ಸುಮ್ನೆ ಪೋರ್ನ್‌ ವೀಡಿಯೋ ನೋಡ್ತಾ ಕೂತ್ರೆ ಸಾಕು, ಗಂಟೆಗೆ 1500 ರೂ. ಕೊಡ್ತಾರೆ..!

By Suvarna News  |  First Published Apr 11, 2022, 7:07 PM IST

ಪೋರ್ನ್‌ ವೀಡಿಯೋ (Porn Video) ನೋಡಿ ಕೈ ತುಂಬಾ ದುಡ್ಡು ಮಾಡಿ. ಅರೆ ಪೋರ್ನ್‌ ವೀಡಿಯೋ ನೋಡೋದು ಒಂದು ಕೆಲ್ಸಾನ (Work). ಅದಕ್ಕೂ ಒಂದು ಸ್ಯಾಲರಿನಾ (Salary) ಅಂತ ಬೆಚ್ಚಿಬೀಳ್ಬೇಡಿ. ನಾವ್ ಹೇಳ್ತಿರೋದು ನಿಜಾನೆ. ಇಲ್ಲೊಂದು ಕಂಪೆನಿ, ಸುಮ್ನೆ ಪೋರ್ನ್ ವೀಡಿಯೋ ನೋಡ್ತಾ ಕೂತ್ರೆ ಸಾಕು ಗಂಟೆ ಭರ್ತಿ 1500 ರೂ. ಸಂಬಳ ಕೊಡುತ್ತೆ.


ಮನುಷ್ಯ ಅಂದ್ಮೇಲೆ ಸಹಜವಾಗಿಯೇ ಲೈಂಗಿಕಾಸಕ್ತಿ ಇರುತ್ತದೆ. ಲೈಂಗಿಕ ಕ್ರಿಯೆ (Sex) ನಡೆಸಲು, ಆ ಸಂಬಂಧಿತ ವಿಷಯಗಳನ್ನು ಮಾತನಾಡಲು, ನೋಡಲು ಕೆಟ್ಟ ಕುತೂಹಲವಿರುತ್ತದೆ. ಹೀಗಾಗಿಯೇ ಅದೆಷ್ಟೋ ಪೋರ್ನ್ ಚಾನೆಲ್‌ಗಳು ಕಾರ್ಯಾಚರಿಸುತ್ತಿವೆ. ಯೂಟ್ಯೂಬ್‌ನಲ್ಲೂ (Youtube) ಸಿಕ್ಕಾಪಟ್ಟೆ ಪೋರ್ನ್‌ ವೀಡಿಯೋ (Porn Video)ಗಳು ಲಭ್ಯವಿರುತ್ತವೆ. ವಯಸ್ಕರಿಂದ ಹಿಡಿದು ವೃದ್ಧರು ಇದನ್ನು ಕದ್ದುಮುಚ್ಚಿ ನೋಡುತ್ತಾರೆ. ಆದ್ರೆ ಎಲ್ರೂ ಮನೆಯಲ್ಲಿ ಯಾರೂ ಇಲ್ಲದ ಟೈಂನಲ್ಲಿ, ಬೆಡ್‌ಶೀಟ್ ಹೊದ್ಕೊಂಡು ಕದ್ದುಮುಚ್ಚಿ ಮಾಡೋ ಕೆಲ್ಸ ಇಲ್ಲೊಂದು ಕಡೆ ಫುಲ್ ಟೈಂ ಜಾಬ್‌.

ಅರೆ ಏನ್‌ ಹೇಳ್ತಿದ್ದಾರಪ್ಪಾ ಅಂತ ಕನ್‌ಫ್ಯೂಸ್ ಆಗ್ಬೇಡಿ. ಪೋರ್ನ್‌ ವೀಡಿಯೋ ನೋಡೋದು ಒಂದು ಕೆಲ್ಸಾನ (Work). ಅದಕ್ಕೂ ಒಂದು ಸ್ಯಾಲರಿನಾ (Salary) ಅಂತ ಬೆಚ್ಚಿಬೀಳ್ಬೇಡಿ. ನಾವ್ ಹೇಳ್ತಿರೋದು ನಿಜಾನೆ. ಇಲ್ಲೊಂದು ಕಂಪೆನಿ, ಸುಮ್ನೆ ಪೋರ್ನ್ ವೀಡಿಯೋ ನೋಡ್ತಾ ಕೂತ್ರೆ ಸಾಕು ಗಂಟೆ ಭರ್ತಿ 1500 ರೂ. ಸಂಬಳ ಕೊಡುತ್ತೆ.

