ಬೆಂಗಳೂರಿನಲ್ಲಿ ಮತ್ತೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದೇ ವಾರದಲ್ಲಿ ಇದೀಗ 2ನೇ ಪ್ರಕರಣ ದಾಖಲಾಗಿದೆ. ಹೆಚ್ಆರ್‌ಬಿಆರ್ ಲೇಔಟ್‌ನಲ್ಲಿ ವೃದ್ಧನ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದೆ. ಮಾಲೀಕನ ಎದುರೇ ವೃದ್ಧನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ನಾಯಿ ದಾಳಿಗೆ ವೃದ್ಧನ ಕಾಲಿಗೆ ಗಂಭೀರ ಗಾಯವಾಗಿದೆ. ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹಲವು ಬಾರಿ ಈ ರೀತಿ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರದ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದೆ. ಯಾವಾಗ ಮತ್ತೊಮ್ಮೆ ಸಭೆ ಮಾಡಬೇಕು ಎಂಬ ಬಗ್ಗೆ ಸಚಿವ ಸಂಪುಟ ಚರ್ಚೆ ನಡೆಸಿದೆ. ಕರ್ನಾಟಕದ ಇಂದಿನ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

10:56 PM (IST) Apr 17
IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್‌ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್ ನಮ್ದಾಗತ್ತಾ?
09:21 PM (IST) Apr 17
ಮಕ್ಕಳು ಕೆಟ್ಟ ಪದಗಳನ್ನು ಬಳಸುವುದನ್ನು ನಿಲ್ಲಿಸುವುದು ಹೇಗೆ? ಚಿಕ್ಕ ಮಕ್ಕಳು ದೊಡ್ಡವರನ್ನು ನೋಡಿ ಮಾತು ಕಲಿಯುವುದು ಸಹಜ. ಆದರೆ, ಕೆಲವೊಮ್ಮೆ ಅರ್ಥ ತಿಳಿಯದೆ ಕೆಟ್ಟ ಪದ ಬಳಸಿದಾಗ ನಾವು ನಕ್ಕು ಸುಮ್ಮನಾಗುತ್ತೇವೆ. ಈ ಸಣ್ಣ ತಪ್ಪು ಅವರ ನಡವಳಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಗೊತ್ತಾ?
09:10 PM (IST) Apr 17
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ, ತಮ್ಮ ಪದವಿಗಿಂತ ಸಂವಹನ ಕಲೆ ಮತ್ತು ಹೊಸ ಕೌಶಲಗಳೇ ಉದ್ಯೋಗದಲ್ಲಿ ಯಶಸ್ಸು ನೀಡಿದವು ಎಂದು ಹೇಳಿದ್ದಾರೆ. ಪದವಿ ಕೇವಲ ಕೆಲಸಕ್ಕೆ ಪ್ರವೇಶ ಟಿಕೆಟ್ ಮಾತ್ರ ಎಂದಿದ್ದಾರೆ.
08:09 PM (IST) Apr 17
ಹಿರಿಯ ನಟಿ ವಿದ್ಯಾ ಮೂರ್ತಿ ಅವರು 35ಕ್ಕೂ ಹೆಚ್ಚು ಸೀರಿಯಲ್‌ಗಳು, 500ಕ್ಕೂ ಹೆಚ್ಚು ನಾಟಕಗಳು ಮತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು 'ಆಂಟಿ' ಎಂದು ಕರೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
08:00 PM (IST) Apr 17
ನಮ್ಮ ತಂದೆಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸುಭಿಕ್ಷೆ ನೆಲೆಸಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದು ನಮ್ಮ ಆಶಯ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
07:22 PM (IST) Apr 17
Actress Anushka Sharma: ಐಪಿಎಲ್ ಮ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಸುದ್ದಿ ಆಗ್ತಾರೋ ಅಷ್ಟೇ ಅವರನ್ನು ಸಪೋರ್ಟ್ ಮಾಡಲು ಬರುವ ಅನುಷ್ಕಾ ಕೂಡ ಚರ್ಚೆ ಆಗ್ತಾರೆ. ವಿರಾಟ್ ಕೊಹ್ಲಿ ಅವರ ಮ್ಯಾಚ್ ಎಲ್ಲೇ ಇದ್ದರೂ ಕೂಡ ಅನುಷ್ಕಾ ಮಾತ್ರ ಮಿಸ್ ಮಾಡೋದಿಲ್ಲ.
