
ಮಕ್ಕಳಿ (Children)ಗೆ ಮನೆಯೇ ಮೊದಲ ಪಾಠ ಶಾಲೆ. ತಾಯಿ (Mother) ಯೇ ಮೊದಲ ಗುರು ಎಂಬ ಮಾತಿದೆ. ಮಕ್ಕಳು ಮನೆಯಲ್ಲಿಯೇ ಅನೇಕ ವಿಷ್ಯಗಳನ್ನು ಕಲಿಯುತ್ತಾರೆ. ಬರೀ ವಿದ್ಯೆ ಮಾತ್ರವಲ್ಲ ನಡವಳಿಕೆ, ಸಂಸ್ಕಾರ ಸೇರಿದಂತೆ ಬಹುತೇಕ ಜ್ಞಾನ ಸಿಗುವುದು ಮನೆಯಿಂದ. ಇದೇ ಕಾರಣಕ್ಕೆ ಪಾಲಕರು (Parents), ಮಕ್ಕಳನ್ನು ಬೆಳೆಸಲು ಅನೇಕ ವಿಧಾನಗಳನ್ನು ಅನುಸರಿಸುತ್ತಾರೆ. ಮನೆಯಲ್ಲಿ ಎರಡು – ಮೂರು ಮಕ್ಕಳಿದ್ದಾಗ ಪಾಲಕರು ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ಅದ್ರ ನಕಾರಾತ್ಮಕ ಪ್ರಭಾವ ಮಕ್ಕಳ ವ್ಯಕ್ತಿತ್ವದ ಮೇಲೆ ಹಾಗೂ ಮಕ್ಕಳ ಮನಸ್ಸಿನ ಮೇಲಾಗುತ್ತದೆ. ಮಕ್ಕಳ ಪಾಲನೆ ವೇಳೆ ಅವರ ಬಗ್ಗೆ ಸರಿಯಾಗಿ ಗಮನ ನೀಡದಿರುವುದು ಅಥವಾ ಅವರಿಂದ ದೂರವಿರುವುದನ್ನು ಅನ್ ಇನ್ವಾಲ್ಡ್ ಪೇರೆಂಟಿಂಗ್ ಎಂದು ಕರೆಯುತ್ತಾರೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಪಾಲನೆಗಾಗಿ ಅನ್ ಇನ್ವಾಲ್ಡ್ ಪೇರೆಂಟಿಂಗ್ ಆಯ್ಕೆ ಮಾಡುವ ಪಾಲಕರು ಇಂದಿನಿಂದಲೇ ಇದನ್ನು ಬಿಡುವುದು ಒಳ್ಳೆಯದು. ಇಂದು ಅನ್ ಇನ್ವಾಲ್ಡ್ ಪೇರೆಂಟಿಂಗ್ ಅಂದ್ರೇನು ಮತ್ತು ಅದ್ರಿಂದ ಮಕ್ಕಳ ಮೇಲಾಗುವ ಪರಿಣಾಮವೇನು ಎಂಬುದನ್ನು ಹೇಳ್ತೇವೆ.
ಅನ್ ಇನ್ವಾಲ್ಡ್ ಪೇರೆಂಟಿಂಗ್ ಅಂದ್ರೇನು ? : ಇದೊಂದು ಮಕ್ಕಳನ್ನು ಬೆಳೆಸುವ ಶೈಲಿಯಾಗಿದೆ. ಮಕ್ಕಳ ಪೋಷಣೆ ವೇಳೆ ಪಾಲಕರು ಭಿನ್ನವಾಗಿ ವರ್ತಿಸುತ್ತಾರೆ. ಮಕ್ಕಳ ಬಗ್ಗೆ ಕಡಿಮೆ ಗಮನ ನೀಡುವ ಜೊತೆಗೆ ಮಕ್ಕಳಿಂದ ದೂರ ದೂರ ಓಡ್ತಾರೆ. ಮಕ್ಕಳ ಬಗ್ಗೆ ಪಾಲಕರಿಗೆ ಅತಿ ಕಡಿಮೆ ವಿಷ್ಯಗಳು ತಿಳಿದಿರುತ್ತವೆ. ಹಾಗಾಗಿ ಮಕ್ಕಳ ಅವಶ್ಯಕತೆಗಳು ಏನು ಎಂಬುದು ಪಾಲಕರಿಗೆ ಸರಿಯಾಗಿ ತಿಳಿಯುವುದಿಲ್ಲ. ಕೆಲವರು ಕೆಲಸದ ಕಾರಣಕ್ಕೆ ಮಕ್ಕಳ ಮೇಲೆ ಹೆಚ್ಚು ಗಮನ ನೀಡುವುದಿಲ್ಲ ನಿಜ. ಆದ್ರೆ ಮಕ್ಕಳನ್ನು ನಿರ್ಲಕ್ಷ್ಯಿಸಿದಾಗ ಅದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅನ್ ಇನ್ವಾಲ್ಡ್ ಪೇರೆಂಟಿಂಗ್ ಲಕ್ಷಣ :
1. ತಂದೆ – ತಾಯಿಗೆ ಮಕ್ಕಳಿಗೆ ಸಂಬಂಧಿಸಿದ ವಿಷ್ಯಗಳ ಬಗ್ಗೆ ಹೆಚ್ಚು ಗಮನವಿರುವುದಿಲ್ಲ.
2. ಪಾಲಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದಿಲ್ಲ.
3. ಮಕ್ಕಳ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪಾಲಕರು
4. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಮಕ್ಕಳ ಬೇರೆ ಅಭ್ಯಾಸ, ಕಲೆ ಬಗ್ಗೆ ಪಾಲಕರ ನಿರ್ಲಕ್ಷ್ಯ
5. ಮಕ್ಕಳ ಖುಷಿ ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸದಿರುವುದು.
ಅನ್ ಇನ್ವಾಲ್ಡ್ ಪೇರೆಂಟಿಂಗ್ ನಷ್ಟ :
ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ : ಮೊದಲೇ ಹೇಳಿದಂತೆ ಅನ್ ಇನ್ವಾಲ್ಡ್ ಪೇರೆಂಟಿಂಗ್ ಮಕ್ಕಳ ವ್ಯಕ್ತಿತ್ವ ಹಾಗೂ ಮಾನಸಿಕ ಆರೋಗ್ಯದ ಮೇಲಾಗುತ್ತದೆ. ಪಾಲಕರು ಮಕ್ಕಳ ಬಗ್ಗೆ ಗಮನ ನೀಡದ ಕಾರಣ ಮಕ್ಕಳು ಬೇರೆ ದಾರಿಯಲ್ಲಿ ನಡೆಯುವ ಸಾಧ್ಯತೆಯಿರುತ್ತದೆ. ಇದೇ ಕಾರಣಕ್ಕೆ ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ. ದೊಡ್ಡವರಾಗ್ತಿದ್ದಂತೆ ಒತ್ತಡ ಹಾಗೂ ಖಿನ್ನತೆಗೊಳಗಾಗುವ ಸಾಧ್ಯತೆ ಕೂಡ ಇರುತ್ತದೆ.
ಈ ರಾಶಿಯ ಬಾಸ್ ತುಂಬಾ ಫ್ರೆಂಡ್ಲಿಯಾಗಿರುತ್ತಾರೆ
ಮಕ್ಕಳಿಗೆ ಉದಾಸೀನ ಭಾವನೆ : ಪಾಲಕರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ, ಪ್ರೀತಿ ತೋರಿಸದ ಕಾರಣ, ಮಕ್ಕಳ ನಡವಳಿಕೆಯನ್ನು ನಿರ್ಲಕ್ಷ್ಯಿಸುವ ಕಾರಣ ಮಕ್ಕಳು ಕೂಡ ಉದಾಸೀನ ಭಾವನೆಗೆ ಒಳಗಾಗ್ತಾರೆ. ಪ್ರತಿ ಕ್ಷಣ ಅವರಿಗೆ ಒಂಟಿತನ ಕಾಡಲು ಶುರುವಾಗುತ್ತದೆ. ದೊಡ್ಡವರಾಗ್ತಿದ್ದಂತೆ ಅವರೂ ಪಾಲಕರಂತೆ ನಡೆದುಕೊಳ್ತಾರೆ. ತಮ್ಮ ಪಾಲಕರ ಜವಾಬ್ದಾರಿ ಹೊಣೆಯಿಂದ ನುಣುಚಿಕೊಳ್ತಾರೆ.
ಬೇರೆ ಮಕ್ಕಳಿಗಿಂತ ಭಿನ್ನ ವ್ಯವಹಾರ : ಅನ್ ಇನ್ವಾಲ್ಡ್ ಪಾಲನೆಯಲ್ಲಿ ಬೆಳೆದ ಮಕ್ಕಳು ಬೇರೆ ಮಕ್ಕಳಿಗಿಂತ ಭಿನ್ನವಾಗಿರ್ತಾರೆ. ಅವರ ವರ್ತನೆ, ವ್ಯವಹಾರದಲ್ಲಿ ಬದಲಾವಣೆಯಿರುತ್ತದೆ. ದೊಡ್ಡವರಾಗ್ತಿದ್ದಂತೆ ಕೋಪ, ಹಠಮಾರಿತನ ಹೆಚ್ಚಾಗುತ್ತದೆ.
ಗಂಡನಿಗೆ ಮದುವೆ ಆನಿವರ್ಸರಿ ಡೇಟ್ ನೆನಪಿರುವಂತೆ ಮಾಡಲು ಏನು ಮಾಡಬಹುದು ?
ಕ್ರಿಯಾಶೀಲತೆಯ ಕೊರತೆ : ಮಕ್ಕಳನ್ನು ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಮಕ್ಕಳು ಬೇರೆ ಯಾವುದೇ ಕ್ಷೇತ್ರದಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಾಗೆ ಪ್ರತಿ ಕ್ಷಣ ಯಾವುದೋ ಆತಂಕ, ಭಯದಲ್ಲಿ ಮಕ್ಕಳಿರ್ತಾರೆ. ಇದ್ರಿಂದ ಹೊಸ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.