ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ತಾರೆ ಶರತ್‌ ಕಮಲ್‌ ಭಾರತದ ಧ್ವಜಧಾರಿ

By Kannadaprabha NewsFirst Published Mar 22, 2024, 11:31 AM IST
Highlights

ಭಾರತ ಶೂಟಿಂಗ್‌ ತಂಡದ ಮೇಲುಸ್ತುವಾರಿಯನ್ನು ಮಾಜಿ ಒಲಿಂಪಿಕ್ಸ್‌ ಪದಕ ವಿಜೇತ ಶೂಟರ್‌ ಗಗನ್‌ ನಾರಂಗ್‌ಗೆ ವಹಿಸಲಾಗಿದೆ. ಪ್ಯಾರಿಸ್‌ನಲ್ಲಿ ಶೂಟಿಂಗ್‌ ರೇಂಜ್‌ ನಗರದಿಂದ ಬಹಳ ದೂರದಲ್ಲಿದ್ದು, ಸ್ಪರ್ಧೆಯ ವೇಳೆ ಸಾಕಷ್ಟು ಸಮನ್ವಯದ ಅಗತ್ಯವಿರುವ ಕಾರಣ ಅನುಭವಿ ಗಗನ್‌ ನಾರಂಗ್‌ಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಪಿ.ಟಿ.ಉಷಾ ಹೇಳಿದ್ದಾರೆ.

ನವದೆಹಲಿ(ಮಾ.22): ಹಿರಿಯ ಟೇಬಲ್‌ ಟೆನಿಸ್‌ ಆಟಗಾರ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಶರತ್‌ ಕಮಲ್‌ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಶರತ್‌, ಭಾರತದ ಧ್ವಜ ಹಿಡಿದು ಇಡೀ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು 6 ಬಾರಿ ವಿಶ್ವ ಚಾಂಪಿಯನ್‌, ಒಲಿಂಪಿಕ್ಸ್‌ ಪದಕ ವಿಜೇತ ದಿಗ್ಗಜ ಬಾಕ್ಸರ್‌ ಮೇರಿ ಕೋಮ್, ಭಾರತ ತಂಡದ ಮುಖ್ಯಸ್ಥೆ (ಚೀಫ್‌ ಡೆ ಮಿಷನ್‌) ಆಗಿ ನೇಮಕಗೊಂಡಿದ್ದಾರೆ.

ಚಳಿಗಾಲದ ಕ್ರೀಡೆಯಾದ ಲ್ಯೂಜ್‌ನಲ್ಲಿ ಹಲವು ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಿವ ಕೇಶವನ್‌ ಉಪ-ಮುಖ್ಯಾಧಿಕಾರಿಯಾಗಿ ಪ್ಯಾರಿಸ್‌ಗೆ ತೆರಳಲಿದ್ದಾರೆ ಎಂದು ಭಾರತ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ತಿಳಿಸಿದ್ದಾರೆ.

Latest Videos

IPL 2024: RCB ಬಲಿಷ್ಠ ಆಡುವ ಹನ್ನೊಂದರ ಬಳಗ ಪ್ರಕಟ..! ಯಾರಿಗೆಲ್ಲಾ ಸ್ಥಾನ?

ಭಾರತ ಶೂಟಿಂಗ್‌ ತಂಡದ ಮೇಲುಸ್ತುವಾರಿಯನ್ನು ಮಾಜಿ ಒಲಿಂಪಿಕ್ಸ್‌ ಪದಕ ವಿಜೇತ ಶೂಟರ್‌ ಗಗನ್‌ ನಾರಂಗ್‌ಗೆ ವಹಿಸಲಾಗಿದೆ. ಪ್ಯಾರಿಸ್‌ನಲ್ಲಿ ಶೂಟಿಂಗ್‌ ರೇಂಜ್‌ ನಗರದಿಂದ ಬಹಳ ದೂರದಲ್ಲಿದ್ದು, ಸ್ಪರ್ಧೆಯ ವೇಳೆ ಸಾಕಷ್ಟು ಸಮನ್ವಯದ ಅಗತ್ಯವಿರುವ ಕಾರಣ ಅನುಭವಿ ಗಗನ್‌ ನಾರಂಗ್‌ಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಪಿ.ಟಿ.ಉಷಾ ಹೇಳಿದ್ದಾರೆ.

ರಷ್ಯಾ, ಬೆಲಾರಸ್‌ನ ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ ಪಥಸಂಚಲನಕ್ಕಿಲ್ಲ ಪ್ರವೇಶ

ಲುಸ್ಸಾನೆ: ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲು ರಷ್ಯಾ ಹಾಗೂ ಬೆಲಾರಸ್‌ನ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಅನುಮತಿ ನಿರಾಕರಿಸಿದೆ.

ಐಪಿಎಲ್‌ನಲ್ಲಿ ದಿಗ್ಗಜ ನಾಯಕರ ಯುಗಾಂತ್ಯ! ಧೋನಿ ನಿರ್ಧಾರ ಕೇಳಿ ಸಿಎಸ್‌ಕೆ ಮಾಲಿಕರಿಗೆ ಶಾಕ್!

ಉಕ್ರೇನ್‌ ಮೇಲೆ ಯುದ್ಧ ನಡೆಸಿದ ರಷ್ಯಾ ಹಾಗೂ ರಷ್ಯಾವನ್ನು ಬೆಂಬಲಿಸಿದ ಬೆಲಾರಸ್‌ಗೆ ಐಒಸಿ ನಿರ್ಬಂಧ ಹೇರಿದೆ. ಜು.26ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಬಾರಿ ನದಿಯಲ್ಲಿ ದೋಣಿಗಳ ಮೇಲೆ ನಿಂತು ಕ್ರೀಡಾಪಟುಗಳು ಪಥಸಂಚಲನ ನಡೆಸಲಿದ್ದಾರೆ. ರಷ್ಯಾ ಹಾಗೂ ಬೆಲಾರಸ್‌ನ ಕ್ರೀಡಾಪಟುಗಳು ನದಿಯ ದಡದಲ್ಲಿ ಕೂತು ಸಮಾರಂಭ ವೀಕ್ಷಿಸಬಹುದಾಗಿದೆ.

ಹಾಕಿ ಫೈವ್ಸ್‌: ಭಾರತ ತಂಡಗಳು ವಿಶ್ವ ನಂ.2

ಲುಸ್ಸಾನೆ: ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್‌ಐಎಚ್‌) ಹಾಕಿ ಫೈವ್ಸ್‌ (ತಂಡದಲ್ಲಿ ತಲಾ 5 ಆಟಗಾರರ ಮಾದರಿ) ವಿಶ್ವ ರ್‍ಯಾಂಕಿಂಗ್‌ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತ ಪುರುಷ ಹಾಗೂ ಮಹಿಳಾ ತಂಡಗಳು 2ನೇ ಸ್ಥಾನ ಪಡೆದಿವೆ. ಇತ್ತೀಚೆಗೆ ನಡೆದಿದ್ದ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಗೆದ್ದಿತ್ತು. ಮಹಿಳಾ ತಂಡ 5ನೇ ಸ್ಥಾನ ಪಡೆದಿತ್ತು.
 

click me!