ನಿನ್ನ ಭವಿಷ್ಯ ಇದಲ್ಲ, ನೋವಿಂದ ಹೊರ ಬಾ, ಬ್ರೇಕ್ ಅಪ್‌ಗೆ ನೊಂದ ಮಗಳ ಸಂತೈಸಿದ ಅಪ್ಪ!

By Roopa Hegde  |  First Published Jun 3, 2024, 3:28 PM IST

ಬ್ರೇಕ್ ಅಪ್ ನಿಂದ ಪ್ರತಿಯೊಬ್ಬರೂ ದುಃಖಕ್ಕೊಳಗಾಗ್ತಾರೆ. ಆ ನೋವಿನಿಂದ ಹೊರಗೆ ಬರಲು ಕಷ್ಟಪಡ್ತಾರೆ. ಇಂಥ ಸಮಯದಲ್ಲಿ ಆಪ್ತರ ಸಾಂತ್ವಾನದ ಅಗತ್ಯವಿರುತ್ತದೆ. ಅದ್ರಲ್ಲೂ ತಂದೆ – ತಾಯಿ ಧೈರ್ಯ ನೀಡಿದ್ರೆ ಜೀವನ ನಡೆಸೋದು ಸುಲಭವಾಗುತ್ತೆ. 
 


ಬ್ರೇಕ್ ಅಪ್ ಪ್ರತಿಯೊಬ್ಬರಿಗೂ ನೋವಿನ ಸಂಗತಿಯಾಗಿರುತ್ತದೆ. ಬ್ರೇಕ್ ಅಪ್ ನಂತ್ರ ಸಾಮಾನ್ಯ ಜೀವನಕ್ಕೆ ವಾಪಸ್ ಆಗೋದು ಸುಲಭವಲ್ಲ. ಹಳೆ ನೆನಪು, ನೋವುಗಳು ಸದಾ ಕಾಡ್ತಿರುತ್ತವೆ. ಕೆಲವರು ಅದೇ ನೋವಿನಲ್ಲಿ ಜೀವನ ಕಳೆಯುತ್ತಾರೆ. ಮತ್ತೊಂದಿಷ್ಟು ಮಂದಿ ಅತಿ ಶೀರ್ಘದಲ್ಲಿ ಹೊಸ ಜೀವನಕ್ಕೆ ಹೊಂದಿಕೊಳ್ತಾರೆ. ಬ್ರೇಕ್ ಅಪ್ ಅನ್ನೋದು ನನಗೊಬ್ಬನಿಗೆ ಆಗಿದ್ದು, ನನಗೆ ಮಾತ್ರ ಈ ಕಷ್ಟ ಗೊತ್ತಾಗೋಕೆ ಸಾಧ್ಯ ಅಂದುಕೊಂಡ್ರೆ ಅದರಿಂದ ಹೊರಗೆ ಬರೋದು ಮತ್ತಷ್ಟು ಕಠಿಣವಾಗುತ್ತದೆ. ಬ್ರೇಕ್ ಅಪ್ ಎಲ್ಲರ ಜೀವನದಲ್ಲೂ ಬರುವ ಸಾಮಾನ್ಯ ಸಂಗತಿ. ಅದ್ರಿಂದ ಹೊರಗೆ ಬಂದು ಉತ್ತಮ ಜೀವನ ನಡೆಸಬೇಕು ಎಂದುಕೊಂಡ್ರೆ ಬ್ರೇಕ್ ಅಪ್ ನೋವು, ನೋವು ಅನ್ನಿಸೋದಿಲ್ಲ. ಬ್ರೇಕ್ ಅಪ್ ಸಮಯದಲ್ಲಿ ಯಾರಾದ್ರೂ ನಮ್ಮ ಜೊತೆಗಿರಬೇಕು. ನಮ್ಮ ಸ್ನೇಹಿತರು, ಸಂಬಂಧಿಕರು, ರಕ್ತ ಸಂಬಂಧಿಗಳು ಬೆಂಬಲ ನೀಡಿದ್ರೆ ದುಃಖದಿಂದ ಬೇಗ ಹೊರಗೆ ಬರಬಹುದು. ಈ ಮಹಿಳೆ ಕೂಡ ಬ್ರೇಕ್ ಅಪ್ ಮಾಡಿಕೊಂಡು ಸಾಕಷ್ಟು ನೋವು ಅನುಭವಿಸಿದ್ದಳು. ಆದ್ರೆ ಆಕೆಗೆ ಆಕೆ ತಂದೆ ಆಸರೆಯಾದ್ರು. ತನ್ನ ಮಗಳನ್ನು ಸಂಕಷ್ಟದಿಂದ ಹೊರತರಲು ಅವರು ಮಾಡಿದ ಮೆಸ್ಸೇಜ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರೂ ಅಪ್ಪನ ಬೆನ್ನು ತಟ್ಟುತ್ತಿದ್ದಾರೆ.

20 ವರ್ಷದ ಹುಡುಗಿಗೆ ಬ್ರೇಕ್ ಅಪ್ (Break Up) ಆಗಿತ್ತು. ಆ ದುಃಖ ಆಕೆಯನ್ನು ಸಾಕಷ್ಟು ಹೈರಾಣ ಮಾಡಿತ್ತು. ಈ ಸಮಯದಲ್ಲಿ ಅವಳ ತಂದೆ ಮಗಳಿಗೆ ಒಂದು ಸಂದೇಶ (message) ಕಳುಹಿಸ್ತಾನೆ. ಆ ಮೆಸೇಜ್ ಓದಿದ ಹುಡುಗಿ ಚೇತರಿಸಿಕೊಂಡು ನವ ಉತ್ಸಾಹದಲ್ಲಿ ಮತ್ತೆ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಾಳೆ. 

