ಏಷ್ಯಾಕಪ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಕಸರತ್ತು!

By Web DeskFirst Published Aug 30, 2018, 4:58 PM IST
Highlights

ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಕಸರತ್ತು ಆರಂಭಿಸಿದೆ.ಈ ಭಾರಿಯ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗೋ ಟೀಂ ಇಂಡಿಯಾ ಆಟಗಾರರು ಯಾರು? ಯಾರಿಗೆ ಸಿಗಲಿದೆ ಸ್ಥಾನ? ಇಲ್ಲಿದೆ ವಿವಿರ.
 

ಮುಂಬೈ(ಆ.30):  ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಕ್ರಿಯವಾಗಿದ್ದರೆ, ಇತ್ತ ಆಯ್ಕೆ ಸಮಿತಿ ಏಷ್ಯಾ ಕಪ್ ಟೂರ್ನಿಗೆ ತಂಡ ಆಯ್ಕೆ ಮಾಡಲು ಕಸರತ್ತು ಆರಂಭಿಸಿದೆ. 

ಸೆಪ್ಟೆಂಬರ್ 15 ರಂದು ದುಬೈನಲ್ಲಿ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಇದಕ್ಕಾಗಿ ಸೆಪ್ಟೆಂಬರ್ 1 ರಂದು ಎಂ ಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಸಭೆ ಸೇರಲಿದೆ. ಭಾರತ ಎ ತಂಡದಲ್ಲಿ ಕನ್ನಡಿಗ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಬ್ಬರು ಕನ್ನಡಿಗರೂ ಟೀಂ ಇಂಡಿಯಾಗೆ ಆಯ್ಕೆಯಾಗೋ  ಸಾಧ್ಯತೆ ಇದೆ.

ಭಾರತ,ಪಾಕಿಸ್ತಾನ,ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಏಷ್ಯಾ ಕಪ್ ಟೂರ್ನಿಗೆ ನೇರ ಪ್ರವೇಶ ಪಡೆದಿದೆ. ಈ ಬಾರಿ ವಿಶ್ವಕಪ್ ಟೂರ್ನಿಯ ದೃಷ್ಠಿಯಿಂದ ಏಷ್ಯಾ ಕಪ್ ಟೂರ್ನಿ 50 ಓವರ್‌ಗಳ ಪಂದ್ಯ ನಡೆಯಲಿದೆ. ಕಳೆದ ಬಾರಿ ಟಿ20 ಟೂರ್ನಿಯಾಗಿತ್ತು.

ಹಾಂಕಾಂಗ್, ಓಮನ್, ನೇಪಾಳ, ಓಮನ್ , ಯುಎಇ, ಸಿಂಗಾಪುರ ಹಾಗೂ ಮಲೇಶಿಯಾ ತಂಡಗಳು ಅರ್ಹತಾ ಸುತ್ತಿನ ಪಂದ್ಯ ಆಡುತ್ತಿದೆ. ಹಾಲಿ ಚಾಂಪಿಯನ್ ಭಾರತ ಈ ಬಾರಿಯೂ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಪ್ರಬಲ ಪೈಪೋಟಿ ನೀಡೋದರಲ್ಲಿ ಯಾವುದೇ ಅನುಮಾನವಿಲ್ಲ. 

click me!