Karnataka News updates: ಜಿಂಕೆ ಕೊಂಬು, ಕಟ್ಟಿಗೆ ಸಾಗಿಸುತ್ತಿದ್ದ ವಾಹನ ವಶಕ್ಕೆ 

ಕಾರವಾರ (ಉತ್ತರಕನ್ನಡ): ಜಿಂಕೆ ಕೊಂಬು ಹಾಗೂ ಕಟ್ಟಿಗೆ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದು, ವಾಹನ ಚಾಲಕನನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಶಿರಸಿಯಿಂದ ಗೋವಾಕ್ಕೆ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳಿಂದ ದಾಳಿ. ಕತಗಾಲ ಚೆಕ್ ಪೊಸ್ಟ್ ಬಳಿ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕತ್ತಗಾಲ ಚೆಕ್ ಪೊಸ್ಟ್ ಇದೆ. ಕತಗಾಲ ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ವಿಧ್ಯಾರ್ಥಿ ಘಟಕದ ಕಾರ್ಯಕರ್ತರಿಂದ ನೃತ್ಯಗಾರರ ಮೇಲೆ ಹಲ್ಲೆ. ಕಾಂಗ್ರೆಸ್ ನ ಸ್ವಾತಂತ್ರ್ಯ ನಡಿಗೆ ವೇಳೆ ನೃತ್ಯಗಾರರಿಗೆ ಹಲ್ಲೆ ಮಾಡಿರುವ NSUI ಕಾರ್ಯಕರ್ತರು. ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ NSUI ಕಾರ್ಯಕರ್ತರ ಹಲ್ಲೆ ಪ್ರಕರಣ. ಫ್ಲಾಶ್ ಮಾಬ್ ಮಾಡ್ತಿದ್ದ‌ ನೃತ್ಯಗಾರರ ಮೇಲೆ NSUI ಸೆಕ್ರೆಟರಿ ದೀಪಕ್ ಗೌಡ, ಉಪಾಧ್ಯಕ್ಷ ಜಯಂದರ್‌ರಿಂದ ಹಲ್ಲೆ. ವಿವಿ ಪುರಂ ಜೈನ್ ಕಾಲೇಜ್ ಬಳಿ ಘಟನೆ ನಡೆದಿದ್ದು, ವಿವಿಪುರಂ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ. 

ಶಿವಮೊಗ್ಗದಲ್ಲಿ ಪರಿಸ್ಥಿತಿ ಸುಧಾರಿಸಿದಂತೆ ಕಂಡರೂ, ಬೂದಿ ಮುಚ್ಚಿದ ಕೆಂಡದಂತಿದೆ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ದೆಹಲಿಗೆ ತರೆಳಿದ್ದು, ಆಡಿಕೆ ಸಮಸ್ಯೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಗೃಹ ಸಚಿವರ ಜೊತೆ ಜೀವರಾಜ್, ಹರತಾಳು ಹಾಲಪ್ಪ ಸಹ ದೆಹಲಿಗೆ ಪ್ರಯಾಣಿಸಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರ ಭೇಟಿಯಾಗಲಿದೆ ಈ ನಿಯೋಗ. ಕರ್ನಾಟಕದ ರಾಜಕೀಯ, ಅಪರಾಧ ಜಗತ್ತಿನ ಪ್ರತಿ ಕ್ಷಣದ ಮಾಹಿತಿಗೆ ಸುವರ್ಣನ್ಯೂಸ್ ಲೈವ್ ಬ್ಲಾಗ್‌ಗೆ ಲಾಗಿನ್ ಆಗಿರಿ. 

5:35 PM

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಬಿಎಸ್‌ವೈ

ಬಿಎಸ್ ವೈ ಹೇಳಿಕೆ, ಬಿಎಸ್ ವೈ ಗೆ ಯಾವ ಸ್ಥಾನ ಮಾನ ಇಲ್ಲದೇ ಇದ್ದರೂ ರಾಜ್ಯಾದ್ಯಂತ ಪ್ರವಾಸ ಮಾಡ್ತಾರೆ ಅಂತ ಹೈ ಕಮಾಂಡ್ ಗೆ ಗೊತ್ತಿದೆ. ಆದರೂ ಹೆಚ್ಚಿನ ಜಬವ್ದಾರಿ ಕೊಟ್ಟಿದ್ದಾರೆ..
ನೀವು ಇಲ್ಲೇ ಇರ್ತೀರಲಾ, ಗೊತ್ತಾಗುತ್ತದೆ. ಮುಂದೆ ಎಂಥ ಬದಲಾವಣೆ ಆಗುತ್ತೆ ಅಂತ ಗೊತ್ತಾಗುತ್ತೆ. ಸಿಎಂ ಆಗೇ ಬಿಡ್ತೀನಿ ಅನ್ನೋವ್ರಿಗೆ ನಿರಾಸೆ ಆಗುತ್ತೆ. ಮುಂದೆ ಪ್ರಧಾನ ಮಂತ್ರಿ ಮತ್ತೆ ಮೋದಿ ಆಗೋದು ನಿಶ್ಚಿತ. ಹಾಗೆಯೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ...

4:12 PM

ಕರ್ನಾಟಕ ಬಿಜೆಪಿ ಸರ್ವೋಚ್ಚ ನಾಯಕ, ಪ್ರಶ್ನತೀತ‌ ನಾಯಕ ಯಡಿಯೂರಪ್ಪ: ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿಕೆ, ಕರ್ನಾಟಕ ಬಿಜೆಪಿ ಸರ್ವೋಚ್ಚ ನಾಯಕ, ಪ್ರಶ್ನತೀತ‌ ನಾಯಕ ಯಡಿಯೂರಪ್ಪ ಅನ್ನೋದನ್ನು ಹೈಕಮಾಂಡ್ ಸಾಬೀತು ಮಾಡಿದೆ. ದಕ್ಷಿಣ ಭಾಗವಾದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಯಡಿಯೂರಪ್ಪ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ನವರ ನೀತಿ ಯಾವಾಗಲೂ ಬ್ರಿಟಿಷ್ ನೀತಿಯಂತೆ. ಯಡಿಯೂರಪ್ಪ ಸ್ವಹಿಚ್ಚೆಯಿಂದ ರಾಜೀನಾಮೆ ಕೊಟ್ಟಿದ್ರು. ಮೊನ್ನೆ ಮಂತ್ರಾಲಯ ದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ವನ್ಜು ಯಡಿಯೂರಪ್ಪ ಮಾಡಿದ್ದಾರೆ. ಕಾಂಗ್ರೆಸ್‌ನವರು ಏನು ಹೇಳಿದರೂ ಯಡಿಯೂರಪ್ಪ ಅವರ ತಾಳ್ಮೆ ಕಳೆದುಕೊಂಡಿಲ್ಲ. ಯಡಿಯೂರಪ್ಪ ಅವರ ಹೋರಾಟಕ್ಕೆ ನೀವು ಯಾರೂ ಸಾಟಿ ಇಲ್ಲ. ಯಡಿಯೂರಪ್ಪ ನವರ ಜವಬ್ದಾರಿಯಿಂದ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಅವರನ್ನು ಕಡೆಗಣಿಸಿದ್ರು ಅನ್ನೋ ಕಾಂಗ್ರೆಸ್ ನವರಿಗೂ ಇದು ತಕ್ಕ ಉತ್ತರವಾಗಿದೆ.

3:12 PM

Raichuru: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ರಾಯಚೂರು: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಮೀನಗಡದಲ್ಲಿ ಘಟನೆ. ಅಮೀನಗಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ವಿದ್ಯಾರ್ಥಿಗಳು. ಬಿಸಿಯೂಟ ಸೇವಿಸಿದ ಮೇಲೆ ಹೊಟ್ಟೆ ನೋವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು.ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕವಿತಾಳ ಆರೋಗ್ಯ ಕೇಂದ್ರದಲ್ಲಿ ಮುಂದುವರೆದ ಚಿಕಿತ್ಸೆ.

