Published : Apr 12, 2025, 07:00 AM ISTUpdated : Apr 12, 2025, 11:22 PM IST

Karnataka News Live: ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ಭೂಗತ ಟವರ್ ಪತ್ತೆ, ಏಲಿಯನ್ ಲಾಂಚ್ ಪ್ಯಾಡ್ ಶಂಕೆ

ಸಾರಾಂಶ

ಬೆಂಗಳೂರು:  ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ (ಜಾತಿಗಣತಿ)ಯ ಅಂತಿಮ ವರದಿ ಕೊನೆಗೂ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಮಂಡನೆಯಾಗಿದ್ದು, ಬರೋಬ್ಬರಿ 50 ಸಂಪುಟಗಳುಳ್ಳ ವರದಿಯ ಮುಖ್ಯಾಂಶಗಳನ್ನು ಸಚಿವರಿಗೆ ವಿವರಿಸಲಾಗಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಏ.17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಈ ಮೂಲಕ ಬಿಜೆಪಿಗೆ ಸಡ್ಡು ಹೊಡೆದಿದೆ. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷದ ರಾಜ್ಯ ಸರ್ಕಾರ ಈಗ 80 ಪರ್ಸೆಂಟ್‌ ಭ್ರಷ್ಟಾಚಾರ ನಡೆಸಿ ದೇಶದಲ್ಲೇ ನಂ.1 ಭ್ರಷ್ಟಾಚಾರದ ಸರ್ಕಾರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ.

Karnataka News Live: ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ಭೂಗತ ಟವರ್ ಪತ್ತೆ, ಏಲಿಯನ್ ಲಾಂಚ್ ಪ್ಯಾಡ್ ಶಂಕೆ

11:22 PM (IST) Apr 12

ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ಭೂಗತ ಟವರ್ ಪತ್ತೆ, ಏಲಿಯನ್ ಲಾಂಚ್ ಪ್ಯಾಡ್ ಶಂಕೆ

ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ರಹಸ್ಯ ಟವರ್ ಪತ್ತೆಯಾಗಿದೆ. ಏರಿಯಾ 51 ಅನ್ನೋ ವಿಳಾಸದ ಸ್ಥಳದಲ್ಲಿ ತ್ರಿಕೋನ ಆವೃತ್ತಿಯ ಗಗನ ಚುಂಬಿ ಕಟ್ಟಡದಂತಿರುವ ಟವರ್ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿರುವ ಈ ಟವರ್ ಏಲಿಯನ್ ತನ್ನ ಸ್ವ ಗ್ರಹಕ್ಕೆ ತೆರಳಲು ಇರುವ ಉಡಾವಣಾ ಕೇಂದ್ರವೇ? 

ಪೂರ್ತಿ ಓದಿ

11:11 PM (IST) Apr 12

ಮಂಡ್ಯ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮತಾಂತರಕ್ಕೆ ಒತ್ತಾಯಿಸಿ ಪತ್ನಿ ಮತ್ತು ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಶ್ರೀಕಾಂತ್ ಎಂಬಾತ ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೂರ್ತಿ ಓದಿ

10:50 PM (IST) Apr 12

ಮಲೆ ಮಹದೇಶ್ವರ ಪವಾಡ; ಅಪಾಯಕಾರಿ ಗೋಪುರದ ಮೇಲೇರಿದ ವ್ಯಕ್ತಿ ಸೇಫ್!

ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಗೋಪುರ ಏರಿದ ವ್ಯಕ್ತಿಯೊಬ್ಬ ಜಿಗಿಯಲು ಯತ್ನಿಸಿದ ಘಟನೆ ನಡೆದಿದೆ. ಆದರೆ, ಮಹದೇಶ್ವರ ದೇವರ ಪವಾಡದಿಂದ ಗೋಪುರ ಮೇಲೇರಿದ ವ್ಯಕ್ತಿ ಗ್ರೇಟ್ ಎಸ್ಕೇಪ್ ಆಗಿದ್ದಾನೆ.

ಪೂರ್ತಿ ಓದಿ

10:46 PM (IST) Apr 12

ಫಸ್ಟ್‌ನೈಟ್ ವಿಶೇಷವಾಗಿರುತ್ತೆ ಅಂದ್ಕೊಂಡಿದ್ದ ವಧುಗೆ ವರನಿಂದ ಶಾಕ್!

 ಬುಲಂದ್‌ಶಹರ್‌ನಲ್ಲಿ ಫಸ್ಟ್ ನೈಟ್ ಅಲ್ಲಿ ಗಂಡ ಹೆಂಡತಿಗೆ ಗರ್ಲ್ ಫ್ರೆಂಡ್ ಫೋಟೋ ತೋರಿಸಿ 20 ಲಕ್ಷ ಕೇಳ್ದ. ಇಲ್ಲ ಅಂದ್ರೆ ಹೊಡೆದು ಮನೆಯಿಂದ ಹೊರಗೆ ಹಾಕಿದ. ಪೊಲೀಸರು ಕೇಸ್ ಹಾಕಿ ತನಿಖೆ ಶುರು ಮಾಡಿದ್ದಾರೆ.

