ದುಷ್ಟ ಗಂಡನಿಂದ ಬೇರ್ಪಟ್ಟ ಮಗಳಿಗೆ ಸಿಕ್ಕಿತ್ತು ಭರ್ಜರಿ ವೆಲ್ಕಮ್, ಇದೀಗ ಫ್ರೆಂಡ್‌ಗೂ ದೊಡ್ಡ ಪಾರ್ಟಿ!

By Suvarna News  |  First Published Nov 6, 2023, 2:41 PM IST

ಕಷ್ಟ – ಸುಖ ಎರಡರಲ್ಲೂ ಇರೋರು ಫ್ರೆಂಡ್ಸ್. ಸ್ನೇಹಿತರ ದುಃಖವನ್ನು ಮಾತಿನ ಮೂಲಕವೇ ಹೇಳ್ಬೇಕಾಗಿಲ್ಲ. ಅವರಿಗಿಷ್ಟವಾಗುವ ರೀತಿಯಲ್ಲಿ ತಿಳಿಸ್ಬೇಹುದು. ಇದಕ್ಕೆ ಈ ಪ್ರೆಂಡ್ಸ್ ಉತ್ತಮ ನಿದರ್ಶನ. ಸ್ನೇಹಿತೆ ಖುಷಿಪಡಿಸಲು ಇವರು ಮಾಡಿದ್ದೇನು ಗೊತ್ತಾ? 
 


ವಿಚ್ಛೇದನವನ್ನು ಅಪರಾಧದಂತೆ ನೋಡುವ ಕಾಲ ಈಗಿಲ್ಲ. ವಿಚ್ಛೇದಿತರನ್ನು ಜನರು ನೋಡುವ ದೃಷ್ಟಿ ಬದಲಾಗಿದೆ. ಡೈವೋರ್ಸ್ ನಂತ್ರ ಮನೆ ಮೂಲೆಯಲ್ಲಿ ಕುಳಿತು ಅಳುವ ಜನರಿಗಿಂತ ಸಿಕ್ಕ ಹೊಸ ಜೀವನ ಅಥವಾ ಸ್ವಾತಂತ್ರ್ಯವನ್ನು ಎಂಜಾಯ್ ಮಾಡುವವರ ಸಂಖ್ಯೆ ಹೆಚ್ಚಿದೆ. ಕೆಲವೊಂದು ಸಂಬಂಧಗಳು ಉಸಿರುಗಟ್ಟಿಸುವಂತಿರುತ್ತವೆ. ಅದ್ರಿಂದ ಹೊರಗೆ ಬಂದ್ರೆ ಸಾಕು ಎನ್ನುವ ಸ್ಥಿತಿಯಲ್ಲಿ ಜನರಿರ್ತಾರೆ. ಕೊನೆಗೂ ಹೊರಗೆ ಬರುವ ನಿರ್ಧಾರ ಮಾಡಿ, ಕಾನೂನು ಹೋರಾಟ ನಡೆಸಿ, ಡೈವೋರ್ಸ್ ಸಿಕ್ಕಿದಾಗ ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ. 

