ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ನಗರದ ಹಲವು ಭಾಗಗಳು ಜಲಾವೃತಗೊಂಡಿವೆ. ಕೆಂಗೇರಿಯಲ್ಲಿ 13 ಮೀಟರ್ ಗೂ ಅಧಿಕ ಪ್ರಮಾಣದ ಮಳೆ ದಾಖಲಾಗಿದೆ. ಬೆಂಗಳೂರಿನ 20 ವಾರ್ಡ್ ಗಳಲ್ಲಿ 70ಮಿ.ಮೀಟರ್ ಗೂ ಅಧಿಕ ಮಳೆಯಾಗಿದೆ. ವಿಜಯನಗರದ ಮಾರುತಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಚೇರ್ ,ತರಕಾರಿ, ವಸ್ತುಗಳುಗಳು ತೇಲಾಡಿವೆ. ಮತ್ತೊಂದೆಡೆ ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಆರಂಭವಾಗಿದ್ದರಿಂದ ರೈತರು ಮುಂಗಾರು ಬಿತ್ತನೆಗೆ ತಮ್ಮ ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿತು. ಮೇ 19 ಹಾಗೂ 20ರಂದು ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಿದೆ. ಇನ್ನು ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ, ಮೇ 19ರಂದು ಉತ್ತರ ಕನ್ನಡ, ಮೇ 20ಕ್ಕೆ ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ತುಮಕೂರು, ಮೇ 21ಕ್ಕೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

11:06 PM (IST) May 19
ಮೇ.21ರಂದು ಕರ್ನಾಟಕದಲ್ಲಿ ಮದ್ಯ ಲಭ್ಯವಿಲ್ಲ. ಸರ್ಕಾರದ ವಿರುದ್ದ ಪ್ರತಿಭಟನೆ ಜೋರಾಗುತ್ತಿದೆ. ಈ ಪ್ರತಿಭಟನೆ ಹಾಗೂ ಬಂದ್ ಮುಂದುವರಿದರೂ ಆಶ್ಚರ್ಯವಿಲ್ಲ
ಪೂರ್ತಿ ಓದಿ10:18 PM (IST) May 19
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಇದೀಗ ಬೆಂಗಳೂರು ಮಲೆಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ನಲ್ಲಿ ತುಂಬಿಕೊಂಡ ನೀರಿಗೆ 9 ವರ್ಷದ ಬಾಲಕ ಸೇರಿ ಇಬ್ಬರು ಬಲಿಯಾದ ಘಟನೆ ನಡೆದಿದೆ.
ಪೂರ್ತಿ ಓದಿ09:36 PM (IST) May 19
ಭಾರತದ ವಿರುದ್ಧ ಪಿತೂರಿ ನಡೆಸುತ್ತಲೇ ಇರುವ ಪಾಕಿಸ್ತಾನ ತನ್ನ ಗೂಢಚರ್ಯೆಗೆ ಎಷ್ಟು ಹಣ ಮೀಸಲು ಇಟ್ಟಿದೆ? ಅಬ್ಬಾ ಎನ್ನುವ ಅಂಕಿ ಅಂಶ ರಿವೀಲ್
08:14 PM (IST) May 19
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಚೊಟ್ಟೆ ನೌಷದ್ ಮೇಲೆ ಮಂಗಳೂರು ಜೈಲಿನಲ್ಲೇ ದಾಳಿ ಯತ್ನ ನಡೆದಿದೆ. ಮೈಸೂರು ಜೈಲಿಗೆ ಸ್ಥಳಾಂತರ ಮಾಡುವ ಮುನ್ನ ಈ ಘಟನೆ ನಡೆದಿದೆ.
ಪೂರ್ತಿ ಓದಿ07:49 PM (IST) May 19
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಚಾಂಪಿಯನ್ ಆಗಬೇಕೆಂಬುದು ಸಮಸ್ತ ಕನ್ನಡಿಗರ ಸಾಮಾನ್ಯ ಅಭಿಪ್ರಾಯವಾಗಿದೆ. ಆದರೆ ಅಸಲಿಗೆ ಯಾವ ತಂಡ ಟ್ರೋಫಿ ಕೈವಶ ಮಾಡಲಿದೆ?
