ಕಾಣೆಯಾಗಿದ್ದ ಹೆಂಡ್ತಿ, ಒಂಭತ್ತು ವರ್ಷಗಳ ಬಳಿಕ ಪತಿ ಪತ್ನಿಯ ಅಪೂರ್ವ ಸಂಗಮ

By Vinutha PerlaFirst Published Dec 31, 2022, 4:44 PM IST
Highlights

ಸಂಬಂಧಗಳು ಎಂದರೆ ಸುಮ್ಮನೆಯಲ್ಲ. ಅದು ಬೆಸೆದುಕೊಂಡರೆ ತಕ್ಷಣಕ್ಕೆ ಕಳಚಿಹೋಗುವುದಿಲ್ಲ. ಅದೆಷ್ಟೇ ದೂರ ಸಾಗಿದರೂ ಬಾಂಧವ್ಯ ಹಾಗೆಯೇ ಇರುತ್ತದೆ. ವರ್ಷಗಟ್ಟಲೆ ಕಳೆದರೂ ವ್ಯಕ್ತಿಯ ನೆನಪು ಮನಸ್ಸಿನಿಂದ ಮಾಸಿ ಹೋಗುವುದಿಲ್ಲ. ಇದು ಅಕ್ಷರಶಃ ನಿಜ ಎಂಬುದನ್ನು ಮಡಿಕೇರಿಯ ಜೋಡಿಯೊಂದು ಸಾಬೀತುಪಡಿಸಿದೆ.

ಒಂಭತ್ತು ವರ್ಷಗಳ ಬಳಿಕ ಪತಿ ಪತ್ನಿಯ (Husband-wife) ಅಪೂರ್ವ ಸಂಗಮಕ್ಕೆ ಕೊಡಗು ಸಾಕ್ಷಿಯಾಗಿದೆ. ಸತ್ತು ಹೋಗಿದ್ದಾರೆಂದು ಭಾವಿಸಿದ್ದ ಹೆಂಡತಿಯ ಕಂಡು ಪತಿ, ಪತ್ನಿಯನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬರೋಬ್ಬರಿ  9 ವರ್ಷಗಳ ಬಳಿಕ ಕೆಹರ್ ಸಿಂಗ್ ಪತ್ನಿಯನ್ನು ಭೇಟಿಯಾಗಿದ್ದಾರೆ. ಮಡಿಕೇರಿ ಈ ಮನ ಮಿಡಿದ ಪತಿಪತ್ನಿಯ ಅಪೂರ್ವ ಸಂಗಮವಾಗಿದೆ.

2013ರಲ್ಲಿ ದೆಹಲಿಯಿಂದ ನಾಪತ್ತೆಯಾಗಿದ್ದಕೆಹರ್ ಸಿಂಗ್, ದರ್ಶಿನಿ ನಾಪತ್ತೆಯಾಗಿದ್ದರು. 9 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದರ್ಶಿನಿ ಅದ್ಹೇಗೋ ಕೊಡಗಿಗೆ ಬಂದು ಸೇರಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. 2018ರಲ್ಲಿ ಕುಶಾಲನಗರದಲ್ಲಿ ಅರೆನಗ್ನರಾಗಿ ಅಲೆಯುತ್ತಿದ್ಧ ದರ್ಶಿನಿಯನ್ನು ಪೊಲೀಸರು ತನಲ್ ಸಂಸ್ಥೆಗೆ ಸೇರಿಸಿದ್ದರು. ತನಲ್ ಸಂಸ್ಥೆ ದರ್ಶಿನಿಯವರಿಗೆ ಚಿಕಿತ್ಸೆ (Treatment) ನೀಡಲು ಆರಂಭಿಸಿತ್ತು. ಆರು ತಿಂಗಳ ಹಿಂದೆ ದರ್ಶಿನಿ, ತನ್ನ ತವರು ಹರಿಯಾಣದ ಹೆಸರು ಹೇಳಿದ್ದರು.

