ಮನುಷ್ಯರಂತೆ ಪ್ರಾಣಿಗಳು ಕೂಡ ಸಂಬಂಧವನ್ನು ತುಂಬಾ ಸುಂದರವಾಗಿ ನಿಭಾಯಿಸುತ್ತವೆ. ಅವರಿಗೂ ಕೂಡ ಅಕ್ಕ ತಮ್ಮ ಅಮ್ಮ ಅಪ್ಪ ಎಂಬ ಅನುಬಂಧಗಳಿವೆ. ಅದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳು ಪ್ರೀತಿ ತೋರುವ ತಮ್ಮ ಸಹವರ್ತಿಗಳಲ್ಲಿ ಪ್ರೇಮದಿಂದ ವರ್ತಿಸುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಅದೇ ರೀತಿ ಬೇರ್ಪಟ್ಟಿದ್ದ ಎರಡು ಸಹೋದರ ಚಿಂಪಾಜಿಗಳು ಮೊದಲ ಬಾರಿ ಒಂದಾದಾಗ ಪರಸ್ಪರ ಹೃದಯ ತುಂಬಿ ಭಾವುಕವಾಗಿ ಮುದ್ದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಟ್ಟಿಂಗ್ ಬಿಡೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, ನೋಡುಗರು ಈ ಚಿಂಪಾಜಿಗಳ ಪ್ರೀತಿ ನೋಡಿ ಭಾವುಕರಾಗಿದ್ದಾರೆ. ಇವೆರಡು ಚಿಂಪಾಂಜಿ ಮರಿಗಳನ್ನು ಸೆರೆಯಿಂದ ರಕ್ಷಿಸಲಾಗಿದೆ. ಈ ಇಬ್ಬರು ಸಹೋದರರನ್ನು ಎರಡು ವಿಭಿನ್ನ ಸ್ಥಳಗಳಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕಿಸಲಾಗಿತ್ತು. ಅವರು ಚೇತರಿಸಿಕೊಂಡ ನಂತರ ಮತ್ತೆ ಒಂದಾಗಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡಿ ಶೀರ್ಷಿಕೆ ನೀಡಲಾಗಿದೆ. ಕುಟುಂಬದಿಂದ ದೂರವಾದವರಿಗೆ ಕುಟುಂಬದ ಬೆಲೆ ಏನು ಎನ್ನುವುದರ ಅರಿವಿರುತ್ತೆ. ಅದೇ ರೀತಿ ಬೇರ್ಪಟ್ಟ ಚಿಂಪಾಜಿಗಳೆರಡು ತುಂಬಾ ಪ್ರೀತಿಯಿಂದ ಒಂದನ್ನೊಂದು ತಬ್ಬಿಕೊಳ್ಳುತ್ತಿವೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೋಡುಗರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಟುಂಬದ ಬಂಧಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ. ಈ ಇಬ್ಬರು ಕುಟುಂಬವಾಗಿ ಉಳಿಯಲು ಉತ್ತಮವಾದ ಅಭಯಾರಣ್ಯವನ್ನು ಕಂಡುಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವರದಿಯ ಪ್ರಕಾರ ಈ ಎರಡು ಚಿಂಪಾಂಜಿ ಸಹೋದರರನ್ನು ಚಿಕಿತ್ಸೆಗಾಗಿ ವಿವಿಧ ಎನ್‌ಜಿಒಗಳು ಕರೆದೊಯ್ದಿದ್ದವು. ಈಗ ಚಿಕಿತ್ಸೆ ಪೂರ್ಣಗೊಂಡು ಅವರು ಮತ್ತೆ ಒಂದಾಗಿದ್ದಾರೆ.
