LIVE NOW
Published : Mar 01, 2026, 06:24 AM ISTUpdated : Mar 02, 2026, 06:23 AM IST

Karnataka News Live: ಕಿಡ್ನಿ ರೋಗಿಗಳೇ, ಈ 5 ಸರಳ ಆಹಾರಗಳನ್ನು ತಪ್ಪದೇ ಬಳಸಿ!

ಸಾರಾಂಶ

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಲೈಂಗಿ*ಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಖಾಸಗಿ ಶಾಲೆಯ ಮಾಲೀಕ ಸೇರಿ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

8 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಸತಿ ಶಾಲೆಯ ಮುಖ್ಯಸ್ಥ ಧನಂಜಯ್‌, ಕೃತ್ಯಕ್ಕೆ ನೆರವಾದ ಆರೋಪದ ಮೇಲೆ ಮಹಿಳಾ ವಾರ್ಡನ್‌ ಮತ್ತು ಕೃತ್ಯದ ಬಗ್ಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಧನಂಜಯ್‌ ಪತ್ನಿಯನ್ನು ಬಂಧಿಸಲಾಗಿದೆ. ಬಾಲಕಿಯ ಪಾಲಕರು ನೀಡಿದ ದೂರಿನನ್ವಯ ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

06:23 AM (IST) Mar 02

ಕಿಡ್ನಿ ರೋಗಿಗಳೇ, ಈ 5 ಸರಳ ಆಹಾರಗಳನ್ನು ತಪ್ಪದೇ ಬಳಸಿ!

ಕಿಡ್ನಿಗಳ ಆರೋಗ್ಯವನ್ನು ಸುಧಾರಿಸಲು ಆಹಾರ ಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಯಾಕಂದ್ರೆ, ದೇಹದಲ್ಲಿನ ತ್ಯಾಜ್ಯಗಳನ್ನು ಫಿಲ್ಟರ್ ಮಾಡಲು, ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಮತ್ತು ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಕಿಡ್ನಿಗಳು ಮುಖ್ಯವಾಗಿವೆ.
Read Full Story

10:17 PM (IST) Mar 01

ಹೊಸ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ, ದೆಹಲಿಗೆ ಬನ್ನಿ ಎಂದ ಹೆಚ್‌ಡಿಕೆ, ರೈತರಿಗೆ ಸಿಗುವುದೇ ನ್ಯಾಯ?

ಆಲೂರಿನಲ್ಲಿ ಹೊಸ ರೈಲ್ವೆ ಮಾರ್ಗಕ್ಕೆ ಭೂಮಿ ಕಳೆದುಕೊಳ್ಳುವ ರೈತರು ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ. ರೈಲ್ವೆ ಸಚಿವರೊಂದಿಗೆ ಸಮಾಲೋಚಿಸಿ ಸೂಕ್ತ ಬೆಲೆ ಕೊಡಿಸುವ ಭರವಸೆ ನೀಡಿದ್ದಾರೆ.

Read Full Story

10:15 PM (IST) Mar 01

ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ

ಚಿಕ್ಕಬಲ್ಳಾಪುರದ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ, ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಅಲೀಪುರ ಮಿನಿ ಇರಾನ್ ಎಂದೇ ಗುರುತಿಸಿಕೊಂಡಿದೆ.

 

Read Full Story

09:58 PM (IST) Mar 01

ಕೈಗಾ ಅಣುಸ್ಥಾವರ - ಅಣು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮ ನಿರ್ಭರತೆ - ಡಾ.ಅಜಿತ್ ಕುಮಾರ್ ಮೊಹಂತಿ

ಕಾರವಾರದ ಕೈಗಾದಲ್ಲಿ 5 ಮತ್ತು 6ನೇ ಅಣುವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದು ದೇಶದ ಅಣುಶಕ್ತಿ ತಂತ್ರಜ್ಞಾನದಲ್ಲಿನ ಸಂಪೂರ್ಣ ಆತ್ಮನಿರ್ಭರತೆಯನ್ನು ಸಾರುತ್ತದೆ. ಈ ಹೊಸ ಘಟಕಗಳು ತಲಾ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.

