ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆಯಾದ ಪಿಟಿ ಉಷಾ

By Santosh NaikFirst Published Dec 10, 2022, 7:25 PM IST
Highlights

ಕಳೆದ ತಿಂಗಳ ಕೊನೆಯಲ್ಲಿ ಐಒಎ ಉನ್ನತ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿ ಪಿಟಿ ಉಷಾ ಹೊರಹೊಮ್ಮಿದ್ದರು. ಅದರ ಬೆನ್ನಲ್ಲಿಯೇ ಅವರು ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮೊದಲ ಅಧ್ಯಕ್ಷೆಯಾಗುವುದು ಖಚಿತವಾಗಿತ್ತು.
 

ನವದೆಹಲಿ (ಡಿ.10): ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿರುವ ದಿಗ್ಗಜ ಪಿಟಿ ಉಷಾ ಅವರು ಶನಿವಾರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 58 ವರ್ಷ ವಯಸ್ಸಿನ ಉಷಾ, ಅನೇಕ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆಯಾಗಿದ್ದು, 1984 ಲಾಸ್ ಏಂಜಲೀಸ್ ಒಲಿಂಪಿಕ್ಸ್ 400 ಮೀ ಹರ್ಡಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಈ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು. ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ನಿವೃತ್ತ ಎಸ್‌ಸಿ ನ್ಯಾಯಾಧೀಶ ಎಲ್ ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆಗಳು ನಡೆದವು. ಪಿಟಿ ಉಷಾ ಅವರು ಉನ್ನತ ಹುದ್ದೆಗೇರಿದ್ದು, ಬಣ ರಾಜಕೀಯದಿಂದೇ ತುಂಬಿರುವ ಐಒಎಯ ದೀರ್ಘಕಾಲದ ಬಿಕ್ಕಟ್ಟನ್ನು ಅಂತ್ಯಗೊಳಿಸಿದಂತಾಗಿದೆ. ಈ ತಿಂಗಳು ನಿಗದಿಯಂತೆ ಚುನಾವಣೆಗಳನ್ನು ನಡೆಸದಿದ್ದರೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಮಾನತುಗೊಳಿಸುವ ಎಚ್ಚರಿಕೆಯನ್ನೂ ನೀಡಿತ್ತು. ಐಒಎ ಚುನಾವಣೆಗಳು ಮೂಲತಃ ಡಿಸೆಂಬರ್‌ 2021ರಲ್ಲಿ ನಡೆಯಬೇಕಿತ್ತು.

ಅಧ್ಯಕ್ಷ ಸ್ಥಾನಕ್ಕೆ ಪಿಟಿ ಉಷಾ ಹೆಸರು ಕೇಳಿ ಬಂದ ತಕ್ಷಣವೇ ಅವರೇ ಮುಂದಿನ ಅಧ್ಯಕ್ಷರಾಗುವುದು ಖಚಿತವಾಗಿತ್ತು. ಯಾರೊಬ್ಬರೂ ಕೂಡ ಅವರ ವಿರುದ್ಧವಾಗಿ ಸ್ಪರ್ಧೆ ಮಾಡವ ಮನಸ್ಸಿ ಮಾಡಿರಲಿಲ್ಲ. ಕಳೆದ ಜುಲೈನಲ್ಲಿ ಪಿಟಿ ಉಷಾ ಬಿಜೆಪಿಯಿಂದ ರಾಜ್ಯ ಸಭಾ ಸದಸ್ಯರಾಗಿ ನೇಮಕವಾಗಿದ್ದರು. ಐಒಎ ಅಥ್ಲೀಟ್ ಆಯೋಗದ ಸದಸ್ಯರಾಗಿರುವ ಡಬಲ್ ಒಲಿಂಪಿಕ್ ಪದಕ ವಿಜೇತೆ ಷಟ್ಲರ್ ಪಿವಿ ಸಿಂಧು, ಉಷಾ ಅವರ ಐತಿಹಾಸಿಕ ಆಯ್ಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಾನು ಮೊದಲಿಗೆ ಪಿಟಿ ಉಷಾ ಮೇಡಮ್‌ಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಅಥ್ಲೆಟಿಕ್ಸ್‌ನಲ್ಲಿ ಅವರೇ ದೊಡ್ಡ ಲಜೆಂಟ್‌. ಅಲ್ಲದೆ, ಈಗ ಅವರು ಸಂಸದರು ಕೂಡ. ಹಾಗಾಗಿ ಈಗ ಕ್ರೀಡೆಯಲ್ಲಿ ಏನೋ ಒಂದು ಸರಿಯಾದದ್ದು ಆಗುತ್ತಿದೆ ಎನ್ನುವ ಭಾವನೆ ಮೂಡಿದೆ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಅವರಿಗೆ ಶುಭಕೋರುತ್ತದೆ ಎಂದು ಪಿವಿ ಸಿಂಧು ಹೇಳಿದ್ದಾರೆ.

