ಕರ್ನಾಟಕ ವಿಧಾನಸಭೆ ಉಪ ಚುನಾವಣೆ ಸಮರ ಕಾವೇರಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದರ ನಡುವೆ ಹಣ, ಮದ್ಯ, ಆಮಿಷಗಳು ಜೋರಾಗುತ್ತಿದೆ. ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂಪಾಯಿ ಹಣ ಸೀಝ್ ಮಾಡಲಾಗಿದೆ. ಮಾರುತಿ ಎರ್ಟಿಗಾ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಹಣ ಪತ್ತೆಯಾಗಿದೆ. ಚುನಾವಣೆ ಕದನ ಸೇರಿದಂತೆ ರಾಜ್ಯದ ಇಂದಿನ ಕ್ಷಣ ಕ್ಷಣ ದ ಸುದ್ದಿ ಅಪ್‌ಡೇಟ್ ಇಲ್ಲಿದೆ.

11:15 PM (IST) Mar 22
Minister Shivaraj Tangadagi health: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕೊಪ್ಪಳದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
10:00 PM (IST) Mar 22
extramarital affair murder:ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿದ್ದ ತನ್ನ ಗಂಡನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ಅದನ್ನು ಕೊಲೆ ಎಂದು ಬಿಂಬಿಸಿದಂತಹ ಘಟನೆಯೊಂದು ತಮಿಳುನಾಡಿನ ಸೇಲಂ ಸಮೀಪದ ಕಲ್ಲಕುರಿಚಿ ಎಂಬಲ್ಲಿ ನಡೆದಿದೆ.
09:36 PM (IST) Mar 22
ಆ್ಯಂಕರ್ ಸುಮಾ ತೆಲುಗು ಚಿತ್ರರಂಗಕ್ಕೆ ಬರುವ ಮುನ್ನವೇ ರಾಜೀವ್ ಕನಕಾಲ ಕುಟುಂಬಕ್ಕೆ ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರಿತ್ತು. ರಾಜೀವ್ ಜೊತೆ ಮದುವೆಯಾದ ನಂತರ ಸುಮಾ ಅವರಿಗೂ ಉತ್ತಮ ಮನ್ನಣೆ ಸಿಕ್ಕಿತು.
07:06 PM (IST) Mar 22
ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ 'ನಾಗ 'ಹಾಡು 'ಜಿಡೆ ನಾಗೆ' ಬಿಡುಗಡೆಗೊಂಡಿದ್ದು ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ.
06:44 PM (IST) Mar 22
ಎಚ್.ವೈ. ಮೇಟಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಅವರು ನಡೆದು ಬಂದ ದಾರಿ, ಕಾರ್ಯಕರ್ತರಿಗೆ ಕೊಡುತ್ತಿದ್ದ ಗೌರವದಿಂದಾಗಿ ಕಾಂಗ್ರೆಸ್ ಗೆಲುವು ಖಚಿತ ಎಂದು ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.
06:15 PM (IST) Mar 22
ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ, ಭಾವಿ ಪತ್ನಿಯ ಮೇಲೆ ಅನುಮಾನಗೊಂಡ ಶಬೀಲ್ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯನ್ನು ಪಾಳುಬಿದ್ದ ಮನೆಗೆ ಕರೆಸಿ ಕತ್ತು ಸೀಳಿ ಹತ್ಯೆಗೈದು ರಾಜಸ್ಥಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅಜ್ಮೀರ್‌ನಲ್ಲಿ ಬಂಧಿಸಿದ್ದಾರೆ.
05:37 PM (IST) Mar 22
ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ದಿನವಹಿ ಏಳು ಗಂಟೆಗಳ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದನ್ನು ಬೇಸಿಗೆ ಅವಧಿಯಲ್ಲೂ ಮುಂದುವರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
05:21 PM (IST) Mar 22
ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
04:50 PM (IST) Mar 22
ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧಿಸುವುದಿಲ್ಲ, ಎಲ್ಲ ಧರ್ಮಗಳೂ ಪ್ರೀತಿ, ಮಾನವೀಯತೆ ಬೋಧಿಸುತ್ತವೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
04:48 PM (IST) Mar 22
ನಟ ಪ್ರೇಮ್ ಅವರ 'ಸೆರಗು ಸರ್ಸೆ' ಹಾಡಿನ ಡಬಲ್ ಮೀನಿಂಗ್ ಸಾಹಿತ್ಯದ ವಿವಾದದ ಕುರಿತು ಹಿರಿಯ ನಟಿ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ. ರವಿಚಂದ್ರನ್ ಅವರ ಹಳೆಯ ಹಾಡನ್ನು ಉಲ್ಲೇಖಿಸಿ, ಪ್ರೇಮ್ ಅವರ ಹಾಡಿನಲ್ಲಿ ಆದ ತಪ್ಪೇನೆಂದು ವಿವರಿಸಿದ್ದಾರೆ.
