ಗಡಿ ಮೀರಿದ ಪ್ರೀತಿ: ಫೇಸ್‌ಬುಕ್‌ ಗೆಳೆಯನ ಭೇಟಿಗೆ ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ

Published : Jun 01, 2022, 05:25 PM IST
ಗಡಿ ಮೀರಿದ ಪ್ರೀತಿ: ಫೇಸ್‌ಬುಕ್‌ ಗೆಳೆಯನ ಭೇಟಿಗೆ ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ

ಸಾರಾಂಶ

ಪ್ರೀತಿಯಲ್ಲಿ ಬಿದ್ದವರು ಜಗವನ್ನೇ ಮರೆಯುವರು, ಹಾಗೆಯೇ ಭಾರತದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದ ಬಾಂಗ್ಲಾದೇಶಿ ಯುವತಿಯೊಬ್ಬಳು ತನ್ನ ಪ್ರಿಯತಮನನ್ನು ತಲುಪಲು ಬಾಂಗ್ಲಾದಿಂದ ಭಾರತಕ್ಕೆ ಈಜಿದ್ದಾಳೆ.   

ಪ್ರೀತಿಗೆ ಗಡಿ ಭಾಷೆ ದೇಶದ ಹಂಗಿಲ್ಲ, ಎಲ್ಲವನ್ನೂ ಮೀರಿ ಸಾಗುವುದು ಪ್ರೀತಿ. ವಿದೇಶದ ಹುಡುಗಿ ಭಾರತೀಯ ಯುವಕನನ್ನು ಮದುವೆಯಾಗಿದ್ದು, ಭಾರತೀಯ ಯುವಕ ವಿದೇಶಿ ಹುಡುಗಿಗೆ ಮನ ಸೋತಿದ್ದು, ಕೈ ಕೊಟ್ಟ ಪ್ರೀತಿಯ ಅರಸಿ ಯುವತಿ ಅಥವಾ ಯುವಕ ಫ್ಲೈಟ್ ಏರಿ ಬಂದು ತನ್ನವ/ ತನ್ನವಳಿಗಾಗಿ ಹುಡುಕಾಟ ನಡೆಸಿದ್ದು, ಮುಂತಾದ ಹಲವು ಘಟನೆಗಳು ಈಗಾಗಲೇ ನಡೆದು ಹೋಗಿವೆ. ಇವೆಲ್ಲವೂ ಸೇರಿದಂತೆ ಇನ್ನು ಸಾವಿರಾರು ಘಟನೆಗಳು ಪ್ರೀತಿ ಕುರುಡು ಎಂಬುದನ್ನು ಅಥವಾ ಪ್ರೀತಿಯಲ್ಲಿ ಬಿದ್ದವರು ಹುಚ್ಚರು ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಈಗ ಈ ಮಾತಿಗೆ ಮತ್ತೊಂದು ನಿದರ್ಶನವಾಗುವ ಘಟನೆಯೊಂದು ನಡೆದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ಭಾರತೀಯ ಯುವಕನಿಗೆ ಮನಸೋತ ಬಾಂಗ್ಲಾದೇಶದ ಯುವತಿಯೊಬ್ಬಳು ಪ್ರೀತಿಯನ್ನು ಅರಸಿ ಗಡಿ ದಾಟಿ ಬಂದಿದ್ದಾಳೆ. ಅದೂ ಹೇಗೆ ಎಂದು ತಿಳಿದರೆ ನೀವು ಅಚ್ಚರಿ ಪಡುತ್ತೀರಿ. ಆಕೆ ವಿಮಾನವನ್ನೋ ರೈಲನ್ನೋ ಬಸ್ಸನ್ನೋ ಏರಿಯೋ ಹಡಗಿನ ಮೂಲಕವೋ ಭಾರತಕ್ಕೆ ಬಂದಿಲ್ಲ. ತನ್ನ ಇನಿಯನ ಹುಡುಕಾಟಕ್ಕೆ ಕೇವಲ ತನ್ನ ಕೈ ಕಾಲುಗಳನ್ನಷ್ಟೇ ನಂಬಿದ ಆಕೇ ಕೇವಲ ಸಮುದ್ರದಲ್ಲಿ ಈಜುತ್ತಾ ಭಾರತ ತಲುಪಿದ್ದಾಳೆ. 

ಫೇಸ್‌ಬುಕ್‌ನಲ್ಲೇ ಲವ್‌: ಬಾಲಕನನ್ನ ವರಿಸಿದ 20 ವರ್ಷದ ಯುವತಿ..!
 

ನೀವು ಸುದೀಪ್‌ ನಟನೆಯ ಕನ್ನಡದ ನಂದಿ ಸಿನಿಮಾದಲ್ಲಿ ಕಡಲ ದಾಟಿ ಬಂದ ಕುದುರೆ ಏರಿ ಬಂದ ಎಂಬ ಹಾಡೊಂದಿದೆ. ಅದರಂತೆ ಈ ಬಾಂಗ್ಲಾ ಹುಡುಗಿ ತನ್ನ ಗೆಳೆಯನ ನೋಡಲು ಕಡಲು ದಾಟಿ ಬಂದಿದ್ದಾಳೆ. 22 ವರ್ಷದ ಬಾಂಗ್ಲಾದೇಶಿ ಯುವತಿ ತನ್ನ ಫೇಸ್‌ಬುಕ್‌ ಗೆಳೆಯನ ಜೊತೆ ಮದುವೆಯಾಗಲು ಗಡಿಯುದ್ಧಕ್ಕೂ ಈಜಿ ಅಕ್ರಮವಾಗಿ ಭಾರತದೊಳಗೆ ನುಸುಳಿದ್ದಾಳೆ. 

ಸುಂದರಬನ್‌ ಕಾಡಿನೊಳಗೆ ಬಂದ ಆಕೆ ಭಾರತ ತಲುಪಲು ಒಂದು ಗಂಟೆ ಕಾಲ ಈಜಿದ್ದಾಳೆ. ಹೀಗೆ ತನ್ನ ಬದುಕಿನ ಪ್ರೀತಿಗಾಗಿ ಸಾಹಸ ಮೆರೆದ ಈ ಯುವತಿಯನ್ನು ಬಂಗ್ಲಾದೇಶದ ಕೃಷ್ಣಾ ಮಂಡಲ್ ಎಂದು ಗುರುತಿಸಲಾಗಿದೆ. ಈಕೆಯ ಬಳಿ ಯಾವುದೇ ಪಾಸ್‌ಪೋರ್ಟ್‌ಗಳಿಲ್ಲ. ಫೇಸ್‌ಬುಕ್‌ನಲ್ಲಿ ಈಕೆಗೆ ಭಾರತದ ಅಭಿಷೇಕ್ ಮಂಡಲ್‌ ಎಂಬಾತನ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ನಂತರ ಮರು ಯೋಚಿಸದ ಆಕೆ ಅಕ್ರಮವಾಗಿ ಗಡಿ ನುಸುಳಿದ್ದಾಳೆ. 

ಹಾಸನ;  ಫೇಸ್ ಬುಕ್  ಲವ್.. ಮದುವೆಗೆ ತಿಂಗಳಿರುವಾಗ ಪ್ರಿಯಕರನ ಜತೆ ಹೋದವಳ ಅಂತ್ಯ
 

ಪೊಲೀಸರ ಪ್ರಕಾರ, ಯುವತಿ ಕೃಷ್ಣ ಮೊದಲಿಗೆ ಸುಂದರ್‌ಬನ್‌ (Sundarbans) ಕಾಡನ್ನು ತಲುಪಿದ್ದಾಳೆ. ಈ ಕಾಡು ರಾಯಲ್‌ ಬೆಂಗಾಲಿ ಟೈಗರ್‌ಗಳಿಗೆ (Royal Bengal Tigers) ಪ್ರಸಿದ್ಧವಾಗಿರುವ ಅರಣ್ಯವಾಗಿದೆ. ನಂತರ ಆಕೆ ಒಂದು ಗಂಟೆಗಳ ಕಾಲ ಈಜಿ ಭಾರತ ತಲುಪಿದ್ದಾಳೆ. 

ಮೂರು ದಿನಗಳ ಹಿಂದೆ ಕೋಲ್ಕತ್ತಾದ (Abhik Mandal) ಕಾಳಿಘಾಟ್‌ನ ದೇಗುಲದಲ್ಲಿ (Kalighat Temple) ಅಭಿಕ್‌ (Abhik) ಹಾಗೂ ಕೃಷ್ಣಾಳ (Krishna Mandal)  ವಿವಾಹವಾಗಿದ್ದು, ಸೋಮವಾರ (ಮೇ.31) ರಂದು ಆಕೆಯನ್ನು ಪೊಲೀಸರು ಅಕ್ರಮವಾಗಿ ಗಡಿ ಪ್ರವೇಶಿಸಿದ್ದ ಕಾರಣಕ್ಕೆ ಬಂಧಿಸಿದ್ದರು. ಬಹುಶಃ ಕೃಷ್ಣಾಳನ್ನು ಅಧಿಕಾರಿಗಳು ಬಾಂಗ್ಲಾದೇಶದ ಹೈ ಕಮೀಷನರ್‌ಗೆ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶಿ ತರುಣನೋರ್ವ ಭಾರತದಲ್ಲಿ ಚಾಕೋಲೇಟ್ ಖರೀದಿಗಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಇಮಾನ್‌ ಹುಸೇನ್‌ (Eman Hossain) ಎಂಬ ಪುಟ್ಟ ಬಾಲಕ ಸಣ್ಣದೊಂದು ನದಿಯನ್ನು ಈಜಿ ನಂತರ ಭಾರತದ ಗಡಿ ದಾಟಿ ತನ್ನ ಇಷ್ಟದ ಚಾಕೋಲೇಟ್‌ನ್ನು ((chocolate) ಖರೀದಿಸಲು ಬಯಸಿದ್ದ. ನಂತರ ಈ ಬಾಲಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.  ಕೋರ್ಟ್‌ ಆತನಿಗೆ 15  ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!