06:27 PM (IST) Apr 17
06:19 PM (IST) Apr 17
06:19 PM (IST) Apr 17
06:10 PM (IST) Apr 17
ನಟ ಕೋಟೆ ಪ್ರಭಾಕರ್ ಮತ್ತು ಅವರ ಪತ್ನಿ ಮಾಲತಿ 'ಜೋಡಿ ನಂಬರ್ 1' ವೇದಿಕೆಯಲ್ಲಿ ತಮ್ಮ 30 ವರ್ಷಗಳ ದಾಂಪತ್ಯದ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಕಾಲು ನೋಡಿ ಒಪ್ಪಿಕೊಂಡಿದ್ದು, 50 ಜನರೊಂದಿಗೆ ಹನಿಮೂನ್‌ಗೆ ಹೋಗಿದ್ದು ಸೇರಿದಂತೆ ಹಲವು ತಮಾಷೆಯ ಘಟನೆಗಳನ್ನು ಅವರು ಬಹಿರಂಗಪಡಿಸಿದರು.
05:42 PM (IST) Apr 17
ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್‌ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
05:30 PM (IST) Apr 17
05:14 PM (IST) Apr 17
ಬಿಗ್ಬಾಸ್ 12ರ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಳಿಗೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಮ್ಮಿಬ್ಬರ ನಡುವೆ ಇರುವುದು ಗೆಳೆತನ ಮಾತ್ರ ಎಂದು ಈ ಜೋಡಿ ಸ್ಪಷ್ಟಪಡಿಸಿದ್ದು, ಈ ಮಳಿಗೆಗೆ ಬಂದದ್ದೇಕೆ?
04:47 PM (IST) Apr 17
ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಅವರ ಹೇರ್‌ಸ್ಟೈಲ್, ಗಡ್ಡದ ವಿನ್ಯಾಸ ಎಷ್ಟು ಫೇಮಸ್ ಆಯ್ತು ಅಂದರೆ ಸದಾ ಗಡ್ಡ, ಮೀಸೆ ಬೋಳಿಸಿಕೊಂಡಿರುತ್ತಿದ್ದ ಬಾಲಿವುಡ್ ಹೀರೋಗಳೆಲ್ಲ ಕುರುಚಲು ಗಡ್ಡ, ದಪ್ಪ ಮೀಸೆಯ ಸ್ಟೈಲಿಗೆ ಶರಣಾದರು.
04:35 PM (IST) Apr 17
ಒಂದು ಸಂಜೆ ಹೊತ್ತು ಕಿರುತೆರೆಯಲ್ಲಿರುವವರೊಬ್ಬರು ಮಾತನಾಡುತ್ತಿದ್ದರು. ಚಿತ್ರರಂಗ, ಕನ್ನಡ ವೆಬ್ ಸೀರೀಸ್‌ಗಳ ಕುರಿತು ಮಾತುಕತೆ ಆಗುತ್ತಿತ್ತು. ಕನ್ನಡ ಚಿತ್ರರಂಗದ ಕುರಿತು ಥೋಥೋ ಛೇಛೇ ನಡೆಯುತ್ತಿತ್ತು.
04:28 PM (IST) Apr 17
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ, ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರತಿ ಕೈಸೇರಿದ ತಕ್ಷಣ ಸ್ಪೀಕರ್ ಕಚೇರಿಯು ಅನರ್ಹತೆಯ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.
04:19 PM (IST) Apr 17
ಸಿನಿಮಾದ ಹಿನ್ನೆಲೆ ಗಾಯನಕ್ಕಿಂತ ಕಾನ್ಸರ್ಟ್‌ಗಳಲ್ಲೇ ಇವರು ಬ್ಯುಸಿ. ಹಣ, ಪ್ರಸಿದ್ಧಿ ಎರಡೂ ಇಲ್ಲಿ ಸಮೃದ್ಧ. ಅಂದಹಾಗೆ ಬೆಂಗಳೂರಿನಲ್ಲಿ ಮುಂದಿನ ವಾರ ಇರುವ ಇವರ ಕಾನ್ಸರ್ಟ್‌ಗೆ 900 ರು.ನಿಂದ 3000 ರು.ತನಕ ಟಿಕೆಟ್ ದರ ಇದೆ.
04:11 PM (IST) Apr 17
04:06 PM (IST) Apr 17
03:11 PM (IST) Apr 17
03:00 PM (IST) Apr 17
01:39 PM (IST) Apr 17
01:36 PM (IST) Apr 17
12:45 PM (IST) Apr 17
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲೇ ಶುರುವಾಗಿದೆ. ಈ ಷಡ್ಯಂತ್ರದ ನಡುವೆಯೂ ಸಿಎಂ ತಮ್ಮ ಆಪ್ತರ ರಕ್ಷಣೆಗೆ ನಿಲ್ಲದೆ ಮೌನ ವಹಿಸಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಆತಂಕಕ್ಕೆ ಕಾರಣವಾಗಿದೆ.