1:10 PM

ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುವ ಹೇಳಿಕೆಗೆ ರಾಮಲು ಸ್ಪಷ್ಟನೆ

ಎಲ್ಲಾ ಸ್ಪಷ್ಟೀಕರಣ ರಾಜ್ಯಧ್ಯಕ್ಷರಿಗೆ ನೀಡಿದ್ದೇನೆ. 2018 ರಲ್ಲಿ 120 ಸ್ಥಾನಗಳಲ್ಲಿ ಅಡ್ಡಾಡ್ಡಿದ್ದೇನೆ. ಮೋದಿಯವರ ನಾಯಕತ್ವದಲ್ಲಿ ವಿರೋಧ ಮಾಡುವವರು ಬಿಜೆಪಿಗೆ ಸೇರಿದ್ದಾರೆ. ಕಡಿಮೆ ಸಮಯ ಸಿಕ್ಕಿದ್ದರಿಂದ ಸಿದ್ದರಾಮಯ್ಯ ಪ್ರಯೋಜನ ಪಡೆದುಕೊಂಡು ಗೆದ್ದರು ಅಂತ ಹೇಳಿದ್ದೇನೆ. ಎಲ್ಲಾ ಹಿಂದುಳಿದ ಜಾತಿ, ಪಂಗಡಗಳು ಒಂದಾಗುತ್ತಿವೆ. ಕಾಂಗ್ರೆಸ್ ವಿರೋಧಿಗಳು ಬಿಜೆಪಿಗೆ ಬರ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಕಿರಿಕಿರಿ ಹೆಚ್ಚಾಗಿದೆ. ಸಿದ್ದರಾಮಯ್ಯನವರು ಬಿಜೆಪಿಗೆ ಬರಬಹುದು ಅಂತ ಅರ್ಥದಲ್ಲಿ ಮಾತನಾಡಿದ್ದೇನೆ. ಸಿದ್ದರಾಮಯ್ಯ ಡಿಕೆಶಿ ಇರುಸುಮುರುಸು ಏನಾಗ್ತಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಬಿಜೆಪಿಗೆ ಬರಬಹುದು ಎಂಬ ಅರ್ಥದಲ್ಲಿ ಹೇಳಿದ್ದೇನೆ. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಬೇಕು ಅಂತ ನಾನು ಹೇಳಿದ್ದು. ಎಂತಹ ಸಮಯದವರೆಗೂ ಮೋದಿ ಇರ್ತಾರೋ, ಅಲ್ಲಿಯವರೆಗೂ ಕಾಂಗ್ರೆಸ್ ಕರ್ನಾಟಕಕ್ಕೆ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ ಬಿಜೆಪಿಗೆ ಬರಬಹುದು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾಗಿ ಸ್ಪಷ್ಟನೆ ‌ನೀಡಿದ್ದಾರೆ ಶ್ರೀರಾಮುಲು.

1:08 PM

ಶ್ರೀ ಕೃಷ್ಣ ಜನ್ಮಾಷ್ಟಮಿ: ಪ್ರಾಣಿವಧೆಗೆ ಬ್ರೇಕ್

19 ರಂದು  ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ.  ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆಗೆ ಬ್ರೇಕ್.   ಮಳಿಗೆಗಳಲ್ಲಿ ಮಾಂಸ ಮಾರಾಟವೂ ಮಾಡುವಂತಿಲ್ಲ. ಮಾಂಸ ಮಾರಾಟ  ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರ (ಪಶುಪಾಲನೆ) ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

1:03 PM

ಕಿಡಿಗೇಡಿಗಳನ್ನು ಶಿಕ್ಷಿಸಲು ನಾವಿದ್ದೇವೆ: ಎಡಿಜಿಪಿ ಆಲೋಕ್ ಕುಮಾರ್

ಶಿವಮೊಗ್ಗ: ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ ಎಂದು ಎಡಿಜಿಪಿ ಆಲೋಕ್ ಕುಮಾರ್ ಭದ್ರಾವತಿಯಲ್ಲಿ ಹೇಳಿಕೆ ನೀಡಿದ್ದಾರೆ. ಬೇರೆ ಕಾರಣಕ್ಕೆ ಭದ್ರಾವತಿಯಲ್ಲಿ ಶಾಂತಿ ಕದಡಿದೆ. ಅದಕ್ಕೆ ಮುಬಾರಕ್ ಎಂಬುವನನ್ನು ಬಂಧಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಸಿಕ್ಕಿದ್ದು, ಪರಿಶೀಲಿಸಲಾಗುತ್ತಿದೆ. ನಮ್ಮ ಅಧಿಕಾರಿಗಳು 12 ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸಿ, ಒಳ್ಳೆ ಕೆಲಸ ಮಾಡಿದ್ದಾರೆ. ನಾವು ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದೇವೆ. ತಪ್ಪು ಮಾಡಿದರೆ ಎಸ್‌ಡಿಪಿಐ ಇರಲಿ, ಡಿಡಿಪಿಐ ಇರಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ವ್ಯಾಪಾರಸ್ಥರು, ಉದ್ಯಮಿಗಳು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸುವುದಕ್ಕೆ ಕಂಟ್ರೋಲ್ ಮಾಡೋದಕ್ಕೆ ನಾವಿದ್ದೇವೆಂದು, ಭರವಸೆ ನೀಡಿದ ಎಡಿಜಿಪಿ ಆಲೋಕ್ ಕುಮಾರ್.

12:56 PM

ಹಲ್ಲೆ ಪ್ರಕರಣದ ದಿನದಲ್ಲೇ ಆರೋಪಿಗಳ ಬಂಧನ: ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಬಿಎಸ್ವೈ ಪುತ್ರ, ಸಂಸದ ಬಿ ವೈ ರಾಘವೇಂದ್ರ ಹೇಳಿಕೆ, ಶಿವಮೊಗ್ಗದಲ್ಲಿ 5 ಲಕ್ಷ ಮನೆಗಳ ಮೇಲೆ‌ ಧ್ವಜ ಹಾರಾಡಿದೆ. ಸಂಭ್ರಮಾಚರಣೆ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ. ಇಂತಹ ಮಾನಸಿಕ ಸ್ಥಿತಿ ಬದಲಾಗಬೇಕು. ಹಿಂದಿನ ಸರಕಾರಗಳ ಅವಧಿಯಲ್ಲಿ ತಿಂಗಳೇ ಕಳೆದರೂ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಪ್ರೇಮಸಿಂಗ್ ಪ್ರಕರಣದಲ್ಲಿ ಒಂದೇ ದಿನದಲ್ಲಿ ನಾಲ್ವರು ಆರೋಪಿಗಳ ಬಂಧನವಾಗಿದೆ. ನೆಟ್ಟಾರು ಹತ್ಯೆ, ಹಿಂದು ಹರ್ಷ ಹತ್ಯೆ ಪ್ರಕರಣಗಳಲ್ಲೂ ತಕ್ಷಣ ಆರೋಪಿಗಳ ಬಂಧನವಾಗಿದೆ. ಈಗ ಎನ್‌ಐಎ ತನಿಖೆ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರು ದಯಮಾಡಿ ಗಮನಿಸಬೇಕು. ಹಿಂದಿನ ಸರ್ಕಾರ ಅವಧಿಯಲ್ಲಿ ಹೇಗೆ ಇತ್ತು ಈಗ ಹೇಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. 

12:27 PM

ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?

ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್
ರೇಣುಕಾಚಾರ್ಯ vs ಕೆ.ಸುಧಾಕರ್
ಸೋಮಶೇಖರ್ vs ಮಾಧುಸ್ವಾಮಿ
ಮುನಿರತ್ನ vs ಮಾಧುಸ್ವಾಮಿ
ಅಶೋಕ್ vs ಅಶ್ವಥ್ ನಾರಾಯಣ್
ಭಗವಂತ್ ಖೂಬಾ vs ಶರಣು ಸಲಗರ
ಕಾರ್ಯಕರ್ತರು vs ಬಿಜೆಪಿ
ಅರಗ ಜ್ಞಾನೇಂದ್ರ vs ಯತ್ನಾಳ್
BSY vs ಸಂತೋಷ್

ಬಿಜೆಪಿ ಒಳಜಗಳಕ್ಕ ಟಾಂಗ್ ನೀಡಿದ ಕರ್ನಾಟಕ ಕಾಂಗ್ರೆಸ್

ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್
ರೇಣುಕಾಚಾರ್ಯ vs ಕೆ.ಸುಧಾಕರ್
ಸೋಮಶೇಖರ್ vs ಮಾಧುಸ್ವಾಮಿ
ಮುನಿರತ್ನ vs ಮಾಧುಸ್ವಾಮಿ
ಅಶೋಕ್ vs ಅಶ್ವಥ್ ನಾರಾಯಣ್
ಭಗವಂತ್ ಖೂಬಾ vs ಶರಣು ಸಲಗರ
ಕಾರ್ಯಕರ್ತರು vs ಬಿಜೆಪಿ
ಅರಗ ಜ್ಞಾನೇಂದ್ರ vs ಯತ್ನಾಳ್
BSY vs ಸಂತೋಷ್

ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?!

