ಗಂಡನ ಮೇಲೆ ಸಿಟ್ಟು ಬಂದರೆ ಅವನನ್ನು ರೂಮಿನಿಂದ ಹೊರ ಹಾಕುವುದು ಸಿನಿಮಾ ಸ್ಟೈಲ್. ಕೋಪಿಸಿಕೊಂಡಾಗ ದೂರ ಮಲಗುವುದು ಸಾಮಾನ್ಯರ ಅಭ್ಯಾಸ. ಉಳಿದಂತೆ ಜತೆಯಲ್ಲೇ ಮಲಗುವುದು ಎಲ್ಲೆಡೆ ಕಂಡುಬರುತ್ತೆ. ಆದರೆ, ಜಪಾನ್ ದಂಪತಿ ಹಾಗಲ್ಲ. ಮನಃಶಾಂತಿಗಾಗಿ ಬೇರೆ ಬೇರೆ ಹಾಸಿಗೆಯಲ್ಲಿ ಮಲಗುವುದೇ ಒಳ್ಳೇದು ಅಂತಾರೆ.
ಮದುವೆ(Marriage) ಯಾದ ಬಳಿಕ ಸ್ವಲ್ಪ ದಿನ ಅನೇಕರಿಗೆ ನಿದ್ದೆ (Sleep) ಯೇ ಸರಿಯಾಗಿ ಬರುವುದಿಲ್ಲ. ಬಹಳಷ್ಟು ಯುವ (Young) ದಂಪತಿ (Couple) ಈ ಕುರಿತು ದೂರುವುದನ್ನು ಕಾಣಬಹುದು. ಏಕೆಂದರೆ, ಹಾಸಿಗೆಯಲ್ಲಿ ಜತೆಗೆ ಇನ್ನೊಬ್ಬರಿರುತ್ತಾರೆ. ದೈಹಿಕ ಸಾಮೀಪ್ಯ, ಅವರ ಗೊರಕೆ(Snoring) , ನಿದ್ರೆಗಣ್ಣಿನಲ್ಲಿ ಅವರ ವರ್ತನೆ (Behaviour) ಎಲ್ಲವನ್ನೂ ಸಹಿಸಿಕೊಂಡೂ ಸಹಿಸಿಕೊಂಡೂ....ಕೊನೆಗೊಮ್ಮೆ ಅಭ್ಯಾಸವಾಗುತ್ತದೆ. ಅಲ್ಲಿಯವರೆಗೆ ಹಿಂಸೆ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ, ಇಷ್ಟೆಲ್ಲ ಕಷ್ಟಪಟ್ಟಾದರೂ ದಂಪತಿ ಒಟ್ಟಿಗೇ ಯಾಕೆ ಮಲಗಬೇಕು ಎನ್ನುತ್ತಾರೆ ಜಪಾನ್ (Japan) ದಂಪತಿ.
ಮದುವೆಯಾಯಿತು ಎಂದ ಮಾತ್ರಕ್ಕೆ ಇನ್ನೊಬ್ಬರೊಂದಿಗೆ ಮಲಗಿ ನಿದ್ರಿಸುವುದು ಅಷ್ಟು ಸರಳ ವಿಚಾರವಲ್ಲ. ಪತಿಯಾಗಲೀ, ಪತ್ನಿಯಾಗಲೀ ಅವರಿಗೂ ಅವರದ್ದೇ ಆದ ನಿದ್ರೆಯ ಸ್ಟೈಲ್ (Style) ಗಳಿರುತ್ತವೆ. ನಿದ್ರೆಗಣ್ಣಿನಲ್ಲಿ ಮಾತನಾಡುವವರಿರುತ್ತಾರೆ, ನಡೆಯುವವರಿರುತ್ತಾರೆ, ಗೊರಕೆ ಹೊಡೆಯುವವರಿರುತ್ತಾರೆ. ಲೇಟ್ ನೈಟ್ ಮಲಗುವವರಿರುತ್ತಾರೆ. ಬೆಳಗ್ಗೆ ಬೇಗ ಏಳುವವರಿರುತ್ತಾರೆ. ಇಬ್ಬರ ಇಂತಹ ಅಭ್ಯಾಸಗಳಿಂದ ಇನ್ನೊಬ್ಬರಿಗೆ ಯಾಕೆ ಡಿಸ್ಟರ್ಬ್ (Disturb) ಮಾಡಬೇಕು? ಅವರ ಸ್ಟೈಲ್ ಅವರಿಗಿರಲಿ. ನಾವು ಪ್ರತ್ಯೇಕ ಮಲಗುವುದೇ ಬೆಟರ್, ಅಲ್ಲವೇ?
ಆದರೆ, ನಮ್ಮಲ್ಲಿ ಇದು ಅಸಾಧ್ಯವೇ ಸರಿ. ನಮ್ಮ ದೇಶದಲ್ಲಿ ಅಂಥದ್ದೊಂದು ವ್ಯವಸ್ಥೆಯೂ ಇಲ್ಲ, ಮನಸ್ಥಿತಿಯೂ ಇಲ್ಲ. ಪ್ರತ್ಯೇಕ ಮಲಗಲು ಆರಂಭಿಸಿದರೆ ಸಂಸಾರದಲ್ಲಿ ಏನೋ ಸಮಸ್ಯೆ ಇದೆ ಎನ್ನುವ ಮಾತುಗಳು ಶುರುವಾಗಿಬಿಡುತ್ತವೆ.
ಜಪಾನ್ ದೇಶದಲ್ಲಿ ಹಾಗಲ್ಲ. ಅಲ್ಲಿನ ದಂಪತಿ ಸಾಮಾನ್ಯವಾಗಿ ಪ್ರತ್ಯೇಕ ಹಾಸಿಗೆ(Bed)ಗಳಲ್ಲೇ ಮಲಗುತ್ತಾರೆ. ಈ ಪರಿಪಾಠ ತಮಗೆ ಒಳ್ಳೆಯದು ಎಂದವರು ಭಾವಿಸುತ್ತಾರೆ. ಇದು ಇತ್ತೀಚಿನ ಪದ್ಧತಿಯೇನೂ ಅಲ್ಲ. ಏಕೆಂದರೆ, ಜಪಾನ್ ಮನೆಗಳಲ್ಲಿ ಬಹಳ ಹಿಂದಿನಿಂದಲೂ ಕಿರಿದಾದ ಮಂಚಗಳನ್ನು ಕಾಣಬಹುದು. ಹಿಂದಿನ ಒಬ್ಬರೇ ಮಲಗಲು ಸಾಕಾಗುವ ನೂರಾರು ವರ್ಷಗಳ ಹಿಂದಿನ ಮಂಚಗಳು ಅಲ್ಲಿವೆ.
Oral hygiene: ಬಾಯಿಯ ಆರೋಗ್ಯ ಹೆಚ್ಚಿಸುವ ಆಯಿಲ್ ಪುಲ್ಲಿಂಗ್..
ಜಪಾನ್ ದಂಪತಿ ದೂರ ದೂರವೇ ಏಕೆ ಮಲಗುತ್ತಾರೆ ಎನ್ನುವ ಕುರಿತು ಅಧ್ಯಯನವೂ ನಡೆದಿತ್ತು! ಬ್ರೈಟ್ ಸೈಡ್ (Bright Side) ಎನ್ನುವ ಸಂಸ್ಥೆ ನಡೆಸಿದ್ದ ಅಧ್ಯಯನದಲ್ಲಿ ಹಲವಾರು ಅಂಶಗಳು ಬೆಳಕಿಗೆ ಬಂದವು. ಅವುಗಳಲ್ಲಿ ಕೆಲವು ನಿಜಕ್ಕೂ ಚಿಂತನೆಗೆ ಹಚ್ಚುವಂಥವೇ ಆಗಿವೆ.
• ತಾಯಿ-ಮಕ್ಕಳು (Mother-children) ಒಟ್ಟಿಗೆ ಮಲಗಬೇಕು
ಮಕ್ಕಳಿಗೆ ತಾಯಿ ಒಡನಾಟ ಅತ್ಯಂತ ಅಗತ್ಯ. ದಂಪತಿ ಒಟ್ಟಿಗೆ ಮಲಗುವುದಕ್ಕಿಂತಲೂ ಹೆಚ್ಚಾಗಿ ತಾಯಿ-ಮಕ್ಕಳು ಒಟ್ಟಿಗೆ ಮಲಗಬೇಕು ಎನ್ನುವುದು ಜಪಾನೀಯರ ಧೋರಣೆ. ಹೀಗಾಗಿ, ಮಗು ಹುಟ್ಟಿದ ತಕ್ಷಣ ಅದೆಷ್ಟೋ ತಂದೆಯರು ಬೇರೆ ರೂಮಿಗೆ ಶಿಫ್ಟ್ ಆಗುತ್ತಾರೆ. ಮಕ್ಕಳಿಗೆ ಹತ್ತು ವರ್ಷವಾಗುವವರೆಗೂ ಅವರು ತಾಯಿಯೊಂದಿಗೇ ಮಲಗುತ್ತಾರೆ. ಪಾಶ್ಚಾತ್ಯರ ಧೋರಣೆಗೆ ಇದು ವಿರೋಧಾಭಾಸ ಹೊಂದಿದ್ದರೂ, ವೈಜ್ಞಾನಿಕವಾಗಿ ಅತ್ಯಂತ ಉತ್ತಮವಾದ ವಿಧಾನ.