12:36 PM (IST) Apr 17
12:19 PM (IST) Apr 17
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ದಿವಾಳಿಯಾದ್ರೆ, ಗೌತಮ್ ದಿವಾನ್ ಹೊಸ ಸಾಮ್ರಾಜ್ಯ ಕಟ್ಟಿದರೆ ಈ ಸೀರಿಯಲ್ ಅಂತ್ಯಕ್ಕೆ ಬಂದಂತೆ. ಗೌತಮ್ ಮಗಳ ಹುಡುಕಾಟವನ್ನು ಕೂಡ ಮಾಡಬೇಕಿತ್ತು. ಈ ಬಗ್ಗೆ ರಾಜೇಶ್ ನಟರಂಗ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
12:15 PM (IST) Apr 17
ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.
12:03 PM (IST) Apr 17
11:41 AM (IST) Apr 17
ಕ್ಷೇತ್ರ ಪುನರ್ ವಿಂಗಡಣೆ ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದಂತಹ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಅಪಾಯ ಒಡ್ಡಿದೆ. ಇದು ದಕ್ಷಿಣದ ರಾಜ್ಯಗಳು ತಮ್ಮ ಯಶಸ್ವಿ ಜನಸಂಖ್ಯಾ ನೀತಿಗಾಗಿ ಶಿಕ್ಷೆ ಅನುಭವಿಸಿದಂತೆ ಆಗಲಿದ್ದು, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವನ್ನು ಮತ್ತಷ್ಟು ಹೆಚ್ಚಿಸಲಿದೆ.
11:23 AM (IST) Apr 17
ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್, ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ ಕೇಸ್ ಸಂಬಂಧ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ. ಏನಿದು ಪ್ರಕರಣ?
11:15 AM (IST) Apr 17
ಮಾಜಿ ಸಚಿವ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ಹೆಗಡೆ ವಿರುದ್ಧದ ಗಲಾಟೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಫ್‌ಐಆರ್ ಅಥವಾ ಆರೋಪಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತ್ತು ಮೇಲ್ನೋಟಕ್ಕೆ ಅಪರಾಧದ ಆರೋಪಗಳಿಲ್ಲವೆಂದು ಪರಿಗಣಿಸಿ, ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿದೆ.
11:03 AM (IST) Apr 17
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಾಫಿಪೋಸಾ ಕಾಯ್ದೆಯಡಿ ಅವರ ಮುನ್ನೆಚ್ಚರಿಕಾ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದ್ದು, ಅವರ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ವಜಾಗೊಳಿಸಿದೆ.
11:01 AM (IST) Apr 17
ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು, ಕೇಂದ್ರ ಸರ್ಕಾರದ ಅನುಮತಿ ಮೇರೆ ರಾಜ್ಯದಲ್ಲಿ ತಪಾಸಣೆ ನಡೆಯುತ್ತಿದೆ. ಈ ವೇಳೆ ವೈರಸ್ ಪತ್ತೆಯಾಗಿದೆ.
10:43 AM (IST) Apr 17
09:58 AM (IST) Apr 17
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 13,262.70 ಕೋಟಿ ರು. ವೆಚ್ಚದಲ್ಲಿ 72.60 ಕಿ.ಮೀ ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ಸಂಸ್ಥೆಯು ಈ ಯೋಜನೆ ಅನುಷ್ಠಾನಗೊಳಿಸಲಿದೆ.
09:49 AM (IST) Apr 17
ರಾಜ್ಯದಲ್ಲಿ ಮೇ.29ರಿಂದ ಶಾಲೆ ಪುನಾರಂಭ, ದಸರಾ ರಜೆ ಸೇರಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ರಾಜ್ಯದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ದಸರಾ ರಜೆ ದಿನವನ್ನು ನಿರ್ಧರಿಸಲಾಗಿದೆ.
09:14 AM (IST) Apr 17
ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ, ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಚೆ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.
09:14 AM (IST) Apr 17
ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಚಾಲಕರ ಪರವಾನಗಿ ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಕರವೇ, ಕರ್ನಾಟಕದಲ್ಲೂ ಇದೇ ನಿಯಮ ಜಾರಿಗೆ ತರಲು ಆಗ್ರಹಿಸಿದೆ. ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರ ಪರವಾನಗಿ ರದ್ದುಗೊಳಿಸಲು ಕರವೇ ಆಗ್ರಹಿಸಿದೆ.
07:57 AM (IST) Apr 17
07:55 AM (IST) Apr 17
ಭಾರಿ ಮಳೆಗೆ ಚಿಕ್ಕಮಗಳೂರಿನಲ್ಲಿ ವಿದ್ಯುತ್ ಸಂಪರ್ಕ ಕಡಿತ, ಧರೆಗುರುಳಿದ 60ಕ್ಕೂ ಹೆಚ್ಚು ವಿದ್ಯುತ್ ಕಂಬ, ಕಳೆದ ರಾತ್ರಿ ಮೂಡಿಗೆರೆ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು, ಕಾಫಿನಾಡು ಕಂಗಾಲಾಗಿದೆ.