Intimate Health: ಮಹಿಳೆಯರ ಸೆಕ್ಸ್ ಡ್ರೈವ್ ಹೆಚ್ಚಾಗೋಕೆ ಇದು ಕಾರಣ

By Suvarna News  |  First Published Mar 11, 2024, 5:52 PM IST

ಮಹಿಳೆಯರಲ್ಲೂ ಸೆಕ್ಸ್ ಡ್ರೈ ಉತ್ತುಂಗಕ್ಕೇರುತ್ತೆ. ಎಲ್ಲ ಸಮಯದಲ್ಲಿ ಅಲ್ಲವೆಂದ್ರೂ ಕೆಲ ಬಾರಿ ಅವರು ಸಂಭೋಗ ಸುಖ ಬಯಸುತ್ತಾರೆ. ಲೈಂಗಿಕಕ್ರಿಯೆ ನಂತ್ರ ಆನಂದಕ್ಕೊಳಗಾಗ್ತಾರೆ. ಅದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. 


ಸೆಕ್ಸ್ ಆಸಕ್ತಿಯಲ್ಲಿ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರು ಹಿಂದೆ ಎನ್ನುವ ನಂಬಿಕೆ ಇದೆ. ಇದು ತಪ್ಪು. ಮಹಿಳೆಯರು ಕೂಡ ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರ ಲೈಂಗಿಕ ಬಯಕೆ ಕೂಡ ಹೆಚ್ಚಿರುತ್ತದೆ. ಇದು ಎಲ್ಲರಲ್ಲಿ ಒಂದೇ ಪ್ರಮಾಣದಲ್ಲಿ ಇರಬೇಕಾಗಿಲ್ಲ. ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗಲು ಹಾರ್ಮೋನ್ ನಲ್ಲಾಗುವ ಬದಲಾವಣೆ ಸೇರಿದಂತೆ ಮಾನಸಿಕ ಸ್ಥಿತಿ ಕೂಡ ಕಾರಣವಾಗುತ್ತದೆ. ಅದೇ ರೀತಿ ತಿಂಗಳ ಕೆಲ ದಿನ ಮಹಿಳೆ ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಬಯಕೆ ಹೊಂದಿರುತ್ತಾಳೆ. ಯಾವೆಲ್ಲ ಹಾರ್ಮೋನ್ ಆಕೆ ಬಯಕೆಯನ್ನು ಹೆಚ್ಚಿಸುತ್ತದೆ, ಯಾವ ವಯಸ್ಸಿನಲ್ಲಿ ಮಹಿಳೆಯರು ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುತ್ತಾರೆ ಎನ್ನುವ ವಿವರ ಇಲ್ಲಿದೆ.

ಮಹಿಳೆಯರಲ್ಲಿ ಲೈಂಗಿಕ ಬಯಕೆ ಉತ್ತುಂಗಕ್ಕೇರಲು ಇದು ಕಾರಣ :

Tap to resize

Latest Videos

ಹಾರ್ಮೋನ್ (Hormone) : ಮೊದಲೇ ಹೇಳಿದಂತೆ ಮಹಿಳೆಯರಲ್ಲಾದಷ್ಟು ಹಾರ್ಮೋನ್ ಬದಲಾವಣೆ ಪುರುಷರಲ್ಲಿ ಆಗುವುದಿಲ್ಲ. ಪಿರಿಯಡ್ಸ್ (Periods) ಆರಂಭದಲ್ಲಿ, ಪಿರಿಯಡ್ಸ್ ಸಮಯದಲ್ಲಿ, ಪಿರಿಯಡ್ಸ್ ಮುಗಿದ ಮೇಲೆ, ಅಂಡೋತ್ಪತ್ತಿ ಸಮಯದಲ್ಲಿ ಹೀಗೆ ಬೇರೆ ಬೇರೆ ದಿನ ಆಕೆಯ ಹಾರ್ಮೋನ್ ನಲ್ಲಿ ಬದಲಾವಣೆ ಆಗ್ತಿರುತ್ತದೆ. ಈಸ್ಟ್ರೊಜೆನ್ (Estrogen), ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟದಲ್ಲಿನ ಬದಲಾವಣೆಗಳು ಲೈಂಗಿಕ ಡ್ರೈವ್‌ನಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಮಹಿಳೆಯರಲ್ಲಿ ಅಂಡೋತ್ಪತ್ತಿ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ, ಈ ಕಾರಣದಿಂದಾಗಿ ಲೈಂಗಿಕ ಬಯಕೆಯು ಹೆಚ್ಚಾಗುತ್ತದೆ. ಮಹಿಳೆಯರು ಮುಟ್ಟಿನ ಸಮಯದಲ್ಲಿ ಮತ್ತು ಅದರ ನಂತರ  ಲೈಂಗಿಕ ಉತ್ತುಂಗದಲ್ಲಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. 

ಹೆಂಡತಿ ಹೀಗೆ ಮಾಡಿದರೆ ಗಂಡನ ಆಯುಷ್ಯ ಕಡಿಮೆಯಾಗುತ್ತೆ ಗೊತ್ತಾ?

ಈ ವಯಸ್ಸಿನಲ್ಲಿ ಲೈಂಗಿಕ ಬಯಕೆ ಹೆಚ್ಚು : ವಯಸ್ಸಾದ ಮಹಿಳೆಯರಿಗಿಂತ ಯುವತಿಯರಲ್ಲಿ ಲೈಂಗಿಕ ಬಯಕೆ ಹೆಚ್ಚಿರುತ್ತದೆ. ಮುಟ್ಟು ನಿಲ್ಲುವ ಸಮಯದಲ್ಲಿ ಕೆಲ ಮಹಿಳೆಯರು ಸೆಕ್ಸ್ ಡ್ರೈವ್ ಕಳೆದುಕೊಂಡ್ರೆ ಇನ್ನು ಕೆಲ ಮಹಿಳೆಯರಿಗೆ ಹೆಚ್ಚಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಇದು ವ್ಯತ್ಯಾಸ ಆದ್ರೂ , 27 ರಿಂದ 45 ವರ್ಷ ವಯಸ್ಸಿನ ಮಹಿಳೆಯರು ಲೈಂಗಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆಗಾಗ್ಗೆ ಲೈಂಗಿಕ ಕಲ್ಪನೆಗೆ ಒಳಗಾಗ್ತಾರೆ. ಈ ವಯಸ್ಸಿನ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯವಾಗಿರುತ್ತಾರೆ. ಪ್ರೌಢಾವಸ್ಥೆಯಲ್ಲಿ, ಹುಡುಗಿಯರಲ್ಲಿ ಅಂಡೋತ್ಪತ್ತಿ ಪ್ರಾರಂಭವಾಗುತ್ತದೆ. ಹಾಗಾಗಿ ಅವರು ಆ ಸಮಯದಲ್ಲಿ ಲೈಂಗಿಕತೆಗೆ ಉತ್ಸುಕರಾಗಿರುತ್ತಾರೆ.  

ದೈಹಿಕ ಚಟುವಟಿಕೆ : ಲೈಂಗಿಕ ಚಟುವಟಿಕೆ ಹಾಗೂ ವ್ಯಾಯಾಮದ ಮಧ್ಯೆ ಸಂಬಂಧ ಇದೆ. ಹೆಚ್ಚು ವ್ಯಾಯಾಮ ಮಾಡುವಾಗ ಅಥವಾ ತೀವ್ರವಾದ ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಾಗ ಅಥವಾ ಯಾವುದೇ ರೀತಿಯಲ್ಲಿ ಹೆಚ್ಚು ದೈಹಿಕವಾಗಿ ಸಕ್ರಿಯರಾದಾಗ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ.  ದೈಹಿಕ ವ್ಯಾಯಾಮ ಅವರ ದೈಹಿಕ ಸಾಮರ್ಥ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದ್ರಿಂದ ಸೆಕ್ಸ್ ಡ್ರೈವ್ ಹೆಚ್ಚಾಗುತ್ತದೆ. ತೂಕ ಹೆಚ್ಚಾಗಿರುವ ಮಹಿಳೆಯರಲ್ಲಿ ಸೆಕ್ಸ್ ಡ್ರೈವ್ ಕಡಿಮೆ ಇರುತ್ತದೆ. ಬೊಜ್ಜು ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ತೂಕ ನಷ್ಟವಾಗಿರುವ ಹಾಗೂ ಆರೋಗ್ಯವಂತ ಮಹಿಳೆಯ ಸೆಕ್ಸ್ ಡ್ರೈವ್ ಚೆನ್ನಾಗಿರುತ್ತದೆ. 

ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತೆ ಅನಗತ್ಯ ಗರ್ಭಧಾರಣೆ, ಡೀಲ್ ಮಾಡೋದು ಹೇಗೆ?

ಲೈಂಗಿಕ ಸಂಬಂಧ : ಸಂಗಾತಿ ಜೊತೆ ಲೈಂಗಿಕ ಸಂಬಂಧ ಹೇಗಿದೆ ಎನ್ನುವುದು ಕೂಡ ಸೆಕ್ಸ್ ಡ್ರೈ ಏರಿಳಿತಕ್ಕೆ ಕಾರಣವಾಗುತ್ತದೆ. ಸಂಗಾತಿ ಜೊತೆ ಆರೋಗ್ಯಕರ ಲೈಂಗಿಕ ಸಂಬಂಧ ಹೊಂದಿದ್ದರೆ, ಸೆಕ್ಸ್ ಅನುಭವ ಆಹ್ಲಾದಕರವಾಗಿದ್ದರೆ ಲೈಂಗಿಕ ಬಯಕೆ ಹೆಚ್ಚಾಗುತ್ತದೆ. ಪತಿ – ಪತ್ನಿ ನಡುವೆ ಲೈಂಗಿಕ ಸಂಬಂಧ ಹದಗೆಟ್ಟಿದ್ದಲ್ಲಿ, ಸಂಗಾತಿಯಿಂದ ಕಿರುಕುಳಕ್ಕೊಳಗಾಗುತ್ತಿದ್ದರೆ ಅಥವಾ ದಂಪತಿ ಮಧ್ಯೆ ಜಗಳವಾಗ್ತಿದ್ದರೆ ಆಕೆ ಒತ್ತಡಕ್ಕೆ ಒಳಗಾಗುತ್ತಾಳೆ. ಇದ್ರಿಂದ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತದೆ. 

click me!