ಪೂರ್ತಿ ಓದಿ07:33 PM (IST) May 19
ಪಾಕಿಸ್ತಾನ ಐಎಸ್ಐಗೆ ಭಾರತದ ಮಾಹಿತಿ ನೀಡುತ್ತಾ, ಗೂಢಚರ್ಯೆ ಮಾಡುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರ ಉಂಡ ಮನೆಗೆ ದ್ರೋಹ ಬಗೆ ರೀತಿ ಈಗಾಗಲೇ ಬಯಲಾಗಿದೆ. ಆದರೆ ಈಕೆಯ ಮತ್ತೊಂದು ಕರಾಳ ಮುಖ ಇದೀಗ ಅನಾವರಣಗೊಂಡಿದೆ. ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನದ ಹೈಕಮಿಷನ್ ಕಚೇರಿಗೆ ಕೇಕ್ ಹಂಚಿದ ವ್ಯಕ್ತಿ ಜೊತೆಗೂ ಈ ಜ್ಯೋತಿ ಮಲ್ಹೋತ್ರ ಕಾಣಿಸಿಕೊಂಡಿರುವುದು ಬಯಲಾಗಿದೆ.
ಪೂರ್ತಿ ಓದಿ05:55 PM (IST) May 19
ಪ್ರಪಂಚದಲ್ಲಿ ಯಾವ ಯಾವ ದೇಶಗಳು ಅಣ್ವಸ್ತ್ರಗಳನ್ನು ಹೊಂದಿವೆ? ಯಾವ ದೇಶಗಳಲ್ಲಿ ಹೆಚ್ಚು ಅಣ್ವಸ್ತ್ರಗಳಿವೆ? ಇದರ ಬಗ್ಗೆ ತಿಳಿದುಕೊಳ್ಳೋಣ.
ಪೂರ್ತಿ ಓದಿ05:43 PM (IST) May 19
ಪರ್ಫೆಕ್ಟ್ ಡೇಟ್ ನೈಟ್‌ಗಾಗಿ, ಈ ಆರು ಕೊರಿಯನ್ ಚಿತ್ರಗಳು ಪ್ರಣಯ, ನಾಸ್ಟಾಲ್ಜಿಯಾ ಮತ್ತು ಹೃತ್ಪೂರ್ವಕ ಕಥೆ ಹೇಳುವಿಕೆಯ ಮಿಶ್ರಣವನ್ನು ನೀಡುತ್ತವೆ, ನಿಮ್ಮ ಸಂಗಾತಿಯೊಂದಿಗೆ ಮರೆಯಲಾಗದ ಸಂಜೆಯನ್ನು ಖಚಿತಪಡಿಸುತ್ತವೆ.
ಪೂರ್ತಿ ಓದಿ05:36 PM (IST) May 19
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧದ ಬಹು-ಪಕ್ಷ ರಾಜತಾಂತ್ರಿಕ ಕಾರ್ಯಾಚರಣೆಯನ್ನು ತೃಣಮೂಲ ಕಾಂಗ್ರೆಸ್ ಬಹಿಷ್ಕರಿಸಿಲ್ಲ, ಆದರೆ ಯಾವುದೇ ರೀತಿಯ ಏಕಪಕ್ಷೀಯ ನಿರ್ಧಾರಗಳನ್ನು ಸ್ವೀಕರಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಪೂರ್ತಿ ಓದಿ05:07 PM (IST) May 19
ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ವೈರಸ್ ಸ್ಫೋಟಗೊಂಡಿದೆ. ಈ ಬಾರಿ ಕೊರೋನಾ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ಹಾಂಕಾಂಗ್, ಚೀನಾ, ಥಾಯ್ಲೆಂಡ್, ಸಿಂಗಾಪುರದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ತಳಿ ಜೆಎನ್.1 ವೈರಸ್. ಇದ್ಯಾವುದು ಹೊಸ ತಳಿ? ಇದು ಎಷ್ಟು ಅಪಾಯಕಾರಿ?
