ವಿಶ್ವ ಮಹಿಳಾ ಬಾಕ್ಸಿಂಗ್‌: ಭಾರತಕ್ಕೆ ಮೇರಿ ನೇತೃತ್ವ

By Web DeskFirst Published Sep 29, 2018, 9:39 AM IST
Highlights

ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಟೂರ್ನಿಯು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ.

ನವದೆಹಲಿ(ಸೆ.29): ನ.15 ರಿಂದ 24ರವರೆಗೆ ಇಲ್ಲಿ ನಡೆಯಲಿರುವ ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ 10 ಸದಸ್ಯರ ತಂಡವನ್ನು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌, ಕೂಟದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 

ಒಲಿಂಪಿಕ್‌ ಕಂಚು ವಿಜೇತೆ ಮೇರಿ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನುಳಿದಂತೆ ಪಿಂಕಿ ಜಾಂಗ್ರಾ(51 ಕೆ.ಜಿ), ಮನಿಶಾ(54 ಕೆ.ಜಿ), ಸೋನಿಯಾ ಲಾಥರ್‌(57 ಕೆ.ಜಿ), ಎಲ್‌.ಸರಿತಾದೇವಿ(60 ಕೆ.ಜಿ), ಸಿಮ್ರನ್‌ಜಿತ್‌ ಕೌರ್‌(64 ಕೆ.ಜಿ), ಲವ್ಲಿನಾ (69 ಕೆ.ಜಿ), ಸ್ವೀಟಿ ಬೋರಾ(75 ಕೆ.ಜಿ), ಭಾಗ್ಯವತಿ (81 ಕೆ.ಜಿ), ಸೀಮಾ ಪೂನಿಯಾ(81+ ಕೆ.ಜಿ) ಭಾರತವನ್ನು ಪ್ರತನಿಧಿಸಲಿದ್ದಾರೆ.

ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಟೂರ್ನಿಯು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ.

 

click me!