Parenting Tips: ಒಡಹುಟ್ಟಿದವರ ಜೊತೆ ಜಗಳವಾಗ್ತಿದ್ದರೆ ಪಾಲಕರು ಈ ತಪ್ಪು ಮಾಡ್ಬೇಡಿ

By Suvarna News  |  First Published Sep 17, 2022, 4:31 PM IST

ಚಿಕ್ಕ ಮಕ್ಕಳ ಮಧ್ಯೆ ಜಗಳ ಸಾಮಾನ್ಯ. ಮನೆಯಲ್ಲಿ ಇಬ್ಬರು ಮಕ್ಕಳಿದ್ರೆ ಅವರ ಗಲಾಟೆ ತಡೆಯೋದು ಪಾಲಕರ ಕೆಲಸವಾಗಿರುತ್ತದೆ. ಮನೆ ಶಾಂತವಾದ್ರೆ ಸಾಕು ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳಿಗೆ ಬೈಯುತ್ತಾರೆ. ಆದ್ರೆ ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
 


ಮನೆಯಲ್ಲಿ ಒಂದು ಮಗುವಿದ್ರೆ ಅದಕ್ಕೆ ಆಡಲು ಮಕ್ಕಳಿರೋದಿಲ್ಲ. ಮುಂದೆ ಒಬ್ಬರಿಗೊಬ್ಬರು ಆಸರೆಯಾಗ್ಬೇಕು ಹಾಗೆ ಚಿಕ್ಕವರಿರುವಾಗ ಮಕ್ಕಳಿಗೆ ಆಡಲು ಒಬ್ಬರು ಬೇಕು ಎನ್ನುವ ಕಾರಣಕ್ಕೆ ಪಾಲಕರು ಇನ್ನೊಂದು ಮಗು ಮಾಡಿಕೊಳ್ತಾರೆ. ಮನೆಗೆ ಇನ್ನೊಂದು ಮಗು ಬರ್ತಿದ್ದಂತೆ ಗಲಾಟೆ ಶುರುವಾಗುತ್ತದೆ. ಮಕ್ಕಳು ಸಣ್ಣಪುಟ್ಟ ವಿಷ್ಯಕ್ಕೆ ಗಲಾಟೆ, ಜಗಳ ಮಾಡಿಕೊಳ್ಳುವುದು ಸಾಮಾನ್ಯ. ದೊಡ್ಡ ಮಕ್ಕಳ ವಸ್ತುವನ್ನು ಚಿಕ್ಕ ಮಕ್ಕಳು ಕೇಳ್ತಾರೆ. ಇಬ್ಬರೂ ಒಂದೇ ವಸ್ತುವಿಗಾಗಿ ಫೈಟಿಂಗ್ ಮಾಡ್ತಾರೆ. ಮಕ್ಕಳ ಈ ಫೈಟಿಂಗ್ ಪಾಲಕರ ತಲೆನೋವಿಗೆ ಕಾರಣವಾಗುತ್ತದೆ. ಅಸೂಯೆಯಿಂದ ಅಥವಾ ಸ್ಪರ್ಧೆಯಿಂದ ಸಹೋದರ, ಸಹೋದರಿ ಮಧ್ಯೆ ಜಗಳವಾಗುತ್ತದೆ. ಮಕ್ಕಳ ಗಲಾಟೆಯ ಬಗೆಹರಿಸಲು ಪಾಲಕರು ಮಧ್ಯ ಪ್ರವೇಶ ಮಾಡ್ತಾರೆ. ಪಾಲಕರು ಈ ಸಮಯದಲ್ಲಿ ಒಬ್ಬರನ್ನು ಒಲಿಸುವ ಪ್ರಯತ್ನ ನಡೆಸ್ತಾರೆ. ಇನ್ನೊಬ್ಬರಿಗೆ ಬೈಯ್ಯುತ್ತಾರೆ. ಪಾಲಕರು ಒಬ್ಬರಿಗೆ ಆದ್ಯತೆ ನೀಡಿ, ಇನ್ನೊಬ್ಬರನ್ನು ನಿರ್ಲಕ್ಷ್ಯಿಸಿದ್ರೆ ಅದು ಕೂಡ ಒಡಹುಟ್ಟಿದವರ ಮಧ್ಯೆ ಅಸೂಯೆ ಜಗಳಕ್ಕೆ ಕಾರಣವಾಗುತ್ತದೆ. ಇದ್ರಿಂದ ಮಕ್ಕಳಲ್ಲಿ ದ್ವೇಷ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಪಾಲಕರ ಮೇಲೂ ಮಕ್ಕಳು ಕೋಪಗೊಳ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಹಿ ಮನೆ ಮಾಡುತ್ತದೆ. ಇಬ್ಬರು ಮಕ್ಕಳ ಪಾಲಕರು ಮಕ್ಕಳ ಜಗಳ ಬಿಡಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಕೆಲ ವಿಷ್ಯವನ್ನು ಹೇಳ್ಬಾರದು. 

