ಕೆಪಿಎಲ್ 2018: ಶಿವಮೊಗ್ಗ ಲಯನ್ಸ್ ವಿರುದ್ಧ ಘರ್ಜಸಿದ ಹುಬ್ಬಳ್ಳಿ ಟೈಗರ್ಸ್

By Web DeskFirst Published Aug 19, 2018, 10:45 PM IST
Highlights

ಹುಬ್ಬಳ್ಳಿಗೆ ಶಿಫ್ಟ್ ಆಗಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಇದೀಗ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ನಡುವಿನ ಲೀಗ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಹುಬ್ಬಳ್ಳಿ(ಆ.19): ಬೆಂಗಳೂರು ಪಂದ್ಯಗಳ ಬಳಿಕ ಇದೀಗ  ಹುಬ್ಬಳ್ಳಿ ತೆರಳಿದೆ 7ನೇ ಆವೃತ್ತಿ ಕೆಪಿಎಲ್ ಟೂರ್ನಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ಶಿವಮೊಗ್ಗ ಲಯನ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್ 25 ರನ್‌ಗಳ ಗೆಲುವು ಸಾಧಿಸಿತು.

 

Won by 25 runs pic.twitter.com/g1wMdXdE0c

— Namma KPL (@KPLKSCA)

 

ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗಧಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿತು. ಪ್ರವೀಣ್ ದುಬೆ 43 ರನ್ ಸಿಡಿಸಿದರೆ, ನಾಯಕ ವಿನಯ್ ಕುಮಾರ್ 13 ಎಸೆತದಲ್ಲಿ 5 ಭರ್ಜರಿ  ಸಿಕ್ಸರ್ ನೆರವಿನಿಂದ 35 ರನ್ ಚಚ್ಚಿದರು. 

161 ರನ್ ಟಾರ್ಗೆಟ್ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಜೋನಾಥನ್ 29 ರನ್, ಪೃಥ್ವಿ ಶೇಕಾವತ್ 25 ರನ್ ಕಾಣಿಕೆ ನೀಡಿದರು. ಉಳಿದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾಗಲಿಲ್ಲ. ಹೀಗಾಗಿ ಶಿವಮೊಗ್ಗ 9 ವಿಕೆಟ್ ನಷ್ಟಕ್ಕೆ 135 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

click me!