
ಓಪನ್ ಮ್ಯಾರೇಜ್ (Open Mariage), ಪಾಲಿ ಅಮೋರಿ ಸೇರಿದಂತೆ ಈಗ ಹೊಸ ಹೊಸ ಹೆಸರನ್ನು ನಾವು ಕೇಳ್ತಿದ್ದೇವೆ. ಹಿಂದೆ ಅರೇಂಜ್ಡ್ ಮ್ಯಾರೇಜ್ (Arranged Marriage) ಮಾತ್ರ ಇತ್ತು. ನಿಧಾನವಾಗಿ ಲವ್ ಮ್ಯಾರೇಜ್ ಚಾಲ್ತಿಗೆ ಬಂತು. ನಂತರದ ದಿನಗಳಲ್ಲಿ ಲಿವ್ ಇನ್, ಓಪನ್ ಮ್ಯಾರೇಜ್ ಸೇರಿದಂತೆ ಭಿನ್ನ ಸಂಬಂಧಗಳನ್ನು ನೋಡಲು ಸಿಗ್ತಿದೆ. ಭಾರತದಲ್ಲಿ ಇಂಥ ಸಂಬಂಧಗಳು ಕಡಿಮೆ ಇದ್ರೂ ಕೆಲ ದೇಶದಲ್ಲಿ ಈ ಪ್ರವೃತ್ತಿ ಹೆಚ್ಚಾಗ್ತಿದೆ. ಒಂದೇ ಬಾರಿ ಒಂದಕ್ಕಿಂತ ಹೆಚ್ಚು ಜನರ ಜೊತೆ ಸಂಬಂಧ ಬೆಳೆಸೋದು ವಿದೇಶದಲ್ಲಿ ಕಾಮನ್ ಆಗ್ತಿದೆ. ಇದು ಆನ್ಲೈನ್, ಸಾಮಾಜಿಕ ಜಾಲತಾಣದಿಂದ ಹೆಚ್ಚು ವೈರಲ್ ಆಗ್ತಿದೆ.
ಸಂಗಾತಿ (Spouse) ಇನ್ನೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂಬುದು ಗೊತ್ತಾಗ್ತಿದ್ದಂತೆ ನಮ್ಮಲ್ಲಿ ಬ್ರೇಕ್ ಅಪ್ (Break Up) ಆಗೋದೆ ಹೆಚ್ಚು. ಸಂಗಾತಿಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಯಾರೂ ಇಷ್ಟಪಡೋದಿಲ್ಲ. ಕೆಲ ಕಾರಣಕ್ಕೆ ಒಬ್ಬರು ಎರಡು ಪತ್ನಿಯರ ಜೊತೆ ಜೀವನ ನಡೆಸುತ್ತಿರುವ ಉದಾಹರಣೆ ಇದೆ. ಎಲ್ಲರಿಗೂ ಇದು ಸಾಧ್ಯವಿಲ್ಲದ ಮಾತು. ಆದ್ರೆ ಈ ಮಹಿಳೆಯೊಬ್ಬಳು ಈಗ ಮೂವರ ಜೊತೆ ಸಂಬಂಧ ಬೆಳೆಸಿ ಸುದ್ದಿಯಲ್ಲಿದ್ದಾಳೆ. ವಿಚಿತ್ರ ಅಂದ್ರೆ ಆಕೆ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನ ಜೊತೆ ಸಂಬಂಧ (Relationship) ದಲ್ಲಿದ್ದಾಳೆ. ಮೂವರು ಮಹಿಳೆಯರಿಗೆ ಪುರುಷ ಬ್ರೈನ್ ವಾಶ್ ಮಾಡಿದ್ದಾನೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳ್ತಿದ್ದಾರೆ. ಅದಕ್ಕೆ ಮಹಿಳೆ ತಕ್ಕ ಉತ್ತರವನ್ನೂ ನೀಡಿದ್ದಾಳೆ.
ಮದುವೆಗೂ ಮುನ್ನವೇ ಇದೇ ಮಗು ಬೇಕು ಎಂದಿದ್ದ ವರುಣ್ ಧವನ್: ಅಪ್ಪ-ಅಮ್ಮನಾದ ಸೆಲೆಬ್ರಿಟಿ ಸ್ಟಾರ್ಸ್!
ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಜನರ ಜೊತೆ ಸಂಬಂಧ ಬೆಳೆಸೋದೇ ವಿಚಿತ್ರವೆನ್ನಿಸುತ್ತದೆ. ಅದ್ರಲ್ಲೂ ಟಿಫಾನಿ ನಡೆಸುತ್ತಿರುವ ಜೀವನ ಮತ್ತಷ್ಟು ಅಸಮಾನ್ಯವಾಗಿದೆ. ಇಬ್ಬರು ಪತ್ನಿಯರ ಜೊತೆ ಒಬ್ಬ ಪತಿ ಅಥವಾ ಇಬ್ಬರು ಪತಿಯರ ಜೊತೆ ಒಂದು ಪತ್ನಿ ಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವು ಆಗಾಗ ಕೇಳ್ತಿರುತ್ತೇವೆ. ಆದ್ರೆ ಟಿಫಾನಿ ಹೆಸರಿನ ಮಹಿಳೆ ಜೀವನ ಭಿನ್ನವಾಗಿದೆ. ಆಕೆ ಇಬ್ಬರು ಮಹಿಳೆಯರು, ಒಬ್ಬ ಪುರುಷನ ಜೊತೆ ಜೀವನ ನಡೆಸುತ್ತಿದ್ದಾಳೆ.