ಪೂರ್ತಿ ಓದಿ04:59 PM (IST) May 19
ಚುನಾವಣೆಗೂ ಮುನ್ನ ಉಚಿತ ಭರವಸೆ ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಈಗ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ವಿಚಾರದಲ್ಲಿ ಉಲ್ಟಾ ಹೊಡೆಯುವ ಸೂಚನೆ ನೀಡಿದೆ. ಡಿಕೆ ಶಿವಕುಮಾರ್ ಅವರು ಹಣ ಬಿಡುಗಡೆ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಪೂರ್ತಿ ಓದಿ04:40 PM (IST) May 19
DumbPhones 2025: ವಿವಿಧ ವಿಶಿಷ್ಟ ಫೀಚರ್ಸ್‌ಗಳು ಇರುವ ಸ್ಮಾರ್ಟ್ ಫೋನ್‌ಗಳಿದ್ದಾಗ ಡಂಬ್ ಫೋನ್ಸ್ ಡಿಮ್ಯಾಂಡ್ ಜಾಸ್ತಿ ಆಗ್ತಿದೆ. ಇದಕ್ಕೆ ಕಾರಣ ಏನು?
ಪೂರ್ತಿ ಓದಿ03:59 PM (IST) May 19
ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಮತ್ತು ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದಾನೆ. ಚಾಲನೆ ವೇಳೆ ಹೆಂಡತಿ ಬೈಕ್‌ನಿಂದ ಬಿದ್ದರೂ ಗಮನಿಸದೆ ಮುಂದೆ ಸಾಗಿದ ಘಟನೆ ವೈರಲ್ ಆಗಿದೆ.
ಪೂರ್ತಿ ಓದಿ03:27 PM (IST) May 19
ಬನಾರಸ್‌ನಿಂದ ಬೆಂಗಳೂರಿಗೆ ಹೋಗಬೇಕಾ? ಕೆಲವು ಏರ್‌ಲೈನ್ಸ್‌ಗಳು ಭರ್ಜರಿ ಆಫರ್‌ಗಳನ್ನು ಕೊಡುತ್ತಿವೆ. ಈ ಹಿಂದೆ ಯಾವಾಗಲೂ ನಿರೀಕ್ಷೆ ಮಾಡದಷ್ಟು ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್‌ಗಳು ಸಿಗುತ್ತಿವೆ. ರೈಲಿನ ಎಸಿ ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆಯಲ್ಲಿ ವಿಮಾನದಲ್ಲಿಯೇ ಇದೀಗ ಬೆಂಗಳೂರಿಗೆ ಪ್ರಯಾಣ ಮಾಡಬಹುದು.
ಪೂರ್ತಿ ಓದಿ03:05 PM (IST) May 19
ವಿದೇಶಗಳಲ್ಲಿ ಓದಿದ ತಕ್ಷಣ ಉದ್ಯೋಗ ಸಿಗುವುದಿಲ್ಲ ಎಂದು ಹರಿಯಾಣದ ಉದ್ಯಮಿಯೊಬ್ಬರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ, ಕೆನಡಾ, ಯುಕೆಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ02:32 PM (IST) May 19
ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಜಲಾವೃತ, 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಇದು ಪ್ರಕೃತಿ ವಿಕೋಪ ಎಂದಿದ್ದಾರೆ. ಕೆರೆಗಳನ್ನು ಮುಚ್ಚಿರುವುದೂ ಪ್ರವಾಹಕ್ಕೆ ಕಾರಣ ಎಂದು ಹೇಳಿದ್ದಾರೆ.
ಪೂರ್ತಿ ಓದಿ01:46 PM (IST) May 19
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸಪೇಟೆಯಲ್ಲಿ ಬೈಕ್ ರ್ಯಾಲಿ ನಡೆಸಿದರು. ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಜನರು ಪರದಾಡುತ್ತಿದ್ದಾರೆ. ಸಾಧನಾ ಸಮಾವೇಶಕ್ಕೆ 2.5 ಲಕ್ಷ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ.
ಪೂರ್ತಿ ಓದಿ01:34 PM (IST) May 19
ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ತಲುಪಿರುವ ಆರ್‌ಸಿಬಿ ತಂಡವು ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ದಕ್ಷಿಣ ಆಫ್ರಿಕಾದ ಲುಂಗಿ ಎಂಗಿಡಿ ಅವರ ಬದಲಿ ಆಟಗಾರನಾಗಿ ಮುಜರಬಾನಿ ಆರ್‌ಸಿಬಿಗೆ ಸೇರ್ಪಡೆಯಾಗಿದ್ದಾರೆ.
