ಲಿ ರಾಮ್ ಚರಣ್ ವಿಶೇಷ ಆಕರ್ಷಣೆಯಾಗಿದ್ದರು. ಜೆನ್ನಿಫರ್ ಲೋಪೆಜ್ ತಮ್ಮ ಡ್ಯಾನ್ಸ್ ಪರ್ಫಾರ್ಮೆನ್ಸ್‌ನಿಂದ ಎಲ್ಲರನ್ನೂ ರಂಜಿಸಿದರು.
01:12 PM (IST) Nov 25
12:55 PM (IST) Nov 25
ಹೀರೋ ಸುಮನ್ ಬ್ಲೂ ಫಿಲ್ಮ್ ಕೇಸ್‌ನಲ್ಲಿ ತುಂಬಾ ಕಷ್ಟಪಟ್ಟಿದ್ದರು. ಜೈಲಿಗೆ ಹೋಗಿ.. ಹೊರಗೆ ಬಂದು.. ಮೂರು ವರ್ಷಗಳ ಕಾಲ ಕೇಸ್ ಎದುರಿಸಿದ್ದರು. ಈ ಕೇಸ್ ವಿಚಾರದಲ್ಲಿ ಇಡೀ ಚಿತ್ರರಂಗವೇ ಸುಮ್ಮನಿದ್ದಾಗ ಸುಮನ್ ಪರವಾಗಿ ಮಾತನಾಡಿದ ಆ ಇಬ್ಬರು ನಟಿಯರು ಯಾರು ಗೊತ್ತಾ?
12:23 PM (IST) Nov 25
ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ ಎಂದು ಪಂಚಾಯತ್ ರಾಜ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.
12:16 PM (IST) Nov 25
12:04 PM (IST) Nov 25
11:50 AM (IST) Nov 25
ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಬ್ಯಾಕ್‌ಲೆಸ್ ಡೀಪ್ ಕಟ್ ಗೌನ್ ಧರಿಸಿ ಬಂದಿದ್ದರು. ಅದನ್ನು ಕಿಡಿಗೇಡಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ವೀಡಿಯೋ ಮಾಡಿ ಹಂಚಿಕೊಂಡಿದ್ದ. ಇದು ವೈರಲ್ ಆಗಿತ್ತು.
11:50 AM (IST) Nov 25
11:32 AM (IST) Nov 25
ಉತ್ತರ ಕರ್ನಾಟಕದಲ್ಲಿ ಹಿರಿಯ ಶಾಸಕನಾಗಿದ್ದು, ನಾನೂ ಸಚಿವಾಕಾಂಕ್ಷಿಯಾಗಿದ್ದೇನೆ. ಸಂಪುಟ ವಿಸ್ತರಣೆ ಸಮಯದಲ್ಲಿ ನನಗೂ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಈಗಾಗಲೇ ಆಗ್ರಹಿಸಿರುವೆ ಎಂದು ಶಾಸಕ ರಾಜು ಕಾಗೆ ಹೇಳಿದರು.
11:20 AM (IST) Nov 25
ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸಗಳಿಂದ ಲಕ್ಷಾಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.
11:18 AM (IST) Nov 25
ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯುತ್ತಿಲ್ಲ. ದಿನೇ ದಿನೇ ರೈತ ಸಮೂದಾಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ರೈತರ ಸಂಕಷ್ಟಕ್ಕೂ ಕಿವಿಗೊಡದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದರು.
11:17 AM (IST) Nov 25
ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಮಾತಿನ ಸಮರ ಮುಂದುವರೆದಿದೆ. ತನ್ನನ್ನು 'ವಂಶದ ಕುಡಿ' ಎಂದು ಕರೆದಿದ್ದ ಗಿಲ್ಲಿ ನಟರನ್ನೇ ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದ್ದಕ್ಕೆ, ಅಶ್ವಿನಿ ಗೌಡ ಗಿಲ್ಲಿಗೆ ಅವರದೇ ರೀತಿಯಲ್ಲಿ ಮಾತನಾಡಿ ಚಮಕ್ ನೀಡಿದ್ದಾರೆ.
10:45 AM (IST) Nov 25
ಅಂಡರ್‌ವಲ್ಡ್‌ನಿಂದ ಯಾವುದೇ ಕರೆ ಬಂದರೂ ಸಿನಿಮಾ ಮಂದಿ ನಡುಗುತ್ತಿದ್ದ ಹೊತ್ತಿನಲ್ಲಿ ಧರ್ಮೇಂದ್ರ ಅದಕ್ಕೆಲ್ಲ ಕ್ಯಾರೇ ಅನ್ನುತ್ತಿರಲಿಲ್ಲ. ಒಂದು ಬಾರಿ ಧರ್ಮೇಂದ್ರ ಅವರಿಗೂ ಅಂಡರ್ ವಲ್ಡ್‌ನಿಂದ ಕರೆ ಬಂದಿತ್ತಂತೆ.