— Karnataka Congress (@INCKarnataka)

12:20 PM

Shivamogga: ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ಬಿಜೆಪಿ ಮುಖಂಡರು

ಶಿವಮೊಗ್ಗ: ಶಿವಮೊಗ್ಗದಲ್ಲಿ ಎಎ ಸರ್ಕಲ್ ನಲ್ಲಿ ಸಾವರ್ಕರ್ ಫೋಟೋ ಗಲಾಟೆ ವಿಚಾರ. ಗಲಾಟೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿತ ಪ್ರಕರಣ. ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಪ್ರೇಮ್ ಸಿಂಗ್. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಕೆ.ಎಸ್.ಈಶ್ವರಪ್ಪ, ಬಿ.ವೈ,ರಾಘವೇಂದ್ರ ಹಾಗೂ ಬಿ.ಎಲ್.ಸಂತೋಷ್. ಮಾಜಿ ಸಚಿವರು ಹಾಗೂ ಶಿವಮೊಗ್ಗ ಶಾಸಕರಾಗಿರೋ ಕೆ.ಎಸ್.ಈಶ್ವರಪ್ಪ. ಶಿವಮೊಗ್ಗ ಸಂಸದರಾಗಿರುವ ಬಿ.ವೈ.ರಾಘವೇಂದ್ರ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್. ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖ ವಾಗಲೆಂದು ಹಾರೈಸಿದ ನಾಯಕರು.

11:58 AM

ಮುಂದಿನ ಸಿಎಂ ಮುರುಗೇಶ್ ನಿರಾಣಿ: ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್

ಬಾಗಲಕೋಟೆ: ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ ಎಂಬೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಹುಟ್ಟುಹಬ್ಬದ ಬ್ಯಾನರ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಹಾಕಲಾಗಿತ್ತು. "ಮುಂದಿನ ಮುಖ್ಯಮಂತ್ರಿ, ಜಮಖಂಡಿ ಜಿಲ್ಲೆಯ ಕನಸು ನನಸು ಮಾಡುವ ನಾಯಕ. ಕರ್ನಾಟಕ ಸರ್ಕಾರದ ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ.. 57ನೇ ಜನ್ಮ ದಿನದ ಶುಭಾಶಯಗಳು"  ಎಂದು ಬರೆದ ಬ್ಯಾನರ್. ಆಪ್ತ ಸಹಾಯಕ ಹೆಸರಿನಲ್ಲಿರುವ ಬ್ಯಾನರ್ ಪೋಸ್ಟರ್ ವೈರಲ್ ಆಗಿತ್ತು.  

ಈ ವಿಚಾರಕ್ಕೆ ಸಂಬಂಧಿಸಿದೆ ಸಚಿವ ಮುರುಗೇಶ್ ನಿರಾಣಿ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ್ ಬೊಮ್ಮಾಯಿ ಅವರೇ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿಗಳು. ಅವರ ಕಾರ್ಯ ವೈಖರಿಯಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ, ಪೋಸ್ಟರ್ ಹಾಗೂ ಬ್ಯಾನರ್ ಗಳಲ್ಲಿ ಈ ರೀತಿ ಹಾಕಬಾರದು. ಪ್ರಕಟಣೆ ಮೂಲಕ ಮುರುಗೇಶ್ ನಿರಾಣಿ ಮನವಿ ಮಾಡಿಕೊಂಡಿದ್ದಾರೆ. 

10:19 AM

ಸರ್ಕಾರದ ಜನೋತ್ಸವ ಸಮಾವೇಶ ಮತ್ತೆ ಮುಂದೂಡುವ ಸಾಧ್ಯತೆ?

28 ಆಗಸ್ಟ್ ಗೆ ನಿಗದಿಯಾಗಿರುವ ಸಮಾವೇಶ. ದೊಡ್ಡಬಳ್ಳಾಪುರದಲ್ಲಿ ಸಮಾವೇಶಕ್ಕೆ ಸಿದ್ಧತೆ ಆಗಿದೆ. ಆದ್ರೆ 28 ನೇ ತಾರೀಖು ಪುತ್ತೂರಿನಲ್ಲಿ ಸಂಘದ ಪ್ರಾಂತ ಬೈಟಕ್ ಮೊದಲೆ ನಿಗದಿ ಆಗಿತ್ತು. ಆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಅಧ್ಯಕ್ಷ ಕಟೀಲ್ ಭಾಗಿ ಆಗಬೇಕಿದೆ. ಹೀಗಾಗಿ ನೆನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸರ್ಕಾರದ ಸಮಾವೇಶ ಮತ್ತೆ ಮುಂದುಡೂವ ಬಗ್ಗೆ ಚರ್ಚೆ ಆಗಿದೆ. ಬಹುತೇಕ ಸಮಾವೇಶ ಮತ್ತೆ ಮುಂದೂಡಿಕೆ ಆಗಬಹುದು.

10:17 AM

ಕಾಂಗ್ರೆಸ್ ಸ್ವಾತಂತ್ರ್ಯ ನಡೆಗೆಯಲ್ಲಿ ಆಗಿದ್ದೇನು?

ಡ್ಯಾನ್ಸ್ ಮಾಸ್ಟರ್ ಸೇರಿ ಕೆಲ ಯುವತಿಯರಿಗೂ ಹಲ್ಲೆ ಮಾಡಿರುವ NSUI ಕಾರ್ಯಕರ್ತರು. ದೀಪಕ್ ಗೌಡ ಹಾಗೂ ಜಯಂದರ್ ವಿರುದ್ಧ ದೂರು ದಾಖಲು. ಸ್ವಾತಂತ್ರ್ಯ ನಡಿಗೆ ವೇಳೆ ಫ್ಲಾಷ್ ಮಾಬ್ ಜವಬ್ದಾರಿ ಹೊತ್ತಿದ್ದ NSUI ಅಧ್ಯಕ್ಷ ಕೀರ್ತಿ ಗಣೇಶ್. ಹೀಗಾಗಿ ಹಲ್ಲೆ ಬಳಿಕ ಸಮಾಧಾನಾಡಲು ಪ್ರಯತ್ನಿಸಿದ ಕೀರ್ತಿ ಗಣೇಶ್. ಸಾರ್ವಜನಿಕವಾಗಿ ಹಲ್ಲೆ ಮಾಡಿದ್ರಿಂದ ನೊಂದು ದೂರು ನೀಡಿರುವ ನೃತ್ಯಗಾರರು. ಕಾಂಗ್ರೆಸ್ ಕಚೇರಿಯಲ್ಲಿ ಬಗೆ ಹರಿಯಬೇಕಿದ್ದ ಜಗಳ ಪೊಲೀಸ್ ಸ್ಟೇಷನ್ ಅಂಗಳಕ್ಕೆ. 
ಸ್ವಾತಂತ್ರ್ಯ ನಡೆಗೆಯಲ್ಲಿ ಆಗಿದ್ದೇನು..?
ಸ್ವಾತಂತ್ರ್ಯ ನಡಿಗೆಗೆ ಕೀರ್ತಿ ಡ್ಯಾನ್ಸ್ ಟೀಮ್ ಒಂದನ್ನು ಸಿದ್ದಪಡಿಸಲಾಗಿತ್ತು. ಈ ಟೀಮ್ ಹಲವು ಕಡೆ ಫ್ಲಾಷ್ ಮಾಬ್ ಮಾಡುವ ಮೂಲಕ ಸ್ವಾತಂತ್ರ್ಯ ನಡಿಗೆಗೆ ಜಾಗೃತಿ ಮೂಡಿಸುತ್ತಿತ್ತು. ಡ್ಯಾನ್ಸ್ ಟೀಮ್ ಪಾದಯಾತ್ರೆಯಲ್ಲಿ ಭಾಗಿಯಾಗಿತ್ತು. ಮೊದಲಿಂದಲೂ ಕೀರ್ತಿ ಗಣೇಶ್ ವಿರುದ್ದ ಇರುವ ದೀಪಕ್ ಗೌಡ ಹಾಗೂ ಜಯಂದರ್ . NSUI ಸಂಘಟನೆಯಲ್ಲಿ ಈ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ, ವೈಮನಸ್ಸು ಇದೆ. ಸ್ವಾತಂತ್ರ್ಯ ನಡಿಗೆ ವೇಳೆ ಫ್ಲಾಷ್ ಮಾಬ್ ಟೀ ಜೊತೆ ಕಿರಿಕ್ ತೆಗೆದು ಹಲ್ಲೆ ಮಾಡಿರುವ ಜಯಂದರ್ ಹಾಗೂ ದೀಪಕ್ ಗೌಡ. ಈ ವೇಳೆ ಡ್ಯಾನ್ಸ್ ಮಾಸ್ಟರ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಿರುವ ಜಯಂದರ್ ಹಾಗೂ ದೀಪಕ್ ಗೌಡ.