ನೀನು ದೊಡ್ಡವನು : ಇಬ್ಬರ ಮಧ್ಯೆ ಜಗಳ (Fight) ವಾದಾಗ ಪಾಲಕರು ದೊಡ್ಡವರ ಮೇಲೆ ಕಣ್ಣು ಬಿಡ್ತಾರೆ. ನೀನು ದೊಡ್ಡವನು, ಚಿಕ್ಕವರ ರೀತಿ ವರ್ತಿಸಬಾರದು ಎಂದು ಹೇಳ್ತಾರೆ. ಇದು ದೊಡ್ಡ ಮಕ್ಕಳ (Children) ಮನಸ್ಸ (Mind) ನ್ನು ಘಾಸಿಗೊಳಿಸುತ್ತದೆ. ಎಂದಿಗೂ ಜಗಳ ಬಿಡಿಸುವ ಸಂದರ್ಭದಲ್ಲಿ ನೀನು ದೊಡ್ಡವನು, ನಿನಗೆ ಎಲ್ಲ ಅರ್ಥವಾಗುತ್ತದೆ ಎನ್ನುತ್ತ ಚಿಕ್ಕವರ ಕೆಲಸವನ್ನು ಪಾಲಕರು ಸಮರ್ಥಿಸಿಕೊಳ್ಳಬಾರದು. 

Tap to resize

Latest Videos

ನಿನಗೇನೂ ಆಗಿಲ್ಲ, ಬಿಟ್ಬಿಡು : ಸಹೋದರ,ಸಹೋದರಿ ಮಧ್ಯೆ ಜಗಳವಾಗ್ತಿದ್ದರೆ, ಇಬ್ಬರು ಫೈಟಿಂಗ್ ಮಾಡ್ತಿದ್ದರೆ ಕೆಲವೊಮ್ಮೆ ಗಾಯವಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ಕಪಾಳಮೋಕ್ಷ ಮಾಡಬಹುದು. ಇಲ್ಲವೆ ವಸ್ತುವನ್ನು ಎಸೆಯಬಹುದು. ಆಗ ಇನ್ನೊಬ್ಬರಿಗೆ ಗಾಯವಾಗುತ್ತದೆ. ಆಗ ಮಧ್ಯಪ್ರವೇಶ ಮಾಡುವ ಪಾಲಕರು, ಏನೂ ಆಗಿಲ್ಲ, ಯಾವುದೇ ಹಾನಿಯಾಗಿಲ್ಲ ಬಿಡು ಎಂದು ಹೇಳಬಾರದು. ಇದ್ರಿಂದ ಗಾಯವಾದ ಅಥವಾ ಹೊಡೆತ ತಿಂದ ಮಗುವಿಗೆ ನೋವಾಗುತ್ತದೆ. ಪಾಲಕರು ತನಗೆ ಮಹತ್ವ ನೀಡ್ತಿಲ್ಲವೆಂದು ಅವರು ಭಾವಿಸ್ತಾರೆ. 

ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸೋಕೆ ಇವಿಷ್ಟನ್ನು ಹೇಳಿ ಕೊಡಿ

ನಿನ್ನ ಸಹೋದರನನ್ನು ನೋಡು, ಅವನಂತೆ ಯಾಕಿಲ್ಲ ನೀನು? : ಒಡಹುಟ್ಟಿದವರ ಮಧ್ಯೆ ಜಗಳವಾದ್ರೆ ಪಾಲಕರು ಒಬ್ಬರ ಪರ ನಿಲ್ಲುತ್ತಾರೆ. ಸಹೋದರನನ್ನು ನೋಡು, ಅವರು ಎಷ್ಟು ಶಾಂತವಾಗಿದ್ದಾರೆ, ಎಷ್ಟು ಬುದ್ಧಿವಂತರಾಗಿದ್ದಾರೆ, ನೀನ್ಯಾಕಿಲ್ಲ ಎಂದು ಪ್ರಶ್ನೆ ಮಾಡ್ತಾರೆ. ಪ್ರತಿಯೊಂದು ವಿಷ್ಯಕ್ಕೂ ಒಬ್ಬರನ್ನೊಬ್ಬರು ಹೋಲಿಸಿ ನೋಡ್ತಾರೆ. ಪಾಲಕರು ಈ ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬಾರದು. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿ ಬಾರಿ ಒಡಹುಟ್ಟಿದವರ ಜೊತೆ ಹೋಲಿಕೆ ಮಾಡಿದ್ರೆ ಅವರಿಗೆ ಒಡಹುಟ್ಟಿದವರ ಮೇಲೆ ಅಸೂಯೆ ಶುರುವಾಗುತ್ತದೆ. ಅವ್ರ ಜೊತೆ ಜಗಳ ಜಾಸ್ತಿ ಮಾಡ್ತಾರೆ. 

ಒಡಹುಟ್ಟಿದವರ ಮೇಲೆ ದ್ವೇಷ ಮಾಡ್ಬಾರದು : ಗಲಾಟೆ ಯಾವುದೇ ವಿಷಯಕ್ಕೆ ಆಗಿರಲಿ, ಒಡಹುಟ್ಟಿದವರ ಜೊತೆ ಗಲಾಟೆ ಮಾಡ್ಲೇಬಾರದು ಎಂದು ಪಾಲಕರು ಹೇಳ್ತಾರೆ. ಅವರ ಜೊತೆ ಹೊಂದಾಣಿಕೆಯಿಂದ ನಡೆಯಬೇಕು ಎಂದು ಸಲಹೆ ನೀಡ್ತಾರೆ. ಈಗಾಗಲೇ ಕೋಪಗೊಂಡಿರುವ ಮಗುವಿಗೆ ಪಾಲಕರ ಈ ಮಾತು ಮತ್ತಷ್ಟು ಕೆರಳಿಸುತ್ತದೆ. 

ಇದನ್ನೂ ಓದಿ: ಮಕ್ಕಳನ್ನು ಬೆಳೆಸೋದು ಹೀಗಲ್ಲಪ್ಪಾ ಅನ್ನೋರ ಬಾಯಿ ಹೀಗೆ ಮುಚ್ಚಿಸಿ

ನೀನ್ಯಾಕೆ ಕೆಟ್ಟವನು ? : ಮಕ್ಕಳಿಗೆ ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬುದು ತಿಳಿಯೋದಿಲ್ಲ. ಒಡಹುಟ್ಟಿದವರು ಜಗಳ ಮಾಡಿದಾಗ ಪಾಲಕರು, ನೀನು ಕೆಟ್ಟವನು ಅಥವಾ ಸಹೋದರ ಕೆಟ್ಟವನು, ಅವನ ಸುದ್ದಿಗೆ ಹೋಗ್ಬೇಡ ಎಂದು ಇನ್ನೊಬ್ಬರನ್ನು ಸಂತೈಸುತ್ತಾರೆ. ಇದು ಕೂಡ ಪಾಲಕರು ಮಾಡುವ ದೊಡ್ಡ ತಪ್ಪು.  
 

click me!