ಪ್ರಿಯತಮೆ ತೆಕ್ಕೆಯಲ್ಲಿರುವಾಗ ಪ್ರಜ್ಞೆ ತಪ್ಪಿದ ಗಂಡನ ಲೈಫ್ ಸಪೋರ್ಟ್ ತೆಗೆದ ಪತ್ನಿ!

By Roopa Hegde  |  First Published Aug 8, 2024, 12:48 PM IST

ಚೀನಾದಲ್ಲಿ ದಾಂಪತ್ಯ ದ್ರೋಹ ಮಾಡಿದ ಪತಿಗೆ ಪತ್ನಿಯೊಬ್ಬಳು ತಕ್ಕ ಶಿಕ್ಷೆ ನೀಡಿದ್ದಾಳೆ. ಐಸಿಯುವಿನಲ್ಲಿ ಲೈಫ್ ಸಪೋರ್ಟ್ ಮೂಲಕ ಬದುಕಿದ್ದವನ ಪ್ರಾಣ ತೆಗೆಯುವಂತೆ ವೈದ್ಯರಿಗೆ ಹೇಳಿದ್ದಾಳೆ. ಈಕೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 


ಪತಿ ಸಾವು – ಬದುಕಿನ ಮಧ್ಯೆ ಹೋರಾಡ್ತಿರುತ್ತಾನೆ. ಈ ಸಮಯದಲ್ಲಿ ಆಸ್ಪತ್ರೆಗೆ ಓಡಿ ಬರುವ ಪತ್ನಿ, ಕಷ್ಟವಾದ್ರೂ ಸರಿ ಪತಿಯನ್ನು ಬದುಕಿಸಿಕೊಡಿ ಅಂತ ಪರಿಪರಿಯಾಗಿ ವೈದ್ಯರನ್ನು ಬೇಡ್ತಾಳೆ. ಆಕೆಗೆ ಪತಿ ಮೇಲಿರುವ ಪ್ರೀತಿ ಇದೆಲ್ಲವನ್ನೂ ಮಾಡಿಸುತ್ತೆ. ಜನರಿಂದ ಕಾಡಿಬೇಡಿ ಹಣ ತಂದು ಪತಿಗೆ ಮರುಜೀವ ನೀಡ್ತಾಳೆ. ಪತಿಯ ದೀರ್ಘ ಆಯಸ್ಸಿಗೆ ವೃತ ಮಾಡುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ.  ಆದ್ರೆ ಆಸ್ಪತ್ರೆ ಬೆಡ್ ನಲ್ಲಿ ಒದ್ದಾಡ್ತಾ ಮಲಗಿದ್ದ ಪತಿಯನ್ನು ಸಾಯಲು ಬಿಡಿ ಅಂಥ ಕಠಿಣವಾಗಿ ಮಹಿಳೆ ಹೇಳ್ಬೇಕು ಅಂದ್ರೆ ಆಕೆ ಎಷ್ಟು ನೋವು ತಿಂದಿರ್ಬೇಕು. ಪತಿಯಾದವನು ಆಕೆಗೆ ಎಷ್ಟು ಕಷ್ಟ ನೀಡಿರಬೇಕು. ದಾಂಪತ್ಯ ದ್ರೋಹ ಮಾಡಿದ ವ್ಯಕ್ತಿಯೊಬ್ಬನಿಗೆ ಅದೇ ಶಾಪವಾಯ್ತು. ಎಲ್ಲರೂ ಇದ್ದು, ಆಸ್ಪತ್ರೆಯಲ್ಲಿ ಸಾಯುವ ಸ್ಥಿತಿ ಬಂತು. ಅದಕ್ಕೆ ಕಾರಣ ಆತ ಪತ್ನಿಗೆ ಮಾಡಿದ ಮೋಸ.