9:57 AM

ಕಾಲೇಜು ಸಂಸ್ಥಾಪಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿತ್ಯ ಕಿರುಕುಳ

ಧಾರವಾಡ:  ಕಾಲೇಜು ಸಂಸ್ಥಾಪಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿತ್ಯ ಕಿರುಕುಳ. ಧಾರವಾಡದ ಸಪ್ತಾಪೂರದಲ್ಲಿರುವ ವಿಶ್ವೆಶ್ವರಯ್ಯ ಸೈನ್ಸ್ ಕಾಲೇಜಿನಲ್ಲಿ ಘಟನೆ. 8 ರಿಂದ 10 ಪಿಯು ಕಾಲೇಜಿನ ವಿದ್ಯಾರ್ಥಿನಿಯತಿಗೆ ಲೈಂಗೀಕ ಕಿರುಕುಳ ಮಾನಸಿಕ ಹಿಂಸೆ ಕೊಡುತ್ತಿದ್ದ ಬಸವರಾಜ. ಬಸವರಾಜ ಯಡವನ್ನವರ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ನೊಂದ ವಿದ್ಯಾರ್ಥಿನಿಯರಿಂದ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. ಮದ್ಯ ರಾತ್ರಿ 1 ಘಂಟೆಯವೆಗೆ ವಿದ್ಯಾರ್ಥಿನಿಯ ಹಾಸ್ಟೆಲ್‌ಗೆ ಹೋಗಿ ಕಿರುಕುಳ. ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾ, ದಾಂಡೇಲಿ, ರೆಸಾರ್ಟ್‌ಗಳಿಗೆ ಕರೆದುಕ್ಕೊಂಡು ಹೋಗಿದ್ದ ಬಸವರಾಜ ಯಡವನ್ನವರ. ಬಸವರಾಜ ವಿರುದ್ದ ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ವಿದ್ಯಾರ್ಥಿನಿಯರು.

9:52 AM

ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡಿಯೋಕಾಗ್ದೇ ಕೊಲೆ

ಇದು ಬಾನಲ್ಲಿ ಮಧುಚಂದ್ರಕೆ ಸಿನಿಮಾದ ಡಿಟ್ಟೋ ಸೀನ್. ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡಿಯೋಕಾಗ್ದೇ ಕೊಲೆ. ಬೆಂಗಳೂರಿನ ಮಡಿವಾಳದಲ್ಲಿ ನಡೆದಿರೋ ಘಟನೆ. ಪತ್ನಿಯ ಕೊಲೆಯ ಮುನ್ನ ಸಾಕಷ್ಟು ಪ್ಲ್ಯಾನ್ ಹಾಕಿದ್ದ ಭೂಪ. ಪ್ರಥ್ವಿರಾಜ್ ಹಾಗೂ ಜ್ಯೋತಿ ಇಬ್ಬರು ಕಳೆದ ಎಂಟು ತಿಂಗಳ ಹಿಂದೆ ಮದ್ವೆಯಾಗಿದ್ದರು. ಮದ್ವೆಯಾದ ದಿನದಿಂದ ಇಬ್ಬರ ನಡುವೆ ಒಂದಿಲ್ಲೊಂದು ಗಲಾಟೆ ನಡೀತಿತ್ತು. ಇದರಿಂದ ರೋಸಿ ಹೋದ ಪ್ರಥ್ವಿರಾಜ್ ಪತ್ನಿ ಜ್ಯೋತಿಯನ್ನ ಕೊಲೆ ಮಾಡೋಕೆ ಸ್ಕೆಚ್ ಹಾಕ್ತಾನೆ. ಮನೆಯಲ್ಲೇ ಪ್ರಥ್ವಿರಾಜ ಮೊಬೈಲ್ ಬಿಟ್ಟು ಹೆಂಡತಿಯ ಮೊಬೈಲ್ ಕೂಡ ಮನೇಲೇ ಬಿಟ್ಟು ಟ್ರಿಪ್ಪಿಗೆ ಹೋಗಿದ್ದರು. ಹೆಂಡತಿಯನ್ನ ಉಡುಪಿಯ ಮಲ್ಪೆ ಬೀಚಿಗೆ ಆಗಸ್ಟ್ 2 ರಂದು ಕರೆದೊಯ್ದಿದ್ದ. ಸುಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಿ ನ್ಯಾಚುರಲ್ ಡೆತ್ ಅಂತ ಮಾಡ್ಬೇಕು ಅಂತ ಪ್ಲ್ಯಾನ್ ಮಾಡಿದ್ದ. ಆದ್ರೆ, ಸಮದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಪ್ಲ್ಯಾನ್ ಫ್ಲಾಫ್ ಆಗಿತ್ತು. ನಂತರ ಜೂಮ್ ಕಾರಿನಲ್ಲಿ ಸಕಲೇಶಪುರದ ಗುಂಡ್ಯಾ ಬಳಿ ಜ್ಯೋತಿಯನ್ನ ಕರೆದುಕೊಂಡು ಬಂದು, ದುಪ್ಪಟ್ಟಾ ಬಳಸಿ, ಆಕೆಯನ್ನ ಉಸಿರುಗಟ್ಟಿಸಿ ಕೊಲೆಗೈದಿದ್ದ. ಶವವನ್ನ ಗುಂಡ್ಯಾ ಬಳಿಯ ಪೊದೆಯೊಂದರಲ್ಲಿ ಎಸೆದಿದ್ದ. ಪೊಲೀಸರು ಈ ಕೊಲೆ ರಹಸ್ಯ ಬೇಧಿಸಿದ್ದಾರೆ ಈಗ. 

9:47 AM

ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗ ಸಿಟಿ

ಶಿವಮೊಗ್ಗ: ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗ ಸಿಟಿ. ಎಂದಿನಂತೆ ವ್ಯಾಪಾರ ವಹಿವಾಟು ಆರಂಭ. ಹೂವು ಹಣ್ಣಿನ ವ್ಯಾಪಾರ ಶುರು. ಕಳೆದ ಮೂರು ದಿನಗಳಿಂದ ಸಂಕಷ್ಟ ಅನುಭವಿಸಿದ ಹೂ ಹಣ್ಣು ವ್ಯಾಪಾರಿಗಳು. ಕಳೆದ ಮೂರು ದಿನಗಳಿಂದ ಲಕ್ಷಾಂತರ ರೂ ನಷ್ಟ ಅನುಭವಿಸಿದ ಹೂ ಹಣ್ಣು ವ್ಯಾಪಾರಿಗಳು. ಇವತ್ತು ನಿಷೇಧಾಜ್ನೆ ಇರುವ ಹಿನ್ನಲೆಯಲ್ಲಿ ಜನಸಂದಣಿ ಕಡಿಮೆ. ಈ ತರ ಘಟನೆಗಳು ಆದ್ರೆ ನಮ್ಮಂತ ವ್ಯಾಪಾರಿಗಳಿಗೆ ಕಷ್ಟ ಎಂದ ವ್ಯಾಪಾರಸ್ಥರು. ಶಿವಮೊಗ್ಗ ಸಿಟಿ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಿ ಎಂದ ವ್ಯಾಪಾರಿಗಳು.