Tap to resize

Latest Videos

ಮಗಳ ಬ್ರೇಕಪ್‌ಗೆ ಅಪ್ಪನ ಸಾಂತ್ವನದ ಸಂದೇಶ: ಇದು ಬರೀ ಮೆಸೇಜ್ ಅಲ್ಲ ಒಡೆದ ಹೃದಯಗಳಿಗೆ ದಿವ್ಯೌಷಧ

ಘಟನೆ ನಡೆದಿರೋದು ಅಮೆರಿಕದ ಟೆಕ್ಸಾಸ್‌ (Texas) ನಲ್ಲಿ. ಅಲ್ಲಿ ವಾಸಿಸುವ ಫಾಲನ್ ಥಾಂಪ್ಸನ್ ತನ್ನ ತಂದೆ ಕಳುಹಿಸಿದ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾಳೆ. ಆಕೆಯ ಟಿಕ್ ಟಾಕ್ ಪೋಸ್ಟನ್ನು ಈವರೆಗೆ 18 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 

ಫಾಲನ್‌ನ ತಂದೆ ಸ್ಕಾಟ್ ಥಾಂಪ್ಸನ್ ಗೆ ತನ್ನ ಮಗಳಿಗೆ ಬ್ರೇಕ್ ಅಪ್ ಆಗಿದೆ ಎಂಬ ವಿಷ್ಯ ಗೊತ್ತಾಯ್ತು. ಮಗಳ ನೋವು ಕಡಿಮೆ ಮಾಡುವ ನಿರ್ಧಾರಕ್ಕೆ ಫಾಲನ್ ಬಂದ. ಮಗಳಿಗೆ ಮೆಸ್ಸೇಜ್ ಕಳುಹಿಸಿದ. ತನ್ನ ಸ್ವಂತ ಅನುಭವವನ್ನು ಮಗಳ ಜೊತೆ ಹಂಚಿಕೊಂಡಿದ್ದಾನೆ. ಏನಾಗುತ್ತದೆಯೋ ಅದು ಒಳ್ಳೆಯದಕ್ಕೇ ಆಗುತ್ತದೆ ಎಂದು ಫಾಲನ್  ತಂದೆ ಸ್ಕಾಟ್ ಥ್ಯಾಂಪ್ಸನ್ ಮೆಸ್ಸೇಜ್ ಹಾಕಿದ್ದಾನೆ.

ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!

ನಿನ್ನನ್ನು ನಡು ರಸ್ತೆಯಲ್ಲಿ ಬಿಟ್ಟಾಗ, ಅದನ್ನು ನಿನ್ನ ತಂದೆ ನೋಡಿದಾಗ ಎಂದು ಆತ ಶೀರ್ಷಿಕೆ ಹಾಕಿದ್ದಾನೆ. ಸಂದೇಶದ ಮೂರು ಸ್ಕ್ರೀನ್ ಶಾಟನ್ನು ಫಾಲನ್ ಹಂಚಿಕೊಂಡಿದ್ದಾಳೆ. ಹೇ ಬೇಬಿ ಗರ್ಲ್, ನಿನ್ನ ಜೀವನದಲ್ಲಿ ಆ ವ್ಯಕ್ತಿ ಮುಖ್ಯವಾಗಿತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಇಂದು ನೀನು ಏನು ಅನುಭವಿಸುತ್ತಿದ್ದೀಯೋ ಅದು ಅಗತ್ಯ. ನನ್ನ ಹೃದಯ ಕೂಡ ಒಡೆದಿತ್ತು. ನಾನೆಂದು ಸರಿಯಾಗೋದೇ ಇಲ್ಲ ಎಂದು ನನಗೆ ಅನಿಸಿತ್ತು. ನನ್ನ ಜೀವನದಲ್ಲಿ ಒಂಟಿಯಾಗಿ ಇರಬೇಕೆನೋ ಎಂದು ನಾನು ಭಾವಿಸಿದ್ದೆ. ನಿನ್ನ ಭವಿಷ್ಯ ಇದಲ್ಲ. ನೀನು ನನಗೆ ಯೋಗ್ಯವಲ್ಲ ಎಂದು ಯಾರಾದ್ರೂ ಹೇಳಿದ್ರೆ, ಆತ ನಿನಗೆ ನಿನ್ನ ಅಮೂಲ್ಯ ಸಮಯವನ್ನು ವಾಪಸ್ ಮಾಡಿದ್ದಾನೆ ಎಂಬ ಸತ್ಯವನ್ನರಿತು ದುಃಖದಿಂದ ಹೊರಗೆ ಬಾ ಎಂದು ತಂದೆ ಸಂದೇಶ ಕಳುಹಿಸಿದ್ದಾನೆ. ತಂದೆ, ಮಗಳಿಗೆ ಕಳುಹಿಸಿದ ಸಂದೇಶ ನೋಡಿದ ನೆಟ್ಟಿಗರು, ಬ್ರೇಕ್ ಅಪ್ ನಿಂದ ಹೊರಗೆ ಬರಲು ಇಂಥ ಮೆಸ್ಸೇಜ್ ಅವಶ್ಯಕತೆ ಇತ್ತು ಎಂದು ಬರೆದಿದ್ದಾರೆ. 

click me!