Read Full Story

09:19 PM (IST) Mar 01

ಬೆಂಗಳೂರು–ಅಶೋಕಪುರಂ ಮೆಮು ರೈಲು ವಿಳಂಬ, ಬಿಡದಿಯಲ್ಲಿ ಪ್ರಯಾಣಿಕರ ಪ್ರತಿಭಟನೆ, ಲಘು ಲಾಠಿ ಚಾರ್ಜ್!

ಬೆಂಗಳೂರು–ಅಶೋಕಪುರಂ ಮೆಮು ರೈಲು ತಾಂತ್ರಿಕ ದೋಷದಿಂದ ಸುಮಾರು ಒಂದೂವರೆ ಗಂಟೆ ವಿಳಂಬವಾದ ಹಿನ್ನೆಲೆಯಲ್ಲಿ, ಬಿಡದಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.

Read Full Story

08:12 PM (IST) Mar 01

ಯುದ್ಧಭೀತಿ ಹಿನ್ನೆಲೆ - ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ಕೂಗು! ಸಹಾಯವಾಣಿ ತೆರೆದ ಜಿಲ್ಲಾಡಳಿತ

ಇಸ್ರೇಲ್-ಇರಾನ್ ಯುದ್ಧ ಭೀತಿಯಿಂದಾಗಿ ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಪ್ರವಾಸಿಗರು, ಉದ್ಯೋಗಿಗಳು ಮತ್ತು ವಯೋವೃದ್ಧರು ತೀವ್ರ ಸಂಕಷ್ಟದಲ್ಲಿದ್ದು, ಅವರ ನೆರವಿಗಾಗಿ ಜಿಲ್ಲಾಡಳಿತಗಳು ಸಹಾಯವಾಣಿಗಳನ್ನು ಸ್ಥಾಪಿಸಿವೆ.

Read Full Story

07:42 PM (IST) Mar 01

Dog Satish ಮಗನಿಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ? 1 ಕೋಟಿಗೆ ಆಫರ್​; ಏನಿದು ಬಿಸಿಬಿಸಿ ಸುದ್ದಿ?

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರ ಮಗ ಹರ್ಷ್ ಅವರನ್ನು ನಾಯಕನನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹರ್ಷ್‌ಗೆ ನಾಯಕಿಯಾಗಿ ನಟಿ ರಚಿತಾ ರಾಮ್‌ಗೆ ಒಂದು ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 

Read Full Story

07:06 PM (IST) Mar 01

ರಾಮನಗರದಲ್ಲಿ ಮಾರ್ಚ್‌5 ರಂದು ಉದ್ಯೋಗ ಮೇಳ, ಬರೋಬ್ಬರಿ 171 ಕಂಪೆನಿಗಳು ಭಾಗಿ, ನೀವು ಸಿದ್ಧರಿದ್ದೀರಾ?

ರಾಮನಗರದಲ್ಲಿ ಮಾರ್ಚ್ 5 ರಂದು ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ 171ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ.

Read Full Story

05:48 PM (IST) Mar 01

ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಿ - ಹಂತ ಹಂತದ ಮಾಹಿತಿ ಇಲ್ಲಿದೆ

ವಿವಾಹ ನೋಂದಣಿ ಈಗ ಕಡ್ಡಾಯವಾಗಿದ್ದು, ಸರ್ಕಾರಿ ಸೌಲಭ್ಯಗಳಿಗೆ ಇದು ಅವಶ್ಯಕ. ಕರ್ನಾಟಕ ಸರ್ಕಾರವು ಕಾವೇರಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಅವಕಾಶ ನೀಡಿದೆ. ಮನೆಯಲ್ಲೇ ಕುಳಿತು ವಿವಾಹ ನೋಂದಣಿ ಮಾಡುವ ಹಂತ-ಹಂತದ ಮಾಹಿತಿ ಮತ್ತು ಬೇಕಾದ ದಾಖಲೆಗಳ ವಿವರ ಇಲ್ಲಿದೆ.
Read Full Story

05:41 PM (IST) Mar 01

ಬೀದರ್ - ಶೀಲ ಶಂಕಿಸಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ, ರಾತ್ರಿ ಇಡೀ ಜಗಳವಾಡಿ ಬೆಳಗ್ಗೆ ಕಲ್ಲು ಎತ್ತಿ ಹಾಕಿ ಕೊಂದ!