04:40 PM (IST) Mar 22
ಮಹಿಳೆಯರು ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ಹಲವರು ನಂಬುತ್ತಾರೆ. ಅವರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಸಂಬಂಧವನ್ನು ಉಳಿಸಿಕೊಳ್ಳಲು ಹೆಚ್ಚು ಶ್ರಮಿಸುತ್ತಾರೆ ಎಂದು ಹೇಳಲಾಗುತ್ತದೆ.
02:54 PM (IST) Mar 22
ಫ್ಯಾನ್ 10, ಕೋಲ್ಡ್ ವಾಟರ್ 12 ರೂ, ಚಾರ್ಜಿಂಗ್ ಫ್ರಿ, ಬೆಂಗಳೂರಿನ ಪ್ರಿಮಿಯಂ ಆಟೋ ವೈರಲ್, ಬೆಂಗಳೂರಲ್ಲಿ ಹಲವರು ಆಟೋ ಪ್ರಯಾಣ ನೆಚ್ಚಿಕೊಂಡಿದ್ದಾರೆ. ಹಲವು ಬಾರಿ ಅನಿವಾರ್ಯ. ಪ್ರಯಾಣದ ಜೊತೆ ಪ್ರಿಮಿಯಂ ಸೇವೆ ನೀಡೋ ಆಟೋ ಭಾರಿ ಸದ್ದು ಮಾಡುತ್ತಿದೆ.
02:32 PM (IST) Mar 22
ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕಾಂಗ್ರೆಸ್‌ಗಾಗಿ ದುಡಿದ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
01:56 PM (IST) Mar 22
01:33 PM (IST) Mar 22
ಮುಂದಿನ ವಾರ, ಮಾರ್ಚ್ 23 ರಿಂದ 29ರ ನಡುವೆ, ಹಬ್ಬಗಳು ಮತ್ತು ವಾರದ ರಜೆಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಕ್ಲೋಸ್. ಶ್ರೀ ರಾಮ ನವಮಿ, ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆಗಳು ಇದರಲ್ಲಿ ಸೇರಿವೆ. ಆದಾಗ್ಯೂ, ಎಟಿಎಂ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯ
12:44 PM (IST) Mar 22
ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆಯಾದ್ಯಂತ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರು ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದಿದ್ದಾರೆ.
12:25 PM (IST) Mar 22
ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್, ಟೂರ್ನಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ ಬಾಕಿ ಅಷ್ಟರಲ್ಲೇ ಆರ್‌ಸಿಬಿ ಫ್ರಾಂಚೈಸಿ ಮಾರಾಟದಲ್ಲಿ ಕೆಲ ಅಚ್ಚರಿ ಬೆಳವಣಿಗೆ ನಡೆದಿದೆ.
12:13 PM (IST) Mar 22
ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕೂಡ್ಲಿಗಿ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್. ಘಟನೆ ನಡೆದ ಒಂದು ವಾರದಲ್ಲಿಯೇ ಆರೋಪಿಗಳನ್ನು ಬಂಧಿಸಿ, ಅವರಿಂದ 29.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಖಾನಾಹೊಸಳ್ಳಿ ಪೊಲೀಸರು ಯಶಸ್ವಿ
12:11 PM (IST) Mar 22
German boy in Ayodhya Ram Mandir: ಭಾರತೀಯರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿರುವ ಹಿಂದೂಗಳು ಕೂಡ ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅದೇ ರೀತಿ ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆಂದು ಬಂದ ಪುಟ್ಟ ಬಾಲಕನೋರ್ವನ ವೀಡಿಯೋ ಸಖತ್ ವೈರಲ್ ಆಗಿದೆ.