ಘಟನೆ ನಡೆದಿರೋದು ಚೀನಾ (China)ದಲ್ಲಿ. ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ 38 ವರ್ಷದ ವ್ಯಕ್ತಿಯೊಬ್ಬನಿಗೆ ಸಾಯುವ ಸಮಯದಲ್ಲಿ ದಾಂಪತ್ಯ (Marriage) ದ್ರೋಹಕ್ಕೆ ಶಿಕ್ಷೆಯಾಗಿದೆ. ಗೆಳತಿ ಹಾಗೂ ಪತ್ನಿ ಇಬ್ಬರೂ ಆತನ ಕೈ ಬಿಟ್ಟಿದ್ದಾರೆ. ವಿವಾಹಿತ ವ್ಯಕ್ತಿಗೆ ಅಕ್ರಮ (Illegal)  ಸಂಬಂಧವಿತ್ತು. ಪತ್ನಿಗೆ ಗುಡ್ ಬೈ ಹೇಳಿ ಗೆಳತಿ ಜೊತೆ ವಾಸಿಸುತ್ತಿದ್ದ. ಆದ್ರೆ ಪತ್ನಿಗೆ ವಿಚ್ಛೇದನ ನೀಡಿರಲಿಲ್ಲ. ಪತಿಯಿಲ್ಲದೆ ಪತ್ನಿ ಸಾಕಷ್ಟು ನೋವು, ಕಷ್ಟಗಳನ್ನು ಎದುರಿಸಿದ್ದಳು. ಈ ಮಧ್ಯೆ ಒಂದು ದಿನ ಆತ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ಆತನ ಮೆದುಳಿನಲ್ಲಿ ರಕ್ತಸ್ರಾವವಾಗಿದೆ. 

ಪತ್ನಿ ತಲೆ ಕಡಿದು ಪೊಲೀಸ್ ಠಾಣೆಗೆ ಆಗಮಿಸಿದ ಕ್ರೂರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್!

Tap to resize

Latest Videos

undefined

ಪ್ರಿಯಕರನ ಆರೋಗ್ಯ ಹದಗೆಡುತ್ತಿದ್ದಂತೆ ಆತನನ್ನು ಆಸ್ಪತ್ರೆಗೆ ಕರೆತಂದಿದ್ದಾಳೆ ಗೆಳತಿ. ವ್ಯಕ್ತಿಯನ್ನು ಐಸಿಯುವಿನಲ್ಲಿ ಇಡಲಾಗಿತ್ತು. ಆತ ಕೋಮಾಗೆ ಹೋಗಿದ್ದ. ವ್ಯಕ್ತಿ ಸ್ಥಿತಿ ತುಂಬಾ ಚಿಂತಾಜನಕವಾಗಿದ್ದರಿಂದ ಆತನಿಗೆ ಆಪರೇಷನ್ ಅನಿವಾರ್ಯವಾಗಿತ್ತು. ಆಪರೇಷನ್ ಮುನ್ನ ದಾಖಲೆಗೆ ಸಹಿ ಹಾಕಿಸಿಕೊಳ್ಳಲು ವೈದ್ಯರು ಗೆಳತಿಯ ಹುಡುಕಾಟ ನಡೆದಿದ್ದಾರೆ. ಆದರೆ ಆ ಗೆಳತಿ ಅಲ್ಲಿರಲಿಲ್ಲ. ಆಸ್ಪತ್ರೆಗೆ ಪ್ರೇಮಿಯನ್ನು ಅಡ್ಮಿಟ್ ಮಾಡಿ ಕಾಲ್ಕಿತ್ತಿದ್ದಳು. 