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ, ಅನೈತಿಕ ಸಂಬಂಧದ ಶಂಕೆಯಿಂದ ಪತಿ ಕಿಶನ್ ತನ್ನ ಪತ್ನಿ ಅಶ್ವಿನಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾತ್ರಿಯಿಡೀ ಜಗಳವಾಡಿದ ನಂತರ ನಸುಕಿನ ಜಾವ ಈ ಕೃತ್ಯ ಎಸಗಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
Read Full Story

04:46 PM (IST) Mar 01

ಎಂಗೇಜ್​ಮೆಂಟ್​ ಬೆನ್ನಲ್ಲೇ ಭಾರ್ಗವಿ- ಜೈದೇವ್​ ಹೋಟೆಲ್​ ಸುತ್ತಾಟ - ರಾಧಾ-ರಾಣವ್​ ಫೋಟೋ ವೈರಲ್

'ಅಮೃತಧಾರೆ' ಸೀರಿಯಲ್‌ನಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಧಾರಿಗಳಾಗಿದ್ದ ರಾಧಾ ಭಗವತಿ ಮತ್ತು ರಾಣವ್ ಗೌಡ ಇದೀಗ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ರಿಯಲ್ ಲೈಫ್‌ನಲ್ಲಿ ಒಂದಾಗಿದ್ದು, ಅವರ ನಿಶ್ಚಿತಾರ್ಥದ ನಂತರದ ಕ್ಷಣಗಳು ಮತ್ತು ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ.

Read Full Story

04:36 PM (IST) Mar 01

ಹುಸಿಮುನಿಸು, ಪ್ರೀತಿ, ಕೋಳಿ ಜಗಳ; ಮದುವೆಯಾದ್ಮೇಲೆ ವಿಡಿಯೋ ಶೇರ್‌ ಮಾಡಿದ ನಟಿ ರಶ್ಮಿಕಾ ಮಂದಣ್ಣ

Actress Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮದುವೆಯಾಗಿ, ಖುಷಿ ಅಲೆಯಲ್ಲಿ ತೇಲುತ್ತಿದ್ದಾರೆ. ಕುಟುಂಬಸ್ಥರ ಸಾಕ್ಷಿಯಾಗಿ, ಸ್ನೇಹಿತರು, ಆಪ್ತರ ಮುಂದೆ ಉದಯಪುರದಲ್ಲಿ ಗ್ರ್ಯಾಂಡ್‌ ಆಗಿ ಮದುವೆಯಾದ ಜೋಡಿ ತಿರುಮಲ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

Read Full Story

04:20 PM (IST) Mar 01

ಇವ್ರ ಎದುರು ಡೈಲಾಗೇ ಮರೆತುಹೋಗತ್ತೆ ಎಂದ ಸುನಿ - ಅಕ್ಕ-ತಮ್ಮ, ಆಂಟಿ ಲವರ್​ ಕಮೆಂಟ್ಸ್​ಗೆ ಹೇಳಿದ್ದೇನು?

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ನಿಶ್ಚಿತಾರ್ಥ ನಡೆದಿದೆ. ಆದರೆ ಮಲ್ಲಿ, ಜೈದೇವ್ ಪತ್ನಿ ಎಂಬ ಸತ್ಯ ಸುನಿಗೆ ತಿಳಿದು ಆಘಾತವಾಗಿದೆ. ಇದರ ನಡುವೆ, ತಮ್ಮಿಬ್ಬರ ವಯಸ್ಸಿನ ಅಂತರದ ಬಗ್ಗೆ ಟ್ರೋಲ್ ಮಾಡುವವರಿಗೆ ನಟರಾದ ಯಶು ಮತ್ತು ಅನ್ವಿತಾ ಸಾಗರ್ ಪ್ರತಿಕ್ರಿಯಿಸಿದ್ದಾರೆ.
Read Full Story

04:10 PM (IST) Mar 01

‌ಇರಾನ್-ಇಸ್ರೇಲ್ ಯುದ್ಧದ ಭೀತಿ ಮಧ್ಯೆ ದುಬೈನಲ್ಲಿದ್ದೇ ಪರಿಸ್ಥಿತಿ ವಿವರಿಸಿದ ನಟಿ ದೀಪಿಕಾ ದಾಸ್!

