ಏಷ್ಯನ್ ಗೇಮ್ಸ್ 2018: ಟೆನಿಸ್‌ನಿಂದ ಭಾರತಕ್ಕೆ ಬಂತು ಮತ್ತೊಂದು ಪದಕ

By Web DeskFirst Published Aug 23, 2018, 3:55 PM IST
Highlights

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಭರವಸೆ ಕ್ರೀಡಾಪಟುಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಯುವ ಪ್ರತಿಭೆಗೆಳು ಭಾರತಕ್ಕೆ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ 25 ವರ್ಷದ ಅಂಕಿತ ರೈನಾ ಮತ್ತೊಂದು ನಿದರ್ಶನ.

ಜಕರ್ತಾ(ಆ.23): ಮಹಿಳಾ ಸಿಂಗಲ್ಸ್ ಟೆನಿಸಿ ವಿಭಾಗದಲ್ಲಿ ಭಾರತ ಪದಕ ಬೇಟೆಯಾಡಿದೆ. ಚೀನಾದ ಶುಯಿ ಝಾಂಗ್ ವಿರುದ್ಧದ ಸೆಮಿಫೈನಲ್ ಪಂದ್ಯಜಲ್ಲಿ ಭಾರತದ ಅಂಕಿತ ರೈನಾ 4-6, 6-7 ನೇರ ಸೆಟ್‌ಗಳಿಂದ ಸೋಲು ಅನುಭವಿಸಿದರು. ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮೊದಲ ಸೆಟ್‌ನಲ್ಲಿ 3-1 ಮುನ್ನಡೆ ಸಾಧಿಸಿದ್ದ ಅಂಕಿತ ಬಳಿಕ ಭುಜದ ನೋವಿನಿಂದ ಬಳಲಿದರು. ಹೀಗಾಗಿ ಮೊದಲ ಸೆಟ್ ಜೊತೆಗೆ 2ನೇ ಸೆಟ್‌ನಲ್ಲೂ ಸೋಲು ಅನುಭವಿಸಿದರು. 

 

Ankita wins BRONZE!
Playing her second , secured a bronze medal in women’s singles .
Many congratulations to you! We are proud of you!🇮🇳 🎾 🥉 pic.twitter.com/Hux6P8QLcT

— SAIMedia (@Media_SAI)

 

ಅಂಕಿತ ರೈನಾ ಕಂಚಿನ ಪದಕ ಗೆಲ್ಲೋ ಮೂಲಕ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 4 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನೊಂದಿಗೆ ಒಟ್ಟು 17 ಪದಕ ಸಂಪಾದಿಸಿದೆ. ಮೊದಲ ಸ್ಥಾನದಲ್ಲಿರುವ ಚೀನಾ, 51 ಚಿನ್ನ, 34 ಬೆಳ್ಳಿ ಹಾಗೂ 17 ಕಂಚಿನೊಂದಿಗೆ ಓಟ್ಟು 102 ಪದಕ ಗೆದ್ದುಕೊಂಡಿದೆ.
 

click me!