ಅದು ಮನಾಲಿ ಟ್ರಿಪ್. 20 ವರ್ಷದ ವಿದ್ಯಾರ್ಥಿ ಜೊತೆ 35 ವರ್ಷದ ಉಪನ್ಯಾಸಕಿಗೆ ಲವ್ವಿ ಡವ್ವಿ ಶುರುವಾಗಿದೆ. ಮನಾಲಿಯ ಚಳಿಯಲ್ಲೇ ಒಂದೆರಡು ಕಿಸ್ ಕೊಟ್ಟು ಅಲ್ಲೇ ಮದುವೆ ಕೂಡ ಆಗಿದ್ದಾರೆ. ಪ್ರವಾಸದ ಬೆನ್ನಲ್ಲೇ ಉಪನ್ಯಾಸಕಿ ಗರ್ಭಿಣಿ. ಇದೀಗ ವಿದ್ಯಾರ್ಥಿ ವಿರುದ್ಧ ರೇಸ್ ಕೇಸ್ ಹಾಕಿರುವ ಉಪನ್ಯಾಸಾಕಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ದೆಹಲಿ(ನ.06) ಕಾಲೇಜು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ. ಹೀಗೆ ಮನಾಲಿಗೆ ಪ್ರವಾಸ ಹೋದ ಉಪನ್ಯಾಸಕಿಗೆ ವಿದ್ಯಾರ್ಥಿ ಮೇಲೆ ಲವ್ ಶುರುವಾಗಿದೆ. ಇದು ಕೇವಲ ಅಟ್ರಾಕ್ಷನ್ ಆಗಿರಲಿಲ್ಲ. ಉಪನ್ಯಾಸಕಿ ಪ್ರೀತಿಯಲ್ಲಿ ಸಿಹಿ ಮುತ್ತುಗಳು ಹಂಚಿಕೆಯಾಗಿತ್ತು. ಅಪ್ಪುಯ ರೋಮ್ಯಾನ್ಸ್ ಇತರ ವಿದ್ಯಾರ್ಥಿಗಳನ್ನು ಮುಜುಗರಕ್ಕೀಡುಮಾಡಿತ್ತು. ಇದೇ ಪ್ರವಾಸ ಮುಗಿಯುವಷ್ಟರೊಳಗೆ 20 ವರ್ಷದ ವಿದ್ಯಾರ್ಥಿಯನ್ನು 35 ವರ್ಷದ ಉಪನ್ಯಾಸಕಿ ಮದುವೆಯಾಗಿದ್ದರು. ಮನಾಲಿಯ ಸಣ್ಣ ದೇವಸ್ಥಾನದಲ್ಲಿ ಮದುವೆ ಕೂಡ ನಡೆದಿತ್ತು. ಆದರೆ ವಿದ್ಯಾರ್ಥಿಗೆ ಮದುವೆಯ ವಯಸ್ಸು ಆಗಿರಲಿಲ್ಲ. ಹೀಗಾಗಿ ವರ್ಷದ ಬಳಿಕ ಅಧಿಕೃತ ಮದುವೆ ಮಾತುಕತೆಯೂ ನಡೆದಿತ್ತು. ಮನಾಲಿ ಪ್ರವಾಸದ ಬೆನ್ನಲ್ಲೇ ಉಪನ್ಯಾಸಕಿ ಗರ್ಭಿಣಿಯಾಗಿದ್ದಾಳೆ. ಇಲ್ಲೀವರೆಗೆ ಇವರ ಪ್ರೀತಿ ಸರಾಗವಾಗಿತ್ತು. ಆದರೆ ದಿಢೀರ್ ಯೂಟರ್ನ್ ಪಡೆದುಕೊಂಡಿತು. ಉಪನ್ಯಾಸಕಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿದ್ಯಾರ್ಥಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾರೆ.
ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ವಿದ್ಯಾರ್ಥಿಗೆ ಬಂಧನ ಭೀತಿ ಎದುರಾಗಿದೆ. ತಕ್ಷಣವೇ ನಿರೀಕ್ಷಣಾ ಜಾಮೀನಿಗಾಗಿ ವಿದ್ಯಾರ್ಥಿ ಮನವಿ ಮಾಡಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ವಿದ್ಯಾರ್ಥಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದೆಹಲಿ ಹೈಕೋರ್ಟ್ ಜಸ್ಚೀಸ್ ಸೌರಬ್ ಬ್ಯಾನರ್ಜಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
undefined
ಇಬ್ಬರು ಪತ್ನಿಯರು.. ಭರ್ಜರಿ ಕರ್ವಾ ಚೌತ್.. 3 ತಿಂಗಳ ಹಿಂದೆ ಎರಡನೇ ಮದುವೆ!