ಇರಾನ್‌ ಇಸ್ರೇಲ್‌ ಯುದ್ಧದ ನಡುವೆ ಕೆಲವರು ದುಬೈ, ಕತಾರ್‌ನಲ್ಲಿದ್ದಾರೆ. ಅಲ್ಲಿಂದ ಭಾರತಕ್ಕೆ ಬರಲು ಕೆಲ ಕನ್ನಡಿಗರು ಒದ್ದಾಡುತ್ತಿದ್ದಾರೆ. ಹಾಗೆ ದೀಪಿಕಾ ದಾಸ್‌ ಕೂಡ ದುಬೈನಲ್ಲಿದ್ದಾರೆ. ಈಗ ಅಲ್ಲಿನ ಪರಿಸ್ಥಿತಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

03:50 PM (IST) Mar 01

ಹಾವೇರಿ - ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ, ದೇವರ ದರ್ಶನ ಪಡೆದ ನವಜೋಡಿ ಮನೆ ಸೇರಲೇ ಇಲ್ಲ!

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು, ಇತ್ತೀಚೆಗೆ ವಿವಾಹವಾದ ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವರ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

Read Full Story

03:34 PM (IST) Mar 01

ಅಟ್ಯಾಚ್‌ಮೆಂಟ್‌ನಲ್ಲಿ ನಂಬಿಕೆಯಿಲ್ಲ, ಒಬ್ನೇ ಇರೋಕೆ ಖುಷಿ - ರಶ್ಮಿಕಾ ಮದುವೆ ಬಳಿಕ ರಕ್ಷಿತ್‌ ಶೆಟ್ಟಿ Interview

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಆದರು. ಈ ಹಿಂದೆ ರಶ್ಮಿಕಾ ಜೊತೆ ಎಂಗೇಜ್‌ ಆಗಿದ್ದ ರಕ್ಷಿತ್‌ ಶೆಟ್ಟಿ ಅವರು ಕೆಲ ಸಮಯದಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ. 3 ವರ್ಷಗಳ ಬಳಿಕ ಕನ್ನಡ ಪ್ರಭ ಪತ್ರಿಕೆಗೆ ಸಂದರ್ಶನ ನೀಡಿದ್ದರು. ರಶ್ಮಿಕಾ ಮದುವೆ ಬಳಿಕ ರಕ್ಷಿತ್‌ ಅವರು ಸಂದರ್ಶನ ನೀಡಿದ್ದಾರೆ.

 

Read Full Story

02:53 PM (IST) Mar 01

Iran Israel War - ವಿಮಾನವಿಲ್ಲ, ದುಬೈನಲ್ಲಿ ಸಿಲುಕಿಕೊಂಡಿರೋ ಕನ್ನಡ ಸೆಲೆಬ್ರಿಟಿಗಳಿವರು!

Iran Israel Conflict: ಇರಾನ್‌ ಹಾಗೂ ಇಸ್ರೇಲ್‌ ಯುದ್ಧದ ಪರಿಣಾಮ ಬೇರೆ ದೇಶದ ಮೇಲೆ ಕೂಡ ಆಗಿದೆ. ಇನ್ನೊಂದು ಕಡೆ ಪಾಕಿಸ್ತಾನ್-ತಾಲಿಬಾನ್‌ ನಡುವೆ ಕೂಡ ಉದ್ವಿಘ್ನ ವಾತಾವರಣ ಶುರುವಾಗಿದೆ. ಅಂದಹಾಗೆ ಕನ್ನಡದ ಸೆಲೆಬ್ರಿಟಿಗಳು ದುಬೈನಲ್ಲಿದ್ದು, ಅಲ್ಲಿಂದ ಭಾರತಕ್ಕೆ ಬರಲು ಒದ್ದಾಡುತ್ತಿದ್ದಾರೆ. 

Read Full Story

01:03 PM (IST) Mar 01

ಇರಾನ್-ಇಸ್ರೇಲ್‌ ಯುದ್ಧ - ಭಾರತಕ್ಕೆ ರಫ್ತು, ಆಮದು ಆಗುವ ವಸ್ತುಗಳೇನು? ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಾ?

ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಇದರ ಜೊತೆಗೆ ಬೇರೆ ರಾಷ್ಟ್ರಗಳು ಕೂಡ ಇಲ್ಲಿ ಮೂಗು ತೂರಿಸುತ್ತಿವೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ ಬೀರಲಿದೆ ಇರಾನ್‌ನೊಂದಿಗೆ ಭಾರತದ ಸಂಬಂಧ ಹೇಗಿದೆ? ಏನೆಲ್ಲ ಪದಾರ್ಥ, ವಸ್ತುಗಳು ಆಮದು, ರಫ್ತು ಆಗುತ್ತವೆ?

Read Full Story

12:33 PM (IST) Mar 01

Bigg Boss ಗೆಲುವಿನ ಬಳಿಕ ರಕ್ಷಿತಾ ಶೆಟ್ಟಿ ಕನಸಿನ ಹುಡುಗನ ಆಯ್ಕೆ ಬದಲಾಯ್ತು! ಪುಟ್ಟಿ ಮಾತಿಗೆ ಫ್ಯಾನ್ಸ್​ ಅಚ್ಚರಿ

ಬಿಗ್​ಬಾಸ್​ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮಗೆ ಬೇಕಾದ ಹುಡುಗನ ಬಗ್ಗೆ ಮಾತನಾಡಿದ್ದಾರೆ. Bigg Boss ಮನೆಯಲ್ಲಿ ಇರುವಾಗ ತಮ್ಮ ಕನಸಿನ ಹುಡುಗ ರೈತನಾಗಿರಬೇಕು ಇತ್ಯಾದಿಯಾಗಿ ಹೇಳಿದ್ದರು. ಇದೀಗ ರನ್ನರ್​ ಅಪ್​ ಆಗಿ ಗೆಲುವು ಸಾಧಿಸಿದ ಬಳಿ ಮಂಗಳೂರು ಪುಟ್ಟಿ ಹೇಳಿದ್ದೇನು? 

Read Full Story

12:29 PM (IST) Mar 01

ಪಾಕಿಸ್ತಾನ-ತಾಲಿಬಾನ್ ಸಂಘರ್ಷ; ಆಟ ಶುರು ಮಾಡಿದ ಅಮೆರಿಕದ ಡೊನಾಲ್ಡ್ ಟ್ರಂಪ್; ಭಾರತಕ್ಕೆ ಸಮಸ್ಯೆ?

Pakistan Taliban Conflict; ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನದ ಸ್ವರಕ್ಷಣೆ ಹಕ್ಕನ್ನು ಅಮೆರಿಕ ಬೆಂಬಲಿಸಿದೆ. ಯುರೋಪಿಯನ್ ಯೂನಿಯನ್ ಸಂಘರ್ಷ ಕಡಿಮೆ ಮಾಡುವಂತೆ ಒತ್ತಾಯಿಸಿದೆ. ಈ ಮಧ್ಯೆ, ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬ ತಾಲಿಬಾನ್ ವಾದವನ್ನು ಪಾಕಿಸ್ತಾನ ತಳ್ಳಿಹಾಕಿದೆ.

 

Read Full Story

11:55 AM (IST) Mar 01

ಜಗತ್ತು ಹಿಂದೆಂದೂ ಕಂಡರಿಯದ ದಾಳಿ ನಡೆಸುತ್ತೇವೆ - ಇಸ್ರೇಲ್-ಅಮೆರಿಕಾಗೆ ಇರಾನ್‌ ಖಡಕ್ ಎಚ್ಚರಿಕೆ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಸೇನಾ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಅಧಿಕೃತ ಮೂಲಗಳು ದೃಢಪಡಿಸಿವೆ. ಈ ಘಟನೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್ ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದೆ.

