Parenting Tips: ದೊಡ್ಡವರ ಈ ವರ್ತನೆ ಮಕ್ಕಳ ಭವಿಷ್ಯಕ್ಕೆ ಮಾರಕ

By Suvarna News  |  First Published Dec 29, 2022, 2:19 PM IST

ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಪಾಲಕರು ಬಯಸ್ತಾರೆ. ಆದ್ರೆ ಮಕ್ಕಳು ಅಡ್ಡ ದಾರಿ ತುಳಿಯಲು ಪಾಲಕರೇ ಕಾರಣವಾಗಿರ್ತಾರೆ. ಮಕ್ಕಳು ಕೆಟ್ಟವರಾಗ್ಲಿ ಇಲ್ಲ ಒಳ್ಳೆಯವರಾಗ್ಲಿ ಅದರ ಸಂಪೂರ್ಣ ಜವಾಬ್ದಾರಿ ಹಿರಿಯರ ಮೇಲೆ ಇರುತ್ತದೆ. 
 


ಅಯ್ಯೋ, ಏನು ಗೊತ್ತಾರಿ, ನಮ್ಮನೆಯವರಿಗೆ ಎಷ್ಟು ತಿಂಡಿ ಮಾಡಿದ್ರೂ ಸಾಲಲ್ಲ. ಇಡೀ ದಿನ ಕೆಲಸ ಮಾಡಿ ಸುಸ್ತಾಗಿದೆ. ಯಾಕಾದ್ರೂ ಅವರನ್ನಾ ಕಟ್ಟಿಕೊಂಡನೋ ಅಂತಾ ಒಂದೇ ಸಮನೆ ಮಗಳ ಮುಂದೆಯೇ ಸುನಿತಾ ಮನೆ ವಿಷ್ಯವನ್ನು ಪಕ್ಕದ ಮನೆ ಪದ್ಮಾಳಿಗೆ ಹೇಳ್ತಿದ್ದಳು. ಇದು ಮಗಳ ಮೇಲೆ ಯಾವ ಪರಿಣಾಮ ಬೀರುತ್ತೆ ಎನ್ನುವುದು ಆಕೆಗೆ ಗೊತ್ತಿಲ್ಲ. ಅಪ್ಪ ಅಂತಾ ಇಡೀ ದಿನ ಅಪ್ಪನನ್ನು ಪ್ರೀತಿ ಮಾಡ್ತಿದ್ದವಳು ಅಮ್ಮನ ಇಂಥ ಮಾತುಗಳನ್ನು ಕೇಳಿ ಅಪ್ಪನನ್ನು ದ್ವೇಷಿಸೋಕೆ ಶುರು ಮಾಡಿದ್ದಳು.

ಅಂಕಲ್ (Uncle) ಯಾಕೆ ಇವತ್ತು ಆಂಟಿನಾ ಹೊಡೆದ್ರಿ? ಅವರು ಸರಿಯಾಗಿ ಟೀ ಕೂಡ ಕುಡಿದಿಲ್ಲ ಗೊತ್ತಾ ಅಂತಾ ಕಚೇರಿ (Office) ಯಿಂದ ಬಾಲು ಬರ್ತಿದ್ದಂತೆ ಪಕ್ಕದ ಮನೆ ಮಂಗಳ ಪ್ರಶ್ನೆ ಕೇಳಿದ್ದಳು. ಇದನ್ನು ಕೇಳಿದ ಬಾಲು ದಬ್ಬಿಬ್ಬಾಗಿದ್ದ. ಪಕ್ಕದ ಮನೆ ಹುಡುಗಿ ಯಾರ ಜೊತೆ ಓಡಿ ಹೋದ್ಲು ಎನ್ನುವುದ್ರಿಂದ ಹಿಡಿದು ನಮ್ಮ ಮನೆಯಲ್ಲಿ ಅಪ್ಪ – ಅಪ್ಪ ಯಾಕೆ ಜಗಳವಾಡ್ತಾರೆ ಎನ್ನುವವರೆಗೆ ಎಲ್ಲ ವಿಷ್ಯ ಮಕ್ಕಳಿಗೆ ಅಪ್ಡೇಟ್ ಇರುತ್ತದೆ. 