9:44 AM

ಭಾರತಕ್ಕೆ ಸ್ವತಂತ್ರ ಬಂದರೂ ನನಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿಲ್ಲ: ಪ್ರಮೋದ್ ಮುತಾಲಿಕ್

ಧಾರವಾಡ:  ಶ್ರಿರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ, ದೇಶಕ್ಕೆ ಸ್ವತಂತ್ರ ಸಿಕ್ಕಿದೆ ನನಗೆ ಮಾತ್ರ ಸ್ವತಂತ್ರ ಸಿಕ್ಕಿಲ್ಲ. 75 ನೇ ಸ್ವಾತಂತ್ರೋತ್ಸವದಲ್ಲಿ ಪ್ರಮೋದ್ ಮುತಾಲಿಕ್‌ಗೆ ಸ್ವತಂತ್ರ ಇಲ್ಲವೇ/ ಎಂಟು ವರ್ಷದಿಂದ ಬಿಜೆಪಿ ಸರಕಾರ ನನಗೆ ಗೋವಾ ಪ್ರವೇಶ ನಿಷೇಧಸಿದೆ. ಎರಡು ದಿನದ ಹಿಂದೆ ಬ್ಯಾನ್ ಮಾಡಿದ ನೋಟಿಸ್ ಕಳಸಿದ್ದಾರೆ. ಎರಡು ತಿಂಗಳಿಗೊಮ್ಮೆ ನೋಟಿಸ್ ಕೊಡ್ತಾರೆ. ನನಗೆ ಗೋವಾ ಅಷ್ಟೆ ಅಲ್ಲ, ರಾಜ್ಯದಲ್ಲೂ ಸ್ವಾತಂತ್ರ ಸಿಕ್ಕಿಲ್ಲ,. ಪ್ರವೀಣ ನಟ್ಟಾ ಅವರ ಮನೆಗೆ ಹೋದಾಗ ಬ್ಯಾನ್ ಮಾಡಿದ್ರು. ಗದಗದಲ್ಲೂ ಬ್ಯಾನ್ ಮಾಡಿದ್ರು. ಇಡಿ ರಾಜ್ಯದಲ್ಲಿ ಎಲ್ಲಾದ್ರೂ ಹೋದ್ರೆ ನನ್ನ ಸ್ವಾತಂತ್ರವನ್ನ ಸರಕಾರ ಪೋಲಿಸ್ ಇಲಾಖೆ ಕಸಿದುಕ್ಕೊಂಡಿದೆ. ನನಗೆ ಸ್ವಾತಂತ್ರ ಸಿಕ್ಕಿಲ್ಲ, ನಾನು ಹೋದ ನಂತರ ಗಲಾಟೆ ಆದ್ರೆ ನನ್ನ‌ಮೆಲೆ ಕೇಸ್ ಹಾಕಿ ಗಲ್ಲಿಗೇರಿಸಿ, ಜೈಲಿಗೆ ಹಾಕಿ. ನನ್ನ ಸ್ವಾತಂತ್ರವನ್ನು ತಡಿತಾ ಇದೀರಿ. ಅಂಬೇಡ್ಕರ ಅವರು ನನಗೆ ಸ್ವಾತಂತ್ರ ಕೊಟ್ಟಿದ್ದಾರೆ. ನನಗೆ ಬಿಜೆಪಿ ಕಾಂಗ್ರೆಸ್ ನವರು ನನ್ನ ಸ್ವಾತಂತ್ರ ಕಸಿದುಕ್ಕೊಂಡಿದ್ದಿರಿ. ನೀವು ಹಿಂದೂತ್ವ ದೇಶ ಭಕ್ತಿಯನ್ನ ತಡಿತಾ ಇದೀರಿ. ನನಗೆ ಎನೂ ಗೊತ್ತಾಗ್ತಾ ಇಲ್ಲ, ಗಲಭೆಗೆ ಒಂದೇ ಉದಾಹರಣೆ ಹೇಳಿ? ನಾನು ಪೋಲಿಸ್ ಇಲಾಖೆಗೆ ದಿಕ್ಕಾರ ಹೇಳುತ್ತಿದ್ದೆನೆ. ಹಿಂದೂತ್ವವನ್ನ ತಡಿತಾ ಇದಾರೆ ಹಿಂದುಗಳ ಮತಗಳಿಂದ ರಾಜಕೀಯ ಮಾಡ್ತಾ ಇದಾರೆ. ಹಿಂದೂಗಳ ತಲೆಯ ಮೆಲೆ ಕಾಲು ಇಟ್ಡು ರಾಜಕೀಯ ನಡಸ್ತಾ ಇದಾರೆ. ಹೋರಾಟಗಾರರು ಬೇಡ ಇವರಿಗೆ ದುಡ್ಡಿನ ಮದ ಬಂದಿದೆ ಅದಕ್ಕೆ‌ ಹೀಗೆ ಮಾಡ್ತಾ ಇದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನಾ ಮಖ್ಯಸ್ಥ.

5:35 PM IST:

ಬಿಎಸ್ ವೈ ಹೇಳಿಕೆ, ಬಿಎಸ್ ವೈ ಗೆ ಯಾವ ಸ್ಥಾನ ಮಾನ ಇಲ್ಲದೇ ಇದ್ದರೂ ರಾಜ್ಯಾದ್ಯಂತ ಪ್ರವಾಸ ಮಾಡ್ತಾರೆ ಅಂತ ಹೈ ಕಮಾಂಡ್ ಗೆ ಗೊತ್ತಿದೆ. ಆದರೂ ಹೆಚ್ಚಿನ ಜಬವ್ದಾರಿ ಕೊಟ್ಟಿದ್ದಾರೆ..
ನೀವು ಇಲ್ಲೇ ಇರ್ತೀರಲಾ, ಗೊತ್ತಾಗುತ್ತದೆ. ಮುಂದೆ ಎಂಥ ಬದಲಾವಣೆ ಆಗುತ್ತೆ ಅಂತ ಗೊತ್ತಾಗುತ್ತೆ. ಸಿಎಂ ಆಗೇ ಬಿಡ್ತೀನಿ ಅನ್ನೋವ್ರಿಗೆ ನಿರಾಸೆ ಆಗುತ್ತೆ. ಮುಂದೆ ಪ್ರಧಾನ ಮಂತ್ರಿ ಮತ್ತೆ ಮೋದಿ ಆಗೋದು ನಿಶ್ಚಿತ. ಹಾಗೆಯೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ...

4:12 PM IST:

ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿಕೆ, ಕರ್ನಾಟಕ ಬಿಜೆಪಿ ಸರ್ವೋಚ್ಚ ನಾಯಕ, ಪ್ರಶ್ನತೀತ‌ ನಾಯಕ ಯಡಿಯೂರಪ್ಪ ಅನ್ನೋದನ್ನು ಹೈಕಮಾಂಡ್ ಸಾಬೀತು ಮಾಡಿದೆ. ದಕ್ಷಿಣ ಭಾಗವಾದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಯಡಿಯೂರಪ್ಪ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ನವರ ನೀತಿ ಯಾವಾಗಲೂ ಬ್ರಿಟಿಷ್ ನೀತಿಯಂತೆ. ಯಡಿಯೂರಪ್ಪ ಸ್ವಹಿಚ್ಚೆಯಿಂದ ರಾಜೀನಾಮೆ ಕೊಟ್ಟಿದ್ರು. ಮೊನ್ನೆ ಮಂತ್ರಾಲಯ ದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ವನ್ಜು ಯಡಿಯೂರಪ್ಪ ಮಾಡಿದ್ದಾರೆ. ಕಾಂಗ್ರೆಸ್‌ನವರು ಏನು ಹೇಳಿದರೂ ಯಡಿಯೂರಪ್ಪ ಅವರ ತಾಳ್ಮೆ ಕಳೆದುಕೊಂಡಿಲ್ಲ. ಯಡಿಯೂರಪ್ಪ ಅವರ ಹೋರಾಟಕ್ಕೆ ನೀವು ಯಾರೂ ಸಾಟಿ ಇಲ್ಲ. ಯಡಿಯೂರಪ್ಪ ನವರ ಜವಬ್ದಾರಿಯಿಂದ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಅವರನ್ನು ಕಡೆಗಣಿಸಿದ್ರು ಅನ್ನೋ ಕಾಂಗ್ರೆಸ್ ನವರಿಗೂ ಇದು ತಕ್ಕ ಉತ್ತರವಾಗಿದೆ.