ಈ ಸಮಯದಲ್ಲಿ ವ್ಯಕ್ತಿಯ ಮೊದಲ ಪತ್ನಿ ಆಸ್ಪತ್ರೆಗೆ ಬಂದಿದ್ದಾಳೆ. ತಾನು ಈತನ ಪತ್ನಿ ಎಂದಿದ್ದಾಳೆ. ವೈದ್ಯರು ಪತಿಯ ಆರೋಗ್ಯ ಸ್ಥಿತಿ ವಿವರಿಸಿದ್ದಾರೆ. ಆತನ ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ತಕ್ಷಣ ಆಪರೇಷನ್ ಅವಶ್ಯಕತೆ ಇದೆ. ಹಾಗೆಯೇ ಆಪರೇಷನ್ ಗೆ ಇಷ್ಟು ಖರ್ಚಾಗುತ್ತದೆ ಎಂದು ವಿವರಿಸಿದ್ದಾರೆ. ಸದ್ಯ ಆತನ ಲೈಫ್ ಸಪೋರ್ಟ್ ನಿಂದ ಜೀವಂತವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಎಲ್ಲ ಮಾತುಗಳನ್ನು ವಿವರವಾಗಿ ಕೇಳಿದ ಮಹಿಳೆ, ಪತಿ ಮೋಸ ಮಾಡ್ತಿದ್ದಾನೆ ಎಂಬುದು ತಿಳಿದಿತ್ತು. ವಿಚ್ಛೇದನ ನೀಡದೆ 10 ವರ್ಷಗಳಿಂದ  ಇನ್ನೊಬ್ಬಳ ಜೊತೆ ಜೀವನ ನಡೆಸುತ್ತಿದ್ದ. ನನಗೆ ಆರ್ಥಿಕವಾಗಿ ನಯಾ ಪೈಸೆ ನೀಡಿಲ್ಲ ಎಂದು ತನ್ನೆಲ್ಲ ದುಃಖವನ್ನು ವೈದ್ಯರ ಬಳಿ ಹಂಚಿಕೊಂಡಿದ್ದಾಳೆ. ನಂತ್ರ ಆಪರೇಷನ್ ಮಾಡುವ ಒಪ್ಪಿಗೆ ಪತ್ರಕ್ಕೆ ಸಹಿಯನ್ನು ನಿರಾಕರಿಸಿದ್ದಾಳೆ. ತನಗೆ ಪತಿ ಮೇಲೆ ಯಾವುದೇ ಪ್ರೀತಿಯಾಗ್ಲಿ, ಕರುಣೆಯಾಗ್ಲಿ ಉಳಿದಿಲ್ಲ ಎಂದ ಆಕೆ, ಸದ್ಯ ವ್ಯಕ್ತಿಗೆ ಹಾಕಿದ್ದ ಲೈಫ್ ಸಪೋರ್ಟ್ ತೆಗೆಯುವಂತೆ ಸೂಚನೆ ನೀಡಿದ್ದಾಳೆ. ಆತನ ಜೀವ ಉಳಿಸಲು ನಡೆಯುತ್ತಿರುವ ಎಲ್ಲ ಪ್ರಯತ್ನವನ್ನು ನಿಲ್ಲಿಸುವಂತೆ ಹೇಳಿದ್ದಾಳೆ. ವ್ಯಕ್ತಿ ಸಂಬಂಧಿಕರು ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಯಾವುದೇ ಶಸ್ತ್ರಚಿಕಿತ್ಸೆ ನಡೆಯುವ ವೇಳೆ ರಕ್ತ ಸಂಬಂಧಿಕರು ಅಥವಾ ಸಂಬಂಧಿಗಳ ಒಪ್ಪಿಗೆ ಅಗತ್ಯವಾಗುತ್ತದೆ. ಚೀನಾದಲ್ಲಿ ಕೆಲ ನಿರ್ಧಾರ ತೆಗೆದುಕೊಳ್ಳಲು ಸಂಗಾತಿಗೆ ಜವಾಬ್ದಾರಿ ನೀಡಲಾಗುತ್ತದೆ. ಒಂದ್ವೇಳೆ ಅವರು ಅದನ್ನು ನಿರಾಕರಿಸಿದ್ರೆ ಸಂಬಂಧಿಕರನ್ನು ಸಂಪರ್ಕಿಸಲಾಗುತ್ತದೆ. ಅಂತಿಮ ನಿರ್ಧಾರವನ್ನು ಆಸ್ಪತ್ರೆ ತೆಗೆದುಕೊಳ್ಳುತ್ತದೆ. 

ಸರಸ ಸಲ್ಲಾಪದಲ್ಲಿದ್ದಾಗಲೇ ಸಿಕ್ಕಿ ಬಿದ್ದ ಮಹಿಳೆ; ಮಕ್ಕಳ ಮುಂದೆ ಕಟ್ಟಿ ಹಾಕಿ ಥಳಿಸಿದ್ರು!

click me!