ಪೂರ್ತಿ ಓದಿ01:26 PM (IST) May 19
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಭಯೋತ್ಪಾದಕರು ಪಾಕಿಸ್ತಾನಿ ಸೇನೆಯ ತರಬೇತಿ ಪಡೆದ ಕಮಾಂಡೋಗಳು ಮತ್ತು ಲಷ್ಕರ್-ಎ-ತೊಯ್ಬಾ (LeT) ಜೊತೆ ಸಂಬಂಧ ಹೊಂದಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ಬಹಿರಂಗಪಡಿಸಿದ್ದಾರೆ. ದಾಳಿಯ ಪ್ರಮುಖ ಅಪರಾಧಿಗಳಲ್ಲಿ ಒಬ್ಬರಾದ ಹಾಶಿಂ ಮೂಸಾ ಪಾಕಿಸ್ತಾನ ಸೇನೆಯ ಮಾಜಿ ಪ್ಯಾರಾ ಕಮಾಂಡೋ ಎಂದು ತನಿಖೆ ಬಹಿರಂಗಪಡಿಸಿದೆ.
ಪೂರ್ತಿ ಓದಿ01:24 PM (IST) May 19
60 ವರ್ಷಗಳ ಹಿಂದೆ ಸಿರಿಯಾದಲ್ಲಿ ಗಲ್ಲಿಗೇರಿಸಲಾದ ಇಸ್ರೇಲ್‌ನ ಖ್ಯಾತ ಗೂಢಚಾರ ಎಲಿ ಕೊಹೆನ್ ಅವರ ಅಮೂಲ್ಯ ದಾಖಲೆಗಳನ್ನು ಇಸ್ರೇಲ್ ವಾಪಸ್ ಪಡೆದುಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದೆ.
ಪೂರ್ತಿ ಓದಿ01:09 PM (IST) May 19
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನೀರಿನಲ್ಲಿ ಸರ್ಫಿಂಗ್ ಆಡುತ್ತಿರುವಂತೆ ಬಿಜೆಪಿ ಸೃಷ್ಟಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಪೂರ್ತಿ ಓದಿ01:02 PM (IST) May 19
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿದ್ದಾರೆ. ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಜಿಂದಾಲ್ ಗಣಿ ಭೂಮಿ ಮಾರಾಟದಲ್ಲಿ ಕಿಕ್ ಬ್ಯಾಕ್ ಆರೋಪಗಳನ್ನು ಮಾಡಿದ್ದಾರೆ.
ಪೂರ್ತಿ ಓದಿ12:23 PM (IST) May 19
ಗೋಲ್ಡನ್ ಟೆಂಪಲ್ ಮೇಲೆ ಪಾಕಿಸ್ತಾನದ ದಾಳಿಯನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆ ತಡೆದಿದ್ದು ಹೇಗೆ ಎಂಬ ಡೆಮೋ ವೀಡಿಯೋ ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ.
ಪೂರ್ತಿ ಓದಿ12:23 PM (IST) May 19
Railway Station: ಬೆಂಗಳೂರಿನ ಕೂಗಳತೆ ದೂರದಲ್ಲಿರುವ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು, ಟೆಕೆಟ್ ಕೌಂಟರ್ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಸೆಲ್ಫಿ ಯಾಕೆ ತೆಗೆದುಕೊಳ್ಳಲಾಗುತ್ತೆ ಎಂಬುದನ್ನು ಇಲ್ಲಿಯ ಪ್ರಯಾಣಿಕರು ಹೇಳುತ್ತಾರೆ.