Read Full Story

11:46 AM (IST) Mar 01

Raichur - ಓವರ್‌ಟೇಕ್ ದುರಂತ; ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಹರಿದ ಸಾರಿಗೆ ಬಸ್

ರಾಯಚೂರು ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಕೆಳಗೆ ಬಿದ್ದ 21 ವರ್ಷದ ಯುವಕನ ಮೇಲೆ ಬಸ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಓವರ್‌ಟೇಕ್ ಮಾಡುವ ಭರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತದ ಸಂಪೂರ್ಣ ದೃಶ್ಯ ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read Full Story

11:26 AM (IST) Mar 01

ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು - ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್

ದೇಶದಲ್ಲಿ ಪ್ರತಿವರ್ಷ 80 ಸಾವಿರದಿಂದ ಒಂದು ಲಕ್ಷದವರೆಗೆ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲಿ 40 ಸಾವಿರ ಮಹಿಳೆಯರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

Read Full Story

11:08 AM (IST) Mar 01

ಬೆಂಗಳೂರಿನ ವಿಲ್ಲಾ ಪಾರ್ಟಿ & ರೇ*ಪ್ - ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ ಬಂಧನ

ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಮೇಲಿನ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಿಖಿಲ್‌ನ ಸ್ನೇಹಿತನಾಗಿರುವ ಈತ, ಘಟನೆ ನಡೆದಿದೆ ಎನ್ನಲಾದ ವಿಲ್ಲಾವನ್ನು ಬುಕ್ ಮಾಡಿದ್ದನು. 

Read Full Story

09:44 AM (IST) Mar 01

ಬೇಸಿಗೆಯ ಬಿಸಿ - ಛಾವಣಿ ಮೇಲಿನ ಟ್ಯಾಂಕ್‌ನಿಂದ ಬಿಸಿನೀರು ಬರ್ತಿದೆಯಾ? ಕೂಲ್ ವಾಟರ್‌ಗೆ ಹೀಗೆ ಮಾಡಿ

ಬೇಸಿಗೆಯಲ್ಲಿ ಛಾವಣಿ ಮೇಲಿರುವ ನೀರಿನ ಟ್ಯಾಂಕ್ ಬಿಸಿಯಾಗುವುದು ಸಾಮಾನ್ಯ. ಸೂರ್ಯನ ನೇರ ಬಿಸಿಲು ತಾಗದಂತೆ ನೋಡಿಕೊಳ್ಳುವುದು, ಥರ್ಮಾಕೋಲ್ ಬಳಸುವುದು, ಟ್ಯಾಂಕ್‌ಗೆ ಬಿಳಿ ಬಣ್ಣ ಬಳಿಯುವುದು ಮತ್ತು ಸಣ್ಣ ಛಾವಣಿ ನಿರ್ಮಿಸುವಂತಹ ಸರಳ ವಿಧಾನಗಳಿಂದ ನೀರನ್ನು ತಂಪಾಗಿ ಇಡಬಹುದು.
Read Full Story

09:15 AM (IST) Mar 01

ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ

Bengaluru Villa Party ಜಕ್ಕೂರು ಸಮೀಪದ ವಿಲ್ಲಾ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾ*ಚಾರ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಸಂತ್ರಸ್ತೆ ಸೇರಿದಂತೆ 10 ಜನರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಿದ್ದಾರೆ. 

Read Full Story

08:59 AM (IST) Mar 01

ಇರಾನ್-ಇಸ್ರೇಲ್‌ ದಾಳಿ; ಮುಂದಾಗೋ ಭೃಗು ಅಂಗಾರಕ ಯುತಿ ಅಪಾಯ ಬಿಚ್ಚಿಟ್ಟ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಾಗಿದೆ. ಇರಾಕ್‌ ಹಾಗೂ ಇರಾನ್‌ ಸಂಘರ್ಷದಲ್ಲಿ ಸಾಕಷ್ಟು ಜನರು ಒದ್ದಾಡುತ್ತಿದ್ದಾರೆ. ಈಗ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

08:38 AM (IST) Mar 01

ಪ್ರತಿಭಾವಂತನ ಸ್ಥಾನವನ್ನು ನೂರು ಕಂಪ್ಯೂಟರ್ ತುಂಬಿಸಲಾಗದು - ಇಸ್ರೋ ವಿಜ್ಞಾನಿ ಡಾ.ದಾರುಕೇಶ

ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಅದರ ಬಗ್ಗೆ ನಿಖರವಾಗಿ ಹೇಳಲು ಆಗಲ್ಲ. ಇಸ್ರೋಗೆ ಸಂಶೋಧನೆಗಾಗಿ ಅನುದಾನದ ಕೊರತೆಯಿಲ್ಲ. ಭಾರತ ಸರ್ಕಾರ ಹಲವಾರು ಅನುದಾನಗಳನ್ನು ಸಂಶೋಧನೆಗೆ ಮೀಸಲಿಟ್ಟಿದೆ.