ಪೂರ್ತಿ ಓದಿ

10:00 PM (IST) Apr 12

ಶಿವಮೊಗ್ಗ: ಬಿಜೆಪಿ ರ‍್ಯಾಲಿಯಲ್ಲಿ ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ!

ಶಿವಮೊಗ್ಗದಲ್ಲಿ ಬಿಜೆಪಿಯ ಜನಾಕ್ರೋಶ ರ‍್ಯಾಲಿಯಲ್ಲಿ ಭಾಷಣದ ವೇಳೆ ಮರದ ರೆಂಬೆ ಕುಸಿದು ಬಿದ್ದಿದೆ. ವೇದಿಕೆಯ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುವರ್ಣ ನ್ಯೂಸ್‌ನ ಎಕ್ಸ್‌ಕ್ಲೂಸಿವ್ ವಿಡಿಯೋದಲ್ಲಿ ಈ ಘಟನೆಯ ದೃಶ್ಯ ಲಭ್ಯವಿದೆ.

ಪೂರ್ತಿ ಓದಿ

09:57 PM (IST) Apr 12

ಕೈ-ಕಾಲುಗಳೇ ಇಲ್ಲದಿದ್ದರೂ ರನ್ನಿಂಗ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಕುವರಿಯ ರೋಚಕ ಕಥೆ ಕೇಳಿ...

ಎರಡು ಕೈ-ಕಾಲು ಕಳೆದುಕೊಂಡರೂ ಮನೋಬಲದಿಂದ ಮುನ್ನುಗ್ಗಿ ಏಷ್ಯನ್​ ಗೇಮ್ಸ್​ವರೆಗೆ ಹೋಗಿ ಭಾರತದ ಕ್ರೀಡಾಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಶಾಲಿನಿ ಸರಸ್ವತಿಯ ರೋಚಕ ಪಯಣ ಇಲ್ಲಿದೆ... 
 

ಪೂರ್ತಿ ಓದಿ

09:53 PM (IST) Apr 12

ಅನುಪಮಾ ಪರಮೇಶ್ವರನ್ ಧ್ರುವ್ ವಿಕ್ರಮ್ ಡೇಟಿಂಗ್ ಅನುಮಾನ ಹೆಚ್ಚಿಸಿದ ಕಿಸ್ ಫೋಟೋ ಲೀಕ್

ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಕಿಸ್ಸಿಂಗ್ ಫೋಟೋ ಒಂದು ಲೀಕ್ ಆಗಿದೆ. ಇದರ ಬೆನ್ನಲ್ಲೇ ಇವರ ಸೀಕ್ರೆಟ್ ಡೇಟಿಂಗ್ ಕುರಿತು ಅನುಮಾನಗಳು ಹೆಚ್ಚಾಗಿದೆ. ಅಷ್ಟಕ್ಕೂ ಫೋಟೋ ಲೀಕ್ ಆಗಿದ್ದು ಎಲ್ಲಿ?

ಪೂರ್ತಿ ಓದಿ

09:52 PM (IST) Apr 12

ಭಾರತೀಯ ರೈಲ್ವೆ: ಇಷ್ಟೇ ಲಗೇಜ್ ಫ್ರೀ, ತೂಕ ಹೆಚ್ಚಾದರೆ ದಂಡ ಕಟ್ಬೇಕು!

ಭಾರತೀಯ ರೈಲ್ವೆ ಈಗ ಲಗೇಜ್​ಗೆ ಕಟ್ಟುನಿಟ್ಟಿನ ರೂಲ್ಸ್ ಮಾಡಿದೆ. ಯಾವ ಕ್ಲಾಸ್​ನಲ್ಲಿ ಎಷ್ಟು ಸಾಮಾನು ಫ್ರೀ ತಗೊಂಡು ಹೋಗಬಹುದು, ಯಾವಾಗ ದಂಡ ಬೀಳುತ್ತೆ ಅಂತ ತಿಳ್ಕೊಳ್ಳಿ.

ಪೂರ್ತಿ ಓದಿ

09:29 PM (IST) Apr 12

ಮುರ್ಷಿದಾಬಾದ್ ಹಿಂಸಾಚಾರ, ಕೇಂದ್ರ ಪಡೆ ನಿಯೋಜನೆಗೆ ಹೈಕೋರ್ಟ್ ಆದೇಶ!