11:59 AM (IST) Mar 22
ಉಪಚುನಾವಣೆಗೆ ಕುಟುಂಬದ ಕುಡಿಗಳಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್, ಮುಸ್ಲಿಂ ನಾಯಕರಿಗೆ ಹಿನ್ನಡೆ, ಬಾಗಲಕೋಟೆಯಲ್ಲಿ ಉಮೇಶಿ ಮೇಟಿಗೆ ಟಿಕೆಟ್ ನೀಡಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಮಲ್ಲಿಕಾರ್ಜುನಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
11:19 AM (IST) Mar 22
ಖಾಸಗಿ ಶಾಲೆಗಳ ಪಠ್ಯಪುಸ್ತಕಗಳ ದರವನ್ನು ಶೇ.50 ರಷ್ಟು ಹೆಚ್ಚಿಸಲು ಮುಂದಾಗಿದ್ದ ಶಿಕ್ಷಣ ಇಲಾಖೆಯು, ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮತ್ತು ರುಪ್ಸಾ ಸಂಘಟನೆಯ ವಿರೋಧದ ನಂತರ ತನ್ನ ನಿರ್ಧಾರ ಹಿಂಪಡೆದಿದೆ. ಈ ಮೂಲಕ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ಮೇಲಾಗುತ್ತಿದ್ದ ಆರ್ಥಿಕ ಹೊರೆ ತಪ್ಪಿಸಲಾಗಿದೆ.
10:22 AM (IST) Mar 22
ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡನ ಪುತ್ರ ಸಾವು ಕೇಸ್, ಅಪ್ರಾಪ್ತ ಮಗನಿಗೆ ಕಾರು ಕೊಟ್ಟು ಜೈಲು ಸೇರಿದ ಅಪ್ಪ, ರೀಲ್ಸ್ ಹುಚ್ಚಿನಲ್ಲಿ ನಡೆದ ದುರಂತ ಘಟನೆ ಸಂಬಧ ಇದೀಗ ಅಪ್ರಾಪ್ತ ಮಗ ಹಾಗೂ ಅಪ್ಪ ಇಬ್ಬರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
10:16 AM (IST) Mar 22
Kelageri Cross accident today:ಧಾರವಾಡದ ಕೆಲಗೇರಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ರಂಜಾನ್ ಹಬ್ಬದ ನಿಮಿತ್ತ ಭಾವಿ ಪತ್ನಿಯನ್ನು ಭೇಟಿಯಾಗಿ ಮರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
09:19 AM (IST) Mar 22
ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಮತ್ತೊಂದು ಕಾಮಕಾಂಡ, ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಕೇಸ್ ಬೆಳಕಿಗೆ ಬಂದಿದೆ. 2018 ರಿಂದ 2023ರ ವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಎಸಗಿದ್ದಾರೆ ಎಂದು ಸ್ವತಃ ಶಿಕ್ಷಕಿ ದೂರು ದಾಖಲಿಸಿದ್ದಾರೆ.
09:11 AM (IST) Mar 22
ivagiri Mutt Jackfruit Tree: ತಿರುವನಂತಪುರಂನ ಶಿವಗಿರಿ ಮಠದಲ್ಲಿರುವ 122 ವರ್ಷದ ಹಳೆಯ ಹಲಸಿನ ಮರಕ್ಕೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಶ್ರೀ ನಾರಾಯಣ ಗುರುಗಳ ಸ್ಪರ್ಶ ಪಡೆದ ಈ ಮರವು 50 ದಿನಗಳ ಚಿಕಿತ್ಸೆಯ ನಂತರ ಮತ್ತೆ ಆರೋಗ್ಯದಿಂದ ಕಂಗೊಳಿಸುತ್ತಿದೆ.
08:56 AM (IST) Mar 22
ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯು ವ್ಯವಸ್ಥೆಯನ್ನು ಸದೃಢಗೊಳಿಸಬೇಕೇ ಹೊರತು, ತೀರ್ಪು ನೀಡುವ ಪ್ರಕ್ರಿಯೆಯನ್ನು ಅತಿಕ್ರಮಿಸಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಎಚ್ಚರಿಸಿದರು.