Tap to resize

Latest Videos

ಮಕ್ಕಳ (Children) ಬಾಯಿಂದ ನಾವು ದೊಡ್ಡ ದೊಡ್ಡ ಮಾತುಗಳನ್ನು ಕೇಳ್ತಿರುತ್ತೇವೆ. ಮಕ್ಕಳು ಅತಿಯಾಗಿ ಮಾತನಾಡುತ್ತವೆ ಎಂದು ಗದರುತ್ತೇವೆ ಕೂಡ. ಆದ್ರೆ ಮಕ್ಕಳು ಇದನ್ನೆಲ್ಲ ತಿಳಿಯಲು ಯಾರು ಕಾರಣ ಎಂಬುದನ್ನು ನಾವು ಅರಿಯುವ ಸಾಹಸಕ್ಕೆ ಹೋಗೋದಿಲ್ಲ. ನಮ್ಮ ಸುತ್ತಮುತ್ತ ಮಕ್ಕಳಿರುತ್ತಾರೆ ಎನ್ನುವ ಜ್ಞಾನ (Knowledge) ನಮಗೆ ಇರೋದಿಲ್ಲ. ಮಕ್ಕಳ ಮನಸ್ಸು (Mind) ಮುಗ್ಧವಾಗಿರುತ್ತದೆ. ಅವರು ನೋಡಿದ್ದನ್ನೇ, ಕೇಳಿದ್ದನ್ನೇ ಸತ್ಯವೆಂದು ನಂಬುತ್ತಾರೆ. ಮುಂದೆ ಅದನ್ನೇ ತಮ್ಮ ಜೀವನ (Life) ದಲ್ಲಿ ಅಳವಡಿಸಿಕೊಳ್ತಾರೆ. ನೀರು ಪಾತ್ರೆಗೆ ಹಾಕಿದ್ರೆ, ಲೋಟಕ್ಕೆ ಹಾಕಿದ್ರೆ ಹೇಗೆ ಅದರ ಆಕಾರ ಪಡೆಯುತ್ತದೆಯೋ ಅದೇ ರೀತಿ ಮಕ್ಕಳಿಗೆ ಪಾಲಕರು ಏನು ನೀಡ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ಅಡಗಿರುತ್ತದೆ. ಪಾಲಕರಾದವರು ನಾಲ್ಕು ದಿನ ಮಕ್ಕಳ ಮುಂದೆ ಕಿರುಚಾಡ್ತಾ, ಸಿಟ್ಟಿನಿಂದ ಮಾತನಾಡಿ ನೋಡಿ. ಸ್ವಲ್ಪ ದಿನದ ನಂತ್ರ ಮಕ್ಕಳು ಕೂಡ ಪಾಲಕರನ್ನು ಅದೇ ಧ್ವನಿಯಲ್ಲಿ ಮಾತನಾಡಿಸ್ತಾರೆ. ಅದೇ ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಟ್ಯೂನ್ ಕೂಡ ಬದಲಾಗುತ್ತದೆ. ಮಕ್ಕಳಿಗೆ ಒಳ್ಳೆ ಮಾರ್ಗ ತೋರಿಸಬೇಕು ಎನ್ನುವ ಪಾಲಕರು ಜಾಗರೂಕರಾಗಿರಬೇಕು. ಮೊದಲು ಪಾಲಕರು ಬದಲಾಗಬೇಕು. 

SCHOOL ADMISSION ವೇಳೆ ಮಕ್ಕಳು ಮಾತ್ರವಲ್ಲ ಪಾಲಕರೂ ಸಿದ್ಧರಾಗ್ಬೇಕು!

ಮಕ್ಕಳ ಮುಂದೆ ಎಲ್ಲ ಚರ್ಚೆ ಬೇಡ : ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ (Future) ನೀಡಲು ಪಾಲಕರು ಬಯಸ್ತಾರೆ. ಆದ್ರೆ ತಿಳಿಯದೆ ಅವರ ಮುಂದೆ ತಪ್ಪು ಮಾಡುತ್ತಾರೆ. ಯಾವುದೇ ವ್ಯಕ್ತಿಯ ಬಗ್ಗೆ ಇರಲಿ, ಯಾವುದೇ ಜಾತಿಯ ಬಗ್ಗೆ ಇರಲಿ ಪಾಲಕರು ಮನೆಯಲ್ಲಿ ಮಾತನಾಡ್ತಾರೆ. ಇದು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಅಸೂಯೆ, ದ್ವೇಷ, ಟೀಕೆ ಅಥವಾ ಬೇಹುಗಾರಿಕೆಯಂತ ಸ್ವಭಾವ ಬೆಳೆಯಲು ಶುರುವಾಗುತ್ತದೆ. ಎಲ್ಲ ವಿಷ್ಯವನ್ನು ಅವರು ನಕಾರಾತ್ಮಕವಾಗಿ ನೋಡಲು ಶುರು ಮಾಡ್ತಾರೆ. ಹಾಗಾಗಿ ಸೂಕ್ಷ್ಮ ವಿಷ್ಯಗಳನ್ನು ಎಂದಿಗೂ ಮಕ್ಕಳ ಮುಂದೆ ಚರ್ಚೆ ಮಾಡಬಾರದು.

ಸಂಬಂಧವನ್ನೇ ಹೊರೆ ಎಂದೇ ಭಾವಿಸುತ್ತಾರೆ ಈ ರಾಶಿ ಜನರು!

ಸ್ಮಾರ್ಟ್ಫೋನ್ ಬಳಕೆ : ಮಕ್ಕಳ ಓದು, ಭವಿಷ್ಯವನ್ನು ಈ ಸ್ಮಾರ್ಟ್ಫೋನ್ ಕೂಡ ಹಾಳು ಮಾಡ್ತಿದೆ. ಮಕ್ಕಳು ಸ್ಮಾರ್ಟ್ಫೋನ್ ನೋಡಲು ಪಾಲಕರೆ ಕಾರಣ. ಮಕ್ಕಳಿಗೆ ಆರಂಭದಲ್ಲಿ ಇದೊಂದಿದೆ ಎನ್ನುವುದೇ ತಿಳಿದಿರುವುದಿಲ್ಲ. ಮಕ್ಕಳನ್ನು ಸುಮ್ಮನಿರಿಸಲು ಫೋನ್ ನೀಡುವ ಪಾಲಕರು ನಿಧಾನವಾಗಿ ಇದನ್ನೇ ಅಭ್ಯಾಸ ಮಾಡ್ತಾರೆ. ಮನೆಯಲ್ಲಿ ಖಾಲಿ ಕುಳಿತ ಪಾಲಕರು ಕೂಡ ಮಕ್ಕಳ ಜೊತೆ ಬೆರೆಯುವುದಿಲ್ಲ. ಫೋನ್ ಹಿಡಿದು ಕುಳಿತುಕೊಳ್ಳುವ ಪಾಲಕರು ಮಕ್ಕಳಿಗೆ ಸ್ಪೂರ್ತಿಯಾಗ್ತಾರೆ.  

click me!