ಪೂರ್ತಿ ಓದಿ12:19 PM (IST) May 19
ಪಾಕ್ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯೂಟ್ಯೂಬರ್ ಜ್ಯೋತಿ, ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲಕ್ಕೂ ಭೇಟಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಹನಿಟ್ರ್ಯಾಪ್‌ಗೆ ಒಳಗಾದ ಜ್ಯೋತಿ, ಪಾಕ್‌ಗೆ ಭಾರತದ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಪೂರ್ತಿ ಓದಿ12:13 PM (IST) May 19
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ವೃಷಭಾವತಿ ನದಿ ತುಂಬಿ ಹರಿಯುತ್ತಿದ್ದು, ನದಿಯಲ್ಲಿ ಹರಿದುಬರುತ್ತಿರುವ ಕೊಳಚೆ ನೀರು ಮತ್ತು ಕಸದಿಂದ ಬಿಡದಿ ಹೋಬಳಿಯ ಚಿಕ್ಕಕುಂಟನಹಳ್ಳಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ನದಿ ಸ್ವಚ್ಛತೆಗೆ ಒತ್ತಾಯಿಸಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಪೂರ್ತಿ ಓದಿ11:47 AM (IST) May 19
ಕಾಂಗ್ರೆಸ್ ಸರ್ಕಾರವು ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಯಲ್ಲೂ ಮುನ್ನಡೆ ಸಾಧಿಸಿದೆ. ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸುವುದರ ಜೊತೆಗೆ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವಲ್ಲಿಯೂ ಗಮನ ಹರಿಸಿದೆ.
ಪೂರ್ತಿ ಓದಿ11:42 AM (IST) May 19
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಏಳು ದಿನಗಳಲ್ಲಿ ಈಶಾನ್ಯ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ವ್ಯಾಪಕವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ 14 ರಾಜ್ಯಗಳಿಗೆ ಭಾರೀ ಮಳೆ ಹಾಗೂ ಗುಡುಗು-ಮಿಂಚಿನ ಎಚ್ಚರಿಕೆ ನೀಡಿದೆ.
ಪೂರ್ತಿ ಓದಿ11:39 AM (IST) May 19
ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಶೆಹಜಾದ್ ವಹಾಬ್ ಎಂಬ ಖದೀಮನನ್ನು ಬಂಧಿಸಲಾಗಿದೆ.
ಪೂರ್ತಿ ಓದಿ11:27 AM (IST) May 19
ಬಡವರ ನೋವು ಮತ್ತು ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದ್ದಾರೆ. ಮೇ 20 ರಂದು ಹೊಸಪೇಟೆಯಲ್ಲಿ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಈ ವಿಚಾರವನ್ನು ಅವರು ತಿಳಿಸಿದರು.
ಪೂರ್ತಿ ಓದಿ11:02 AM (IST) May 19
ಬೆಂಗಳೂರಿನ ಅಗರ ಕೆರೆಯಲ್ಲಿ 25 ವರ್ಷದ ಟೆಕ್ಕಿಯ ಶವ ಪತ್ತೆಯಾಗಿದ್ದು, ಕೆಲಸದ ಒತ್ತಡದಿಂದಾಗಿ ಸಾವಿಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಪೂರ್ತಿ ಓದಿ11:01 AM (IST) May 19
ಭಾರತ ಹವಾಮಾನ ಇಲಾಖೆ (IMD) ಮೇ 22 ರವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ 23 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಿದೆ. ಮಧ್ಯಮದಿಂದ ಭಾರಿ ಮಳೆ, ಗಾಳಿ ಸಹಿತ ಗರ್ಜನೆ-ಮಿಂಚುಗಳು, ಮತ್ತು ಗಂಟೆಗೆ 50–60 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಮುಂಗಾರು ಮಳೆ ನಿರೀಕ್ಷಿತ ಸಮಯಕ್ಕಿಂತ ಮುಂಚೆಯೇ ಕರ್ನಾಟಕ ಪ್ರವೇಶಿಸಬಹುದು.
ಪೂರ್ತಿ ಓದಿ10:42 AM (IST) May 19
ಮುಂಡಗೋಡ ತಾಲೂಕಿನ ಬಹುತೇಕ ಜಲಾಶಯಗಳು ಸಮರ್ಪಕ ನಿರ್ವಹಣೆ ಇಲ್ಲದೆ ದುರ್ಬಲವಾಗಿವೆ. ಹೂಳೆತ್ತುವಿಕೆ ಮತ್ತು ದುರಸ್ತಿ ಕಾರ್ಯಗಳಿಲ್ಲದೆ ಜಲಾಶಯಗಳು ಅಧೋಗತಿಗೆ ತಲುಪಿವೆ, ರೈತರಲ್ಲಿ ಆತಂಕ ಮನೆಮಾಡಿದೆ.
