ಎಲ್ಲೂ ಸಲ್ಲದ ರಾಹುಲ್, ಟೆಸ್ಟ್ ತಂಡದಿಂದ ಕಿಕ್’ಔಟ್..?

Sep 4, 2018, 5:04 PM IST

ಬೆಂಗಳೂರು[ಸೆ.04]: ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರದರ್ಶನ ಗಮನಿಸಿದ್ರೆ, ಅವರ ಟೆಸ್ಟ್ ವೃತ್ತಿ ಬದುಕು ಅಂತ್ಯವಾಯಿತಾ ಎಂಬ ಅನುಮಾನ ದಟ್ಟವಾಗತೊಡಗಿದೆ. ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಸರಣಿ ಸೋಲಿನಲ್ಲಿ ರಾಹುಲ್ ಪಾತ್ರ ಕೂಡಾ ಇದೆ. ರಾಹುಲ್ 4 ಟೆಸ್ಟ್’ಗಳ 8 ಇನ್ನಿಂಗ್ಸ್’ಗಳಲ್ಲಿ ಕೇವಲ 14.1ರ ಸರಾಸರಿಯಲ್ಲಿ 113 ರನ್’ಗಳನ್ನಷ್ಟೇ ಬಾರಿಸಿದ್ದಾರೆ.  ಹೀಗಾಗಿ ರಾಹುಲ್ ಟೆಸ್ಟ್ ಬದುಕು ಮುಗಿಯಿತಾ ಎನ್ನೋ ಮಾತು ದಟ್ಟವಾಗುತ್ತಿದೆ.