ಮುರ್ಷಿದಾಬಾದ್‌ನಲ್ಲಿ ವಕ್ಫ್ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಮೂವರು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ಹಿಂಸಾಚಾರ ನಿಯಂತ್ರಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ.

ಪೂರ್ತಿ ಓದಿ

09:07 PM (IST) Apr 12

ನೇಹಾ ಕಕ್ಕರ್ ಕುಟುಂಬದಲ್ಲಿ ಬಿರುಕು, ಸೋಷಿಯಲ್‌ ಮೀಡಿಯಾದಲ್ಲಿ ಘೋಷಣೆ!

ಗಾಯಕಿ ಸೋನು ಕಕ್ಕರ್, ನೇಹಾ ಕಕ್ಕರ್ ಮತ್ತು ಟೋನಿ ಕಕ್ಕರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಸೋನು ಕಕ್ಕರ್, ಟೋನಿ ಮತ್ತು ನೇಹಾ ತನಗೆ ಸಹೋದರ, ಸಹೋದರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

08:57 PM (IST) Apr 12

ಹಾಸ್ಟೆಲ್ ಹುಡುಗನ ಸೂಟ್‌ಕೇಸ್‌ನಲ್ಲಿ ಹುಡುಗಿ; ವಿಡಿಯೋ ಸತ್ಯಾಂಶ ಬಯಲು

ಖಾಸಗಿ ಹಾಸ್ಟೆಲ್‌ನಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಕರೆತರುವಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಸೋನಿಪತ್‌ನ ಹಾಸ್ಟೆಲ್‌ನಲ್ಲಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಅಸಲಿಯತ್ತು ಇಲ್ಲಿದೆ ನೋಡಿ..

ಪೂರ್ತಿ ಓದಿ

08:54 PM (IST) Apr 12

ರಾಹುಲ್, ಸೋನಿಯಾಗೆ ಇಡಿ ಶಾಕ್, ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ 700 ಕೋಟಿ ಆಸ್ತಿ ಜಪ್ತಿ ನೋಟಿಸ್

ನ್ಯಾಷನಲ್ ಹೆರಾಲ್ಡ್ ಪ್ರಕರಣ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇಡಿ ಮತ್ತೊಂದು ಶಾಕ್ ನೀಡಿದೆ. ಈ ಪ್ರಕರಣ ಸಂಬಂಧ ಬರೋಬ್ಬರಿ 700 ಕೋಟಿ ರೂಪಾಯಿ ಆಸ್ತಿ ಜಪ್ತಿಗೆ ಇಡೀ ಮುಂದಾಗಿದೆ.
 

ಪೂರ್ತಿ ಓದಿ

08:53 PM (IST) Apr 12

ವಿನಯ್ ಸೋಮಯ್ಯ ಪ್ರಕರಣ:10 ದಿನ ಕಳೆದರೂ ಆರೋಪಿಗಳ ಬಂಧನ ಇಲ್ಲ!

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆರೋಪಿಸಿದ್ದಾರೆ. ಆರೋಪಿ ಎ1 ಆಗಿರುವ ತನ್ನೀರಾ ಮೈನಾ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ತನಿಖೆಯನ್ನು ದಿಕ್ಕುತಪ್ಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

08:28 PM (IST) Apr 12

'ನನ್ನ ಗೌರವ ನಾನೇ ಕಾಪಾಡಿಕೊಳ್ತೇನೆ', ರಾಜಣ್ಣ ಗರಂ ಆಗಿದ್ದೇಕೆ?

ಸಚಿವ ಕೆಎನ್ ರಾಜಣ್ಣ ಗೃಹ ಸಚಿವರನ್ನು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಬೆಲೆ ಏರಿಕೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ತನಿಖೆ ನಡೆಯುತ್ತಿದ್ದು, ಏಪ್ರಿಲ್ 14ರ ಬಳಿಕ ಸಿಐಡಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಪೂರ್ತಿ ಓದಿ

07:58 PM (IST) Apr 12

'ಆ ಕೆಲಸ'ದ ವೇಳೆ ಸಂಗಾತಿ ಕತ್ತು ಹಿಸುಕುವುದು ಏಕೆ? ಇದು ತುಂಬಾ ಡೇಂಜರ್!

ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಯುವಕರ ಮೇಲೆ ಪರಿಣಾಮ ಬೀರುತ್ತಿವೆ, ಲೈಂಗಿಕ ಆಸಕ್ತಿಗಳಲ್ಲಿ ಅಪಾಯಕಾರಿ ಅಭ್ಯಾಸಗಳು ಹೆಚ್ಚುತ್ತಿವೆ. ಚೋಕಿಂಗ್‌ನಂತಹ ಕೃತ್ಯಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಜಾಗರೂಕರಾಗಿರಿ.