3:12 PM IST:

ರಾಯಚೂರು: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಮೀನಗಡದಲ್ಲಿ ಘಟನೆ. ಅಮೀನಗಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ವಿದ್ಯಾರ್ಥಿಗಳು. ಬಿಸಿಯೂಟ ಸೇವಿಸಿದ ಮೇಲೆ ಹೊಟ್ಟೆ ನೋವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು.ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕವಿತಾಳ ಆರೋಗ್ಯ ಕೇಂದ್ರದಲ್ಲಿ ಮುಂದುವರೆದ ಚಿಕಿತ್ಸೆ.

1:10 PM IST:

ಎಲ್ಲಾ ಸ್ಪಷ್ಟೀಕರಣ ರಾಜ್ಯಧ್ಯಕ್ಷರಿಗೆ ನೀಡಿದ್ದೇನೆ. 2018 ರಲ್ಲಿ 120 ಸ್ಥಾನಗಳಲ್ಲಿ ಅಡ್ಡಾಡ್ಡಿದ್ದೇನೆ. ಮೋದಿಯವರ ನಾಯಕತ್ವದಲ್ಲಿ ವಿರೋಧ ಮಾಡುವವರು ಬಿಜೆಪಿಗೆ ಸೇರಿದ್ದಾರೆ. ಕಡಿಮೆ ಸಮಯ ಸಿಕ್ಕಿದ್ದರಿಂದ ಸಿದ್ದರಾಮಯ್ಯ ಪ್ರಯೋಜನ ಪಡೆದುಕೊಂಡು ಗೆದ್ದರು ಅಂತ ಹೇಳಿದ್ದೇನೆ. ಎಲ್ಲಾ ಹಿಂದುಳಿದ ಜಾತಿ, ಪಂಗಡಗಳು ಒಂದಾಗುತ್ತಿವೆ. ಕಾಂಗ್ರೆಸ್ ವಿರೋಧಿಗಳು ಬಿಜೆಪಿಗೆ ಬರ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಕಿರಿಕಿರಿ ಹೆಚ್ಚಾಗಿದೆ. ಸಿದ್ದರಾಮಯ್ಯನವರು ಬಿಜೆಪಿಗೆ ಬರಬಹುದು ಅಂತ ಅರ್ಥದಲ್ಲಿ ಮಾತನಾಡಿದ್ದೇನೆ. ಸಿದ್ದರಾಮಯ್ಯ ಡಿಕೆಶಿ ಇರುಸುಮುರುಸು ಏನಾಗ್ತಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಬಿಜೆಪಿಗೆ ಬರಬಹುದು ಎಂಬ ಅರ್ಥದಲ್ಲಿ ಹೇಳಿದ್ದೇನೆ. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಬೇಕು ಅಂತ ನಾನು ಹೇಳಿದ್ದು. ಎಂತಹ ಸಮಯದವರೆಗೂ ಮೋದಿ ಇರ್ತಾರೋ, ಅಲ್ಲಿಯವರೆಗೂ ಕಾಂಗ್ರೆಸ್ ಕರ್ನಾಟಕಕ್ಕೆ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ ಬಿಜೆಪಿಗೆ ಬರಬಹುದು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾಗಿ ಸ್ಪಷ್ಟನೆ ‌ನೀಡಿದ್ದಾರೆ ಶ್ರೀರಾಮುಲು.

1:08 PM IST:

19 ರಂದು  ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ.  ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆಗೆ ಬ್ರೇಕ್.   ಮಳಿಗೆಗಳಲ್ಲಿ ಮಾಂಸ ಮಾರಾಟವೂ ಮಾಡುವಂತಿಲ್ಲ. ಮಾಂಸ ಮಾರಾಟ  ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರ (ಪಶುಪಾಲನೆ) ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

1:03 PM IST:

ಶಿವಮೊಗ್ಗ: ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ ಎಂದು ಎಡಿಜಿಪಿ ಆಲೋಕ್ ಕುಮಾರ್ ಭದ್ರಾವತಿಯಲ್ಲಿ ಹೇಳಿಕೆ ನೀಡಿದ್ದಾರೆ. ಬೇರೆ ಕಾರಣಕ್ಕೆ ಭದ್ರಾವತಿಯಲ್ಲಿ ಶಾಂತಿ ಕದಡಿದೆ. ಅದಕ್ಕೆ ಮುಬಾರಕ್ ಎಂಬುವನನ್ನು ಬಂಧಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಸಿಕ್ಕಿದ್ದು, ಪರಿಶೀಲಿಸಲಾಗುತ್ತಿದೆ. ನಮ್ಮ ಅಧಿಕಾರಿಗಳು 12 ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸಿ, ಒಳ್ಳೆ ಕೆಲಸ ಮಾಡಿದ್ದಾರೆ. ನಾವು ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದೇವೆ. ತಪ್ಪು ಮಾಡಿದರೆ ಎಸ್‌ಡಿಪಿಐ ಇರಲಿ, ಡಿಡಿಪಿಐ ಇರಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ವ್ಯಾಪಾರಸ್ಥರು, ಉದ್ಯಮಿಗಳು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸುವುದಕ್ಕೆ ಕಂಟ್ರೋಲ್ ಮಾಡೋದಕ್ಕೆ ನಾವಿದ್ದೇವೆಂದು, ಭರವಸೆ ನೀಡಿದ ಎಡಿಜಿಪಿ ಆಲೋಕ್ ಕುಮಾರ್.

12:56 PM IST:

ಶಿವಮೊಗ್ಗ: ಬಿಎಸ್ವೈ ಪುತ್ರ, ಸಂಸದ ಬಿ ವೈ ರಾಘವೇಂದ್ರ ಹೇಳಿಕೆ, ಶಿವಮೊಗ್ಗದಲ್ಲಿ 5 ಲಕ್ಷ ಮನೆಗಳ ಮೇಲೆ‌ ಧ್ವಜ ಹಾರಾಡಿದೆ. ಸಂಭ್ರಮಾಚರಣೆ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ. ಇಂತಹ ಮಾನಸಿಕ ಸ್ಥಿತಿ ಬದಲಾಗಬೇಕು. ಹಿಂದಿನ ಸರಕಾರಗಳ ಅವಧಿಯಲ್ಲಿ ತಿಂಗಳೇ ಕಳೆದರೂ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಪ್ರೇಮಸಿಂಗ್ ಪ್ರಕರಣದಲ್ಲಿ ಒಂದೇ ದಿನದಲ್ಲಿ ನಾಲ್ವರು ಆರೋಪಿಗಳ ಬಂಧನವಾಗಿದೆ. ನೆಟ್ಟಾರು ಹತ್ಯೆ, ಹಿಂದು ಹರ್ಷ ಹತ್ಯೆ ಪ್ರಕರಣಗಳಲ್ಲೂ ತಕ್ಷಣ ಆರೋಪಿಗಳ ಬಂಧನವಾಗಿದೆ. ಈಗ ಎನ್‌ಐಎ ತನಿಖೆ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರು ದಯಮಾಡಿ ಗಮನಿಸಬೇಕು. ಹಿಂದಿನ ಸರ್ಕಾರ ಅವಧಿಯಲ್ಲಿ ಹೇಗೆ ಇತ್ತು ಈಗ ಹೇಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. 

