ಹಾವುಗಳು ಮತ್ತು ಕೋತಿಗಳ ಸಂಬಂಧ ಹೇಗಿರುತ್ತದೆಯೋ ಗೊತ್ತಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋವೊಂದು ಇವುಗಳ ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವಂತಿದೆ. ಅತಿ ವಿಷಕಾರಿ ಕಾಳಿಂಗ ಸರ್ಪ ಮತ್ತು ಕೋತಿಯೊಂದರ ವಿಚಿತ್ರ ಮುಖಾಮುಖಿಯನ್ನು ಇದು ಒಳಗೊಂಡಿದೆ. ಆ ಕೋತಿ ಹಾವಿನ ತಲೆ ಮೇಲೆ ಮೊಟಕುತ್ತದೆ!
ಹಾವುಗಳೆಂದರೆ ಮನುಷ್ಯರಿಗೆ ಭಯ. ಅದರಲ್ಲೂ ಕಾಳಿಂಗ ಸರ್ಪ ಅಥವಾ ಕಿಂಗ್ ಕೋಬ್ರಾದಂತಹ ಹಾವುಗಳ ಹೆಸರು ಕೇಳಿದರೇ ಭಯಪಡುವವರಿದ್ದಾರೆ. ಅವುಗಳ ವಿಷ ಅತ್ಯಂತ ತೀಕ್ಷ್ಣವಾಗಿರುವುದರಿಂದ ಅವುಗಳ ಎಚ್ಚರಿಕೆ ವಹಿಸುವುದು ಅಗತ್ಯವೂ ಹೌದು. ಆದರೆ, ಮನುಷ್ಯರಿಗೆ ಭಯವಾಗುವಂತಹ ವಿಚಾರ ಪ್ರಾಣಿಗಳಿಗೆ ಸಹಜವಾಗಿರಬಹುದು. ಇದನ್ನು ಸಾಬೀತುಪಡಿಸುವಂತಹ ಅನೇಕ ಚಿತ್ರಣಗಳು ಆಗಾಗ ದೊರೆಯುತ್ತಲೇ ಇರುತ್ತವೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೋತಿಯೊಂದು ಕಾಳಿಂಗ ಸರ್ಪದೊಂದಿಗೆ ಹಿರಿಯತನದಿಂದ ಭಯವಿಲ್ಲದೇ ವರ್ತಿಸುತ್ತಿರುವ ವೀಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೊಲಗದ್ದೆಗಳ ಬದುವಿನ ಮೇಲೆ ನಡೆದ ಘಟನೆ ಇದಾಗಿದ್ದು, ಹೇಗೆ ಚಿತ್ರೀಕರಿಸಲಾಗಿದೆಯೋ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಕೋತಿಯೊಂದನ್ನು ಗದ್ದೆಯ ಪಕ್ಕದ ಬದುವಿನ ಮೇಲೆ ಕಟ್ಟಿ ಹಾಕಲಾಗಿದೆ. ಅದರ ಬಳಿ ಒಂದಲ್ಲ ಎರಡು ಕಾಳಿಂಗ ಸರ್ಪಗಳು ಕುಳಿತುಕೊಂಡಿವೆ. ಕೋತಿ ಕುಳಿತುಕೊಳ್ಳುವ ಸಮಯದಲ್ಲಿ ಕಾಳಿಂಗ ಸರ್ಪದ ದೇಹದ ಕೆಳಭಾಗ ಅಥವಾ ಬಾಲದ ಮೇಲೆ ಕಾಲಿಟ್ಟು ಬಿಡುತ್ತದೆ. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸುವ ಹಾವು ಕೋತಿಗೆ ಕಚ್ಚುತ್ತದೆ. ವಿಷಪೂರಿತ ಕಚ್ಚುವಿಕೆಯೋ ಏನೋ ಗೊತ್ತಿಲ್ಲ. ಅದನ್ನು ನೋಡಿದರೆ ನಮ್ಮ ಮೈ ಜುಂ ಎನ್ನುವುದು ಖಚಿತ.
ಹಾವಿಗೆ ಏಟು!
ಕಾಳಿಂಗ ಸರ್ಪದ (King Cobra) ಕಚ್ಚುವಿಕೆಯ (Bite) ಬಗ್ಗೆ ಆ ಕೋತಿ (Monkey) ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ, ಮನೆಯ ಹಿರಿಯ ಮನುಷ್ಯರು ತರಲೆ ಮಾಡುವ ಮಕ್ಕಳಿಗೆ ಏಟು ನೀಡುವಂತೆ ಹಾವಿನ ತಲೆಗೆ ನಾಲ್ಕೇಟು ಬಿಡುತ್ತದೆ! ಕೋತಿಯ ಮುಖಭಾವವೂ ಅದನ್ನೇ ಹೇಳುವಂತಿದೆ. ಕೋತಿಯ ಬಳಿ ಏಟು ತಿನ್ನುವ ಹಾವು ಅಲ್ಲಿಂದ ಭತ್ತದ ಹೊಲದ (Farm) ಕಡೆಗೆ ಸುಮ್ಮನೆ ಬಿರುಸಾಗಿ ಸಾಗಿಬಿಡುತ್ತದೆ. ಈ ದೃಶ್ಯ ಹಲವು ಪ್ರಶ್ನೆಗಳನ್ನು (Question) ಹುಟ್ಟುಹಾಕುವಲ್ಲಿ ಯಶಸ್ವಿಯಾಗುತ್ತದೆ.