ಮನಾಲಿ ಟ್ರಿಪ್‌ನಲ್ಲಿ ಮದುವೆಯಾಗಿ ಮರಳಿದ ಗುರು ಶಿಷ್ಯರ ಜೋಡಿಗೆ ಕಾನೂನು ಮಾನ್ಯತೆ ಇರಲಿಲ್ಲ. ಇದು ಇವರಿಗೆ ಯಾವತ್ತೂ ಅಡ್ಡಿಯಾಗಲಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಮನಾಲಿ ಟ್ರಿಪ್ ಕೈಗೊಳ್ಳಲಾಗಿತ್ತು. ದೇವಸ್ಥಾನದಲ್ಲಿ ಮದುವೆಯಾಗುವ ವೇಳೆ ವಿದ್ಯಾರ್ಥಿಗೆ 20 ವರ್ಷ. ಹೀಗಾಗಿ ವಿದ್ಯಾರ್ಥಿ ಮುಂದಿನ ವರ್ಷ ಕಾನೂನು ಮಾನ್ಯತೆಯೊಂದಿಗೆ ಅದಿಕೃತ ಮದುವೆಯಾಗುವುದಾಗಿ ಉಪನ್ಯಾಸಕಿಗೆ ಹೇಳಿದ್ದ.
ಪ್ರೀತಿಯ ಅಮಲಿನಲ್ಲಿ ಉಪನ್ಯಾಸಕಿ ಒಕೆ ಅಂದಿದ್ದಾಳೆ, ಇತ್ತ ರೋಮ್ಯಾನ್ಸ್ ಮೂಡಿನಲ್ಲಿ ವಿದ್ಯಾರ್ಥಿ ಕೂಡ ಏನೆಲ್ಲಾ ಭರವಸೆ ನೀಡಿದ್ದಾನೆ. ಟ್ರಿಪ್ ಮುಗಿಸಿ ಮರಳಿದ ಈ ಜೋಡಿಗೆ ಅಸಲಿ ಸಮಸ್ಯೆ ಶುರುವಾಗಿದೆ. ಯಾವಾಗ ಉಪನ್ಯಾಸಕಿ ಗರ್ಭಿಣಿ ಅನ್ನೋದು ಗೊತ್ತಾಯ್ತೋ ತಾನು ಮದುವೆಯಾಗಲ್ಲ ಎಂದುಬಿಟ್ಟ. ಇದು ಉಪನ್ಯಾಸಕಿ ಪಿತ್ತ ನೆತ್ತಿಗೇರಿಸಿದೆ. ನೇರವಾಗಿ ವಿದ್ಯಾರ್ಥಿಯ ಮನೆಗೆ ತೆರಳಿ ವಿಷಯ ಮುಟ್ಟಿಸಿದ್ದಾಳೆ. ಈ ವೇಳೆ ವಿದ್ಯಾರ್ಥಿಯ ಪೋಷಕರು ಅಬಾರ್ಶನ್‌ಗೆ ಸಲಹೆ ನೀಡಿದ್ದಾರೆ.
ಆದರೆ ಉಪನ್ಯಾಸಕಿ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಈ ಕುರಿತು ಮಹತ್ವದ ವಿಚಾರನ ಪ್ರಸ್ತಾಪಿಸಿದೆ. ಗುರು ಶಿಷ್ಯರ ಸಂಬಂಧಕ್ಕೆ ಭಾರತದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಇಲ್ಲಿ ಉಪನ್ಯಾಸಕಿ ಪಿಹೆಚ್‌ಡಿ ಮಾಡಿದ್ದಾರೆ. ಉತ್ತಮ ಶಿಕ್ಷಣವನ್ನೇ ಪಡೆದಿದ್ದಾರೆ. ಜೊತೆಗೆ ಎಲ್ಲವನ್ನು ನಿರ್ಧರಿಸುವ, ಆಲೋಚಿಸುವ, ಸರಿ ತಪ್ಪನ್ನು ಅರ್ಥಮಾಡಿಕೊಳ್ಳುವ ವಯಸ್ಸು. ಇತ್ತ ವಿದ್ಯಾರ್ಥಿಗೆ ಕೇವಲ 20 ವರ್ಷ. ವಿದ್ಯಾರ್ಥಿಯೊಂದಿಗೆ ಸಂಬಂಧ ಬೆಳೆಸುವಾಗ ಆತನ ವಯಸ್ಸಿನ ಕುರಿತು ಸಣ್ಣ ಪರಿಕಲ್ಪನೆ ಉಪನ್ಯಾಸಕಿಗೆ ಇದ್ದೇ ಇರುತ್ತದೆ.
ಐಬ್ರೋ ಮಾಡಿಸಿಕೊಂಡ ಪತ್ನಿಗೆ ವಿಡಿಯೋ ಕಾಲ್‌ನಲ್ಲೇ ತಲಾಖ್ ನೀಡಿದ ಪತಿ!
ಇಲ್ಲಿ ಉಪನ್ಯಾಸಕಿ ವಿದ್ಯಾರ್ಥಿಯ ವಯಸ್ಸು, ಆತನ ಇತರ ಯಾವುದೇ ಸ್ಥಾನಮಾನ ಗಣನೆಗೆ ತೆಗೆದುಕೊಳ್ಳದೆ, ಆತನ ಜೊತೆ ಸಂಬಂಧ ಬೆಳೆಸಿದ್ದಾರೆ. ಒಂದು ವರ್ಷದಿಂದ ಸಂಬಂಧಲ್ಲಿದ್ದರು. ಆದರೆ ದೂರು ದಾಖಲಾಗಿರುವುದು ಜುಲೈ 19 ರಂದು. ಈ ವಿಳಂಬ ಯಾಕೆ? ಎಂದು ಕೋರ್ಟ್ ಪ್ರಶ್ನಿಸಿದೆ. ಇದೀಗ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.