ಮನೆಯೊಂದು ಮೂರು ಬಾಗಿಲು ಎನ್ನುವಂತೆ ಮನೆಯಲ್ಲಿರೋ ಮೂರು ಮಕ್ಕಳ ಸ್ವಭಾವ ಭಿನ್ನವಾಗಿದ್ದು, ಹೊಂದಾಣಿಕೆ ಇಲ್ಲ ಅಂದ್ರೆ ಕಷ್ಟ. ಮಕ್ಕಳ ಮಧ್ಯೆ ಪ್ರೀತಿ, ಹೊಂದಾಣಿಕೆ, ಜಗಳವಿಲ್ಲದ ಜೀವನ ಇರಬೇಕೆಂದ್ರೆ ಪಾಲಕರು ಈ ಸತ್ಯ ತಿಳಿಯಬೇಕು.
ಮನೆಯಲ್ಲಿ ಒಂದು ಮಗುವಿದ್ರೆ ಅವರನ್ನು ನೋಡಿಕೊಳ್ಳುವ ರೀತಿಯೇ ಬೇರೆ. ಎರಡು ಮಕ್ಕಳಿದ್ರೆ ಅವರ ಆರೈಕೆ ಭಿನ್ನವಾಗಿರುತ್ತದೆ. ಮೂರಿದ್ದಾಗ ಪಾಲಕರ ಜವಾಬ್ದಾರಿ ಮತ್ತಷ್ಟು ಹೆಚ್ಚಿರುತ್ತದೆ. ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಗಲಾಟೆ, ಜಗಳ ಹೆಚ್ಚಾಗುತ್ತದೆ ಎಂಬುದು ಕೆಲ ಪಾಲಕರ ಆರೋಪ. ಇಡೀ ದಿನ ಮಕ್ಕಳ ಕಿತ್ತಾಟ ನೋಡಬೇಕಾಗಿದೆ ಎನ್ನುವವರಿದ್ದಾರೆ. ನೀವು ಮಕ್ಕಳನ್ನು ಹೇಗೆ ಬೆಳೆಸಿದ್ದೀರಿ ಎಂಬುದು ಕೂಡ ಮಕ್ಕಳ ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಒಂದನೇ ಮಗು, ಎರಡನೇ ಮಗು ಮತ್ತು ಮೂರನೇ ಮಗುವಿಗೆ ಏನೆಲ್ಲ ಸಿಕ್ಕಿದೆ, ಏನೆಲ್ಲ ಸಿಕ್ಕಿಲ್ಲ, ಯಾರಿಗೆ ಏನು ಸಮಸ್ಯೆ ಇದೆ ಎಂಬುದನ್ನು ನೀವು ಅರಿತುಕೊಂಡ್ರೆ ಮನೆಯಲ್ಲಿ ಯಾವುದೇ ಗಲಾಟೆ ಇರೋದಿಲ್ಲ. ಎಲ್ಲ ಮಕ್ಕಳು ಗಲಾಟೆ ಇಲ್ಲದೆ ದೊಡ್ಡವರಾಗಿರುತ್ತಾರೆ. ನಾವಿಂದು ಮಗುವಿನ ಸ್ವಭಾವಕ್ಕೂ ಅದು ಹುಟ್ಟಿದ ಸ್ಥಾನಕ್ಕೂ ಏನೆಲ್ಲ ಸಂಬಂಧವಿದೆ ಎಂಬುದನ್ನು ಹೇಳ್ತೇವೆ.
ಒಂದನೇ ಮಗು : ನಿಮ್ಮ ಮನೆಗೆ ಮೊದಲ ಮಗು (Child) ವಿನ ಆಗಮನ ಆಗಿದ್ದರೆ ನಿಮಗೊಂದು ಹೊಸ ಜವಾಬ್ದಾರಿ (Responsibility ) ಬಂದಿರುತ್ತದೆ. ಇದರ ಬಗ್ಗೆ ಸರಿಯಾದ ಅರಿವು ನಿಮಗಿರೋದಿಲ್ಲ. ನಿಮ್ಮಿಷ್ಟದಂತೆ ಇಲ್ಲವೆ ನಿಮಗೆ ಸಾಧ್ಯವಾದಂತೆ ಮಕ್ಕಳನ್ನು ಬೆಳೆಸುತ್ತೀರಿ. ವೇಳೆ ಪಾಲಕರಿಂದಲೂ ಅನೇಕ ತಪ್ಪಾಗಿರುತ್ತದೆ. ಮಗುವನ್ನು ಬೆಳೆಸ್ತಾ ಪಾಲಕರು (Parents) ಕಲಿಯುತ್ತಿರುತ್ತಾರೆ.
ಹೆಂಡತಿ ಹೀಗೆ ಮಾಡಿದರೆ ಗಂಡನ ಆಯುಷ್ಯ ಕಡಿಮೆಯಾಗುತ್ತೆ ಗೊತ್ತಾ?
ಮೊದಲ ಮಗುವಿನ ಬಗ್ಗೆ ಪೋಷಕರು ಕಟ್ಟುನಿಟ್ಟಾಗಿರುತ್ತಾರೆ. ಕೆಲವೊಂದು ನಿಯಮ ರೂಪಿಸಿರುತ್ತಾರೆ. ಮೊದಲ ಮಗುವನ್ನು ಚೆನ್ನಾಗಿ ಬೆಳೆಸಬೇಕು ಎನ್ನುವ ಕಾರಣ ಚಿಕ್ಕಪುಟ್ಟ ವಿಷ್ಯವನ್ನು ಗಮನಿಸುತ್ತಾರೆ. ಮೊದಲ ಮಗು ಪರ್ಫೆಕ್ಟ್ ಆಗಿರಬೇಕೆಂಬುದು ಎಲ್ಲರ ಆಸೆ. ಒಂದೇ ಮಗು ಇರುವ ಕಾರಣ, ಅದ್ರ ಆರೈಕೆಗೆ ಇವರಿಗೆ ಹೆಚ್ಚಿನ ಸಮಯ ಸಿಗುತ್ತದೆ. ಹಾಗಾಗಿ ಅವರನ್ನು ತಮ್ಮ ಆಸೆಯಂತೆ ಬೆಳೆಸಲು ಪಾಲಕರು ಪ್ರಯತ್ನಿಸುತ್ತಾರೆ. ಇದು ಹಿರಿಯ ಮಕ್ಕಳಿಗೆ ಹೊರೆಯಾಗುತ್ತದೆ. ಮೊದಲ ಮಗುವಿನ ಮೇಲೆ ಜವಾಬ್ದಾರಿ ಹೆಚ್ಚು. ಸಹೋದರ – ಸಹೋದರಿಯರಿಗೆ ರೋಲ್ ಮಾಡೆಲ್ ಆಗ್ಬೇಕು, ಎಲ್ಲಿಯೂ ಸೋಲಬಾರದು. ಎಲ್ಲವನ್ನು ನಿಭಾಯಿಸಬೇಕು ಎಂಬ ಗಂಭೀರ ವಿಷ್ಯವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಎಲ್ಲಿ ಸೋತುಬಿಡ್ತೇವೋ ಎನ್ನುವ ಭೀತಿ ಅವರನ್ನು ಆಗಾಗ ಕಾಡುತ್ತಿರುವುದಿದೆ. ಪಾಲಕರನ್ನು ಮೆಚ್ಚಿಸಲು ಏನು ಮಾಡಿದ್ರೂ ಕಡಿಮೆ ಎನ್ನುವ ಭಾವನೆ ಅವರ ಮನದಲ್ಲಿ ಮೂಡಿರುತ್ತದೆ.
ಎರಡನೇ ಮಗು : ಎರಡನೇ ಸ್ಥಾನದಲ್ಲಿ ಹುಟ್ಟಿದ ಕೆಲ ಮಕ್ಕಳು ಮಿಡಲ್ ಚೈಲ್ಡ್ ಸಿಂಡ್ರೋಮ ಕಾಡುವುದಿದೆ. ಅವರು ತಮ್ಮೆಲ್ಲ ವಸ್ತುಗಳನ್ನು ಹಂಚಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಪಾಲಕರ ಗಮನ ಅವರ ಮೇಲೆ ಹೆಚ್ಚಿರೋದಿಲ್ಲ. ಪಾಲಕರನ್ನು ಸೆಳೆಯಲು ಅವರು ನಿರಂತರ ಸ್ಪರ್ಧಿಸಬೇಕಾಗುತ್ತದೆ. ಪಾಲಕರು, ಹಿರಿಯರು ಮತ್ತು ಕಿರಿಯರ ಮೇಲೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆಂಬ ಭಾವನೆ ಅವರಿಗೆ ಬಂದಲ್ಲಿ ಅವರು ದಂಗೆಗೇಳುತ್ತಾರೆ. ಗಮನ ಸೆಳೆಯಲು ಕೆಟ್ಟ ಕೆಲಸಕ್ಕೆ ಕೈ ಹಾಕುವ ಸಾಧ್ಯತೆ ಇರುತ್ತದೆ. ಅನೇಕ ಬಾರಿ ಒಂಟಿಯಾಗಿರುವ ಅವರು ಬೇಸರ ಅನುಭವಿಸುತ್ತಾರೆ.
ಮದ್ವೆಗೂ ಮೊದ್ಲು ಬ್ಯಾಂಕಾಕ್‌ಗೆ ಹೋಗೋದು ತಪ್ಪು ಎಂದಿದ್ದ ಪೃಥ್ವಿ ಅಂಬಾರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಕೊನೆ ಮಗು : ಮನೆಯಲ್ಲಿ ಮೂರು ಮಕ್ಕಳಿದ್ದು, ಅದ್ರಲ್ಲಿ ಮೂರನೇ ಮಗುವಿಗೆ ಅತ್ಯಧಿಕ ಪ್ರೀತಿ ಸಿಗುತ್ತದೆ. ಆತ ತಪ್ಪು ಮಾಡಿದ್ರೂ ಪಾಲಕರು ಅದನ್ನು ಮನ್ನಿಸುತ್ತಾರೆ. ಉಳಿದಿಬ್ಬರಿಗೆ ಹೋಲಿಕೆ ಮಾಡಿದ್ರೆ ಕೊನೆಯ ಮಗುವಿನ ಮೇಲೆ ಪಾಲಕರು ಹೆಚ್ಚು ಗಮನ ನೀಡ್ತಾರೆ. ಅತಿಯಾದ ಮುದ್ದು ಮಾಡ್ತಾರೆ. ಪಾಲಕರ ಜೊತೆ ತನ್ನಗಿಂತ ಹಿರಿಯ ಸಹೋದರ, ಸಹೋದರಿ ಮಾರ್ಗದರ್ಶನ ಸಿಕ್ಕಿರುತ್ತದೆ. ಕಿರಿಯ ಮಕ್ಕಳ ಮುಂದೆ ಪಾಲಕರು ಮೃದುವಾಗಿ ವರ್ತಿಸುವ ಕಾರಣ, ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.