Tap to resize

Latest Videos

ಇಡೀ ಪ್ರಪಂಚದಲ್ಲಿ ವಿಚಿತ್ರ ರೀತಿಯ ಹಲವು ಉದ್ಯೋಗಗಳಿವೆ. ಅಂಥಾ ಒಂದು ಕಂಪನಿಯು ಬೆಡ್‌ಬೈಬಲ್ ಆಗಿದೆ. ಇದು ಸಂಪೂರ್ಣವಾಗಿ ಲೈಂಗಿಕತೆಗೆ ಸಂಬಂಧಿಸಿದ ಕಂಪೆನಿಯಾಗಿದೆ. ಲೈಂಗಿಕ ಆಟಿಕೆ, ಬುಕ್ಸ್, ವೀಡಿಯೋಗಳನ್ನು ಮೂಲವಾಗಿಟ್ಟುಕೊಂಡಿದೆ. ಆನ್‌ಲೈನ್ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸಲು ಕಂಪನಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಖಾಲಿ ಹುದ್ದೆಯನ್ನು ಹಾಕಿದ್ದಾರೆ. ಆನ್‌ಲೈನ್ ವಯಸ್ಕ ಚಲನಚಿತ್ರಗಳನ್ನು ವೀಕ್ಷಿಸುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸ್ತಿದೆ.

Extramarital Affair: ಕೆಲಸದಾಕೆ ಮೇಲೆ ಹೆಚ್ಚಾಯ್ತು ಪ್ರೀತಿ, ಕದ್ದುಮುಚ್ಚಿ ಫೋಟೋ ಕ್ಲಿಕ್ಕಿಸಿದ ವ್ಯಕ್ತಿ

ನಿರ್ದಿಷ್ಟ ವಿಷಯಗಳ ಕುರಿತು ಮಾಹಿತಿ, ಡೇಟಾ ಪಾಯಿಂಟ್‌ಗಳಾದ ಲೈಂಗಿಕ ಸ್ಥಾನ ಮತ್ತು ಅವಧಿ, ಪರಾಕಾಷ್ಠೆಗಳ ಸಂಖ್ಯೆ, ಲಿಂಗ ಸ್ಥಾನಗಳು, ಪುರುಷ ಮತ್ತು ಸ್ತ್ರೀ ಅನುಪಾತವನ್ನು ಸಂಗ್ರಹಿಸಲು ಕಂಪನಿಯು ಪ್ರತಿ ಗಂಟೆಗೆ ಒಬ್ಬ ವ್ಯಕ್ತಿಯನ್ನು ನೇಮಿಸುವುದಾಗಿ ತಿಳಿಸಿದೆ.