ಅಪ್ಪಟ ಕನ್ನಡ ಮಾತಾಡಿದ RCB ಮನೆ ದೇವ್ರು ಎಬಿ ಡಿವಿಲಿಯರ್ಸ್..! ವಿಡಿಯೋ ವೈರಲ್
ಹಲವು ಪ್ರಶ್ನೆಗಳು
ಕಾಳಿಂಗ ಸರ್ಪ ಕಚ್ಚಿದರೂ ಕೋತಿಗೆ ಏನೂ ಆಗುವುದಿಲ್ಲವೇ? ಕೋತಿಗೆ ಹಾವಿನ ವಿಷ (Venom) ಏನೂ ಮಾಡುವುದಿಲ್ಲವೇ? ಅಥವಾ ಹಾವು ವಿಷವನ್ನು ಕಕ್ಕುವುದಿಲ್ಲವೇ? ಅವುಗಳ ನಡುವೆ ಪರಸ್ಪರ ಭಯ (Fear) ವಿಲ್ಲ, ದೂರವೂ ಇಲ್ಲದಿರುವುದು ವೀಡಿಯೋದಿಂದ (Video) ತಿಳಿದುಬರುತ್ತದೆ. ಕೋತಿಗೂ ಸಹ ಹಾವಿನ ಭಯ ಕಂಡುಬರುವುದೇ ಇಲ್ಲ. ಬದಲಿಗೆ, “ಅಷ್ಟೂ ತಿಳಿಯೋದಿಲ್ವಾ?’ ಎನ್ನುವ ಹಾಗೆ ಹಾವಿಗೆ ಏಟು ನೀಡುವಂತೆ ವರ್ತಿಸುತ್ತದೆ! ಅವುಗಳ ನಡುವೆ ನಿಜಕ್ಕೂ ಅಂಥದ್ದೊಂದು ಸಂಬಂಧ (Relation) ಇರುತ್ತದೆಯೋ ಹೇಗೆ ಎನಿಸುತ್ತದೆ.
ವಿಚಿತ್ರ ಮುಖಾಮುಖಿ
ಈ ವೀಡಿಯೋ ಪೋಸ್ಟ್ (Post) ಆದ ಕೆಲವೇ ಸಮಯದಲ್ಲಿ ಲಕ್ಷಾಂತರ ವೀಕ್ಷಕರು ಇದನ್ನು ವೀಕ್ಷಿಸಿದ್ದಾರೆ. 30 ಸಾವಿರದಷ್ಟು ಲೈಕುಗಳು ಬಂದಿವೆ. ಬಹಳಷ್ಟು ಜನ ಕಾಮೆಂಟ್ (Comments) ಮಾಡಿದ್ದಾರೆ. ಒಬ್ಬರು, “ಇದು ವಿಚಿತ್ರ. ನನಗಂತೂ ಹಾವುಗಳೆಂದರೆ ಇಷ್ಟವಾಗೋಲ್ಲ’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಈ ವೀಡಿಯೋ ಭಯವಾಗುವಂತಿದೆ’ ಎಂದರೆ, ಒಬ್ಬರು, “ಇದು ನೋಡಲಿಕ್ಕೆ ತಮಾಷೆಯಾಗಿದೆ’ ಎಂದಿದ್ದು, ಎಲ್ಲರೂ ತಮ್ಮ ತಮ್ಮ ಭಾವನೆಗಳಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎನಿಸುತ್ತದೆ.
Viral Video: ಚಿರತೆ ಪ್ರವೇಶಿಸಿದಾಗ ಮೊಬೈಲ್ ನೋಡ್ತಾ ಇದ್ದ ಬಾಲಕ ಏನ್ಮಾಡ್ದ? ವೀಡಿಯೋ ನೋಡಿದ್ರೆ ಮೈ ಜುಮ್ ಅನ್ನುತ್ತೆ
ಇಂಥದ್ದೊಂದು ವಿಚಿತ್ರ ಮುಖಾಮುಖಿ ಅಂತರ್ಜಾಲದಲ್ಲಿ (Internet) ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅನೇಕ ವೀಕ್ಷಕರು ಶಾಕ್ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕವಾದ (Natural) ಪ್ರಾಣಿಗಳ ಬದುಕನ್ನು (Life) ಮನುಷ್ಯರು ಅರ್ಥ ಮಾಡಿಕೊಳ್ಳುವುದು ಇನ್ನೂ ಸಾಕಷ್ಟಿದೆ ಎನಿಸುವಂತೆ ಮಾಡುವಲ್ಲಿ ವೀಡಿಯೋ ಯಶಸ್ವಿಯಾಗುತ್ತದೆ.