ಡೆತ್ ನೋಟಾದ್ರೂ ಬರೀಬಹುದು, ಆದರೆ ಲವ್ ಲೆಟರ್ ಬರೆಯೋದು ಕಷ್ಟ!

By Suvarna News  |  First Published Aug 8, 2024, 5:21 PM IST

ಡೆತ್ ನೋಟ್ ಬರೆಯೋದು ಸುಲಭ. ಆದರೆ, ಲವ್ ಲೆಟರ್ ಬರೆಯೋದು, ಹೇಗೋ ಕಷ್ಟ ಪಟ್ಟು ಬರೆದಾದ ಮೇಲೆ ಅವಳಿಗೆ ಕೊಡೋದು, ಕೊಟ್ಟ ಮೇಲೆ ರಿಯಾಕ್ಷನ್‌ಗೆ ಕಾಯೋದು ಪ್ರತೀ ಕ್ಷಣವೂ ಸತ್ತಂತೆ ಆಗುತ್ತೆ!


ಸುರೇಶ್ ಎ.ಎಲ್, ವರದಿಗಾರರು, ಏಷ್ಯಾ ನೆಟ್ ಸುವರ್ಣ ನ್ಯೂಸ್

ಯಾವ ಕ್ಷಣದಲ್ಲಿ ಬೇಕಾದರೂ ಶುರುವಾಗಬಹುದು.. ಅದಕ್ಕೆ ಇಂತದ್ದೇ ಅಂತ ಮಹೂರ್ತ ಬೇಕಿಲ್ಲ, ಘಳಿಗೆ, ಶುಭಕಾಲ ಅಂತೆಲ್ಲಾ ಏನೂ ಇಲ್ಲ. ತನ್ನ ಪಾಡಿಗೆ ತಾನು ಅಂತಾ ಮುಗ್ದವಾಗಿ ಆಡಿಕೊಳ್ಳುತ್ತಿದ್ದ ಹೃದಯ ಇದ್ದಕ್ಕಿದ್ದಂತೆ ಲಯತಪ್ಪುವ ಸಮಯವದು.. ಯಾರ‌ಮುಂದೆ ಬೇಕಾದರೂ ಗಟ್ಟಿ ಯಾಗಿ ನಿಂತು ಬಡಿದಾಡುವ ಹುಡುಗ ಏನೂ ಮಾಡಲಾಗದೇ ಮೆತ್ತಗಾಗಿ ನಿಂತು ಬಿಡುತ್ತಾನೆ. ಬಿರುಗಾಳಿಯಂತಹಾ ಹುಡುಗಿ‌ಕೂಡಾ ತಣ್ಣಗಾಗಿ ಬಿಡುತ್ತಾಳೆ.  ಅದು ಪ್ರೀತಿ ಹುಟ್ಟುವ ಸಮಯ..

ನೇರಾ ನೇರ ನಿಂತು ಕಣ್ಣಲ್ಲಿ ಕಣ್ಣಿಟ್ಟು ಹೇಳಲು ಧೈರ್ಯ ಸಾಲದು, ಹೇಳದೇ ಇರೋದಾದ್ರೂ ಎಷ್ಟು ಕಾಲ ..

Tap to resize

Latest Videos

undefined

ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣ ಮುಂದೆ ..!
ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ..!

ಒಂದೆರಡು ಸಾಲು ಗೀಚಿ ಪತ್ರದಲ್ಲೇ ಹೇಳಿಬಿಟ್ಟರೆ ಹೇಗೆ ಅನಿಸುತ್ತೆ.. ಇಲ್ಲಾ ಒಂದೊಳ್ಳೆ ಚಿತ್ರ ಬರೆದು ಗಿಫ್ಟ್ ಕೊಟ್ಟು ನೋಡಲಾ ಅಂತಲೂ ಅನಿಸುತ್ತೆ..ಆದರೆ ಮನಸ್ಯಾಕೋ ಯಾವುದಕ್ಕೂ ಮುಂದಾಗೋದೇ ಇಲ್ಲ.

ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ..
ಹೇಗೆ ಹೇಳಲಿ ನನ್ನ ಮನದ ಹಂಬಲಾ..!!