Sex Life : ಸೆಕ್ಸ್ ವೇಳೆ ಈ ಸಮಸ್ಯೆ ಕಾಡಿದ್ರೂ ಮೌನ ಮುರಿಯಲ್ಲ ದಂಪತಿ
• ನಿದ್ರಾ ಸಮಯದಲ್ಲಿ ವ್ಯತ್ಯಾಸ (Difference in Sleep Time)
ಜಪಾನ್ ದೇಶ ಹೇಳಿಕೇಳಿ ದುಡಿಮೆಗೆ ಹೆಸರಾಗಿರುವಂಥದ್ದು. ಅಲ್ಲಿನ ಜನ ವರ್ಕೋಹಾಲಿಕ್ಸ್. ದಂಪತಿ ಇಬ್ಬರೂ ಕಷ್ಟಜೀವಿಗಳು. ವಿಶ್ವದಲ್ಲೇ ಅತ್ಯಂತ ಕಷ್ಟಸಹಿಷ್ಣುಗಳೆಂದೇ ಹೆಸರು ಪಡೆದಿರುವುದು ಜಪಾನಿ ಜನ. ಅಲ್ಲಿನ ದಂಪತಿ ಪ್ರತ್ಯೇಕ ಶಿಫ್ಟ್ ಗಳಲ್ಲಿ ದುಡಿಯುವುದು ಅತಿ ಸಾಮಾನ್ಯ. ದುಡಿದು, ದಣಿದು ಬಂದವರು ಪ್ರತ್ಯೇಕವಾಗಿ ಮಲಗಿದರೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆ ಹಾಗೂ ತಮ್ಮಿಂದಾಗಿ ಇನ್ನೊಬ್ಬರಿಗೆ ಸಮಸ್ಯೆಯಾಗುವುದಿಲ್ಲ, ಅವರ ನಿದ್ರಾಭಂಗವಾಗುವುದಿಲ್ಲ ಎನ್ನುವ ಭಾವನೆ ಹೊಂದಿದ್ದಾರೆ.
• ನೆಮ್ಮದಿ(Peace)ಗಾಗಿ ಪ್ರತ್ಯೇಕ ಹಾಸಿಗೆ!
ದೂರ ದೂರ ಮಲಗುವುದೆಂದರೆ ಅವರಿಗೆ ನೆಮ್ಮದಿ. ತಮಗೆ ಶಾಂತಿ ಬೇಕೆಂದು ಅಲ್ಲಿನ ದಂಪತಿ ಪ್ರತ್ಯೇಕವಾಗಿ ಮಲಗುವುದು ಕಂಡುಬರುತ್ತದೆ. ಏಕೆಂದರೆ, ಅಲ್ಲಿನ ಜನ ನಿದ್ರೆಗೆ ಬಹಳ ಮಹತ್ವ ನೀಡುತ್ತಾರೆ. ಮಲಗುವ ಅಲ್ಪ ಸಮಯದಲ್ಲೇ ಚೆನ್ನಾಗಿ ನಿದ್ರೆ ಮಾಡಬೇಕೆನ್ನುವುದು ಅವರ ಪಾಲಿಸಿ. ದಂಪತಿ ಸನಿಹದಲ್ಲಿ ಮಲಗಿದರೆ ಏನಾದರೊಂದು ವಿಷಯ ತೆಗೆದು ಮಾತನಾಡುವುದು, ಮುನಿಸಿಕೊಳ್ಳುವುದು ಸಾಮಾನ್ಯ. ಆಗ ಸಹಜವಾಗಿ ನಿದ್ರಾಭಂಗವಾಗುತ್ತದೆ. ಅದೆಲ್ಲ ತಾಪತ್ರಯ ಬೇಡವೇ ಬೇಡ ಎನ್ನುವವರೂ ಇದ್ದಾರೆ.