08:47 AM (IST) Mar 22
ಮಾಗಡಿ ರಸ್ತೆ ಟೋಟಲ್ ಎನರ್ಜಿ ಗ್ಯಾಸ್ ಸ್ಟೇಷನ್ ಬಂದ್, ಕಂಗಾಲಾದ ಆಟೋ ಚಾಲಕರು, ಮಧ್ಯಪ್ರಾಚ್ಯ ಯುದ್ಧದಿಂದ ಗ್ಯಾಸ್ ಪೂರೈಕೆ ಕೊರತೆಯಿಂದ ಇದೀಗ ಆಟೋ ಚಾಲಕರು, ವಾಹನ ಸವಾರರು ಸಿಎನ್‌ಜಿ ಸಗದೇ ಕಂಗಾಲಾಗಿದ್ದಾರೆ.
08:11 AM (IST) Mar 22
ದೇಶದಲ್ಲಿ ಬೇಸಿಗೆ ನಿಧಾನಕ್ಕೆ ಕಾಲಿಟ್ಟಿರುವ ನಡುವೆ ಹಲವು ರಾಜ್ಯಗಳಲ್ಲಿ ಮಾ.24ರ ತನಕ ಗುಡುಗು, ಆಲಿಕಲ್ಲು ಸಹಿತ ಮಹಿಳೆ ಸಂಭವಿಸಬಹುದು. ಜತೆಗೆ ಪ್ರಬಲ ಬಿರುಗಾಳಿಯೂ ಬೀಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
07:59 AM (IST) Mar 22
ಬಾಗಲಕೋಟೆಯ ಮುಧೋಳ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸುಮಾರು ₹30 ಕೋಟಿಗೂ ಅಧಿಕ ವಂಚನೆ ನಡೆದಿದೆ. ಏಜೆಂಟರು, ವಿಮಾ ಕಂಪನಿ ಹಾಗೂ ಇಲಾಖೆ ನೌಕರರು ಸೇರಿ ಖೊಟ್ಟಿ ದಾಖಲೆ ಸೃಷ್ಟಿಸಿ ಈ ಹಣ ಪಡೆದಿದ್ದು, ವಿಶೇಷ ತನಿಖಾ ತಂಡ ನಾಲ್ವರನ್ನು ಬಂಧಿಸಿದೆ.
07:39 AM (IST) Mar 22
ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು, ಮೊದಲ ಹಾಗೂ ಎರಡನೇ ಬಾರಿ ಗೆದ್ದ ಸುಮಾರು 55 ಶಾಸಕರಿಗೆ ಮುಂಬರುವ ಸಂಪುಟ ಪುನಾರಚನೆಯಲ್ಲಿ ಮಂತ್ರಿಗಿರಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ತಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.
07:39 AM (IST) Mar 22
ಬೆಂಗಳೂರು ಬಳಿ ಭೀಕರ ಅಪಘಾತ, ನಿಂತಿದ್ದ ಕ್ಯಾಂಟರ್‌ಗೆ ಟಾಟಾ ಎಸ್ ಡಿಕ್ಕಿಯಾಗಿ ಮೂವರು ಸಾವು, ಬೆಂಗಳೂರಿನ ಹೊರವಲಯದ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಪಂಚರ್ ಆಗಿ ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
07:21 AM (IST) Mar 22
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರಣ ಯುಗಾದಿ ಹಬ್ಬಕ್ಕೆ ಮನೆಗೆ ಹೋಗಲಾಗದ ವಸತಿ ಶಾಲೆಯ ವಿದ್ಯಾರ್ಥಿಗಳ ಬೇಸರವನ್ನು ಶಿಕ್ಷಕರು ದೂರಾಗಿಸಿದ್ದಾರೆ. ಕಡೂರಿನ ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕರು ತಾವೇ ಅಭ್ಯಂಜನ ಸ್ನಾನ ಮಾಡಿಸಿ, ಹಬ್ಬದೂಟ ಬಡಿಸಿ ಮನೆಯ ವಾತಾವರಣ ನಿರ್ಮಿಸಿ ಮಾದರಿಯಾಗಿದ್ದಾರೆ.
06:56 AM (IST) Mar 22
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದೆ. ಪ್ರತಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಬಾಗಲಕೋಟೆಯಲ್ಲಿ KA36 P 3991 ನಂಬರ್ ಪ್ಲೇಟ್ ಹೊಂದಿರುವ ಎರ್ಟಿಗಾ ಕಾರಿನಲ್ಲಿ ಸಾಗಿಸುತ್ತಿದ್ದ 32.50 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ.