ಪರಸ್ಪರ ಅರ್ಥ ಮಾಡಿಕೊಂಡು ಜೀವನವಿಡೀ ಒಟ್ಟಿಗೆ ಬಾಳಬೇಕೆಂದುಕೊಂಡಿರುವ ಸಂಗಾತಿಗಳು ಕೆಲಕಾಲದಲ್ಲಿ ಪರಸ್ಪರ ಮಾನಸಿಕವಾಗಿ ದೂರವಾಗಿಬಿಡುತ್ತಾರೆ. ಏನನ್ನೂ ಹೇಳಿಕೊಳ್ಳಲಾಗದ ಖಾಲಿತನ ಕಾಡಿ, ದೊಡ್ಡದೊಂದು ಗೋಡೆ ನಿರ್ಮಾಣವಾಗಿಬಹುದು.
ಅದೆಷ್ಟೋ ಬಾರಿ, ಹೇಳಬೇಕು ಎಂದುಕೊಂಡ ಭಾವನೆಗಳು ಮಾತುಗಳಾಗಿ ಹೊರ ಬರುವುದೇ ಇಲ್ಲ. ಮನಸ್ಸಿನಲ್ಲಿರುವುದನ್ನೆಲ್ಲ ಹೇಳಿಕೊಳ್ಳಬೇಕು, “ಇಲ್ಲಿ ಏನೇನೋ ನೋವಿದೆ, ಕಷ್ಟಗಳಿವೆ, ಹಿಂಜರಿಕೆ, ಭಯಗಳಿವೆ, ಅವೆಲ್ಲವನ್ನೂ ತೆರೆದಿಡಬೇಕುʼ ಎಂದುಕೊಂಡರೂ ಸಾಧ್ಯವಾಗುವುದಿಲ್ಲ. ಹೀಗೆ ಭಾವನೆಗಳನ್ನು ಹೇಳಿಕೊಳ್ಳಲಾಗದೆ ಒದ್ದಾಡುವುದು ಮತ್ಯಾರದ್ದೋ ಜತೆಗಲ್ಲ, ನಮ್ಮದೇ ಪತಿ-ಪತ್ನಿ, ಗೆಳೆಯ-ಗೆಳತಿಯೊಂದಿಗೆ. ಭಾವನೆಗಳನ್ನು ಹೇಳಿಕೊಳ್ಳಲಾಗದ ಇಂಥ ಸ್ಥಿತಿ ನಿರ್ಮಾಣವಾಗಿದ್ದು ಹೇಗೆಯೇ ಆಗಿದ್ದರೂ ಸಂಬಂಧದ ಆರೋಗ್ಯಕ್ಕೆ ಅದು ಒಳ್ಳೆಯದಲ್ಲ. ಭಾವನೆಗಳನ್ನು ಹೇಳಿಕೊಳ್ಳದೇ ಇದ್ದಾಗ ಸಂಬಂಧಗಳು ಜಾಳುಜಾಳೆನಿಸುತ್ತವೆ. ಇದರಿಂದ ಏನು ಪ್ರಯೋಜನ ಎನಿಸಲು ಶುರುವಾಗುತ್ತದೆ. ಕೋಪ, ನೋವು, ಬೇಸರ, ಖುಷಿ, ಪ್ರೀತಿ ಯಾವುದೇ ಭಾವನೆಗಳನ್ನು ಹಂಚಿಕೊಳ್ಳುತ್ತ ಸಂಬಂಧ ದೃಢವಾಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳುತ್ತಲೇ ಸಂಗಾತಿಗಳು ಪರಸ್ಪರ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಕೆಲವೊಮ್ಮೆ ಇಂಥ ಸಾಂಗತ್ಯ ಸಾಧ್ಯವಾಗುವುದಿಲ್ಲ. ಆಗ ಸಂಬಂಧಗಳು ಭಾವನಾತ್ಮಕವಾಗಿ ಸುರಕ್ಷಿತವಾಗಿರುವುದಿಲ್ಲ. ಸಂಬಂಧಗಳು ಭಾವನಾತ್ಮಕವಾಗಿ ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯ. ನೆಮ್ಮದಿಯ, ಸಕಾರಾತ್ಮಕ ಪ್ರಗತಿಯ ಬದುಕಿಗೆ ಇದು ಅತ್ಯಗತ್ಯ. ನಿಮ್ಮ ಸಂಬಂಧ ಭಾವನಾತ್ಮಕವಾಗಿ ಸುರಕ್ಷಿತವಾಗಿದೆಯೇ ಇಲ್ಲವೇ ಅನ್ನೋದನ್ನು ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು.
• ಸೆನ್ಸಿಟಿವ್ (Sensitive) ಆಗಿದ್ದೀರಾ?
ನಿಮ್ಮ ಸಂಗಾತಿ (Partner), ಪತಿ (Husband) ಅಥವಾ ಪತ್ನಿ (Wife) ಯಾರಾದರೂ ನಿಮ್ಮ ಬಳಿ ಯಾವುದೇ ವಿಚಾರದ ಬಗ್ಗೆ ಮುಜುಗರ, ಹಿಂಜರಿಕೆ ಇಲ್ಲದೇ ಶೇರ್ (Share) ಮಾಡಿಕೊಳ್ಳುತ್ತಾರಾ? ನೀವು ಅಷ್ಟರ ಮಟ್ಟಿಗೆ ಸೂಕ್ಷ್ಮರಾಗಿ ವರ್ತಿಸುತ್ತೀರಾ ಇಲ್ಲವಾ? ನೀವು ಹೇಗೆ ವರ್ತಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಂಬಂಧ (Relation) ಭಾವನಾತ್ಮಕವಾಗಿ ಸುರಕ್ಷಿತವಾಗಿದೆಯಾ ಇಲ್ಲವಾ ಎಂದು ಹೇಳಬಹುದು. ಯಾವುದೇ ವಿಷಯವನ್ನು ಹಂಚಿಕೊಳ್ಳುವಲ್ಲಿ ಪರಸ್ಪರ ಸೇಫ್ (Safe) ಭಾವನೆ ಇಬ್ಬರಲ್ಲೂ ಇರುವುದು ಅಗತ್ಯ. ಒಂದೊಮ್ಮೆ ನೀವು ಭಾವನಾತ್ಮಕವಾಗಿ ಸೂಕ್ಷ್ಮವಾಗಿ ವರ್ತನೆ ಮಾಡುವುದಿಲ್ಲ ಎಂದಾದರೆ ನಿಮ್ಮ ಸಂಗಾತಿ ನಿಮಗೆ ಇಷ್ಟವಾಗದ ವಿಚಾರಗಳನ್ನು ನಿಮ್ಮಿಂದ ಮುಚ್ಚಿಡಲು ಆರಂಭಿಸುತ್ತಾರೆ.
ನೀವು ಏನೇ ಮಾಡಿದ್ರೂ ಇಂಥ ಮಹಿಳೆಯರನ್ನು ಸಂತೋಷಪಡಿಸಲು ಸಾಧ್ಯವೇ ಇಲ್ಲ!
• ಭಾವನೆಗಳನ್ನು (Feelings) ವ್ಯಕ್ತಪಡಿಸುವುದು
ಭಾವನೆಗಳನ್ನು ತೋರ್ಪಡಿಸಿಕೊಳ್ಳುವುದು ಹಲವರಿಗೆ ಕಷ್ಟವಾಗಬಹುದು. ಆದರೆ, ಮುಚ್ಚಿಡುವುದು ಅಷ್ಟೇ ಅಪಾಯಕಾರಿ. ನೀವು ಭಾವನೆಗಳನ್ನು ಹೇಳಿಕೊಂಡರೆ ಮಾತ್ರ ಸಂಗಾತಿಗೂ ನೀವೇನೆಂದು ತಿಳಿಯುತ್ತದೆ. ಇಲ್ಲವಾದರೆ ಇಲ್ಲ. ಮೌನವಾಗಿದ್ದರೂ ಅರ್ಥವಾಗುತ್ತದೆ ಎಂದು ಭಾವಿಸಬೇಡಿ.