ಅಂದುಕೊಂಡಷ್ಟು ಸುಲಭವಲ್ಲಾ ಲವ್ ಲೆಟರ್ ಬರೆಯೋದು.
ಡೆತ್ ನೋಟ್ ಬೇಕಾದರೂ ಒಂದು ಸಾಲಿನಲ್ಲಿ ಬರೆದು ಬಿಡಬಹುದು
ಬರೆದಿಟ್ಟು ಸತ್ತುಹೋಗಿಯೂ ಬಿಡಬಹುದು,. ಆದರೆ ಲವ್ ಲೆಟರ್ ಇದೆಯಲ್ಲಾ ಒಂದೊಂದು ಅಕ್ಷರ ಬರೆಯುವಾಗಲೂ ಸತ್ತು ಸತ್ತೂ ಬದುಕಬೇಕು‌..ಒಂದೊಂದು ಸಾಲನ್ನೂ ಪೋಣಿಸುವಾಗಲೂ ಮತ್ತೆ ಮತ್ತೆ ಹುಟ್ಟಿದಂತಾಗುತ್ತೆ.  ಇದು ಅವನಿ/ಳಿಗೆ ಇಷ್ಟ ಆಗುತ್ತೋ ಇಲ್ವೋ,, ಹೀಗೆ ಬರೆದಿದ್ದಕ್ಕೆ ಕೋಪ ಮಾಡಿಕೊಂಡ್ರೆ ಹೇಗೋ,, ಹೀಗೇ ಹತ್ತಾರು ತುಮುಲಗಳು ಹೃದಯ ದ ಒಳಗಿಂದ ನುಗ್ಗಿ ಬರುತ್ತವೆ.

ಅವನಿಗೆ ಅವಳು ಅರ್ಪಿಸಿಕೊಂಡು ಬಿಡಬೇಕೆಂದುಕೊಂಡಾಗ, ಬೇರೆಯವಳು ಸಿಕ್ಕಾಗಿತ್ತು!

ನೋಡಿದ ಮೊದಲ ಕ್ಷಣದಿಂದ , ಇಲ್ಲಿಯವರೆಗೂ ಹಿಂದೆ ಬಿದ್ದು ಕಂಡ ಅಷ್ಟೂ ವಿಷಯಗಳನ್ನು ಅದರಲ್ಲಿ ಬರೆಯಬೇಕು , ನಿಂಗೆ ಆ ಕಲರ್ ಡ್ರೆಸ್ಸು ಚೆಂದ ಕಾಣುತ್ತೆ, ಈ ಹೇರ್ ಸ್ಟೈಲ್ ಸಖತ್ತಾಗಿರುತ್ತೆ, ನಿನ್ನ ನಗು ಚೆಂದ, ನಿನ್ನ ವಾಕಿಂಗ್ ಬೊಂಬಾಟು, ನೀನು ಬಳಸೋ ಸೆಂಟು ಸೂಪರ್, ಹಿಂಗೇ ಎಲ್ಲಾ ಬರೆದು,ನಿನ್ನ ಒಂದೊಂದು ವಿಚಾರವನ್ನೂ ನಾನು ಎಷ್ಟು ಪರ್ಫೆಕ್ಟಾಗಿ ಫಾಲೋ ಮಾಡ್ತಿದೀನಿ ಅಂತಾ ಅದರಲ್ಲಿ ಬರೀಬೇಕು.. ಮುಂದೆ.. ಹಂಗೆಲ್ಲಾ ಬೇಡ.. ಹಿಂಗೆ ಬದುಕೋಣ,, ಯಾರೇನೇ ಅಂದುಕೊಳ್ಳಲಿ ಅಂದುಕೊಂಡ ಹಾಗೇ ಇರೋಣ ಹೀಗೆ  ಬದುಕಿನ ಬಗ್ಗೆ ಸಾವಿರ ಭರವಸೆಗಳನ್ನು ತುಂಬಬೇಕು. 