ಪೂರ್ತಿ ಓದಿ10:33 AM (IST) May 19
ಸ್ನೇಹಿತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಗಂಡ ಮತ್ತು ಸ್ನೇಹಿತ ಸೇರಿ ಕೊಲೆ ಮಾಡಿದ್ದಾರೆ. 20 ಲಕ್ಷ ರೂಪಾಯಿ ವಾಪಸ್ ಕೇಳಿದ್ದಕ್ಕೆ ಮತ್ತು ಖಾಸಗಿ ವಿಡಿಯೋ ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ.
ಪೂರ್ತಿ ಓದಿ10:23 AM (IST) May 19
ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವ ನಂದಿನಿ ನದಿಯ ಮಾಲಿನ್ಯಕ್ಕೆ ಕಾರಣರಾದವರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದೆ. ನದಿಯ ಮಾಲಿನ್ಯದಿಂದಾಗಿ ಸಾಂಪ್ರದಾಯಿಕ ಮೀನು ಹಿಡಿಯುವ ಜಾತ್ರೆಗೆ ಅಡ್ಡಿಯಾಗಿದೆ ಎಂದು ದೈವದಲ್ಲಿ ನಿವೇದಿಸಲಾಗಿತ್ತು.
ಪೂರ್ತಿ ಓದಿ10:22 AM (IST) May 19
ಪಾಕಿಸ್ತಾನದಲ್ಲಿ 2006 ರ ಆರ್‌ಎಸ್‌ಎಸ್ ಪ್ರಧಾನ ಕಚೇರಿ ದಾಳಿಯ ರೂವಾರಿ ಲಷ್ಕರ್-ಎ-ತೈಬಾ ಭಯೋತ್ಪಾದಕ ರಜಾವುಲ್ಲಾ ನಿಜಾಮಾನಿಯನ್ನು ಅಪರಿಚಿತ ಬಂದೂಕುಧಾರಿಗಳು ಕೊಂದಿದ್ದಾರೆ. ನಿಜಾಮಾನಿಗೆ ಪಾಕಿಸ್ತಾನ ಸರ್ಕಾರದಿಂದ ಭದ್ರತೆ ಒದಗಿಸಲಾಗಿತ್ತು. ಇವರು ಬೆಂಗಳೂರಿನ ಐಐಎಸ್‌ಸಿ ಮತ್ತು ರಾಂಪುರದ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿಯಲ್ಲೂ ಭಾಗಿಯಾಗಿದ್ದರು.
ಪೂರ್ತಿ ಓದಿ10:11 AM (IST) May 19
ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದಾಗ, ಮಹಿಳೆಯೊಬ್ಬರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸಾಯಿ ಲೇಔಟ್‌ನಲ್ಲಿ ನೀರು ನಿಂತು ಮನೆಗಳಿಗೆ ನುಗ್ಗಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪೂರ್ತಿ ಓದಿ09:57 AM (IST) May 19
ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಕಡಲೆಕಾಯಿ ಬೆಳೆ ಕೊಚ್ಚಿಹೋದ ರೈತನಿಗೆ ಕೇಂದ್ರ ಸಚಿವರು ನೆರವಿನ ಹಸ್ತ ಚಾಚಿದ್ದಾರೆ. ವೈರಲ್ ಆದ ವೀಡಿಯೊವನ್ನು ಗಮನಿಸಿದ ಕೇಂದ್ರ ಕೃಷಿ ಸಚಿವರು ರೈತನಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಪೂರ್ತಿ ಓದಿ09:40 AM (IST) May 19
ಚೀನಾದ 2024ರ ಶೆನ್‌ಜೆನ್ ಸುಂದರಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ 8 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯದಲ್ಲಿ ಐವಿ ಲೀಗ್ ಅರ್ಹತೆಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ನಕಲಿ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ಯುವತಿಗೆ ಮುಳುವಾಯಿತು.
ಪೂರ್ತಿ ಓದಿ08:11 AM (IST) May 19
ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಯಲ್ಲಿ 40 ಕಿಮೀ ಎತ್ತರಿಸಿದ ಡಬಲ್‌ಡೆಕ್ಕರ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಒಪ್ಪಿಗೆ ನೀಡಿದೆ. ₹8,916 ಕೋಟಿ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಪೂರ್ತಿ ಓದಿ