ಅಮ್ಮನ ಆಸೆ ಈಡೇರಿಸಲು ಐಸಿಯುನಲ್ಲೇ ಮದುವೆಯಾದ ಮಗಳು

ಆ ನಂತರ ತನಲ್ ಸಂಸ್ಥೆ ಮುಖ್ಯಸ್ಥ ಮೊಹಮ್ಮದ್ ಮಹಿಳೆಯ ವಿಳಾಸ ಹುಡುಕಾಡಲು ಶುರು ಮಾಡಿದ್ದರು. ಆರು ತಿಂಗಳ ಬಳಿಕ ಮಹಿಳೆಯ ಪತಿ ಮತ್ತು ಸಂಬಂಧಿಕರು ಪತ್ತೆಯಾಗಿದ್ದರು. ಪತ್ನಿ ಇರುವುದು ತಿಳಿಯುತ್ತಿದ್ದಂತೆ ಪತಿ ಕೆಹರ್ ಸಿಂಗ್ ಮಡದಿಗಾಗಿ ಓಡೋಡಿ ಬಂದಿದ್ದರು. 3000 ಕಿಲೋ ಮೀಟರ್ ಪ್ರಯಾಣಿಸಿ ಕೆಹರ್ ಸಿಂಗ್ ಪತ್ನಿಯನ್ನು ಭೇಟಿಯಾಗಿದ್ದಾರೆ. ತನಲ್ ಸಂಸ್ಥೆಯ ಬಿಡುವಾಗ ತನ್ನ ಸಲಹಿದ ಶಶಿಯ ಬಿಗಿದಪ್ಪಿ ದರ್ಶಿನಿ ಕಣ್ಣೀರಿಟ್ಟಿದ್ದಾರೆ.

ತಾಯಿ ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟ ಮಗಳು
ಮಗಳೇ (Daughter) ಮುಂದೆ ನಿಂತು, ತಾಯಿಗೆ (Mother) ಮದುವೆ ಮಾಡಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರಿಯಾ ಚರ್ಕವರ್ತಿ ಎಂಬವರು ಹೀಗೆ ತಾಯಿಗೆ ಮರು ಮದುವೆ ಮಾಡಿದ್ದಾರೆ. ಆಕೆ ಅಂಬೆಗಾಲಿಡಲು ಆರಂಭಿಸಿದ ಸಮಯದಲ್ಲೇ ತಂದೆ ತೀರಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ತಾಯಿ ಕಷ್ಟಪಟ್ಟು ರಿಯಾ ಚರ್ಕವರ್ತಿಯವರನ್ನು ಸಾಕಿದ್ದರು. ಒಂಟಿಯಾಗಿಯೇ ಇದ್ದು ಶಿಕ್ಷಣವನ್ನು ಕೊಡಿಸಿದ್ದರು. ಹೀಗಾಗಿ ಮಗಳೇ 25ನೇ ವರ್ಷದಿಂದ ಏಕಾಂಗಿಯಾಗಿದ್ದ ತಾಯಿಗೆ ಮರು ಮದುವೆ (Re marriage) ಮಾಡಿಸಿದ್ದು, ಹೃದಯಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ.

ದಾಂಪತ್ಯದಲ್ಲಿ ಮೌನಕ್ಕಿಂತ ಮಾತು ಸಮಸ್ಯೆ ಬಗೆಹರಿಸುತ್ತೆ! ಹೇಗಿರಬೇಕು ಮಾತುಕತೆ?

ಶಿಲ್ಲಾಂಗ್‌ನ ದೇಬ್ ಅರ್ತಿ, ಮಗಳು ರಿಯಾ ಚಕ್ರವರ್ತಿ ಎರಡು ವರ್ಷದವಳಾಗಿದ್ದಾಗ ಮೆದುಳಿನ ರಕ್ತಸ್ರಾವದಿಂದ ಇದ್ದಕ್ಕಿದ್ದಂತೆ ನಿಧನರಾದರು. ಅವರು ಪ್ರಸಿದ್ಧ ವೈದ್ಯರಾಗಿದ್ದರು. ಆಕೆಯ ತಾಯಿ ಮೌಶುಮಿ ಚಕ್ರವರ್ತಿ ಆ ಸಮಯದಲ್ಲಿ 25 ವರ್ಷ ವಯಸ್ಸಿನವರಾಗಿದ್ದರು. ಗಂಡ ನಿಧನರಾದ ನಂತರ ಅನೇಕ ವರ್ಷಗಳ ಕಾಲ ಆಕೆ ಒಬ್ಬಂಟಿಯಾಗಿ (Alone) ಜೀವನ ಸಾಗಿಸುತ್ತಿದ್ದರು. ಎರಡನೇ ವಿವಾಹವಾಗುವುದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಶಿಕ್ಷಕಿಯಾಗಿ (Teacher) ಕೆಲಸ ಮಾಡುತ್ತಿದ್ದ ಮೌಶುಮಿ ಪತಿ ನಿಧನದ ನಂತರ ತಾಯಿಯ ಮನೆಗೆ ತೆರಳಿದ್ದರು.

click me!