ಪೂರ್ತಿ ಓದಿ

07:50 PM (IST) Apr 12

ಅಮೆರಿಕದಲ್ಲಿ ಹಿಂದೂಫೋಬಿಯಾ ಐತಿಹಾಸಿಕ ಮಸೂದೆ ಮಂಡನೆ, ಏನಿದು ಹಿಂದೂ ಬಿಲ್?

ಅಮೆರಿಕ ಜಾರ್ಜಿಯಾ ರಾಜ್ಯದಲ್ಲಿ ಹಿಂದೂಫೋಬಿಯಾ ಐತಿಹಾಸಿಕ ಬಿಲ್ ಮಂಡನೆಯಾಗಲಿದೆ. ಈ ಮಸೂದೆಗೆ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಾರ್ಟಿ ಸೆನೆಟರ್ಸ್ ಬೆಂಬಲ ಸೂಚಿಸಿದ್ದಾರೆ. ಏನಿದು ಹಿಂದೂ ಮಸೂದೆ? 

ಪೂರ್ತಿ ಓದಿ

07:42 PM (IST) Apr 12

ತಾಯಿ-ಮಗನ ವಿಡಿಯೋ ವೈರಲ್: ಸಂಬಂಧದ ಬಗ್ಗೆ ಗೊಂದಲ!

ಚಿಕ್ಕ ವಯಸ್ಸಿಗೆ ತಾಯಿಯಾದ ಮಹಿಳೆ ಮತ್ತು ಆಕೆಯ ಎತ್ತರದ ಮಗನ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿನ ಸಂಬಂಧದ ಬಗ್ಗೆ ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಪೂರ್ತಿ ಓದಿ

07:40 PM (IST) Apr 12

ಶಾರುಖ್‌, ಸಲ್ಲು ಎಷ್ಟು ಸಲ ನಮಾಜ್ ಮಾಡ್ತಾರೆ? ಫರಾ ಖಾನ್ ಹೇಳಿದ್ದೇನು?

ನೃತ್ಯ ಸಂಯೋಜಕಿ ಫರಾ ಖಾನ್ ಬಾಲಿವುಡ್ ತಾರೆಯರ ಧಾರ್ಮಿಕ ಆಚರಣೆಗಳ ಬಗ್ಗೆ ಮಾತನಾಡಿದ್ದಾರೆ. ತಾನು ನಮಾಜ್ ಮಾಡದಿದ್ದರೂ ದಾನ ಮಾಡುವ ಮೂಲಕ ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಶಾರುಖ್ ದಾನ ಮಾಡುತ್ತಾರೆ, ತಬು ನಮಾಜ್ ಮಾಡುತ್ತಾರೆ ಎಂದು ಫರಾ ಹೇಳಿದ್ದಾರೆ.

ಪೂರ್ತಿ ಓದಿ

07:17 PM (IST) Apr 12

ಇನ್ನೊಂದೇ ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1 ಲಕ್ಷ! ತಜ್ಞರ ಹೇಳಿದ್ದೇನು?

Gold price today news: ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹95,583 ತಲುಪಿದೆ. ಬೆಲೆ ಏರಿಕೆಗೆ ಜಾಗತಿಕ ಕಾರಣಗಳು ಮತ್ತು ₹1 ಲಕ್ಷ ತಲುಪುವ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ.

ಪೂರ್ತಿ ಓದಿ

07:05 PM (IST) Apr 12

ಕೆನರಾ ಬ್ಯಾಂಕ್‌ ಎಫ್‌ಡಿ ಹಣದ ಮೇಲಿನ ಹೊಸ ಬಡ್ಡಿದರ ಬಿಡುಗಡೆ!

ಏಪ್ರಿಲ್ 10, 2025 ರಿಂದ ಕೆನರಾ ಬ್ಯಾಂಕ್ FD ಗಳ ಕೆಲವು ಬಡ್ಡಿ ದರಗಳನ್ನು ಬದಲಾಯಿಸಿದೆ. ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಹೊಸ ದರಗಳು ಯಾವುವು ಎಂದು ತಿಳಿಯಿರಿ, ಮತ್ತು ಈಗ FD ಯಲ್ಲಿ ಹೂಡಿಕೆ ಮಾಡುವುದು ಏಕೆ ಲಾಭದಾಯಕವಾಗಬಹುದು.

ಪೂರ್ತಿ ಓದಿ

06:12 PM (IST) Apr 12

ನಿಮ್ಮ ಸಂಗಾತಿ ನಿರಂತರ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ರೆ ಎಚ್ಚರ!