12:27 PM IST:

ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್
ರೇಣುಕಾಚಾರ್ಯ vs ಕೆ.ಸುಧಾಕರ್
ಸೋಮಶೇಖರ್ vs ಮಾಧುಸ್ವಾಮಿ
ಮುನಿರತ್ನ vs ಮಾಧುಸ್ವಾಮಿ
ಅಶೋಕ್ vs ಅಶ್ವಥ್ ನಾರಾಯಣ್
ಭಗವಂತ್ ಖೂಬಾ vs ಶರಣು ಸಲಗರ
ಕಾರ್ಯಕರ್ತರು vs ಬಿಜೆಪಿ
ಅರಗ ಜ್ಞಾನೇಂದ್ರ vs ಯತ್ನಾಳ್
BSY vs ಸಂತೋಷ್

ಬಿಜೆಪಿ ಒಳಜಗಳಕ್ಕ ಟಾಂಗ್ ನೀಡಿದ ಕರ್ನಾಟಕ ಕಾಂಗ್ರೆಸ್

ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್
ರೇಣುಕಾಚಾರ್ಯ vs ಕೆ.ಸುಧಾಕರ್
ಸೋಮಶೇಖರ್ vs ಮಾಧುಸ್ವಾಮಿ
ಮುನಿರತ್ನ vs ಮಾಧುಸ್ವಾಮಿ
ಅಶೋಕ್ vs ಅಶ್ವಥ್ ನಾರಾಯಣ್
ಭಗವಂತ್ ಖೂಬಾ vs ಶರಣು ಸಲಗರ
ಕಾರ್ಯಕರ್ತರು vs ಬಿಜೆಪಿ
ಅರಗ ಜ್ಞಾನೇಂದ್ರ vs ಯತ್ನಾಳ್
BSY vs ಸಂತೋಷ್

ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?!

— Karnataka Congress (@INCKarnataka)

12:20 PM IST:

ಶಿವಮೊಗ್ಗ: ಶಿವಮೊಗ್ಗದಲ್ಲಿ ಎಎ ಸರ್ಕಲ್ ನಲ್ಲಿ ಸಾವರ್ಕರ್ ಫೋಟೋ ಗಲಾಟೆ ವಿಚಾರ. ಗಲಾಟೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿತ ಪ್ರಕರಣ. ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಪ್ರೇಮ್ ಸಿಂಗ್. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಕೆ.ಎಸ್.ಈಶ್ವರಪ್ಪ, ಬಿ.ವೈ,ರಾಘವೇಂದ್ರ ಹಾಗೂ ಬಿ.ಎಲ್.ಸಂತೋಷ್. ಮಾಜಿ ಸಚಿವರು ಹಾಗೂ ಶಿವಮೊಗ್ಗ ಶಾಸಕರಾಗಿರೋ ಕೆ.ಎಸ್.ಈಶ್ವರಪ್ಪ. ಶಿವಮೊಗ್ಗ ಸಂಸದರಾಗಿರುವ ಬಿ.ವೈ.ರಾಘವೇಂದ್ರ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್. ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖ ವಾಗಲೆಂದು ಹಾರೈಸಿದ ನಾಯಕರು.

11:58 AM IST:

ಬಾಗಲಕೋಟೆ: ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ ಎಂಬೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಹುಟ್ಟುಹಬ್ಬದ ಬ್ಯಾನರ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಹಾಕಲಾಗಿತ್ತು. "ಮುಂದಿನ ಮುಖ್ಯಮಂತ್ರಿ, ಜಮಖಂಡಿ ಜಿಲ್ಲೆಯ ಕನಸು ನನಸು ಮಾಡುವ ನಾಯಕ. ಕರ್ನಾಟಕ ಸರ್ಕಾರದ ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ.. 57ನೇ ಜನ್ಮ ದಿನದ ಶುಭಾಶಯಗಳು"  ಎಂದು ಬರೆದ ಬ್ಯಾನರ್. ಆಪ್ತ ಸಹಾಯಕ ಹೆಸರಿನಲ್ಲಿರುವ ಬ್ಯಾನರ್ ಪೋಸ್ಟರ್ ವೈರಲ್ ಆಗಿತ್ತು.  

ಈ ವಿಚಾರಕ್ಕೆ ಸಂಬಂಧಿಸಿದೆ ಸಚಿವ ಮುರುಗೇಶ್ ನಿರಾಣಿ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ್ ಬೊಮ್ಮಾಯಿ ಅವರೇ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿಗಳು. ಅವರ ಕಾರ್ಯ ವೈಖರಿಯಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ, ಪೋಸ್ಟರ್ ಹಾಗೂ ಬ್ಯಾನರ್ ಗಳಲ್ಲಿ ಈ ರೀತಿ ಹಾಕಬಾರದು. ಪ್ರಕಟಣೆ ಮೂಲಕ ಮುರುಗೇಶ್ ನಿರಾಣಿ ಮನವಿ ಮಾಡಿಕೊಂಡಿದ್ದಾರೆ. 

10:19 AM IST:

28 ಆಗಸ್ಟ್ ಗೆ ನಿಗದಿಯಾಗಿರುವ ಸಮಾವೇಶ. ದೊಡ್ಡಬಳ್ಳಾಪುರದಲ್ಲಿ ಸಮಾವೇಶಕ್ಕೆ ಸಿದ್ಧತೆ ಆಗಿದೆ. ಆದ್ರೆ 28 ನೇ ತಾರೀಖು ಪುತ್ತೂರಿನಲ್ಲಿ ಸಂಘದ ಪ್ರಾಂತ ಬೈಟಕ್ ಮೊದಲೆ ನಿಗದಿ ಆಗಿತ್ತು. ಆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಅಧ್ಯಕ್ಷ ಕಟೀಲ್ ಭಾಗಿ ಆಗಬೇಕಿದೆ. ಹೀಗಾಗಿ ನೆನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸರ್ಕಾರದ ಸಮಾವೇಶ ಮತ್ತೆ ಮುಂದುಡೂವ ಬಗ್ಗೆ ಚರ್ಚೆ ಆಗಿದೆ. ಬಹುತೇಕ ಸಮಾವೇಶ ಮತ್ತೆ ಮುಂದೂಡಿಕೆ ಆಗಬಹುದು.

10:17 AM IST:

ಡ್ಯಾನ್ಸ್ ಮಾಸ್ಟರ್ ಸೇರಿ ಕೆಲ ಯುವತಿಯರಿಗೂ ಹಲ್ಲೆ ಮಾಡಿರುವ NSUI ಕಾರ್ಯಕರ್ತರು. ದೀಪಕ್ ಗೌಡ ಹಾಗೂ ಜಯಂದರ್ ವಿರುದ್ಧ ದೂರು ದಾಖಲು. ಸ್ವಾತಂತ್ರ್ಯ ನಡಿಗೆ ವೇಳೆ ಫ್ಲಾಷ್ ಮಾಬ್ ಜವಬ್ದಾರಿ ಹೊತ್ತಿದ್ದ NSUI ಅಧ್ಯಕ್ಷ ಕೀರ್ತಿ ಗಣೇಶ್. ಹೀಗಾಗಿ ಹಲ್ಲೆ ಬಳಿಕ ಸಮಾಧಾನಾಡಲು ಪ್ರಯತ್ನಿಸಿದ ಕೀರ್ತಿ ಗಣೇಶ್. ಸಾರ್ವಜನಿಕವಾಗಿ ಹಲ್ಲೆ ಮಾಡಿದ್ರಿಂದ ನೊಂದು ದೂರು ನೀಡಿರುವ ನೃತ್ಯಗಾರರು. ಕಾಂಗ್ರೆಸ್ ಕಚೇರಿಯಲ್ಲಿ ಬಗೆ ಹರಿಯಬೇಕಿದ್ದ ಜಗಳ ಪೊಲೀಸ್ ಸ್ಟೇಷನ್ ಅಂಗಳಕ್ಕೆ. 
ಸ್ವಾತಂತ್ರ್ಯ ನಡೆಗೆಯಲ್ಲಿ ಆಗಿದ್ದೇನು..?
ಸ್ವಾತಂತ್ರ್ಯ ನಡಿಗೆಗೆ ಕೀರ್ತಿ ಡ್ಯಾನ್ಸ್ ಟೀಮ್ ಒಂದನ್ನು ಸಿದ್ದಪಡಿಸಲಾಗಿತ್ತು. ಈ ಟೀಮ್ ಹಲವು ಕಡೆ ಫ್ಲಾಷ್ ಮಾಬ್ ಮಾಡುವ ಮೂಲಕ ಸ್ವಾತಂತ್ರ್ಯ ನಡಿಗೆಗೆ ಜಾಗೃತಿ ಮೂಡಿಸುತ್ತಿತ್ತು. ಡ್ಯಾನ್ಸ್ ಟೀಮ್ ಪಾದಯಾತ್ರೆಯಲ್ಲಿ ಭಾಗಿಯಾಗಿತ್ತು. ಮೊದಲಿಂದಲೂ ಕೀರ್ತಿ ಗಣೇಶ್ ವಿರುದ್ದ ಇರುವ ದೀಪಕ್ ಗೌಡ ಹಾಗೂ ಜಯಂದರ್ . NSUI ಸಂಘಟನೆಯಲ್ಲಿ ಈ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ, ವೈಮನಸ್ಸು ಇದೆ. ಸ್ವಾತಂತ್ರ್ಯ ನಡಿಗೆ ವೇಳೆ ಫ್ಲಾಷ್ ಮಾಬ್ ಟೀ ಜೊತೆ ಕಿರಿಕ್ ತೆಗೆದು ಹಲ್ಲೆ ಮಾಡಿರುವ ಜಯಂದರ್ ಹಾಗೂ ದೀಪಕ್ ಗೌಡ. ಈ ವೇಳೆ ಡ್ಯಾನ್ಸ್ ಮಾಸ್ಟರ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಿರುವ ಜಯಂದರ್ ಹಾಗೂ ದೀಪಕ್ ಗೌಡ.

