ಎಲ್ಲ ರೀತಿಯ ಪುರುಷರನ್ನೂ ಮಹಿಳೆಯರು ಇಷ್ಟಪಡುವುದಿಲ್ಲ. ಪುರುಷರಲ್ಲಿರುವ ಹಲವು ಗುಣಗಳು ಅವರಿಗೆ ಹಿತವೆನಿಸುವುದಿಲ್ಲ. ಆದರೆ, ತಮ್ಮ ಸಂಗಾತಿ ಆಗುವವರಲ್ಲಿ ಕೆಲವು ಗುಣಗಳನ್ನು ಅವರು ಖಂಡಿತವಾಗಿ ಬಯಸುತ್ತಾರೆ. ಯಾವ ರೀತಿಯ ಪುರುಷರು ಅವರಿಗೆ ಇಷ್ಟವಾಗುತ್ತಾರೆ ಎಂದು ನೋಡಿಕೊಳ್ಳಿ.
ತಾವು ಇಷ್ಟಪಡುವವರು ತಮ್ಮನ್ನೂ ಇಷ್ಟಪಡಲಿ, ಈ ಮೂಲಕ ಅವರೊಂದಿಗೆ ಅವಿನಾಭಾವ ಸಂಬಂಧ ಬೆಸೆಯಲಿ ಎನ್ನುವ ಆಸೆ ಎಲ್ಲರಿಗೂ ಸಹಜವಾಗಿರುತ್ತದೆ. ಪುರುಷರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವು ಇಷ್ಟಪಡುವ ಹುಡುಗಿಯನ್ನು ಇಂಪ್ರೆಸ್ ಮಾಡಲು ಏನೆಲ್ಲ ಕಸರತ್ತು ಮಾಡುತ್ತಾರೆ. ಆಕೆಯನ್ನು ಪಡೆಯಲು ಸುಳ್ಳುಗಳ ಸರಮಾಲೆಯನ್ನೂ ಪೋಣಿಸಬಹುದು. ತಾವೇನು ಅಲ್ಲವೋ ಹಾಗೆ ಬಿಂಬಿಸಿಕೊಳ್ಳಲು ಯತ್ನಿಸಬಹುದು. ಆದರೆ, ಇವೆಲ್ಲ ನೀರಿನಲ್ಲಿ ಮಾಡಿದ ಹೋಮದಂತೆ ಆಗುವ ಸಾಧ್ಯತೆ ಅಧಿಕ. ಏಕೆಂದರೆ, ವ್ಯಕ್ತಿತ್ವದಲ್ಲಿ ಯಾವಾಗಲೂ ಸಾಚಾತನ ಇರಬೇಕು. ನೀವು ಇಷ್ಟಪಡುತ್ತೀರಿ ಎಂದ ಮಾತ್ರಕ್ಕೆ ಆಕೆಯನ್ನು ಒಲಿಸಿಕೊಳ್ಳಲು ಕಸರತ್ತು ಮಾಡುವುದಕ್ಕಿಂತ ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಯತ್ನಿಸುವುದು ಉತ್ತಮ. ವ್ಯಕ್ತಿತ್ವ ಚಿನ್ನದಂತಿದ್ದರೆ ಸಾಮಾನ್ಯವಾಗಿ ಎಲ್ಲ ಹುಡುಗಿಯರೂ ಆ ಪುರುಷರನ್ನು ಇಷ್ಟಪಡುತ್ತಾರೆ. ಹೀಗಾಗಿ, ಮಹಿಳೆಯರಿಗೆ ಪುರುಷರು ಹೇಗಿದ್ದರೆ ಇಷ್ಟವಾಗುತ್ತಾರೆ ಎನ್ನುವುದನ್ನು ಅರಿತುಕೊಳ್ಳಿ. ಆಗ ಅವರನ್ನು ಒಲಿಸಿಕೊಳ್ಳಲು ಯಾವುದೇ ಕಸರತ್ತು ಮಾಡಬೇಕಾಗಿ ಬರುವುದಿಲ್ಲ. ಅವರೇ ನಿಮ್ಮ ಬಳಿ ಬರುತ್ತಾರೆ. ಅಂತಹ ಗುಣಗಳು ಯಾವುವು ಎಂದು ನೋಡಿಕೊಳ್ಳಿ. ಅಷ್ಟಕ್ಕೂ ಹುಡುಗಿಯರು ಬಯಸುವ ಎಲ್ಲ ಗುಣಗಳೂ ನಿಮ್ಮಲ್ಲಿ ಇರಲು ಸಾಧ್ಯವಾಗದಿರಬಹುದು. ಆದರೆ, ಕೆಲವು ಗುಣವನ್ನಾದರೂ ಸುಲಭವಾಗಿ ಬೆಳೆಸಿಕೊಳ್ಳಬಹುದು.
• ಸತ್ಯ (Fact) ನುಡಿಯುವವರು
ಸತ್ಯ ನುಡಿಯುವ ಹುಡುಗರು ಹುಡುಗಿಯರಿಗೆ ಎಂದಿಗೂ ಇಷ್ಟ. ಇಂಪ್ರೆಸ್ (Impress) ಮಾಡಲು ನುಡಿಯುವ ಸುಳ್ಳುಗಳು ಒಂದಿಲ್ಲೊಮ್ಮೆ ಹೊರ ಬರುತ್ತವೆ. ಅಂಥವರ ಬಗ್ಗೆ ಹುಡುಗಿಯರು (Women) ಇಂಪ್ರೆಸ್ ಆಗುವುದು ಕಡಿಮೆ.
• ಮಹಿಳೆಯರ ಬಗ್ಗೆ ಗೌರವ (Respect) ಹೊಂದಿರುವವರು
ಯಾವುದೇ ಸಂಬಂಧದ (Relationship) ಬಗ್ಗೆ ಗೌರವ ಹೊಂದಿರುವ ಪುರುಷರು (Male) ಮಾತ್ರ ಮಹಿಳೆಯರಿಗೆ ಇಷ್ಟವಾಗುತ್ತಾರೆ. ಮಹಿಳೆಯರ ಕುರಿತು ಗೌರವ (Respect) ಹೊಂದಿರದ ಹುಡುಗರೊಂದಿಗೆ ಸ್ನೇಹ (Friendship) ಬೆಳೆಸಿದರೂ ಅವರ ಗುಣ ಗೊತ್ತಾದಾಗ ಕ್ರಮೇಣ ದೂರ ಮಾಡಿಬಿಡುತ್ತಾರೆ.
Chanakya Niti : ಸೋತು ಗೆಲ್ತಾರೆ ಈ ಜನ, ಅದೇ ಅವರ ವಿಶೇಷ ಗುಣ!
• ತಪ್ಪನ್ನು (Wrong) ಒಪ್ಪಿಕೊಳ್ಳುವವರು
ಸಾಮಾನ್ಯವಾಗಿ ಹುಡುಗರು (Boys) ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಕಡಿಮೆ. ಹಾಗೂ ತಾವು ತಪ್ಪೇ (Mistake) ಮಾಡಿಲ್ಲ ಎಂದು ವಾದಿಸುತ್ತಾರೆ. ಹುಡುಗಿಯರದ್ದೇ ತಪ್ಪು ಎಂದು ವಾದಿಸುವವರೂ ಇದ್ದಾರೆ. ಸುಮ್ಮನೆ ವಾಗ್ವಾದ ಏಕೆಂದು ಹುಡುಗಿಯರು ಸುಮ್ಮನಿರಬಹುದು, ಆದರೆ, ಅಂತಹ ಪುರುಷರನ್ನು ಅವರು ಇಷ್ಟಪಡುವುದಿಲ್ಲ.
• ತಮ್ಮ ಕುರಿತು ಗಮನ ಹರಿಸಿಕೊಳ್ಳುವವರು (Self Care)
ತಮ್ಮ ಅಗತ್ಯ, ಬೇಕು-ಬೇಡಗಳು, ಕೆಲಸಗಳ ಕುರಿತು ಸರಿಯಾಗಿ ಗಮನ ನೀಡುವ ಹುಡುಗರು ಸಾಮಾನ್ಯವಾಗಿ ಮಹಿಳೆಯರಿಗೆ ಇಷ್ಟವಾಗುತ್ತಾರೆ. ಏಕೆಂದರೆ, ಅಂತಹ ಹುಡುಗರು ಜೀವನದಲ್ಲಿ ಜವಾಬ್ದಾರಿಯುತವಾಗಿ (Responsible) ವರ್ತಿಸುತ್ತಾರೆ ಎನ್ನುವ ನಂಬಿಕೆ ಅವರಲ್ಲಿ ಮೂಡುತ್ತದೆ.