"ಇದು ನಿಜವಾಗಿಯೂ ಒಳ್ಳೆಯ ವಿಚಾರ (ಮೊದಲ ಬಾರಿಗೆ ಮಹಿಳೆ IOA ನೇತೃತ್ವ) ಏಕೆಂದರೆ ಅವರು ಇತರ ಕ್ರೀಡಾಪಟುಗಳ ಅಗತ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ, ಅದು ಅವರಿಗೆ ಸಹಾಯ ಮಾಡುತ್ತದೆ. ಈ ಬೆಂಬಲದಿಂದ ಕ್ರೀಡಾಪಟುಗಳು ಆಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತಾರೆ ಎಂದು ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಎನ್‌ಆರ್‌ಎಐ) ಅಜಯ್ ಪಟೇಲ್ ಹೇಳಿದ್ದಾರೆ. ಐಒಎಯ ಹಿರಿಯ ಉಪಾಧ್ಯಕ್ಷರಾಗಿ ಇವರು ಆಯ್ಕೆಯಾಗಿದಗದಾರೆ. ಪ್ರಸ್ತುತ ಅಜಯ್‌ ಪಟೇಲ್‌ ಗುಜರಾತ್ ರಾಜ್ಯ ಸಹಕಾರ ಬ್ಯಾಂಕ್‌ನ ಅಧ್ಯಕ್ಷರೂ ಆಗಿದ್ದಾರೆ.

ವೀರೇಂದ್ರ ಹೆಗ್ಗಡೆ, ಪಿಟಿ ಉಷಾ, ವಿಜಯೇಂದ್ರ ಪ್ರಸಾದ್‌, ಇಳಯರಾಜ ರಾಜ್ಯಸಭೆಗೆ ನಾಮನಿರ್ದೇಶನ

ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ಡಿಯೋ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಅಧ್ಯಕ್ಷ ಸಹದೇವ್ ಯಾದವ್ ಖಜಾಂಚಿಯಾಗಿ ಆಯ್ಕೆಯಾದರು. ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಅಧ್ಯಕ್ಷ ಮತ್ತು ಮಾಜಿ ಗೋಲ್‌ಕೀಪರ್ ಕಲ್ಯಾಣ್ ಚೌಬೆ ಜಂಟಿ ಕಾರ್ಯದರ್ಶಿಯಾಗಿ (ಪುರುಷ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಳ್ಳಿ ಪ್ರತಿಭೆ ಪಿ.ಟಿ. ಉಷಾರನ್ನು ಬಂಗಾರದ ಹುಡುಗಿಯಾಗಿ ರೂಪಿಸಿದ್ದ ಕೋಚ್ ನಂಬಿಯರ್ ಇನ್ನಿಲ್ಲ

ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ) ನ ಅಲಕಾನಂದ ಅಶೋಕ್ ಜಂಟಿ ಕಾರ್ಯದರ್ಶಿಯಾಗಿ (ಮಹಿಳೆ) ಆಯ್ಕೆಯಾದರು, ನೇರ ಹೋರಾಟದಲ್ಲಿ ನೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾದ ಸುಮನ್ ಕೌಶಿಕ್ ಅವರನ್ನು 48-21 ರಿಂದ ಸೋಲಿಸಿದರು. 'ಪಯ್ಯೋಲಿ ಎಕ್ಸ್‌ಪ್ರೆಸ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಉಷಾ ಅವರನ್ನು ಜುಲೈನಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಬಿಜೆಪಿ ನಾಮ ನಿರ್ದೇಶನ ಮಾಡಿತ್ತು.

click me!