ನೂರಾರು ಬಣ್ಣಗಳ ಆಸೆಗಳನ್ನು ಮೂಡಿಸಬೇಕು.. ದಿನಾ ಬೆಳಿಗ್ಗೆ ನಾನೇ ಗುಡ್ ಮಾರ್ನಿಂಗ್ ಹೇಳಿ ನಿಂಗೊಂದು ಕಾಫಿ ಕೊಡ್ತೀನಿ, ಸಂಜೆ ಹೊತ್ತಿಗೆ ಎಲ್ಲಿದ್ದರೂ ನಿನ್ನ ಮುಂದೆ ಹಾಜರ್, ಎಷ್ಟೇ ಕೆಲಸ ಇದ್ದರೂ ಒಂಟಿಯಾಗಿ ಬಿಟ್ಟು ಬೇರೆ ಊರಿಗೆ ಹೋಗಲ್ಲ. ಸುಖ ದುಃಖ ಏನಿದ್ದರೂ ನಿನ್ನ ಜೊತೆಯೇ ಅಂತೆಲ್ಲಾ ಜೀವ ತುಂಬಿ ಬರೆಯಬೇಕು.. ನಿಂಗೇ ಅವತ್ತೇ ಹೇಳಬೇಕು ಅಂದುಕೊಂಡಿದ್ದೆ ಯಾಕೋ ಧೈರ್ಯ ಸಾಲಲಿಲ್ಲ, ಹೆಂಗೆ ಹೇಳಬೇಕೋ ಗೊತ್ತಾಗಲಿಲ್ಲ.. ಈಗಲೂ ಅಷ್ಟೇ ಏನು ಬರೆಯಬೇಕು ಅಂತಲೇ ತೋಚುತ್ತಿಲ್ಲ, ತೋಚಿದ್ದು ಗೀಚಿದ್ದೇನೆ ಅಂತೆಲ್ಲಾ ಪೇಚಾಡಬೇಕು.
ಪ್ರೀತಿ ಹುಟ್ಟಿದ್ದಕ್ಕೆ ಕಾರಣವೇ ಇರಲ್ಲ ನಿಜಾ.. ಆದರೆ ನೀನೇ ಯಾಕಿಷ್ಟ ಆದೆ ಅನ್ನೋದಕ್ಕಾದರೂ ಒಂದು ಕಾರಣ ಹುಡುಕಿ ಬರೆಯಬೇಕು.

ಲವ್ವಲ್ಲಿ ಬಿದ್ದಾಗ ಜಯಾ ಬಚ್ಚನ್ ಸ್ಟಾರ್ ನಟಿ, ಆದ್ರೆ ಬಚ್ಚನ್ ಸಾಬ್ ಅವಕಾಶಕ್ಕೆ ಅಲೆಯುತ್ತಿದ್ರಂತೆ!

ಇಷ್ಟೆಲ್ಲಾ ಆದಮೇಲೆ ಎಲ್ಲಾ ಸರಿ ಎಲ್ಲಿಂದ ಶುರು ಮಾಡಲಿ ಅನ್ನೋ ಕನ್ಫ್ಯೂಷನ್ನು.. ಇದು ಸರಿಯಾ..ತಪ್ಪೋ.. ಬೇರೆ ಯಾರ ಕೈಗೇನಾದ್ರೂ ಸಿಕ್ಕಿಬಿಟ್ಟರೆ ಗತಿಯೇನು ಅನ್ನೋ ಭಯ.. ಸಿಕ್ಕಿ ಹಾಕಿಕೊಂಡರೆ ಏನಾಗುತ್ತೋ ಅನ್ನುವ ತಳಮಳ, ಹಿಂಗೆ ಏನೇನೋ ಯೋಚನೆ ಮಾಡಿ ತಿದ್ದಿ ತೀಡಿ  ಎಲ್ಲಾ ಬರೆದ ಮೇಲೆ  ಕೊನೆಯ ಸಾಲು ಒಂಚೂರು ವಕ್ರ ಅನಿಸಿಬಿಟ್ಟರೆ ಮುಗೀತು..ಥತ್ತೇರಿಕೆ ಅಂತಾ ಇಡೀ ಪತ್ರವನ್ನೊಮ್ನೆ ಕೈಯಲ್ಲಿ ಮಡಚಿ ಚೂರು ಚೂರು‌ಮಾಡಿ ಯಾರಿಗೆ ಸಿಕ್ಕರೂ ಒದಲು ಆಗದಷ್ಟು ತುಂಡು ತುಂಡು ಮಾಡಿ ಬಿಸಾಕಿ.. ಮತ್ತೆ ಹೊಸ ಹಾಳೆ ತೆಗೆದುಕೊಂಡು ಶುರು ಮಾಡಬೇಕು..

