ಮಗಳಿಗೆ ಏಷ್ಯನ್‌ ಗೇಮ್ಸ್‌ ಎಂದು ಹೆಸರಿಟ್ಟ ದಂಪತಿ!

By Web DeskFirst Published Aug 22, 2018, 10:08 AM IST
Highlights

ಇಲ್ಲಿ, ಏಷ್ಯಾಡ್‌ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಮಗು ಜನಿಸಿದ ಕಾರಣ, ಈ ರೀತಿ ಹೆಸರಿಡಲಾಯಿತು ಎಂದು ದಂಪತಿ ತಿಳಿಸಿದ್ದಾರೆ. 

ಪಾಲೆಂಬಾಂಗ್‌(ಆ.22): ಇಂಡೋನೇಷ್ಯಾದ ದಂಪತಿ ತಮ್ಮ ಮಗಳಿಗೆ ‘ಏಷ್ಯನ್‌ ಗೇಮ್ಸ್‌’ ಎಂದು ನಾಮಕರಣ ಮಾಡಿದ್ದಾರೆ. 

ಇಲ್ಲಿ, ಏಷ್ಯಾಡ್‌ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಮಗು ಜನಿಸಿದ ಕಾರಣ, ಈ ರೀತಿ ಹೆಸರಿಡಲಾಯಿತು ಎಂದು ದಂಪತಿ ತಿಳಿಸಿದ್ದಾರೆ. 

‘ಪಾಲೆಂಬಾಂಗ್‌ನಂತಹ ಸಣ್ಣ ನಗರದಲ್ಲಿ ಏಷ್ಯನ್‌ ಗೇಮ್ಸ್‌ನಂತಹ ಕ್ರೀಡಾಕೂಟ ನಡೆಯುವುದು ತೀರಾ ಅಪರೂಪ. ಹೀಗಾಗಿ ಈ ಐತಿಹಾಸಿಕ ಕ್ಷಣ ಸದಾ ನೆನಪಿನಲ್ಲಿ ಉಳಿಯಲಿ ಎನ್ನುವ ಕಾರಣಕ್ಕೆ ನಮ್ಮ ಮಗಳಿಗೆ ಅಬಿಧಾ ಏಷ್ಯನ್‌ ಗೇಮ್ಸ್‌ ಎಂದು ನಾಮಕರಣ ಮಾಡಿದ್ದೇವೆ’ ಎಂದು ಮಗುವಿನ ತಂದೆ ಹೇಳಿದ್ದಾರೆ.
 

click me!