10:10 AM (IST) Nov 25
70 - 80ರ ದಶಕದಲ್ಲಿ ನಿರ್ಮಾಣಗೊಂಡ ‘ಶೋಲೆ’ ಸಿನಿಮಾದಲ್ಲಿ ನಟ ಧರ್ಮೇಂದ್ರ ‘ವೀರು’ ಪಾತ್ರದಲ್ಲಿ ಅಭಿನಯಿಸಿದ್ದರು. ವಿಶೇಷ ಎಂದರೆ ಈ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿತ್ತು.
09:42 AM (IST) Nov 25
ಬಿಗ್‌ಬಾಸ್ ಮನೆಯಲ್ಲಿ, ಗಾರ್ಡನ್ ಏರಿಯಾದಲ್ಲಿ ಗಿಲ್ಲಿ ನಟನ ಬಳಿ ಧ್ರುವಂತ್ ಅವರು ಜಾನ್ವಿ ಮತ್ತು ಅಶ್ವಿನಿ ಗೌಡರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಧ್ರುವಂತ, 'ದೊಡ್ಡವನು' ಮತ್ತು 'ಚಿಕ್ಕವನು' ಎಂಬ ಕೋಡ್ ವರ್ಡ್ ಬಳಸಿ ಗಿಲ್ಲಿ ಜೊತೆ ಚರ್ಚಿಸಿದ್ದಾರೆ.
09:39 AM (IST) Nov 25
ಚಿತ್ರರಂಗಕ್ಕೆ ಬರುವ ಮುನ್ನ ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗುವ ಜೊತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಿದವರು ಧರ್ಮೇಂದ್ರ. ಫಿಲಂಫೇರ್ ಆಯೋಜಿಸಿದ್ದ ಪ್ರತಿಭಾನ್ವೇಷಣೆಯ ಸ್ಪರ್ಧಿಯಾಗಿ ಪಂಜಾಬಿನಿಂದ ಬಂದು ಸ್ಪರ್ಧೆಯಲ್ಲಿ ಗೆದ್ದವರು.
09:32 AM (IST) Nov 25
ಬೇಸಿಗೆಯಲ್ಲಿನ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಲಭ್ಯವಿಲ್ಲ, ಹೀಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ‍್ಯಾರೂ ಸಸಿ ನಾಟಿ ಮಾಡಬೇಡಿ, ಅಪಪ್ರಚಾರಕ್ಕೆ ಕಿವಿಕೊಡಬೇಡಿ ಎಂದು ಸಚಿವ ಶಿವರಾಜ ತಂಗಡಗಿ ರೈತರಿಗೆ ಕಿವಿಮಾತು ಹೇಳಿದರು.
08:47 AM (IST) Nov 25
ಲಾವಾ ಶಾರ್ಕ್ 2 4ಜಿ ಸ್ಮಾರ್ಟ್‌ಫೋನ್ ಎಷ್ಟು ಸಾಮರ್ಥ್ಯ ಹೊಂದಿದೆ, ಯಾರು ಇದನ್ನು ಭರಿಸಬಹುದು ಎಂಬುದು ಗೊತ್ತಾಗುತ್ತದೆ. ಲಾವಾ ಉದ್ದೇಶವೂ ಅದೇ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕು ಅನ್ನುವುದು.
08:31 AM (IST) Nov 25
07:56 AM (IST) Nov 25
ಸಮಸ್ತ ಭಾರತೀಯರ ದಾರಿದೀಪ ಅಂಬೇಡ್ಕರ್ , ಬಡವ- ಶ್ರೀಮಂತ, ಜಾತಿ-ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕೊಟ್ಟ ಸಂವಿಧಾನಶಿಲ್ಪಿ
ಪ್ರತಿ ನಾಗರಿಕನ ಧ್ವನಿಯಾಗಿ, ರಾಷ್ಟ್ರನಾಯಕರಾಗಿ ಶಾಶ್ವತವಾಗಿ ಅಂಬೇಡ್ಕರ್ ನೆಲೆಸಿದ್ದಾರೆ.
07:28 AM (IST) Nov 25
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು, ತಾನು ಇಲ್ಲದ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಆಧರಿಸಿ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದ್ದಾರೆ. ತನಗೆ ಗೊತ್ತಿಲ್ಲದ ವಿಷಯವನ್ನು ಕಾರಣವನ್ನಾಗಿ ನೀಡಿದ್ದು ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದೆ.