Relationship Tips : ಭಾವನೆಗಳಿಲ್ಲದ ಪತಿ…ಮೈದುನನಿಗೆ ಮುತ್ತಿಟ್ಟ ಅತ್ತಿಗೆ

By Roopa HegdeFirst Published Apr 12, 2022, 12:45 PM IST
Highlights

ಒಂದು ಸಂಬಂಧ ಮುಂದುವರೆಯಲು ಪ್ರೀತಿ ಬಹಳ ಮುಖ್ಯ. ಇಬ್ಬರ ಮಧ್ಯೆ ಪ್ರೀತಿ ಇಲ್ಲದ ಮೇಲೆ ಆ ಸಂಬಂಧ ಅರ್ಥ ಕಳೆದುಕೊಳ್ಳುತ್ತದೆ. ಈ ಮಹಿಳೆ ಜೀವನದಲ್ಲೂ ಅದೇ ಆಗಿದೆ. ಪತಿಯಿಂದ ಪ್ರೀತಿ ಕಳೆದುಕೊಂಡವಳು ಈಗ ಮತ್ತೊಂದು ಕಡೆ ಅದ್ರ ಹುಡುಕಾಟ ಶುರು ಮಾಡಿದ್ದಾಳೆ.
 

ದಾಂಪತ್ಯ (Marriage) ಜೀವನದಲ್ಲಿ ಪತಿ (Husband) –ಪತ್ನಿ (Wife) ಭಾವನಾತ್ಮಕವಾಗಿ ಒಂದಾಗಬೇಕು. ಇಬ್ಬರ ಮಧ್ಯೆ ಗೌರವ, ಪ್ರೀತಿ (Love), ವಿಶ್ವಾಸದ ಜೊತೆಗೆ ಶಾರೀರಿಕ ಆಕರ್ಷಣೆ, ಸಂಬಂಧ ಕೂಡ ಮುಖ್ಯವಾಗುತ್ತದೆ. ದಂಪತಿ ಮಧ್ಯೆ ದೈಹಿಕ ಸಂಬಂಧ ಬೆಳೆಯದೆ ಹೋದಾಗ ಅದು ವಿಚ್ಛೇದನ (Divorce) ಕ್ಕೆ ಬಂದು ನಿಲ್ಲುತ್ತದೆ. ಇಬ್ಬರ ಮಧ್ಯೆ ಪ್ರೀತಿ ಇಲ್ಲದೆ, ಪರಸ್ಪರ ಅರ್ಥ ಮಾಡಿಕೊಳ್ಳದೆ ಸಂಭೋಗ ನಡೆಸಿದ್ರೆ ಅದು ದಾಂಪತ್ಯ ಎನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ದಂಪತಿ ಮಧ್ಯೆ ಪ್ರೀತಿ ಜೊತೆ ರೋಮ್ಯಾನ್ಸ್ ಇರ್ಬೇಕಾಗುತ್ತದೆ. ಪತಿಯಿಂದ ಎರಡನ್ನೂ ಕಳೆದುಕೊಂಡ ಮಹಿಳೆಯೊಬ್ಬಳು ಈಗ ಮೈದುನನ ಆಕರ್ಷಣೆಗೊಳಗಾಗಿದ್ದಾಳೆ. ಆಕೆ ಸಮಸ್ಯೆ ಏನು ಎಂಬುದನ್ನು ಇಂದು ಹೇಳ್ತೇವೆ.

ಪತಿಯಿಂದ ದೂರ ದೂರ : 34 ವರ್ಷದ ಮಹಿಳೆ ತಂದೆ – ತಾಯಿ ತೋರಿಸಿದ ಹುಡುಗನನ್ನು ಮದುವೆಯಾಗಿದ್ದಾಳೆ. ಮದುವೆಯಾಗಿ ಮೂರು ವರ್ಷವಾಗಿದೆ. ಆದ್ರೆ ಪತಿ –ಪತ್ನಿ ಮಧ್ಯೆ ಭಾವನಾತ್ಮಕ ಸಂಬಂಧವೇ ಇಲ್ಲ. ಪ್ರೀತಿ ಮಾಡದ ಪತಿ ಜೊತೆ ಸೆಕ್ಸ್ ಇಲ್ಲವೆಂದ್ರೂ ತಪ್ಪಿಲ್ಲ. ಪತಿ ಇದ್ದೂ ಇಲ್ಲದ ಜೀವನ ನಡೆಸುತ್ತಿದ್ದ ಮಹಿಳೆ ಮೊದಲು ತನ್ನ ಕುಟುಂಬಸ್ಥರಿಗಾಗಿ ವಿಚ್ಛೇದನ ನೀಡದೆ ಇದ್ದಳಂತೆ. ಆದ್ರೀಗ ವಿಚ್ಛೇದನ ನೀಡದಿರಲು ಮೈದುನ ಕಾರಣವಂತೆ.

Relationship Tips: ಈ ಅಭ್ಯಾಸಗಳು ಪ್ರೀತಿಯ ಜೀವನವನ್ನು ಹಾಳುಮಾಡಬಹುದು, ಹುಷಾರ್!!

ಸ್ನೇಹಿತನಾದ ಮೈದುನ : ಮನೆಯಲ್ಲಿ ಒಂಟಿತನ ಅನುಭವಿಸುತ್ತಿದ್ದ ಮಹಿಳೆಗೆ ಮೈದುನ ಉತ್ತಮ ಸ್ನೇಹಿತನಾದನಂತೆ. ಇಬ್ಬರ ಮಧ್ಯೆ ಅನೇಕ ವಿಷ್ಯದ ಬಗ್ಗೆ ಮಾತುಗಳು ಬಂದು ಹೋಗ್ತಿದ್ದವಂತೆ. ಇಷ್ಟು ಮಾತ್ರವಲ್ಲ ಇಬ್ಬರ ಆಸಕ್ತಿ ಒಂದೇ ಆಗಿದ್ದರಿಂದ ಇಬ್ಬರ ಮತ್ತಷ್ಟು ಹತ್ತಿರವಾಗಿದ್ದರಂತೆ. ಪತಿಯ ವರ್ತನೆ ಬಗ್ಗೆ ಮೈದುನನ ಬಳಿ ಹೇಳಿಕೊಂಡಿದ್ದಳಂತೆ ಮಹಿಳೆ. ಅದಕ್ಕೆ ಸ್ಪಂದಿಸಿದ್ದ ಮೈದುನ ಒಳ್ಳೆ ಕೇಳುಗ ಮಾತ್ರವಲ್ಲ ಒಳ್ಳೆ ಸಲಹೆಗಾರನಂತೆ ವರ್ತಿಸಿದ್ದನಂತೆ. ಇದ್ರಿಂದ ಮೈದುನನಿಗೆ ಮತ್ತಷ್ಟು ಆಪ್ತವಾಗಿದ್ದಳಂತೆ ಮಹಿಳೆ.

ಸ್ನೇಹ ಪ್ರೀತಿಗೆ ತಿರುಗಿದೆ : ಎಲ್ಲದಕ್ಕೂ ಸ್ಪಂದಿಸುತ್ತಿದ್ದ ಮೈದುನನ ಮೇಲೆ ವಿಶೇಷ ಆಕರ್ಷಣೆ ಶುರುವಾಗಿದೆಯಂತೆ. ಈಗಾಗಲೇ ಒಂದು ಬಾರಿ ಮೈದುನನಿಗೆ ಮುತ್ತಿಟ್ಟಿದ್ದೇನೆ ಎನ್ನುವ ಮಹಿಳೆ, ಪತಿಗೆ ವಿಚ್ಛೇದನ ನೀಡಲು ಮನಸ್ಸಿಲ್ಲ ಎಂದಿದ್ದಾಳೆ. ಮೈದುನನ್ನು ಬಿಟ್ಟಿರಲು ಸಾಧ್ಯವಿಲ್ಲ. ಪತಿಗೆ ವಿಚ್ಛೇದನ ನೀಡಿದ್ರೆ ಮೈದುನನಿಂದ ದೂರವಾಗ್ಬೇಕು. ನಾನೇನು ಮಾಡಲಿ ಎಂದು ಪ್ರಶ್ನೆಯಿಟ್ಟಿದ್ದಾಳೆ.