ಪೋರ್ನ್ ರಿಸರ್ಚ್ ಮುಖ್ಯಸ್ಥರು ಸೂಚಿಸಿರುವ ಈ ಪಾತ್ರಕ್ಕೆ ಅರ್ಜಿ ಸಲ್ಲಿಸಲು, ಅರ್ಜಿದಾರರು 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಆದರೆ ಇದಕ್ಕೆ ನೀವು ಜಗತ್ತಿನ ಯಾವ ದೇಶದಲ್ಲಿರುವಿರಿ ಎಂಬುದು ಮುಖ್ಯವಲ್ಲ ಎಂದು ಕಂಪನಿಯು ಹೇಳುತ್ತದೆ. ಆದರೆ ವಾರಕ್ಕೊಮ್ಮೆ ವೀಡಿಯೋ ನೋಡುವವರ ಸಂಪರ್ಕದಲ್ಲಿರುವುದಾಗಿ ಕಂಪೆನಿ ತಿಳಿಸಿದೆ. ಅರ್ಜಿ ನಮೂನೆಯು ಅರ್ಜಿದಾರರ ಹೆಸರು, ಇಮೇಲ್ ವಿಳಾಸ ಮತ್ತು ಉದ್ಯೋಗದ ಸ್ಥಿತಿಯನ್ನು ಮತ್ತು ಅರ್ಜಿ ಸಲ್ಲಿಸಲು ಕಾರಣಗಳನ್ನು ಮತ್ತು ಕಂಪನಿಯು ಅವರನ್ನು ಏಕೆ ಆಯ್ಕೆ ಮಾಡಬೇಕು ಎಂಬುದನ್ನು ತಿಳಿಸಲು ಕೋರುತ್ತದೆ. ಕಂಪನಿಯ ಪ್ರಕಾರ, ಪೋರ್ನ್ ವೀಡಿಯೊಗಳಲ್ಲಿನ ಪ್ರವೃತ್ತಿಗಳು, ಅಂಕಿಅಂಶಗಳ ಬಗ್ಗೆ ಆಳವಾದ ವರದಿಯನ್ನು ನಡೆಸಲು ಈ ಡೇಟಾವನ್ನು ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕಾಮಸೂತ್ರದ ಪ್ರಕಾರ ಚುಂಬಿಸಿದರೆ ಮುತ್ತಿನಿಂದ ಮತ್ತೇರುವುದು ಗ್ಯಾರಂಟಿ

ಅಶ್ಲೀಲತೆಯು ಪ್ರಪಂಚದಾದ್ಯಂತ ಶತಕೋಟಿ-ಪೌಂಡ್ ಉದ್ಯಮವಾಗಿದೆ, ಆದ್ದರಿಂದ ನಾವು ನಿಜ ಜೀವನದ ಉದಾಹರಣೆಗಳ ಮೂಲಕ ಇನ್ನಷ್ಟು ಕಲಿಯುವ ಕಲ್ಪನೆಯೊಂದಿಗೆ ಬಂದಿದ್ದೇವೆ. ಜನರ ಅಶ್ಲೀಲ ಆದ್ಯತೆಗಳ ನ್ಯಾಯೋಚಿತ ಪ್ರಾತಿನಿಧ್ಯವನ್ನು ರಚಿಸಲು ನಾವು ಟಾಪ್ 100 ಹೆಚ್ಚು ವೀಕ್ಷಿಸಿದ ವೀಡಿಯೊಗಳಲ್ಲಿ ಸಾಮಾನ್ಯ ಲೈಂಗಿಕ ಸ್ಥಾನಗಳನ್ನು ಅನ್ವೇಷಿಸಲು ಆಯ್ಕೆ ಮಾಡಿದ್ದೇವೆ ಎಂದು ಕಂಪೆನಿ ತಿಳಿಸಿದೆ.

ನಟರು ಯಾವ ರೀತಿಯ ರೋಲ್‌ಪ್ಲೇಯನ್ನು ಹೊಂದಿದ್ದಾರೆ, ಪರಾಕಾಷ್ಠೆಗಳ ಸಂಖ್ಯೆ ಮತ್ತು ಯಾವ ವೀಡಿಯೋ ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಎಂಬ ಕೆಲವು ಆಸಕ್ತಿದಾಯಕ ಅಂಕಿಅಂಶಗಳನ್ನು ನಾವು ನಮ್ಮ ಸಂಶೋಧನೆಯಿಂದ ಕಲಿಯುತ್ತೇವೆ ಎಂದು ನಮಗೆ ಖಚಿತವಾಗಿದೆ ಎಂದು ಬೆಡ್‌ಬೈಬಲ್‌ನಲ್ಲಿ ಮುಖ್ಯ ವಿಷಯ ರಚನೆಕಾರ ಎಡ್ವಿನಾ ಕೈಟೊ ಹೇಳಿದ್ದಾರೆ. ಇನ್ಯಾಕೆ ತಡ ಪೋರ್ನ್ ವೀಡಿಯೋ ನೋಡಿ, ಸಿಕ್ಕಾಪಟ್ಟೆ ದುಡ್ಡು ಮಾಡಿ.

click me!