ಪಾಟ್ನಾ ವಿರುದ್ಧ ಬೆಂಗಾಲ್ ವಾರಿಯರ್ಸ್‌ಗೆ ಭರ್ಜರಿ ಗೆಲುವು!

By Web DeskFirst Published Nov 10, 2018, 10:39 PM IST
Highlights

ಪ್ರೊ ಕಬಡ್ಡಿ ಲೀಗ್ ಟೂರ್ನಿ ವೀಕೆಂಡ್ ಅಭಿಮಾನಿಗಳ ಸಖತ್ ಮನರಂಜನೆ ನೀಡಿದೆ. ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಹೋರಾಟ ನಡೆಸಿದರೆ, 2ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ಗುಜರಾತ್ ಫಾರ್ಚುನ್‌ಜೈಂಟ್ಸ್ ಮುಖಾಮುಖಿಯಾಯ್ತು. ಇಲ್ಲಿದೆ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಮುಂಬೈ(ನ.10): ಬೆಂಗಾಲ್ ವಾರಿಯರ್ಸ್ ವಿರುದ್ಧ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 56 ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 50-30 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಆಡಿದ 11 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 28 ಅಂಕ ಸಂಪಾದಿಸಿರುವ ಪಾಟ್ನ ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಮೊದಲಾರ್ಧಲ್ಲಿ 22-14 ಅಂಕಗಳ ಮುನ್ನಡೆ ಪಾಟ್ನಾ ದ್ವಿತೀಯಾರ್ಧದಲ್ಲಿ ಅಂತರ ಹೆಚ್ಚಿಸಿತು.  ಪಾಟ್ನಾ ತಂಡದ ದೀಪಕ್ ನರ್ವಾಲ್ 12 ರೈಡ್ ಪಾಯಿಂಟ್ಸ್ ಪಡೆದರೆ, ಟ್ಯಾಕಲ್‌ನಲ್ಲಿ ಜಯದೀಪ್ 5 ಅಂಕ ಪಡೆದರು. ಈ ಮೂಲಕ ಪಾಟ್ನಾ ಪೈರೇಟ್ಸ್ 50-30 ಅಂಕಗಳ ಗೆಲುವು ಸಾಧಿಸಿತು.

ಶನಿವಾರ ನಡೆದ 2ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ಗುಜರಾತ್ ಫಾರ್ಚುನ್‌ಜೈಂಟ್ಸ್ ಮುಖಾಮುಖಿಯಾಯಿತು. ರೋಚಕ ಹೋರಾಟದಲ್ಲಿ ಗುಜರಾತ್ ತಂಡ 38-36 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

click me!