ಹತಾಶೆಗೊಂಡ ಬಾಂಗ್ಲಾ ಅಭಿಮಾನಿಗಳಿಂದ ಕೊಹ್ಲಿ ವೆಬ್‌ಸೈಟ್ ಹ್ಯಾಕ್!

By Web DeskFirst Published Oct 2, 2018, 7:36 PM IST
Highlights

ಭಾರತ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದ ಸೋಲು ಬಾಂಗ್ಲಾದೇಶ ಅಭಿಮಾನಿಗಳನ್ನ ಇನ್ನಿಲ್ಲದಂತೆ ಕಾಡುತ್ತಿದೆ.  ಟೂರ್ನಿ ಮುಗಿದಿ ದಿನಗಳೇ ಉರುಳಿದರೂ ಬಾಂಗ್ಲಾ ಅಭಿಮಾನಿಗಳ ಹುಚ್ಚಾಟ ನಿಂತಿಲ್ಲ. ಇದೀಗ ವಿರಾಟ್ ಕೊಹ್ಲಿಯ ಅಧೀಕೃತ ವೆಬ್‌ಸೈಟ್ ಹ್ಯಾಕ್ ಮಾಡಿ ವಿಕೃತಿ ಮೆರೆದಿದ್ದಾರೆ.

ಢಾಕ(ಅ.02): ಏಷ್ಯಾಕಪ್ ಫೈನಲ್ ಪಂದ್ಯದ ಸೋಲಿನಿಂದ ಬಾಂಗ್ಲಾದೇಶ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಸೋಲಿನ ಸೇಡು ತೀರಿಸಿಕೊಳ್ಳಲು ಹೊರಟ ಬಾಂಗ್ಲಾದೇಶ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಧೀಕೃತ ವೆಬ್‌ಸೈಟ್ ಹ್ಯಾಕ್ ಮಾಡಿದ್ದಾರೆ.

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಲಿಟ್ಟನ್ ದಾಸ್ ಸ್ಟಂಪ್ ಔಟ್‌ಗೆ ಬಲಿಯಾಗಿದ್ದರು. ಅಂಪೈರ್ ತೀರ್ಪು ಬಾಂಗ್ಲಾ ಅಭಿಮಾನಿಗಳಿಗೆ ಸಮಾಧಾನ ತಂದಿಲ್ಲ. ಅಂಪೈರ್ ತೀರ್ಪಿನ ವಿರುದ್ಧ ಹೋರಾಡಲು ಬಾಂಗ್ಲಾದೇಶ ಅಭಿಮಾನಿಗಳು ವಿರಾಟ್ ಕೊಹ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದಾರೆ.

 

ಬಾಂಗ್ಲಾದ ಸೈಬರ್ ಸೆಕ್ಯೂರಿಟಿ ಹಾಗೂ ಇಂಟೆಲಿಜೆನ್ಸ್(CSI) ವಿರಾಟ್ ಕೊಹ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದೆ. ಬಳಿಕ ಲಿಟ್ಟನ್ ದಾಸ್ ಸ್ಟಂಪ್ ಔಟ್ ಫೋಟೋ ಅಪ್‌ಲೋಡ್ ಮಾಡಿ, ತಪ್ಪು ತೀರ್ಪಿಗೆ ಕ್ಷಮೆ ಕೇಳಬೆಕೆಂದು ಕೋರಿದ್ದಾರೆ. 

ಬಾಂಗ್ಲಾದೇಶದ ಅಭಿಮಾನಿಗಳ ಹುಚ್ಚಾಟ ಇದೇ ಮೊದಲ್ಲ. 2015ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾಗೆ ನೋ ಬಾಲ್ ನೀಡಿ ಔಟ್‌ನಿಂದ ಬಚಾವ್ ಮಾಡಿದ್ದಾರೆ ಎಂದು ಆರೋಪಿಸಿ ಬಾಂಗ್ಲಾ ಅಭಿಮಾನಿಗಳು ಹೋರಾಟ ನಡೆಸಿದ್ದರು.

click me!