9:57 AM IST:

ಧಾರವಾಡ:  ಕಾಲೇಜು ಸಂಸ್ಥಾಪಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿತ್ಯ ಕಿರುಕುಳ. ಧಾರವಾಡದ ಸಪ್ತಾಪೂರದಲ್ಲಿರುವ ವಿಶ್ವೆಶ್ವರಯ್ಯ ಸೈನ್ಸ್ ಕಾಲೇಜಿನಲ್ಲಿ ಘಟನೆ. 8 ರಿಂದ 10 ಪಿಯು ಕಾಲೇಜಿನ ವಿದ್ಯಾರ್ಥಿನಿಯತಿಗೆ ಲೈಂಗೀಕ ಕಿರುಕುಳ ಮಾನಸಿಕ ಹಿಂಸೆ ಕೊಡುತ್ತಿದ್ದ ಬಸವರಾಜ. ಬಸವರಾಜ ಯಡವನ್ನವರ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ನೊಂದ ವಿದ್ಯಾರ್ಥಿನಿಯರಿಂದ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. ಮದ್ಯ ರಾತ್ರಿ 1 ಘಂಟೆಯವೆಗೆ ವಿದ್ಯಾರ್ಥಿನಿಯ ಹಾಸ್ಟೆಲ್‌ಗೆ ಹೋಗಿ ಕಿರುಕುಳ. ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾ, ದಾಂಡೇಲಿ, ರೆಸಾರ್ಟ್‌ಗಳಿಗೆ ಕರೆದುಕ್ಕೊಂಡು ಹೋಗಿದ್ದ ಬಸವರಾಜ ಯಡವನ್ನವರ. ಬಸವರಾಜ ವಿರುದ್ದ ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ವಿದ್ಯಾರ್ಥಿನಿಯರು.

9:52 AM IST:

ಇದು ಬಾನಲ್ಲಿ ಮಧುಚಂದ್ರಕೆ ಸಿನಿಮಾದ ಡಿಟ್ಟೋ ಸೀನ್. ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡಿಯೋಕಾಗ್ದೇ ಕೊಲೆ. ಬೆಂಗಳೂರಿನ ಮಡಿವಾಳದಲ್ಲಿ ನಡೆದಿರೋ ಘಟನೆ. ಪತ್ನಿಯ ಕೊಲೆಯ ಮುನ್ನ ಸಾಕಷ್ಟು ಪ್ಲ್ಯಾನ್ ಹಾಕಿದ್ದ ಭೂಪ. ಪ್ರಥ್ವಿರಾಜ್ ಹಾಗೂ ಜ್ಯೋತಿ ಇಬ್ಬರು ಕಳೆದ ಎಂಟು ತಿಂಗಳ ಹಿಂದೆ ಮದ್ವೆಯಾಗಿದ್ದರು. ಮದ್ವೆಯಾದ ದಿನದಿಂದ ಇಬ್ಬರ ನಡುವೆ ಒಂದಿಲ್ಲೊಂದು ಗಲಾಟೆ ನಡೀತಿತ್ತು. ಇದರಿಂದ ರೋಸಿ ಹೋದ ಪ್ರಥ್ವಿರಾಜ್ ಪತ್ನಿ ಜ್ಯೋತಿಯನ್ನ ಕೊಲೆ ಮಾಡೋಕೆ ಸ್ಕೆಚ್ ಹಾಕ್ತಾನೆ. ಮನೆಯಲ್ಲೇ ಪ್ರಥ್ವಿರಾಜ ಮೊಬೈಲ್ ಬಿಟ್ಟು ಹೆಂಡತಿಯ ಮೊಬೈಲ್ ಕೂಡ ಮನೇಲೇ ಬಿಟ್ಟು ಟ್ರಿಪ್ಪಿಗೆ ಹೋಗಿದ್ದರು. ಹೆಂಡತಿಯನ್ನ ಉಡುಪಿಯ ಮಲ್ಪೆ ಬೀಚಿಗೆ ಆಗಸ್ಟ್ 2 ರಂದು ಕರೆದೊಯ್ದಿದ್ದ. ಸುಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಿ ನ್ಯಾಚುರಲ್ ಡೆತ್ ಅಂತ ಮಾಡ್ಬೇಕು ಅಂತ ಪ್ಲ್ಯಾನ್ ಮಾಡಿದ್ದ. ಆದ್ರೆ, ಸಮದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಪ್ಲ್ಯಾನ್ ಫ್ಲಾಫ್ ಆಗಿತ್ತು. ನಂತರ ಜೂಮ್ ಕಾರಿನಲ್ಲಿ ಸಕಲೇಶಪುರದ ಗುಂಡ್ಯಾ ಬಳಿ ಜ್ಯೋತಿಯನ್ನ ಕರೆದುಕೊಂಡು ಬಂದು, ದುಪ್ಪಟ್ಟಾ ಬಳಸಿ, ಆಕೆಯನ್ನ ಉಸಿರುಗಟ್ಟಿಸಿ ಕೊಲೆಗೈದಿದ್ದ. ಶವವನ್ನ ಗುಂಡ್ಯಾ ಬಳಿಯ ಪೊದೆಯೊಂದರಲ್ಲಿ ಎಸೆದಿದ್ದ. ಪೊಲೀಸರು ಈ ಕೊಲೆ ರಹಸ್ಯ ಬೇಧಿಸಿದ್ದಾರೆ ಈಗ. 

9:47 AM IST:

ಶಿವಮೊಗ್ಗ: ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗ ಸಿಟಿ. ಎಂದಿನಂತೆ ವ್ಯಾಪಾರ ವಹಿವಾಟು ಆರಂಭ. ಹೂವು ಹಣ್ಣಿನ ವ್ಯಾಪಾರ ಶುರು. ಕಳೆದ ಮೂರು ದಿನಗಳಿಂದ ಸಂಕಷ್ಟ ಅನುಭವಿಸಿದ ಹೂ ಹಣ್ಣು ವ್ಯಾಪಾರಿಗಳು. ಕಳೆದ ಮೂರು ದಿನಗಳಿಂದ ಲಕ್ಷಾಂತರ ರೂ ನಷ್ಟ ಅನುಭವಿಸಿದ ಹೂ ಹಣ್ಣು ವ್ಯಾಪಾರಿಗಳು. ಇವತ್ತು ನಿಷೇಧಾಜ್ನೆ ಇರುವ ಹಿನ್ನಲೆಯಲ್ಲಿ ಜನಸಂದಣಿ ಕಡಿಮೆ. ಈ ತರ ಘಟನೆಗಳು ಆದ್ರೆ ನಮ್ಮಂತ ವ್ಯಾಪಾರಿಗಳಿಗೆ ಕಷ್ಟ ಎಂದ ವ್ಯಾಪಾರಸ್ಥರು. ಶಿವಮೊಗ್ಗ ಸಿಟಿ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಿ ಎಂದ ವ್ಯಾಪಾರಿಗಳು.

9:44 AM IST: