ಪ್ರೀತಿಸಿದ ಪ್ರತಿಯೊಂದು ವಸ್ತುವೂ ನನ್ನದು ಎಂಬ ಭಾವನೆಯಲ್ಲಿ ನಾವಿರ್ತೇವೆ. ಹಾಗಾಗಿಯೇ ಪ್ರೀತಿಸಿದ ಜೀವಕ್ಕೆ ಜೀವ ಕೊಡಲು ಸಿದ್ಧರಾಗ್ತೇವೆ. ಕೆಲವೊಮ್ಮೆ ಮಹಿಳೆಯರ ಅತೀಯಾದ ಪ್ರೀತಿ ಅವರ ಅಸ್ತಿತ್ವವನ್ನೇ ಕಸಿದುಕೊಳ್ಳುತ್ತದೆ.
ಪ್ರೀತಿ (Love)ಯ ಹುಟ್ಟಿಗೆ ದಿನಾಂಕ ಗೊತ್ತಿರುವುದಿಲ್ಲ. ಎಲ್ಲಿ,ಯಾವಾಗ,ಯಾರಿಗೆ ಪ್ರೀತಿಯಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಪ್ರೀತಿ ಒಂದು ಮಧುರ ಸಂಬಂಧ. ಪ್ರೀತಿಯಲ್ಲಿ ಬಿದ್ದವರು ಆಕಾಶದಲ್ಲಿ ತೇಲುತ್ತಾರೆ ಎನ್ನಲಾಗುತ್ತೆ. ಅದು ಏನೇ ಇರಲಿ,ಪ್ರೀತಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಪ್ರೀತಿಸುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಪರಸ್ಪರ ಗೌರವ,ಜವಾಬ್ದಾರಿ ಹಂಚಿಕೆಯಾದಾಗ ಮಾತ್ರ ಪ್ರೀತಿ ಬಹುದಿನ ಬದುಕಬಲ್ಲದು. ಪ್ರೀತಿಯಲ್ಲಿ ರಾಜಿ ಇರಲೇಬೇಕು. ಆದ್ರೆ ಅದಕ್ಕೊಂದು ಮಿತಿಯಿದೆ ಎಂಬುದು ನೆನಪಿರಲಿ. ಅದೆಷ್ಟೋ ಬಾರಿ ಮಹಿಳೆಯರು ಅತಿ ಹೆಚ್ಚು ಬಾರಿ ರಾಜಿ ಮಾಡಿಕೊಳ್ತಾರೆ.ಅವರ ಸಂಗಾತಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡುವುದಿಲ್ಲ. ಆಗ ಹೊಂದಾಣಿಕೆ(Adjustment)ಯೇ ಮಹಿಳೆಗೆ ಜೀವನವಾಗುತ್ತದೆ. ಆರಂಭದಲ್ಲಿ ರಾಜಿ,ಹೋಂದಾಣಿಕೆ ಖುಷಿ (Enjoy )ನೀಡಬಹುದು. ಭವಿಷ್ಯದಲ್ಲಿ ಇದು ಸಮಸ್ಯೆಯನ್ನೊಡ್ಡುತ್ತದೆ.
ಮಹಿಳೆಯಾದವಳು ಹೊಂದಾಣಿಕೆ ಮತ್ತು ರಾಜಿ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಯಶಸ್ವಿ (Successful) ಸಂಬಂಧದ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರೀತಿಯಲ್ಲಿ ಬಿದ್ದ ಮಹಿಳೆ ಮಾಡುವ ತಪ್ಪುಗಳು :
ಪ್ರೀತಿಗಾಗಿ ಬದಲಾವಣೆ : ಪ್ರೀತಿಯಲ್ಲಿ ಬಿದ್ದ ಮೇಲೆ ಸ್ವಭಾವ ಬದಲಾಗಬೇಕೆಂದೇನಿಲ್ಲ. ಅನೇಕ ಮಹಿಳೆಯರು ಸಂಗಾತಿ ಹೇಳಿದಂತೆ ಕೇಳಲು ಶುರು ಮಾಡ್ತಾರೆ. ಆತನಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಣೆ ಮಾಡಿರುತ್ತಾರೆ. ತನ್ನೆಲ್ಲ ಸ್ವಭಾವ ಬದಲಿಸಿಕೊಂಡು ಆತನಿಗೆ ಇಷ್ಟವಾಗುವಂತೆ ಇರಲು ಪ್ರಯತ್ನಿಸುತ್ತಾರೆ. ಹುಟ್ಟು ಗುಣವನ್ನು ಬಿಡುವುದು ಕಷ್ಟ. ಹಾಗೆ ಸಂಗಾತಿ ಬದಲಾಗ್ತಾಳೆ ಎಂಬುದು ಗೊತ್ತಾದ್ರೆ ಪುರುಷ ಸಂಗಾತಿ (Partner) ನಿರೀಕ್ಷೆಗಳು ಹೆಚ್ಚುತ್ತಾ ಹೋಗುತ್ತವೆ. ಪ್ರತಿ ಬಾರಿ ಬದಲಾವಣೆ ಬಯಸಲು ಆತ ಶುರು ಮಾಡಬಹುದು.
undefined
ತಲೆಯಾಡಿಸುವ ಬುದ್ಧಿ : ಸಂಬಂಧದಲ್ಲಿ ಇಬ್ಬರಿಗೂ ಸ್ವಂತ ಇಚ್ಛೆಯ ಪ್ರಕಾರ ವರ್ತಿಸುವ ಸ್ವಾತಂತ್ರ್ಯ(Freedom)ವಿರಬೇಕು. ಕೆಲವು ವಿಷಯಗಳಲ್ಲಿ ಇಬ್ಬರೂ ಪರಸ್ಪರ ಚರ್ಚಿಸಿ (Discuss) ಮುಂದೆ ಹೆಜ್ಜೆಯಿಡಬೇಕಾಗುತ್ತದೆ. ಪ್ರತಿ ಕೆಲಸಕ್ಕೂ ಸಂಗಾತಿ ಒಪ್ಪಿಗೆಬೇಕೆಂದರೆ ಅದು ಕಷ್ಟವಾಗುತ್ತದೆ. ಮುಂದೆ ಈ ಸಂಬಂಧ ನಿಮ್ಮನ್ನು ಉಸಿರುಗಟ್ಟಿಸಬಹುದು. ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೆ ನೀವು ಸಂಗಾತಿಯ ಪ್ರತಿ ಮಾತಿಗೆ ತಲೆಯಾಡಿಸಲು ಶುರು ಮಾಡಿರುತ್ತೀರಿ. ಅವರ ಹೌದಿಗೆ ನೀವು ಹೌದು ಸೇರಿಸುತ್ತೀರಿ. ಇದು ನಿಮ್ಮ ಮೌಲ್ಯ,ವ್ಯಕ್ತಿತ್ವವನ್ನು ಮೂಲೆಗುಂಪು ಮಾಡುತ್ತದೆ.
ಈ ರಾಶಿಯವರು ಒಳ್ಳೆ ಸಂಗಾತಿಗಳಾಗುತ್ತಾರೆ
ವೃತ್ತಿ (Career )ಯಲ್ಲಿ ರಾಜಿ : ಮಹಿಳೆಯರು ಆಗಾಗ್ಗೆ ತಮ್ಮ ಸಂಗಾತಿಯ ಕೆಲಸಕ್ಕಾಗಿ ತಮ್ಮ ಕೆಲಸ (Work)ದ ವೇಳಾಪಟ್ಟಿ (Schedule) ಯನ್ನು ಬದಲಿಸುತ್ತಾರೆ. ಆದ್ರೆ ಪುರುಷ ಸಂಗಾತಿ ಎಂದೂ ಹೀಗೆ ಮಾಡಿರುವುದಿಲ್ಲ. ಪದೇ ಪದೇ ನಿಮ್ಮ ವೈಯಕ್ತಿಕ ಜೀವನಕ್ಕಾಗಿ ನೀವು ವೃತ್ತಿ ಜೀವನದಲ್ಲಿ ರಾಜಿ ಮಾಡಿಕೊಳ್ತಾ ಹೋದ್ರೆ ನಿಮಗೆ ತೊಂದರೆಯಾಗಬಹುದು. ನಿಯಮಿತ ಕೆಲಸವಿಲ್ಲ ಎಂಬ ಕಾರಣಕ್ಕೆ ನೀವು ಕೆಲಸ ಕಳೆದುಕೊಳ್ಳಬಹುದು. ಆರ್ಥಿಕ ಸದೃಡತೆ ಮಹಿಳೆಯರಿಗೆ ಅಗತ್ಯ. ಕೆಲಸವಿಲ್ಲದ ಸಮಯದಲ್ಲಿ ಸಂಗಾತಿ ನಿಮ್ಮಿಂದ ದೂರವಾದ್ರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇಬ್ಬರ ಮಧ್ಯೆ ಹೊಂದಾಣಿಕೆಯಿರಲಿ. ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬೇರೆ ಬೇರೆಯಾಗಿ ನೋಡುವುದು ಒಳ್ಳೆಯದು.
ಪ್ರೀತಿಯಲ್ಲಿ ಮೆಚ್ಚುಗೆ ಮಾತೇಕೆ? : ನೋಟ,ಮೈಮಾಟ ನೋಡಿ ಹುಟ್ಟಿದ ಪ್ರೀತಿ ಶಾಶ್ವತವಲ್ಲ. ಪ್ರೀತಿಸುವ ವ್ಯಕ್ತಿ ನಿಮ್ಮ ನ್ಯೂನ್ಯತೆಯನ್ನೂ ಪ್ರೀತಿಸಬೇಕಾಗುತ್ತದೆ. ಪ್ರೀತಿ ಪಾತ್ರರ ಮೆಚ್ಚುಗೆ ಗಳಿಸಲು ನಿಮ್ಮ ನೋಟದಲ್ಲಿ,ಬಟ್ಟೆಯಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲ. ಅನೇಕ ಮಹಿಳೆಯರು ಸಂಗಾತಿಯನ್ನು ಮೆಚ್ಚಿಸಲು ಬದಲಾವಣೆ ದಾರಿ ಹಿಡಿಯುತ್ತಾರೆ. ಇಷ್ಟವಿಲ್ಲದ ಬಟ್ಟೆ (Dress )ಧರಿಸಲು ಮುಂದಾಗುತ್ತಾರೆ. ಮನಸ್ಸಿಗೆ ಹಿತವೆನಿಸದ ಕೆಲಸ ಮಾಡಿ ಸಂಗಾತಿ ಮೆಚ್ಚಿಸುವ ಅಗತ್ಯವಿಲ್ಲ. ಈ ಬದಲಾವಣೆ ತುಂಬಾ ದಿನ ಇರುವುದಿಲ್ಲ. ಭವಿಷ್ಯದಲ್ಲಿ ಈ ವಿಷ್ಯಗಳು ನಿಮಗೆ ಕಿರಿಕಿರಿ ಎನ್ನಿಸಬಹುದು.