Read Full Story

08:30 AM (IST) Mar 01

ಅರ್ಧಕ್ಕೆ ನಿಂತ ಗ್ರಾಮದ ದೇಗುಲ ನಿರ್ಮಾಣಕ್ಕೆ ₹2.50 ಲಕ್ಷ ನೀಡಿದ 850 ‘ಗೃಹಲಕ್ಷ್ಮೀ’ಯರು

ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ, 850 ಮಹಿಳೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅರ್ಧಕ್ಕೆ ನಿಂತಿದ್ದ ಯಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕೆ ಸಮರ್ಪಿಸಿದ್ದಾರೆ.  ದೇಗುಲ ಕಾಮಗಾರಿಯನ್ನು ಪೂರ್ಣಗೊಳಿಸಲು ಈ ಮಹಿಳೆಯರು ಒಟ್ಟು ₹16 ಲಕ್ಷ ದೇಣಿಗೆ ನೀಡಲು ಮುಂದಾಗಿದ್ದಾರೆ.

Read Full Story

08:11 AM (IST) Mar 01

ಜೀವಂತ ರತಿ-ಮನ್ಮಥರನ್ನು ನಗಿಸಿ 13 ಲಕ್ಷ ಬಹುಮಾನ ಪಡೆಯಿರಿ; 67 ವರ್ಷದಿಂದ ಯಾರಿಗೂ ಸಾಧ್ಯವಾಗಿಲ್ಲ

ರಾಣಿಬೆನ್ನೂರಿನಲ್ಲಿ ಹೋಳಿ ಹಬ್ಬದ ಮುನ್ನಾದಿನ ಜೀವಂತ ರತಿ-ಮನ್ಮಥರನ್ನು ಕೂರಿಸುವ ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ. ಇವರನ್ನು ನಗಿಸಿದವರಿಗೆ ಲಕ್ಷಾಂತರ ರೂಪಾಯಿ ಬಹುಮಾನ ಘೋಷಿಸಲಾಗಿದ್ದರೂ, ಕಳೆದ 67 ವರ್ಷಗಳಿಂದ ಯಾರೂ ಈ ಸವಾಲಿನಲ್ಲಿ ಯಶಸ್ವಿಯಾಗಿಲ್ಲ. 

Read Full Story

07:25 AM (IST) Mar 01

ಕೃಷಿಯಲ್ಲಿ ತೊಡಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಾಜೀನಾಮೆ!

ಕೊಡಗಿನ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯದಲ್ಲಿದ್ದ ತೇಜಸ್ವಿ (32) ಅವರು ತಮ್ಮ ಹುಟ್ಟೂರಲ್ಲಿ ಕೃಷಿ ಮಾಡುವ ಆಸಕ್ತಿಯಿಂದ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದಾರೆ.

Read Full Story

07:06 AM (IST) Mar 01

ಇಂದಿನಿಂದ ಮೊಬೈಲಲ್ಲಿ ಸಿಮ್‌ ಇದ್ರೆ ಮಾತ್ರ ವಾಟ್ಸಪ್‌ ಬಳಕೆ!

ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯುವಾಗ ನೋಂದಾಯಿಸಲಾಗುವ ಸಂಖ್ಯೆಯ ಸಿಮ್‌ಕಾರ್ಡ್‌ ಮೊಬೈಲ್‌ನಲ್ಲಿ ಇದ್ದರೆ ಮಾತ್ರ ಇಂದಿನಿಂದ ಆ ಆ್ಯಪ್‌ಗಳನ್ನು ಬಳಸಲಾಗುವುದು. ಅಂತೆಯೇ ವಾಟ್ಸಪ್‌ ಮತ್ತು ಟೆಲಿಗ್ರಾಂಗೆ ವೆಬ್‌ನಲ್ಲಿ ಲಾಗ್‌ಇನ್‌ ಆಗಿದ್ದರೆ, ಅವುಗಳು 6 ತಾಸುಗಳ ಬಳಿಕ ತಾವಾಗಿಯೇ ಲಾಗ್‌ಔಟ್‌ ಆಗಲಿವೆ.