ಆರೋಗ್ಯಕರ ಸಂಬಂಧದಲ್ಲಿ ಒಪ್ಪಿಗೆ ಮುಖ್ಯ. ದೈಹಿಕ ಸಂಬಂಧಕ್ಕೆ ಒತ್ತಡ ಹೇರಿದರೆ ಅಥವಾ ಭಾವನೆಗಳನ್ನು ನಿರ್ಲಕ್ಷಿಸಿದರೆ, ಎಚ್ಚರಿಕೆ ವಹಿಸಿ. ನಿಮ್ಮ ಸ್ವಾತಂತ್ರ್ಯ ಮತ್ತು ಮನಸ್ಸಿನ ಶಾಂತಿಯನ್ನು ರಕ್ಷಿಸಿಕೊಳ್ಳಿ.

ಪೂರ್ತಿ ಓದಿ

06:06 PM (IST) Apr 12

ಕುಸಿದು ಬಿದ್ದ ವೃದ್ಧನಿಗೆ ಸಹಾಯ ಮಾಡದ ದಾರಿಹೋಕರಿಗೆ ₹16 ಲಕ್ಷ ದಂಡ

ರಸ್ತೆಯಲ್ಲಿ ಕುಸಿದು ಬಿದ್ದ ವೃದ್ಧನಿಗೆ ಸಹಾಯ ಮಾಡದ 10 ಜನರಿಗೆ 16 ಲಕ್ಷ ರೂ. ದಂಡ ವಿಧಿಸುವಂತೆ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ. ವೃದ್ಧನಿಗೆ ಸಹಾಯ ಮಾಡಿದ್ದರೆ ಜೀವ ಉಳಿಯುತ್ತಿತ್ತು ಎಂದು ಕುಟುಂಬ ವಾದಿಸಿದೆ.

ಪೂರ್ತಿ ಓದಿ

05:26 PM (IST) Apr 12

ಪಾಕ್‌ ಹಿಂದೂಗಳ ಜನಸಂಖ್ಯೆ ಎಷ್ಟು? ಬೆಚ್ಚಿಬೀಳಿಸುತ್ತೆ ಅಂಕಿ-ಅಂಶ!

ಪಾಕಿಸ್ತಾನದ 2023ರ ಜನಗಣತಿಯಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಕಡಿಮೆಯಾಗಿದೆ. ಮುಸ್ಲಿಮರ ಪಾಲು ಸ್ವಲ್ಪ ಕಡಿಮೆಯಾಗಿದ್ದು, ಕ್ರಿಶ್ಚಿಯನ್ನರ ಜನಸಂಖ್ಯೆ ಹೆಚ್ಚಾಗಿದೆ.

ಪೂರ್ತಿ ಓದಿ

05:15 PM (IST) Apr 12

ಸ್ಪೇನ್ ಮೆಟ್ರೋ ನಿಲ್ದಾಣದಲ್ಲಿ ಗಾಯತ್ರಿ ಮಂತ್ರ ಪಠಿಸಿದ ಸ್ಪಾನಿಷ್ ಮಹಿಳೆ, ವಿಡಿಯೋ ವೈರಲ್

ಸ್ಪೇನ್ ಮೆಟ್ರೋ ನಿಲ್ದಾಣದಲ್ಲಿ ಸ್ಪಾನಿಷ್ ಮಹಿಳೆ ಗಾಯತ್ರಿ ಮಂತ್ರ ಪಠಿಸಿದ ಎಲ್ಲರ ಗಮನಸೆಳೆದಿದ್ದಾರೆ. ಗಾಯತ್ರಿ ಮಂತ್ರವನ್ನು ಸಂಪೂರ್ಣವಾಗಿ ಮಾತ್ರವಲ್ಲ ಸ್ವಚ್ಚ ಉಚ್ಚಾರದ ಮೂಲಕ  ಪಠಿಸಿದ್ದಾರೆ. ಈ ವಿಡಿಯೋ ಇಲ್ಲಿದೆ.

ಪೂರ್ತಿ ಓದಿ

04:59 PM (IST) Apr 12

'ಯತ್ನಾಳರದು ಬಾಯಿಯದ್ದೇ ಸಮಸ್ಯೆ..', ಮುರುಗೇಶ ನಿರಾಣಿ ಹೇಳಿದ್ದೇನು?

ಬಸನಗೌಡ ಪಾಟೀಲ ಯತ್ನಾಳ ನೂರಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರ ಬಾಯಿ ಒಂದೇ ಸಮಸ್ಯೆ ಇರುವುದು ಎಂದು ಮುರುಗೇಶ ನಿರಾಣಿ ವಿಶ್ಲೇಷಿಸಿದ್ದಾರೆ. ಯತ್ನಾಳ ಮರಳಿ ಬಿಜೆಪಿ ಸೇರುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ.

ಪೂರ್ತಿ ಓದಿ

04:48 PM (IST) Apr 12

ನಟ ದರ್ಶನ್ ವಿರುದ್ಧ ಉಮಾಪತಿಗೌಡ ಮತ್ತೆ ಟಾಂಗ್! ಹೇಳಿದ್ದೇನು?

