ಐಎಸ್ಎಲ್ ಟೂರ್ನಿಯಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಮುಂಬೈ ಸಿಟಿ ಎಫ್‌ಸಿ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳ ಹೋರಾಟದ ಹೈಲೈಟ್ಸ್ ಇಲ್ಲಿದೆ.
ಕೊಚ್ಚಿ(ಅ.05): ಪ್ರಾಂಜಲ್ ಭೂಮಿಜ್ (90ನೇ ನಿಮಿಷ) ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲಿನಿಂದ ಕೇರಳ ಬ್ಲಾಸ್ಟರ್ ಹಾಗೂ ಮುಂಬೈ ಸಿಟಿ ಎಫ್ ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 1-1 ಗೋಲಿನಿಂದ ಡ್ರಾ ದಲ್ಲಿ ಅಂತ್ಯಗೊಂಡಿತು.
ಕೇರಳದ ಪರ ಪ್ರಥಮಾರ್ಧದಲ್ಲಿ ಹಾಲಿಚರಣ್ ನಾರ್ಜರಿ 24ನೇ ನಿಮಿಷದಲ್ಲಿ ಗಳಿಸಿದ ಗೋಲು ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟಿತ್ತು. ಆದರೆ ಮುಂಬೈ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿ ಪಂದ್ಯ ಡ್ರಾ ಗೊಳಿಸಿತು.
undefined
ಕೇರಳ ಬ್ಲಾಸ್ಟರ್ ತಂಡದ ನಾಯಕ ಸಂದೇಶ್ ಜಿಂಗಾನ್ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ 60ನೇ ಪಂದ್ಯವನ್ನಾಡಿ ದಾಖಲೆ ಬರೆದರು. ಕೇರಳ ಬ್ಲಾಸ್ಟರ್ಸ್ ತಂಡ ಮನೆಯಂಗಣದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಕೇರಳದ ಮೀನುಗಾರರಿಗೆ ವಿಶೇಷ ಗೌರವ ನೀಡಿತು.
Heart-warming gesture by fans from , as they pay tribute to all the heroes who stepped up during the 🙏🏽💛 pic.twitter.com/2aiLALeSHy
— Indian Super League (@IndSuperLeague)
ಇತ್ತೀಚಿಗೆ ಸಂಭವಿಸಿದ ಮಳೆ ಹಾನಿಯ ವೇಳೆ ಕೇರಳದ ಮೀನುಗಾರರು ಮಾಡಿರುವ ತ್ಯಾಗದ ಸ್ಮರಣೆ ಫುಟ್ಬಾಲ್ ಕ್ರೀಡಾಂಗಣದಲ್ಲಿ ಎದ್ದು ಕಂಡಿತು. ದೈತ್ಯಾಕಾರದ ಬ್ಯಾನರ್‌ನಲ್ಲಿ ಮೀನುಗಾರರು ದೋಣಿಯನ್ನು ಹೊತ್ತು ಬರುವ ದೃಶ್ಯ ಫುಟ್ಬಾಲ್ ಜಗತ್ತಿನ ಗಮನ ಸೆಳೆಯಿತು.
Kerala blasters