ಟಿಫಾನಿ, ಗಿಸೆಲ್, ಹ್ಯಾಮಿ ಮತ್ತು ರೇಮಂಡ್ ರನ್ನುನ ಆನ್‌ಲೈನ್‌ನಲ್ಲಿ (Online Friendship) ಭೇಟಿಯಾಗಿದ್ದಳು. ಅವರೆಲ್ಲರೂ ಉತ್ಸಾಹಿ ಗೇಮರ್ ಆಗಿದ್ದರು. ಎಲ್ಲರೂ ಒಂದು ಬಾರಿ ಸಂಬಂಧಕ್ಕೆ ಬಂದ್ರು. ಆನ್ಲೈನ್ ನಲ್ಲಿ ಫ್ಲರ್ಟ್ ಮೆಸ್ಸೇಜ್ ಕಳುಹಿಸುತ್ತಿದ್ದ ಅವರು ನಂತ್ರ ಹತ್ತಿರವಾದ್ರು. ಇವರೆಲ್ಲ ಯಾವಾಗ ಆನ್ಲೈನ್ ಗೆ ಬರ್ತಾರೆ ಎಂದು ನಾನು ಕಾಯುತ್ತಿದ್ದೆ. ಇವರೆಲ್ಲ ನನ್ನ ಜೀವನದ ಭಾಗ ಎನ್ನಿಸುತ್ತಿತ್ತು ಎಂದು ಟಿಫಾನಿ ಹೇಳಿದ್ದಾಳೆ.
ಮಗು ಅಳ್ತಾ ಇದ್ರೆ ನಂಗೆ ಟೆನ್ಷನ್ ಆಗುತ್ತೆ, ಎಲ್ರೂ ಹಾಲು ಕೊಡು ಅಂತಾರೆ, ಆದ್ರೆ... ; ಶ್ರುತಿ ಹರಿಹರನ್
ಟಿಫಾನಿ ಈ ಸಂಬಂಧ ನೋಡಿದ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆ ಪುರುಷ ಸಂಗಾತಿ (Male Companion), ಮೂವರು ಮಹಿಳೆಯರ ಬ್ರೈನ್ ವಾಶ್ (Brain wash) ಮಾಡಿದ್ದಾನೆ ಎಂದಿದ್ದಾರೆ. ಇದಕ್ಕೂ ಟಿಫಾನಿ ಉತ್ತರ ನೀಡಿದ್ದಾಳೆ. ನಾವೆಲ್ಲ ಒಂದೇ ಮನೋಭಾವದವರು. ನಮ್ಮ ಮಧ್ಯೆ ಯಾವುದೇ ಸ್ಪರ್ಧೆಯಿಲ್ಲ. ನಾವೆಲ್ಲ ಈ ಸಂಬಂಧದಲ್ಲಿ ಖುಷಿಯಾಗಿದ್ದೇವೆ. ನಮಗೆ ಯಾರೂ ಬ್ರೈನ್ ವಾಶ್ ಮಾಡಿಲ್ಲ. ಮಹಿಳೆಯರು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರು, ಅವರಿಗೆ ಇಚ್ಛಾಶಕ್ತಿ ಇರೋದಿಲ್ಲ ಎಂದು ಜನರು ನಂಬುತ್ತಾರೆ ಎಂದು ಟಿಫಾನಿ ಹೇಳಿದ್ದಾಳೆ. ಆರಂಭದಲ್ಲಿ ರೇಮಂಡ್ ಈ ಬಗ್ಗೆ ಹೆಚ್ಚು ಚಿಂತಿತರಾಗಿದ್ದರಂತೆ. ಮುಕ್ತ ಸಂಬಂಧದ ಬಗ್ಗೆ ನಂಬಿಕೆ ಇರಲಿಲ್ಲವಂತೆ. ಪಾಲಿ ಸಂಬಂಧದಲ್ಲಿ ಅಸೂಯೆ ಅಡ್ಡಿಯಾಗ್ಬಹುದು. ಹಾಗಂತ ಇದು ದೈಹಿಕ ಸಂಬಂಧದ ವಿಷ್ಯದಲ್ಲೇ ಆಗ್ಬೇಕೆಂದೇನಿಲ್ಲ ಎಂದು ರೇಮಂಡ್ ಹೇಳಿದ್ದಾರೆ. ಈಗ ಅವರಿಗೆ ಮುಕ್ತ ಸಂಬಂಧದಲ್ಲಿ ವಿಶ್ವಾಸ ಮೂಡಿದೆ. ಈ ನಾಲ್ವರ ಸಂಬಂಧದಲ್ಲಿ ಪ್ರೀತಿ ಮಹತ್ವದ ಸ್ಥಾನ ಪಡೆದಿದೆ. ಇದೇ ಎಲ್ಲರನ್ನೂ ಒಂದಾಗಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.