• ಅಂತರವೂ (Space) ಅಗತ್ಯ
ಸಂಬಂಧದಲ್ಲಿ ಅಂತರವಿರುವುದು ಸಹ ಅಷ್ಟೇ ಅಗತ್ಯ. ನಿಮ್ಮ ಪತಿಯಾಗಲೀ, ಪತ್ನಿಯಾಗಲೀ ನಿಮ್ಮ ಮೊಬೈಲ್ ಚೆಕ್ ಮಾಡುವ ಅಭ್ಯಾಸ ಹೊಂದಿದ್ದಾರೆ ಎಂದಿಟ್ಟುಕೊಳ್ಳಿ. ಅದು ನಿಮಗೆ ಕಿರಿಕಿರಿ (Irritate) ಉಂಟುಮಾಡುವ ವಿಚಾರವೇ ಆಗಿರುತ್ತದೆಯಲ್ಲವೇ? ಈ ಕೋಪ ಅಥವಾ ಕಿರಿಕಿರಿಯನ್ನು ಅವರಿಗೆ ಮನದಟ್ಟು ಮಾಡಿಸುವುದು ಉತ್ತಮ. ಏಕೆಂದರೆ, ನೀವು ಅದರ ಬಗ್ಗೆ ಹೇಳಿಲ್ಲ ಎಂದಾದರೆ, ಆ ಕಿರಿಕಿರಿ ಮುಂದುವರಿಯುತ್ತದೆ ಹಾಗೂ ಇನ್ನೆಲ್ಲೋ ಪರಿಣಾಮ ಬೀರುತ್ತದೆ. ಸಂಬಂಧದಲ್ಲಿ ಗುಟ್ಟು ಇರಬೇಕಿಲ್ಲ, ಆದರೆ, ಅಂತರ ಬೇಕು.
ನಿಶ್ಚಿತಾರ್ಥ - ಮದುವೆ ಮಧ್ಯೆ ಈ ತಪ್ಪು ಮಾಡಿದ್ರೆ ಸಂಬಂಧ ಹಾಳಾಗುತ್ತೆ!
• ಭರವಸೆ (Hope) ಇರಲಿ
ಸಂಬಂಧದಲ್ಲಿ ಸ್ಥಿರತೆ (Stability) ಇರುವುದು ಅತ್ಯಂತ ಅಗತ್ಯ. ಸಂಗಾತಿಗಳು ಬದ್ಧತೆ, ಸ್ಥಿರತೆ ಹೊಂದಿದ್ದರೆ ಪರಸ್ಪರ ನಂಬಿಕೆ, ಭರವಸೆ ಹೆಚ್ಚುತ್ತದೆ. ಸಂಬಂಧ ಸ್ಥಿರವಾಗಿರದಿದ್ದಾಗ ಭರವಸೆ ಮೂಡುವುದಿಲ್ಲ. ಆಗ ಭಾವನಾತ್ಮಕವಾಗಿ ಸುರಕ್ಷಿತ ಸಾಂಗತ್ಯ ಸಾಧ್ಯವಾಗುವುದಿಲ್ಲ. ಹಣಕಾಸು ವಿಚಾರಕ್ಕೆ ಸಂಬಂಧಿಸಿ ಪತಿ ಏನೇ ಮಾಡಿದರೂ ತನ್ನ ಅಭಿಪ್ರಾಯ ಕೇಳಿ ಅಥವಾ ತನಗೊಂದು ಮಾತು ಹೇಳಿ ಮಾಡುತ್ತಾನೆ ಎನ್ನುವ ನಂಬಿಕೆ ಪತ್ನಿಯಲ್ಲಿ ಇರಬೇಕು ಎಂದಾದರೆ ಪತಿ ಹಾಗೆಯೇ ವರ್ತಿಸಬೇಕು. ಪತ್ನಿಯೂ ಅಷ್ಟೆ, ಏನಾದರೂ ವಿಚಾರ ಹೇಳಿದಾಗ ಅದರ ಬಗ್ಗೆ ಇಲ್ಲಸಲ್ಲದ್ದನ್ನು ಕಲ್ಪನೆ ಮಾಡಿಕೊಳ್ಳುವುದಿಲ್ಲ ಎನ್ನುವ ನಂಬಿಕೆ ಪತಿಯಲ್ಲಿ ಮೂಡಬೇಕು ಎಂದಾದರೆ ಪತ್ನಿ ಹಾಗೆಯೇ ಇರಬೇಕಾಗುತ್ತದೆ.