ಮತ್ತೆ ಹೊಸ ಜೀವನ ಶುರು ಮಾಡಿದಷ್ಟೇ ಕುಕ್ಕುಲತೆಯಿಂದ ಶುರು ಮಾಡಬೇಕು.. ಎಲ್ಲವೂ ಓಕೆ ಓಕೆ ಅಂದಾದ ಮೇಲೆ ಒಂದು ಸಲ ಯಾರ ಕಣ್ಣಿಗೂ ಕಾಣದ ಹಾಗೆ ದೇವರ ಮುಂದೆ ಇಟ್ಟು‌ ಕೈ ಮುಗಿದು ದೇವರೇ ಒಪ್ಪಿಕೊಳ್ಳೋ ಹಂಗೆ ಮಾಡಪ್ಪಾ ಅಂದುಕೊಂಡು ಪುಸ್ತಕ ದ ಮದ್ಯದಲ್ಲಿ ಬಚ್ಚಿಟ್ಟುಕೊಂಡು,, ಅವಳು/ನು  ಸಿಕ್ಕ ತಕ್ಷಣ ಏನೋ ಮಾತಾಡಬೇಕಿತ್ತು ಅಂತ ಹೇಳುವಷ್ಟರಲ್ಲಿ ಗಂಟಲು ಒಣಗಿ, ಮತ್ತೆ ಅದು ಹೇಗೋ ಧೈರ್ಯ ಮಾಡಿ ಅವಳ/ನ ಕೈಗೆ ಆ ಪತ್ರವನ್ನು ತಲುಪಿಸುವಷ್ಟು ಹೊತ್ತಿಗೆ.. ಅಬ್ಬಾ ಸತ್ತು ಬದುಕಿದಂತಾಗಿರುತ್ತೆ..

ಪ್ರಿಯತಮೆ ತೆಕ್ಕೆಯಲ್ಲಿರುವಾಗ ಪ್ರಜ್ಞೆ ತಪ್ಪಿದ ಗಂಡನ ಲೈಫ್ ಸಪೋರ್ಟ್ ತೆಗೆದ ಪತ್ನಿ!

ಅಲ್ಲಿಗೆ ಪೇಚಾಟ ಮುಗೀತಾ ಅಂದ್ರೆ.. ಉಹುಂ.. ನೋ ವೇ..

ಅದು ಇಷ್ಟ ಆಯಿತೋ ಇಲ್ಲವೋ.ಒಪ್ಪಿಗೆ ಸಿಗುತ್ತೋ ಇಲ್ಲವೋ. ಇಷ್ಟ ಇಲ್ಲ ಅಂದ್ರೆ ಏನು ಹೇಳಬಹುದು. ಒಪ್ಪಿಕೊಂಡರೆ ರಿಯಾಕ್ಷನ್ ಹೇಗಿರಬಹುದು.. ಹಿಂಗೆ ಏನೆಲ್ಲಾ ಯೋಚನೆಗಳು..

ಉತ್ತರ ಸಿಗೋ ಹೊತ್ತಿಗೆ ಪ್ರತಿಕ್ಷಣ ಪ್ರತಿಕ್ಷಣ ಸತ್ತು ಬದುಕಿದಂತೆ ಆಗಿರುತ್ತೆ.. ಅಕಸ್ಮಾತ್ ಅದೃಷ್ಟ ಚೆನ್ನಾಗಿದ್ದು ಒಪ್ಪಿಗೆ ಸಿಕ್ಕಿದರೆ  ಅಬ್ಬಾ...

ಇಳೆಗೆ ಸ್ವರ್ಗ ಇಳಿದ ಹಾಗೆ ನೀನು ಬಂದೆ ಬಾಳಿಗೆ.
ಅರುಣ ಕಿರಣ ಹೊಳೆವ ಹಾಗೆ ಬಂದೆ ನೀನು ಬದುಕಿಗೆ..


ಸಿಗದೇ ಹೋದಾಗ ಮಾತ್ರ ಲವ್‌ಲೆಟರ್ ಬರೆದ ಅದೇ ಕೈ ಡೆತ್ ನೋಟ್ ಬರೆಯೋಕೂ ಮುಂದಾಗಬಹುದು..ಆದ್ರೆ ಅದಾಗದಿರಲಿ...ಮತ್ತೆ ಲವ್‌ಲೆಟರ್  ಬರೆಯೋಕೆ ನೆಪ ಸಿಗಲಿ.. ಕಾಲ ಕಳೆಯಲಿ ಹಳೆಯದು ಮರೆತು ಮುಂದೆ ಸಾಗುವಂತಾಗಲಿ.

click me!