Read Full Story

07:03 AM (IST) Mar 01

ಕಾಂಗ್ರೆಸ್‌ ಈಗ ಮುಸ್ಲಿಂ ಲೀಗ್‌ - ಮಾವೋವಾದಿ ಆಗಿದೆ - ಮೋದಿ ವಾಗ್ದಾಳಿ

ದೆಹಲಿಯಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆ ವೇಳೆ ಶರ್ಟ್‌ ಬಿಚ್ಚಿ ಬನಿಯನ್‌ನಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ನ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದು, ‘ಇಂದು ವಿಪಕ್ಷವು ಮುಸ್ಲಿಂ ಲೀಗ್‌-ಮಾವೋವಾದಿ ಕಾಂಗ್ರೆಸ್‌ ಆಗಿದೆ.

Read Full Story

06:55 AM (IST) Mar 01

‘ವಿಶ್ವದ ಅತಿ ಬ್ಯುಸಿ’ ದುಬೈ ಏರ್ಪೋರ್ಟ್‌ ಸ್ಥಗಿತ

ಇರಾನ್‌ ದಾಳಿಯ ಕಾರಣ ವಿಶ್ವದ ಅತಿ ಬ್ಯುಸಿ ಏರ್‌ಪೋರ್ಟ್‌ ಎಂದೇ ಪ್ರಖ್ಯಾತಿ ಪಡೆದ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

Read Full Story

06:49 AM (IST) Mar 01

ಬಂಗಾಳ ಅಂತಿಮ ಮತಪಟ್ಟಿ ಬಿಡುಗಡೆ - 63 ಲಕ್ಷ ಹೆಸರು ಡಿಲೀಟ್‌

ಪ. ಬಂಗಾಳದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮುಗಿದಿದ್ದು, ಅಂತಿಮ ಮತಪಟ್ಟಿ ಬಿಡುಗಡೆ ಆಗಿದೆ ಹಾಗೂ ಸುಮಾರು 63 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಇನ್ನೂ 60 ಲಕ್ಷ ಮಂದಿ ಹೆಸರು ಪರಿಶೀಲನೆ ಬಾಕಿ ಇದೆ.

Read Full Story

06:38 AM (IST) Mar 01

ಸ್ತ್ರೀಯರಿಗೆ ಗರ್ಭಕಂಠ ಕ್ಯಾನ್ಸರ್‌ ಲಸಿಕೆಗೆ ಮೋದಿ ಚಾಲನೆ

ಇತ್ತೀಚೆಗೆ ಸ್ತ್ರೀಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿರುವ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮವೈರಸ್) ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜಸ್ಥಾನದ ಅಜ್ಮೇರ್‌ನಲ್ಲಿ ಚಾಲನೆ ನೀಡಿದರು.

Read Full Story

06:32 AM (IST) Mar 01

ಆ್ಯಂಥ್ರೋಪಿಕ್‌ ಎಐ ತಂತ್ರಜ್ಞಾನಕ್ಕೆ ಟ್ರಂಪ್‌ ನಿರ್ಬಂಧ

ಆ್ಯಂಥ್ರೋಪಿಕ್‌ ಟೆಕ್ನಾಲಜಿ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಗರಂ ಆಗಿದ್ದಾರೆ. ಸಂಸ್ಥೆಯ ಎಐ ತಂತ್ರಜ್ಞಾನವನ್ನು ಸೇನೆಗೆ ಮುಕ್ತವಾಗಿ ಬಳಸಲು ಅವಕಾಶ ನೀಡದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್‌, ಅಮೆರಿಕದ ರಕ್ಷಣಾ ಸಂಸ್ಥೆಗಳು ಆ್ಯಂಥ್ರೋಪಿಕ್‌ ಟೆಕ್ನಾಲಜಿ ಬಳಸದಂತೆ ಆದೇಶ ಹೊರಡಿಸಿದ್ದಾರೆ.

Read Full Story

More Trending News