ಉತ್ತರ ಕನ್ನಡದಲ್ಲಿ ನಿರ್ಮಾಪಕ ಉಮಾಪತಿ ಗೌಡ, ನಟ ದರ್ಶನ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸಿದ್ಧಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುಭವಗಳನ್ನು ಹಂಚಿಕೊಂಡ ಅವರು, ಜೈಲಿಗೆ ಹೋಗಿ ಬಂದವರು ಎಚ್ಚರಿಕೆ ನೀಡುವಂತೆ ಎಂದು ಟೀಕಿಸಿದ್ದಾರೆ.

ಪೂರ್ತಿ ಓದಿ

04:30 PM (IST) Apr 12

ಕೈಯಲ್ಲಿ ಕಾಸಿದ್ದವನೇ ಕಿಂಗ್; ಕೈಕೊಟ್ಟ ಜಿಪೇ, ಪೇಟಿಎಂ, ಫೋನ್‌ಪೇ ಸೇರಿ ಯುಪಿಐ ಆ್ಯಪ್ಸ್

ಒಂದು ಕಾಲದಲ್ಲಿ ಕೈಯಲ್ಲಿ ದುಡ್ಡಿದ್ದವನೇ ಕಿಂಗ್. ಬಳಿಕ ಯುಪಿಐ ಆ್ಯಪ್ ಬಂದ ಮೇಲೆ ಡಿಜಿಟಲ್ ವಹಿವಾಟು ಹೆಚ್ಚಾಯಿತು. ಹಲವರು ಸಂಪೂರ್ಣ ಯುಪಿಐ ಅವಲಂಬಿಸಿದ್ದಾರೆ. ಇದೀಗ ಯುಪಿಐ ನಂಬಿದವನಿಗೆ ಪದೇ ಪದೇ ಈ ಆ್ಯಪ್ ಕೈಕೊಡುತ್ತಿದೆ. ಇದೀಗ ಕೈಯಲ್ಲಿ ಕಾಸಿದ್ದವನೇ ಬಾಸ್ ಆಗಿದ್ದಾನೆ.

ಪೂರ್ತಿ ಓದಿ

04:24 PM (IST) Apr 12

ಮೋದಿಗೆ ವೈರಾಗ್ಯ, ಖಾವಿಧಾರಿಗೆ ಪ್ರಧಾನಿ ಭಾಗ್ಯ; ಬ್ರಹ್ಮಾಂಡ ಭವಿಷ್ಯ!

ಪ್ರಧಾನಿ ಮೋದಿ ಶೀಘ್ರದಲ್ಲೇ ವೈರಾಗ್ಯದಿಂದ ಅಧಿಕಾರ ತ್ಯಜಿಸಲಿದ್ದು, ಖಾವಿಧಾರಿ ಸನ್ಯಾಸಿಯೊಬ್ಬರು ದೇಶವನ್ನು ಆಳಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಪೂರ್ತಿ ಓದಿ

03:44 PM (IST) Apr 12

ಭಾರತೀಯ ರೈಲು ಸೇವೆಗೆ ಬ್ರಿಟಿಷ್ ಯೂಟ್ಯೂಬರ್ ಮೆಚ್ಚುಗೆ, ವಿಡಿಯೋ ವೈರಲ್

ಭಾರತದ ರೈಲು ಸೇವೆ, ರೈಲು ಪ್ರಯಾಣದ ಅನುಭವ, ರೈಲಿನಲ್ಲಿ ಫುಡ್ ಆರ್ಡರ್ ಸೇರಿದಂತೆ ಹಲವು ವಿಚಾರಗಳ ಕುರಿತು ಬ್ರಿಟಿಷ್ ಯೂಟ್ಯೂಬರ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಭಾರತದ ರೈಲ್ವೇ ಸೇವೆಯಿಂದ ಯುಕೆ ಕೆಲ ವಿಚಾರಗಳನ್ನು ಕಲಿಯಬೇಕಿದೆ ಎಂದಿದ್ದಾನೆ. ಈತನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಪೂರ್ತಿ ಓದಿ

03:25 PM (IST) Apr 12

19ನೇ ಪುಣ್ಯ ತಿಥಿ: ಅಣ್ಣಾವ್ರ ಈ ಸೀಕ್ರೆಟ್‌ ಇನ್ನೂ ಗೊತ್ತಿಲ್ವಾ?