• ಹೊಸತನ್ನು ಕಲಿಯುವ (Learn New Things) ಆಸಕ್ತರು
ಸೋಮಾರಿ (Lazy), ನಿರಾಸಕ್ತ ಪುರುಷರನ್ನು ಕಂಡರೆ ಮಹಿಳೆಯರಿಗೆ ಆಗುವುದಿಲ್ಲ. ಎಲ್ಲದರಲ್ಲೂ ಉತ್ಸಾಹ (Enthusiasm) ಹೊಂದಿರುವ, ಹೊಸತನ್ನು ಕಲಿಯುವ ಆಸಕ್ತಿ ಇರುವ ಪುರುಷರು ಇಷ್ಟವಾಗುತ್ತಾರೆ. ಅಡುಗೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ಬೇರೆ ಬೇರೆ ರೀತಿಯ ವಿಷಯಗಳಲ್ಲಿ ಆಸಕ್ತಿ ಇರುವ ಪುರುಷರು ಯಾವತ್ತೂ ಬೇಸರದಲ್ಲಿ ಇರುವುದಿಲ್ಲ. ಅಂಥವರನ್ನೇ ಹುಡುಗಿಯರು ಬಯಸುತ್ತಾರೆ.
• ಫಿಟ್ ನೆಸ್ (Fitness) ಬಗ್ಗೆ ಗಮನ
ಹುಡುಗಿಯರನ್ನು ಇಂಪ್ರೆಸ್ ಮಾಡಲು ಗಂಟೆಗಟ್ಟಲೆ ಜಿಮ್ (Gym) ನಲ್ಲಿ ಬೆವರಿಳಿಸುವುದು, ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದು ಅಗತ್ಯವಿಲ್ಲ. ಆದರೆ, ಆರೋಗ್ಯ ಹಾಗೂ ಫಿಟ್ ನೆಸ್ ಬಗ್ಗೆ ಗಮನ ಹೊಂದಿರುವ ಪುರುಷರನ್ನೇ ಮಹಿಳೆಯರು ಇಷ್ಟಪಡುತ್ತಾರೆ. ಬೇಕಾಬಿಟ್ಟಿ ತಿನ್ನುವುದು, ಕೆಟ್ಟ ಹವ್ಯಾಸಗಳು ಅವರಿಗೆ ಇಷ್ಟವಾಗುವುದಿಲ್ಲ.
ನಿಮ್ಮ Signature, ವ್ಯಕ್ತಿತ್ವವನ್ನೆ ರೂಪಿಸುತ್ತಂತೆ… ತಜ್ಞರು ಹೇಳೋದೇನು ಕೇಳಿ
• ಭಾವನೆಗಳನ್ನು (Feelings) ಹೇಳಿಕೊಳ್ಳುವವರು
ಸಾಮಾನ್ಯವಾಗಿ ಪುರುಷರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ ಎನ್ನುವ ಭಾವನೆ ಇದೆ. ಆದರೆ, ಹಾಗೆ ಮುಗುಮ್ಮಾಗಿ ಇರುವ ಪುರುಷರಿಗಿಂತ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ, ನೇರವಾಗಿ (Strait) ಹೇಳಿಕೊಳ್ಳುವ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ.
• ಲೀಡರ್ ಶಿಪ್ (Leadership) ಗುಣ
ಮುಂದಾಳುತ್ವ ವಹಿಸಿಕೊಳ್ಳುವ ಗುಣ ಇರುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಮನೆಯಲ್ಲಿ ನಿರ್ಧಾರ ಕೈಗೊಳ್ಳುವ, ಮುನ್ನುಗ್ಗಿ ಕೆಲಸ ಮಾಡುವ ಹುಡುಗರು ಅವರ ಗಮನ ಸೆಳೆಯುತ್ತಾರೆ.