Relationship Tips: ಈ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡ್ತಾಳೆ ಪತ್ನಿ

ತಜ್ಞರ ಸಲಹೆ : ಸಮಸ್ಯೆಗಳನ್ನು ಅರಿತ ತಜ್ಞರು ಮಹಿಳೆಗೆ ಸೂಕ್ತ ಸಲಹೆ ನೀಡಿದ್ದಾರೆ. ಪತಿ – ಪತ್ನಿ ಮಧ್ಯೆ ಭಾವನಾತ್ಮಕ ಸಂಬಂಧವಿಲ್ಲದೆ ಹೋದ್ರೆ ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಬೆಳೆಯುವುದು ಕಷ್ಟ. ಆರೆಂಜ್ ಮ್ಯಾರೇಜ್ ನಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಪತಿ ಪ್ರೀತಿಸುತ್ತಿಲ್ಲ ಎಂಬುದು ನಿಮ್ಮ ಮೊದಲ ಸಮಸ್ಯೆಯಾಗಿದೆ. ಪತಿ ಜೊತೆ ಭಾವನಾತ್ಮಕವಾಗಿ ಹತ್ತಿರವಾಗುವ ಪ್ರಯತ್ನ ನಡೆಸುವ ಅಗತ್ಯವಿದೆ. ನಿಮ್ಮ ಮುಂದಿನ ಹೆಜ್ಜೆ ಬಗ್ಗೆ ಸರಿಯಾಗಿ ಆಲೋಚನೆ ಮಾಡಿ ಎನ್ನುತ್ತಾರೆ ತಜ್ಞರು.

ಮೈದುನನ ಜೊತೆ ಸಂಬಂಧ : ಮೊದಲು ಮೈದುನನ ಬಗ್ಗೆ ನಿಮ್ಮ ಭಾವನೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎನ್ನುತ್ತಾರೆ ತಜ್ಞರು. ಅದು ಆಕರ್ಷಣೆಯೇ ಅಥವಾ ಅವರ ಜೊತೆ ದಾಂಪತ್ಯ ಜೀವನ ನಡೆಸುವ ಇಚ್ಛೆ ಹೊಂದಿದ್ದೀರಾ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಿ. ಇಲ್ಲಿ ನಿಮ್ಮ ಅಭಿಪ್ರಾಯ ಮಾತ್ರ ಮುಖ್ಯವಾಗುವುದಿಲ್ಲ,ಮೈದುನ ನಿಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾನೆ ಎಂಬುದನ್ನು ಅರಿಯಬೇಕೆನ್ನುತ್ತಾರೆ ತಜ್ಞರು. ಮೈದುನನ ಜೊತೆಯೂ ಇದ್ರ ಬಗ್ಗೆ ಮಾತನಾಡಿ ಎನ್ನುತ್ತಾರೆ ತಜ್ಞರು.

ಮುಂದೆ ತಲೆದೂರಬಹುದು ಸಮಸ್ಯೆ : ಪತಿಯಿಂದ ಸುಖ ಸಿಗ್ತಿಲ್ಲವೆಂದಾದ್ರೆ ವಿಚ್ಛೇದನ ಪಡೆಯಿರಿ. ಮೈದುನನ ಜೊತೆ ಸಂಬಂಧ ಮುಂದುವರೆಸಲು ಪತಿಗೆ ವಿಚ್ಛೇದನ ನೀಡದಿರುವುದು ತಪ್ಪು. ಇದ್ರಿಂದ ಅನೇಕ ಸಂಬಂಧಗಳು ಹಾಳಾಗುತ್ತವೆ ಎನ್ನುತ್ತಾರೆ ತಜ್ಞರು. 

click me!