'ಅಪ್ಪಾಜಿ (ಡಾ ರಾಜ್‌ಕುಮಾರ್) ಅವರನ್ನು ನಾನು 30 ವರ್ಷಕ್ಕೂ ಹೆಚ್ಚು ಕಾಲ ದಿನಾಲೂ ನೋಡಿದ್ದೇನೆ. ಅವರ ದಿನಚರಿ, ವೃತ್ತಿ, ಪ್ರವೃತ್ತಿ ಎಲ್ಲವನ್ನೂ ನಾನು ಚೆನ್ನಾಗಿ ಅರಿತಿದ್ದೇನೆ. ನನಗೆ ಬುದ್ದಿ ಬಂದಾಗಿನಿಂದ ನಾನು ನೋಡಿದಂತೆ ಅವರು..

ಪೂರ್ತಿ ಓದಿ

02:52 PM (IST) Apr 12

ಏಜೆಂಟಿಕ್ AI: ಭಾರತದ ಆರ್ಥಿಕ ಭವಿಷ್ಯಕ್ಕೆ ಮಹತ್ವದ ತಿರುವು

ಏಜೆಂಟಿಕ್ AI ಭಾರತದ ಬೆಳವಣಿಗೆಗೆ ಒಂದು ಪ್ರಮುಖ ಎಂಜಿನ್ ಆಗಿ ಬೆಳೆಯುತ್ತಿದೆ. ನಂಬಿಕೆ, ಗೌಪ್ಯತೆ ಮತ್ತು ಅನುಸರಣೆ AI ಅರ್ಥಪೂರ್ಣ ಪರಿಣಾಮವನ್ನು ಬೀರುವುದನ್ನು ಖಚಿತಪಡಿಸಿಕೊಳ್ಳಲು ಅಡಿಪಾಯವಾಗಿವೆ.

ಪೂರ್ತಿ ಓದಿ

01:47 PM (IST) Apr 12

ನ್ಯೂಯಾರ್ಕ್ ಹೆಲಿಕಾಪ್ಟರ್ ದುರಂತ, ಪೈಲಟ್ ಹಿನ್ನೆಲೆ ಬಹಿರಂಗ!

ಏಪ್ರಿಲ್ 10 ರಂದು ನ್ಯೂಯಾರ್ಕ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಸ್ಪೇನ್‌ನ ಸೀಮೆನ್ಸ್‌ನ ಅಧ್ಯಕ್ಷ ಮತ್ತು ಅವರ ಕುಟುಂಬದವರೂ ಸೇರಿದ್ದಾರೆ. ಹೆಲಿಕಾಪ್ಟರ್ ಚಲಾಯಿಸುತ್ತಿದ್ದ ಪೈಲಟ್ ಸೀನ್ ಜಾನ್ಸನ್ ಹಿನ್ನೆಲೆಯನ್ನು ಇದೀಗ ಬಹಿರಂಗಪಡಿಸಲಾಗಿದೆ.

ಪೂರ್ತಿ ಓದಿ

12:29 PM (IST) Apr 12

7ನೇ ತರಗತಿ ಕೇಂದ್ರೀಯ ಪಠ್ಯದಲ್ಲಿ ರಾಣಿ ಅಬ್ಬಕ್ಕನ ಕಥೆ!

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅಡಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), 7 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಿ ಹೆಸರಿನ ಹೊಸ ಇಂಗ್ಲಿಷ್‌ ಪುಸ್ತಕ ಪರಿಚಯಿಸಿದೆ. 

ಪೂರ್ತಿ ಓದಿ

12:20 PM (IST) Apr 12

Koppal: ಜ್ವರ ಕಡಿಮೆ ಮಾಡಲು ಮಕ್ಕಳಿಗೆ ಊದುಬತ್ತಿಯಿಂದ ಸುಡುತ್ತಾರೆ!

ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ಪೋಷಕರು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ. 

ಪೂರ್ತಿ ಓದಿ

11:50 AM (IST) Apr 12

ಯಮ್ಮೋ, ಯಮ್ಮೋ.. ಏನಪ್ಪಾ ಇದು ರೇಷ್ಮಾ ಆಂಟಿ-ಕಟ್ಟಪ್ಪನ ವಿಡಿಯೋ; ಮುಚ್ಕೊಳ್ಳೋರು ಮುಚ್ಕೊಳ್ಳಿ ಕಣ್ಮುಚ್ಕೊಳ್ಳಿ!

Trending Reels: ಇನ್‌ಫ್ಲುಯೆನ್ಸರ್ ರೇಷ್ಮಾ ಮತ್ತು ನವೀನ್ ಜೋಡಿಯ ರೀಲ್ಸ್‌ಗಳು ಸಖತ್ ವೈರಲ್ ಆಗಿವೆ. 'ಯಮ್ಮೋ ಯಮ್ಮೋ' ಹಾಡಿಗೆ ಈ ಜೋಡಿ ಮಾಡಿರುವ ರೊಮ್ಯಾಂಟಿಕ್ ರೀಲ್ಸ್ ವೀಕ್ಷಕರ ಗಮನ ಸೆಳೆದಿದೆ. 