ಮನುಷ್ಯರಂತೆ ಪ್ರಾಣಿಗಳಿಗೂ ಬುದ್ಧಿವಂತಿಕೆ ಇರುತ್ತದೆ. ಕೆಲ ತಿಂಗಳ ಹಿಂದೆ ತಾಯಿ ಚಿಂಪಾಜಿಯೊಂದು ತನ್ನ ಮಗ ಚಿಂಪಾಜಿಗೆ ಆಗಿದ್ದ ಗಾಯದ ಮೇಲೆ ಕೀಟದ ಲೇಪನವನ್ನು ಹಚ್ಚಿದ್ದು, ಇದರ ವಿಡಿಯೋ ಎರಡು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಇದನ್ನು ಪತ್ತೆ ಮಾಡಿದ್ದರು.
ಬಿಡದಂತೆ ಹಿಡಿವೆ ಈ ಕಾಲನ್ನು: ಮುದ್ದಾಡಲು ಬಂದ ಯುವಕನಿಗೆ ಚಿಂಪಾಂಜಿ ಏನ್ ಮಾಡ್ತು ನೋಡಿ
ಬುದ್ಧಿವಂತರೆನಿಸಿರುವ ಮನುಷ್ಯರಾದ ನಾವು ಗಾಯಗೊಂಡರೆ, ಮೊದಲು ಮಾಡುವ ಕೆಲಸ ಬ್ಯಾಂಡೇಜ್, ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ನಂಜುನಿರೋಧಕ ದ್ರವವನ್ನು ಗಾಯದ ಮೇಲೆ ಸಿಂಪಡಿಸಿ ಸ್ವಚ್ಛಗೊಳಿಸಿ ಬ್ಯಾಂಡೇಜ್ ಕಟ್ಟುವುದು ಸಾಮಾನ್ಯ. ಆದರೆ ಚಿಂಪಾಜಿಗಳು ಕೂಡ ಅದನ್ನೇ ಮಾಡುತ್ತಿವೆ. ಆದರೆ ಅವರು ನಂಜು ನಿವಾರಕ ಔಷಧದ ಬದಲು ಕೀಟವನ್ನು ಲೇಪನವಾಗಿ ಬಳಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಚಿಂಪಾಂಜಿಯೊಂದು ತನ್ನ ಮಗನ ಕಾಲಿನಲ್ಲಾದ ಗಾಯಕ್ಕೆ ಮೊದಲ ಬಾರಿಗೆ ಅಪರಿಚಿತ ಕೀಟವೊಂದನ್ನು ಅರೆದು ಹಚ್ಚುವ ವಿಡಿಯೋ ಇದಾಗಿದೆ. ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಇದನ್ನು ಸೆರೆ ಹಿಡಿದಿದ್ದಾರೆ.
4 ವರ್ಷದಿಂದ ಚಿಂಪಾಂಜಿ ಜೊತೆ ಅಫೇರ್, ಮಹಿಳೆ ಮೃಗಾಲಯ ಪ್ರವೇಶಕ್ಕೆ ನಿಷೇಧ!
ಸುಜೀ (Suzee) ಹೆಸರಿನ ವಯಸ್ಕ ಚಿಂಪಾಂಜಿ, ತನ್ನ ಮಗ ಸಿಯಾ(Sia)ನ ಕಾಲಿಗೆ ಆದ ಗಾಯವನ್ನು ಪರೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಚಿಂಪಾಂಜಿ ತಾಯಿಯು ಕೀಟವನ್ನು ಹಿಡಿದು ತನ್ನ ಮಗುವಿನ ಗಾಯಕ್ಕೆ ಹಚ್ಚುವ ಮೊದಲು ಅದನ್ನು ತನ್ನ ಬಾಯಿಗೆ ಹಾಕುತ್ತಾಳೆ. ಸಂಶೋಧಕರಿಗೆ ಅದು ಯಾವ ಕೀಟ ಎಂದು ಖಚಿತವಾಗಿಲ್ಲವಾದರೂ, ಗಾಯದ ಶುದ್ಧೀಕರಣ ಅಥವಾ ನೋವು ನಿವಾರಣೆಗೆ ಇದು ಸಹಾಯ ಮಾಡುತ್ತದೆ ಎಂದು ಅವರು ಊಹಿಸುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.