ಪ್ರೀತಿ (Love)  ಸಿಕ್ಕಾಗ, ಮದುವೆ ಫಿಕ್ಸ್ ಆದಾಗ, ಹುಟ್ಟುಹಬ್ಬದಲ್ಲಿ, ಜಾಬ್ ಸಿಕ್ಕಾಗ ಸ್ನೇಹಿತರ ಜೊತೆ ಸೇರಿ ಪಾರ್ಟಿ (Party) ಮಾಡೋದು ಕಾಮನ್. ಈಗಿನ ದಿನಗಳಲ್ಲಿ ಎಲ್ಲದಕ್ಕೂ ಜನರು ಪಾರ್ಟಿ ಮಾಡ್ತಾರೆ. ಬ್ರೇಕ್ ಅಪ್ ಆದಾಗ್ಲೂ ಪಾರ್ಟಿ ಮಾಡುವ ಜನರು ಸಾಕಷ್ಟಿದ್ದಾರೆ. ಇಲ್ಲಿ ಮಹಿಳೆಗೆ ಡೈವೋರ್ಸ್ (Divorce) ಸಿಕ್ಕಿದೆ ಅಂತಾ ಭರ್ಜರಿ ಪಾರ್ಟಿ ಮಾಡಲಾಗಿದೆ. ವಿಚ್ಛೇದನ ಸಿಕ್ಕಿದ್ದು ಮಹಿಳೆಗಾದ್ರೂ ಆಕೆಗಿಂತ ಆಕೆ ಸ್ನೇಹಿತರು ಈ ಕ್ಷಣವನ್ನು ಹೆಚ್ಚು ಎಂಜಾಯ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ಸ್ ಈ ಪಾರ್ಟಿ ಫೋಟೋ ವೈರಲ್ ಆಗಿದೆ.

Tap to resize

Latest Videos

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!

ವಿಚ್ಛೇದನ ಪಡೆದ ಮಹಿಳೆ ಹೆಸರು ಆಲಿಸನ್ ರಾಡ್ಫೋರ್ಡ್. ಕಳೆದ 6 ವರ್ಷಗಳಿಂದ  ಆಲಿಸನ್ ರಾಡ್ಫೋರ್ಡ್ ಸಂಬಂಧದಲ್ಲಿದ್ದಳು. ಆದ್ರೀಗ ಆಕೆ ಮದುವೆ ಮುರಿದು ಬಿದ್ದಿದೆ. ಆಲಿಸನ್ ರಾಡ್ಫೋರ್ಡ್  ಗೆ ವಿಚ್ಛೇದನ ಸಿಕ್ಕಾಗ ಆಕೆಗೆ ಒಂದೆರಡು ನೆಮ್ಮದಿ ಮಾತುಗಳನ್ನು ಹೇಳಿ ಧೈರ್ಯ ತುಂಬುವ ಬದಲು ಫ್ರೆಂಡ್ಸ್ ಎಲ್ಲ ಸೇರಿ ಪಾರ್ಟಿ ಮಾಡಿದ್ದಾರೆ.  ವಿಷ್ಯ ಗೊತ್ತಿಲ್ಲದೆ ಸ್ನೇಹಿತೆ ಪಾರ್ಟಿಗೆ ಬಂದ ಆಲಿಸನ್ ರಾಡ್ಫೋರ್ಡ್ : ವಾಸ್ತವವಾಗಿ ಆಲಿಸನ್ ರಾಡ್ಫೋರ್ಡ್ ಪಾರ್ಟಿ ಬಗ್ಗೆ ಗೊತ್ತಿರಲಿಲ್ಲ. ಆಕೆ ತನ್ನ 30 ವರ್ಷದ  ಸ್ಟೆಫ್ ಮರ್ಫಿ ಏರ್ಪಡಿಸಿದ್ದ ಪಾರ್ಟಿಗೆ ಬಂದಿದ್ದಾಳೆ. ಸ್ಟೆಫ್ ಮರ್ಫಿ, ಕೇಕ್, ಶಾಂಪೇನ್ ಮತ್ತು ಬಲೂನ್ ಅಲಂಕಾರಗಳೊಂದಿಗೆ ಅದ್ದೂರಿ ಪಾರ್ಟಿಯನ್ನು ಏರ್ಪಡಿಸಿದ್ದಳು. ಆಲಿಸನ್ ರಾಡ್ಫೋರ್ಡ್ ಗೆ ಆಹ್ವಾನ ನೀಡಿದ್ದಳು. 

ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಬೀಚ್‌ ಪ್ರಪೋಸಲ್‌ ಕ್ಷಣ, ಮರು ಸೃಷ್ಟಿಸಿದ ಮುದ್ದಾದ ಜೋಡಿ

ಪಾರ್ಟಿಯಲ್ಲಿ ಕೇಕ್ ಹಾಗೂ ಕುಕ್ಕಿ ಮೇಲೆ ಬರೆದಿದ್ದ ಬರವಣಿಗೆ ಗಮನ ಸೆಳೆದಿದೆ. ಈ ಪಾರ್ಟಿಗಾಗಿಯೇ ಕಪ್ಪು ಕೇಕ್ ಮಾಡಿಸಲಾಗಿದೆ. ಕಸ್ಟಮೈಸ್ ಕುಕ್ಕಿಯನ್ನು ನೀವು ನೋಡ್ಬಹುದು. ಈ ಕುಕ್ಕಿ ಮೇಲೆ ಕೆಲ ನುಡಿಗಟ್ಟುಗಳಿವೆ. ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಅವುಗಳಲ್ಲಿ ಒಂದಲ್ಲ  ಎಂದು ಒಂದು ಕುಕ್ಕಿ ಮೇಲೆ ಬರೆಯಲಾಗಿದೆ. ಇನ್ನೊಂದರಲ್ಲಿ ತಿನ್ನಿ – ಕುಡಿರಿ ಆದ್ರೆ ಮದುವೆ ಆಗ್ಬೇಡಿ ಎಂದು ಬರೆಯಲಾಗಿದೆ.  ಆಲಿಸನ್ ರಾಡ್ಫೋರ್ಡ್ ತನ್ನ ಸ್ನೇಹಿತೆ ಮೇಗನ್ ಮನೆಗೆ ಬಂದಳು. ಆಲಿಸನ್ ರಾಡ್ಫೋರ್ಡ್ ಗೆ ಬಿಳಿ ಬಣ್ಣದ ಡ್ರೆಸ್ ಧರಿಸಿ ಬರುವಂತೆ ಹೇಳಲಾಗಿತ್ತು. ಉಳಿದವರೆಲ್ಲ ಕಪ್ಪು ಬಣ್ಣದ ಬಟ್ಟೆಯಲ್ಲಿ ಬಂದಿದ್ದರು. ಆಲಿಸನ್ ರಾಡ್ಫೋರ್ಡ್ ಮನೆಗೆ ಬರ್ತಿದ್ದಂತೆ ಆಕೆ ಕಣ್ಣಿಗೆ ಬಟ್ಟೆ ಕಟ್ಟಲಾಯ್ತು. ಕಣ್ಣು ಬಿಡ್ತಿದ್ದಂತೆ ಆಲಿಸನ್ ರಾಡ್ಫೋರ್ಡ್ ಅಚ್ಚರಿಗೊಂಡಿದ್ದಾಳೆ. ಆದ್ರೆ ಇದೊಂದು ರೀತಿ ನೆಮ್ಮದಿ ನೀಡಿದೆ ಎಂದು ಆಲಿಸನ್ ರಾಡ್ಫೋರ್ಡ್ ಹೇಳಿದ್ದಾಳೆ. 

2021 ರಲ್ಲಿ ಆಲಿಸನ್ ರಾಡ್ಫೋರ್ಡ್ ತನ್ನ ಪತಿಗೆ ವಿಚ್ಛೇದನ ಪಡೆಯಬೇಕಿತ್ತು. ಕೋರ್ಟ್ ಪ್ರಕ್ರಿಯೆಗೆ ಎರಡು ವರ್ಷ ಹಿಡಿತು. ಟಿಕ್ ಟಾಕ್ ನಲ್ಲಿ ಪಾರ್ಟಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಆಲಿಸನ್ ರಾಡ್ಫೋರ್ಡ್ ವಿಡಿಯೋಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಹೆಚ್ಚು ಬಂದಿದೆ. ಒಳ್ಳೆ ಸ್ನೇಹಿತರಿದ್ದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಅನೇಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. 
 

click me!