ಪೂರ್ತಿ ಓದಿ

11:47 AM (IST) Apr 12

ಬಾಬಾಸಾಹೇಬರ ನಿಪ್ಪಾಣಿ ಭೇಟಿಗೆ 100 ಸಂಭ್ರಮ: ಆರ್‌.ಅಶೋಕ್‌ ಲೇಖನ

ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದಲಿತರ ಬಂಧು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದಲಿತರ ಸಬಲೀಕರಣಕ್ಕೆ ನಾಂದಿ ಹಾಡಲು ಬೆಳಗಾವಿಯ ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷ ತುಂಬಿದೆ. ಇದರ ಅಂಗವಾಗಿ ಬಿಜೆಪಿ ‘ಭೀಮ ಹೆಜ್ಜೆ-100ರ ಸಂಭ್ರಮ’ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ರಥಯಾತ್ರೆಯು ಶುಕ್ರವಾರ ಬೆಂಗಳೂರಿನಿಂದ ಹೊರಟಿದ್ದು 14ಕ್ಕೆ ಬೆಳಗಾವಿ ತಲುಪಲಿದೆ. 15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. 

ಪೂರ್ತಿ ಓದಿ

11:30 AM (IST) Apr 12

ಇನ್ನೂ ಬೇಸ್‌ ವಿವಿಗಿಲ್ಲ ಪೂರ್ಣಾವಧಿ ಕುಲಪತಿ: ಶೋಧನಾ ಸಮಿತಿಯಿಂದ 3 ಹೆಸರು ಶಿಫಾರಸು

ಬೇಸ್‌ನ ಮೊದಲ ಕುಲಪತಿಯಾಗಿ ನೇಮಕಗೊಂಡಿದ್ದ ಅರ್ಥಶಾಸ್ತ್ರಜ್ಞ ಡಾ.ಎನ್‌.ಆರ್‌.ಭಾನುಮೂರ್ತಿ ಅವರ ನಾಲ್ಕು ವರ್ಷಗಳ ಅಧಿಕಾರಾವಧಿ 2024ರ ಜೂನ್‌ 21ಕ್ಕೆ ಮುಕ್ತಾಯಗೊಂಡಿದೆ. 

ಪೂರ್ತಿ ಓದಿ

11:17 AM (IST) Apr 12

ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ಗೆ ಗಿಗ್‌ ತೆರಿಗೆ: ಸಚಿವ ಸಂಪುಟ ಒಪ್ಪಿಗೆ

ಅಸಂಘಟಿತ ವಲಯದ ಈ ಕಾರ್ಮಿಕರಿಗೆ ಮೊದಲ ಬಾರಿಗೆ ಅಪಘಾತ ವಿಮೆ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಗ ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಪೂರ್ತಿ ಓದಿ

11:08 AM (IST) Apr 12

ದುಡ್ಡಿಲ್ಲದೆ ಪೇಟೆ ಖಾಲಿ ಮಾಡಿ, ಹಳ್ಳಿಯಲ್ಲಿ ಬಟ್ಟೆ ಮಾರಾಟ ಮಾಡ್ತಿರೋ ಖ್ಯಾತ ನಟಿ!

ನಟಿ ಸುಶ್ಮಿತಾ ಸೇನ್‌ ಅವರ ನಾದಿನಿ ಈಗ ಮುಂಬೈ ಬಿಟ್ಟು ಹಳ್ಳಿ ಸೇರಿದ್ದಾರೆ. ಇದಕ್ಕೆ ಆರ್ಥಿಕ ಸಮಸ್ಯೆಯೇ ಕಾರಣ ಅಂತೆ. 
 

ಪೂರ್ತಿ ಓದಿ

11:03 AM (IST) Apr 12

ಅಜ್ಞಾತವಾಸಿ ಸಿನಿಮಾ ವಿಮರ್ಶೆ: ತಣ್ಣಗೆ ಕಾಡುವ ಸಾವು, ಬದುಕು, ಪ್ರೀತಿ

ಶಂಕರಪ್ಪನದ್ದು ಕೊಲೆ ಎಂದು ಅಷ್ಟು ಗಟ್ಟಿಯಾಗಿ ಹೇಳುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಹುಟ್ಟಿಕೊಂಡ ಬೆನ್ನೆಲ್ಲೇ ಮಲೆನಾಡಿನ ಹಸಿರು ಪರಿಸರದಲ್ಲಿ ಸಾವು, ಬದುಕು ಮತ್ತು ಪ್ರೀತಿ ಈ ಮೂರು ತಣ್ಣಗೆ ಕಾಡುತ್ತವೆ.

ಪೂರ್ತಿ ಓದಿ

More Trending News